Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 16.06.2025
Share:

By Village Missionary Movement

Monday, 16-Jun-2025

ಧೈನಂದಿನ ಧ್ಯಾನ(Kannada) – 16.06.2025

 

ಕ್ಷಮೆಯೇ ಅತ್ಯಂತ ದೊಡ್ಡ ನಿಧಿ

 

"ನಿನ್ನ ಗಂಟು ಇದ್ದಲ್ಲಿಯೇ ನಿನ್ನ ಮನಸ್ಸೂ ಇರುವದಷ್ಟೆ" - ಮತ್ತಾ. 6:21

 

"ತಂದೆಯೇ, ಅವರಿಗೆ ಕ್ಷವಿುಸು; ತಾವು ಏನು ಮಾಡುತ್ತೇವೆಂಬದನ್ನು ಅರಿಯರು" ಎಂದು ಶಿಲುಬೆಯ ಮೇಲೆ ಯೇಸು ಹೇಳಿದರು. ಅವರು ತನ್ನ ಸೇವೆಯ ಹಾದಿಯಲ್ಲಿ ಅನೇಕರ ಪಾಪಗಳನ್ನು ಕ್ಷಮಿಸಿದರು. ಯೇಸು ನಮಗೆ ಕಲಿಸಿದ್ದು, "ನೀವು ಜನರ ತಪ್ಪುಗಳನ್ನು ಕ್ಷವಿುಸಿದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ನಿಮ್ಮ ತಪ್ಪುಗಳನ್ನೂ ಕ್ಷವಿುಸುವನು." (ಮಾರ್ಕ 11:25-26). ಮತ್ತು ಯೋಹಾನ 20:23 ರಲ್ಲಿ, "ನೀವು ಯಾರ ಪಾಪಗಳನ್ನು ಕ್ಷವಿುಸಿಬಿಡುತ್ತೀರೋ ಅವರಿಗೆ ಅವುಗಳ ಕ್ಷಮಾಪಣೆಯಾಗುತ್ತದೆ; ಯಾರ ಪಾಪಗಳನ್ನು ಕ್ಷವಿುಸದೆ ಉಳಿಸುತ್ತೀರೋ ಅವರಿಗೆ ಅವುಗಳು ಉಳಿಯುತ್ತವೆ ಅಂದನು". ನಾವು ಕ್ಷಮಿಸಲ್ಪಡಬೇಕಾದರೆ ಇತರರ ಪಾಪಗಳನ್ನು ಕ್ಷಮಿಸಬೇಕು. 

 

ಒಬ್ಬ ರಕ್ಷಣೆ ಹೊಂದಿದ ವ್ಯಕ್ತಿಯು ತನ್ನ ಸಾಕ್ಷಿಯನ್ನು ಹೇಳುವಾಗ, ನಾನು ಯೇಸುವನ್ನು ಸ್ವೀಕರಿಸಿದ ಪ್ರಾರಂಭದಲ್ಲಿ, ಇತರರ ತಪ್ಪುಗಳನ್ನು ಕ್ಷಮಿಸಲು ಸಾಧ್ಯವಾಗದೇ, ದೇವರ ಬಳಿ ಮೊರೆಯಿಟ್ಟು, ದೇವರು ಅವರನ್ನು ಗದ್ದಿಸುವುದನ್ನು ಸಾಕ್ಷಿಯಾಗಿ ಹೇಳುತ್ತಿದ್ದೆ. ಆಗ "ನೀವು ಯಾವ ರೀತಿಯ ಆತ್ಮವುಳ್ಳವರು ಎಂದು ತಿಳಿಯದೇ ಇದ್ದೀರಾ?" ಎಂಬ ಯೇಸುವಿನ ಮಾತು ನನ್ನನ್ನು ಯೋಚಿಸುವಂತೆ ಮಾಡಿದಾಗ, ದೇವರಲ್ಲಿ ಅವರಿಗಾಗಿ ಕ್ಷಮೆ ಕೇಳಿದಾಗ ಅವರಿಗೆ ಶಿಕ್ಷೆಯಾಗಲಿಲ್ಲ. ಇದನ್ನು ತಿಳಿದ ಒಬ್ಬರು, “ನೀನು ಈಗ ಅಂತಹ ಸಾಕ್ಷಿಗಳನ್ನು ಹೇಳುತ್ತಿಲ್ಲವಲ್ಲಾ" ಎಂದರು. ನಿಮ್ಮ ಆಧ್ಯಾತ್ಮಿಕ ಜೀವನದಲ್ಲಿ ತಪ್ಪು ಮಾಡಿದ್ದೀರಾ?” ಎಂದು ಕೇಳಿದರು. ಅದಕ್ಕೆ ನಾನು, ಮಕ್ಕಳನ್ನು ಶಪಿಸಿದ ಎಲೀಷನ ಹಾಗೆ ಇದ್ದ ನನ್ನನ್ನು, ಶತ್ರುಗಳಿಗೆ ಔತಣವನ್ನು ಕಳುಹಿಸುವ ಎಲೀಷನನ್ನಾಗಿ ಬದಲಾಯಿಸಿಬಿಟ್ಟರು ಎಂದು ಹೇಳಿದೆ. ಇದೇ ಪರಲೋಕ ವಾಸಸ್ಥಾನಗಳಿಗಾಗಿ ಹಾತೊರೆಯುವ ಜನರ ಜೀವಂತ ಸಾಕ್ಷಿ. 

 

ತನ್ನ ಸ್ವಂತ ಶರೀರವನ್ನು ಹಗೆ ಮಾಡುವವನು ಒಬ್ಬನೂ ಇಲ್ಲವಲ್ಲಾ. ತನ್ನ ಸಹೋದರನನ್ನು ದ್ವೇಷಿಸುವವನು ಕೊಲೆಗಾರ ಎಂದು ಸತ್ಯವೇದವು ಹೇಳುತ್ತಿದೆ. ಇಂದು, ನಾವು ನಮ್ಮ ಸಹೋದರ ಸಹೋದರಿಯರನ್ನು ಕ್ರಿಸ್ತನ ದೇಹವೆಂದು ಪರಿಗಣಿಸುವುದಿಲ್ಲ. FMPB ಯ ಸಹೋದರ ನವನೀತರ್ ತನ್ನ ಹೆತ್ತವರನ್ನು ಕೊಂದ ವ್ಯಕ್ತಿಯನ್ನು ಕ್ಷಮಿಸಿದ್ದಾರೆ ಮತ್ತು ಅವರ ಕುಟುಂಬವನ್ನು ರಕ್ಷಣೆಯ ಹಾದಿಯಲ್ಲಿ ಮುನ್ನಡೆಸಿದ್ದಾರೆ.

 

ಇಂದು, ನಾವು ನಮ್ಮನ್ನು ದ್ವೇಷಿಸುವವರನ್ನು ನೋಡಿದರೆ ಉರಿಗೊಳ್ಳುತ್ತಿದ್ದೇವೆ ಅಂದರೆ, ನಾವು ಕಾಯಿನನಂತೆ ಮಾರ್ಪಟ್ಟಿದ್ದೇವೆ ಎಂಬುದೇ ನಿಜ. ಆದ್ದರಿಂದ, ದೇವರು ನಮ್ಮನ್ನು ಕ್ಷಮಿಸಿದಂತೆ, ನಮಗೆ ಹಾನಿ ಮಾಡಿದವರನ್ನು ಸಹ ಕ್ಷಮಿಸೋಣ ಮತ್ತು ಪರಲೋಕದ ನಿಧಿಯನ್ನು ಸಂಗ್ರಹಿಸೋಣ. ಆಮೆನ್.

- Rev. D. ಸೆಲ್ವರಾಜ್ 

 

ಪ್ರಾರ್ಥನಾ ಅಂಶ:

ಈ ವರ್ಷ ಭಾರತದಾದ್ಯಂತ 1000 ಮಿಷನರಿಗಳು ರೂಪುಗೊಳ್ಳಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet holiganbet sahabet onwin bets10 bets10 giriş bets10 güncel giriş betcio atlasbet casibom meritking perabet casibom holiganbet galabet casibom padişahbet padişahbet giriş grandpashabet ibizabet tambet grandpashabet jojobet nesinecasino betbey betgit grandpashabet betpuan cashwin matbet meritking perabet perabet giriş instagram ban service betsilin betsilin giris pashagaming pashagaming giris gorabet gorabet giris kralbet holiganbet grandpashabet grandpashabet giriş holiganbet giriş çarkbet çarkbet giriş