Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 05.06.2025
Share:

By Village Missionary Movement

Thursday, 05-Jun-2025

ಧೈನಂದಿನ ಧ್ಯಾನ(Kannada) – 05.06.2025

 

ದೇವರಿಗೆ ಮೆಚ್ಚಿಕೆಯಾಗಿರಲು...

 

"ಶರೀರಭಾವಾಧೀನರು ದೇವರಿಗೆ ಮೆಚ್ಚಿಕೆಯಾಗಿರಲಾರರು" - ರೋಮಾ 8:8

 

ಮನುಷ್ಯನಲ್ಲಿ ಎರಡು ರೀತಿಯ ಮನಸ್ಸುಗಳು ಕಾರ್ಯನಿರ್ವಹಿಸುತ್ತವೆ. ಒಂದು ದೇವರಿಗೂ ಆತನ ಮಾತುಗಳಿಗೂ ವಿಧೇಯತೆ ತೋರುವಂಥದ್ದು. ಇನ್ನೊಂದು ದೇವರಿಗೆ ವಿಧೇಯವಾಗದೇ, ವಿಧೇಯತೆ ತೋರಲು ಸಹ ಸಾಧ್ಯವಿಲ್ಲದೇ ಇರುವಂಥದ್ದು. ಮೊದಲ ಮನಸ್ಸು ಆತ್ಮದ ಮನಸ್ಸು, ಎರಡನೆಯದು ಶಾರೀರಿಕ ಮನಸ್ಸು. ಶಾರೀರಿಕ ಮನಸ್ಸು ದೇವರಿಗೆ ವಿರುದ್ಧವಾಗಿ ದ್ವೇಷದಿಂದ ಇರುತ್ತದೆ. ಹೇಗೆ ಮರಣವು- ಜೀವವು, ಯುದ್ಧವು -ಸಮಾಧಾನವು ವಿಧೇಯತೆ ಮತ್ತು ಅವಿಧೇಯತೆ ಪರಸ್ಪರ ವಿರುದ್ಧವಾಗಿರುತ್ತವೋ, ಆತ್ಮದ ಮನಸ್ಸು ಮತ್ತು ಶಾರೀರಿಕ ಮನಸ್ಸು ಪರಸ್ಪರ ಅದೇ ರೀತಿ ವಿರುದ್ಧವಾಗಿರುತ್ತವೆ. ಆತ್ಮದ ಮನಸ್ಸಿನಿಂದ ಬದುಕುವವರು ದೇವರನ್ನು ಮೆಚ್ಚಿಸುವವರು. ಶಾರೀರಿಕ ಮನಸ್ಸು ಹೊಂದಿರುವವರು ದೇವರನ್ನು ಮೆಚ್ಚಿಸಲು ಸಾಧ್ಯವಿಲ್ಲ. ಶಾರೀರಿಕ ಕಾರ್ಯಗಳನ್ನು ಗಲಾತ್ಯ 5:19-21 ನೇ ವಚನಗಳಲ್ಲಿ ಕಾಣಬಹುದು. 

 

ನಮ್ಮಲ್ಲಿ ದೇವರ ಆತ್ಮನು ವಾಸವಾಗಿರುವದಾದರೆ ಶರೀರ ಭಾವಾಧೀನರಲ್ಲ, ದೇವರಾತ್ಮನಿಗೆ ಅಧೀನರಾಗಿದ್ದೇವೆ. ಯಾವನಿಗಾದರೂ ಕ್ರಿಸ್ತನ ಆತ್ಮನು ಇಲ್ಲದಿದ್ದರೆ ಅವನು ಕ್ರಿಸ್ತನವನಲ್ಲ ಎಂದು ಸತ್ಯವೇದವು ಹೇಳುತ್ತಿದೆ. (ರೋಮಾ 8:9) 

 

ಹಳೆಯ ಒಡಂಬಡಿಕೆಯಲ್ಲಿ, ಅನ್ಯದೇಶದಲ್ಲಿ ವಾಸಿಸುತ್ತಿದ್ದ ಯೋಸೇಫನು ಪಾಪಭರಿತ ಭಾವೋದ್ರೇಕಗಳಿಗೆ ಮಣಿಯಲಿಲ್ಲ, ಬದಲಾಗಿ ದೇವರನ್ನು ಮೆಚ್ಚಿಸುವ ಆತ್ಮದ ಮನಸ್ಸಿನೊಂದಿಗೆ ಬದುಕಿದನು, "ನಾನು ದೇವರಿಗೆ ವಿರುದ್ಧವಾಗಿ ಹೇಗೆ ಪಾಪ ಮಾಡಲಿ?" ಎಂದು ಹೇಳಿದನು. ರಾಜನ ಆಹಾರ ಮತ್ತು ದ್ರಾಕ್ಷಾರಸದಿಂದ ಕಲುಷಿತನಾಗದಿರಲು ದಾನಿಯೇಲನು ದೃಢನಿಶ್ಚಯ ಮಾಡಿದರು. ಅರಸನಾದ ದಾರ್ಯಾವೆಷನನ್ನು ಮೆಚ್ಚಿಸಿದರು ಮತ್ತು ಲೌಕಿಕ ಗೌರವಗಳನ್ನು ಪಡೆಯಲು ನಿರಾಕರಿಸಿದರು. ದೇವರ ದೂತನು ಅವರನ್ನು ದೇವರಿಂದ ಪ್ರೀತಿಸಲ್ಪಟ್ಟ ಮನುಷ್ಯ ಮತ್ತು ಪ್ರೀತಿಯ ಮನುಷ್ಯ ಎಂದು ಹೊಗಳಲ್ಪಟ್ಟರು. 

 

ಈಗಾಗಲೇ ಕ್ರಿಸ್ತನ ಬಳಿಗೆ ಬಂದು ಆತನ ಕೊಡುವ ಉಚಿತ ಪಾಪ ಕ್ಷಮಾಪಣೆಯನ್ನು ಮತ್ತು ರಕ್ಷಣೆಯನ್ನು ಪಡೆಯುವವರೆಲ್ಲರೂ ನಿತ್ಯಜೀವವನ್ನು, ಸಮಾಧಾನವನ್ನು ನೀಡುವ ಆತ್ಮದ ಮನಸ್ಸನ್ನು ಪಡೆದು ದೇವರಿಗೆ ಮೆಚ್ಚಿಕೆಯಾಗುವ ರೀತಿಯಲ್ಲಿಯೂ ಬದುಕಲು ಸಾಧ್ಯ. ಅವರು ನೇರವಾಗಿ ನಿತ್ಯಜೀವಕ್ಕೆ ನಡೆಸಲ್ಪಡುತ್ತಾರೆ ಶಿಲುಬೆಯಲ್ಲಿ ಯೇಸುವಿನ ಮರಣದ ಬಗ್ಗೆ ನಾವು ಧ್ಯಾನಿಸುತ್ತಿದ್ದಂತೆ, ನಮ್ಮನ್ನು ನಾವು ಪರೀಕ್ಷಿಸಿಕೊಳ್ಳೋಣ ಮತ್ತು ನಾವು ಆಧ್ಯಾತ್ಮಿಕ ಮನಸ್ಸಿನವರಾ ಅಥವಾ ಶಾರೀರಿಕ ಮನಸ್ಸಿನವರಾ ಎಂಬುದನ್ನು ಕಂಡುಕೊಳ್ಳೋಣ ದೇವರನ್ನು ಸಂಪೂರ್ಣವಾಗಿ ಮೆಚ್ಚಿಸುವ ರೀತಿಯಲ್ಲಿ ಬದುಕೋಣ. 

- Mrs ಗೀತಾ ರಿಚರ್ಡ್

 

ಪ್ರಾರ್ಥನಾ ಅಂಶ:

ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಟ್ಯೂಷನ್ ಸೆಂಟರ್‌ಗೆ ಬರುವ ಮಕ್ಕಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al Elexbet matbet giriş matbet instagram unban x unban twitter unban palacebet setrabet