Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 10.07.2025
Share:

By Village Missionary Movement

Thursday, 10-Jul-2025

ಧೈನಂದಿನ ಧ್ಯಾನ(Kannada) – 10.07.2025

 

ಯಾವ ಮೇಲಿಗೂ ಕಡಿಮೆಯಿಲ್ಲ

 

"...ಯೆಹೋವನ ಸನ್ನಿಧಿಯಲ್ಲಿ ಬೇಡಿಕೊಳ್ಳುವವರಿಗೆ ಯಾವ ಮೇಲಿಗೂ ಕಡಿಮೆಯಿಲ್ಲ." - ಕೀರ್ತನೆ 34: 10

 

ಮಿಷನರಿ ಸೇವಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಿಷನರಿಯನ್ನು ನಾನು ಮದುವೆಯಾದೆ. ಮಿಷನರಿಗಳು ಹಳ್ಳಿಗಳಲ್ಲಿ ಉಳಿದು ಸೇವೆ ಸಲ್ಲಿಸಬೇಕು ಎಂಬುದು ನಿರ್ವಹಣೆಯ ಆದೇಶ. ದೇವರ ಆದೇಶದೊಂದಿಗೆ ನಿರ್ವಹಣೆಯ ಆದೇಶವನ್ನೂ ಸ್ವೀಕರಿಸಿ ಬಹಳ ಚಿಕ್ಕ ಮಣ್ಣಿನ ಮನೆಯಲ್ಲಿ ಅಂದರೆ, ಸಗಣಿ ಸಾರಿಸಿರುವ ಮನೆಯಲ್ಲಿ, ವಾಸಿಸುತ್ತಿದ್ದೆವು. 1990 ರ ದಶಕದಲ್ಲಿ, ಸರಿಯಾದ ಶೌಚಾಲಯ ಅಥವಾ ಸ್ನಾನಗೃಹವಿಲ್ಲದಿದ್ದಾಗ, ನಾನು ಮನೆಯ ಮುಂಭಾಗದಲ್ಲಿ ಗರಿಗಳನ್ನು ಇಟ್ಟು ಸ್ನಾನಗೃಹ, ಬಟ್ಟೆ ಬದಲಾಯಿಸುವ ಕೋಣೆ ಮತ್ತು ಮನೆಯೊಳಗೆ ಅಡುಗೆಮನೆಯನ್ನು ನಿರ್ಮಿಸಿದ್ದೆ.

 

ನನ್ನ ಮದುವೆಗೆ ಮೊದಲು, ನಾನು ಮಿಷನರಿಗಳು ನಿರ್ಮಿಸಿದ ಅತ್ಯುತ್ತಮ ಶಾಲಾ ಹಾಸ್ಟೆಲ್‌ಗಳಲ್ಲಿ ವಾರ್ಡನ್ ಆಗಿ ಕೆಲಸ ಮಾಡಿದ್ದೆ ಮತ್ತು ತುಂಬಾ ಆರಾಮವಾಗಿ ವಾಸಿಸುತ್ತಿದ್ದೆ, ಆದರೆ ಈ ಜೀವನವು ನನಗೆ ದೊಡ್ಡ ಸವಾಲಾಗಿತ್ತು. ಒಂದು ದಿನ ಬೆಳಿಗ್ಗಿನ ಕೆಲಸಗಳನ್ನೆಲ್ಲ ಮುಗಿಸಿ ಹಿಂತಿರುಗುವಾಗ, ನನ್ನ ಸೀರೆ ಮುಳ್ಳಿನಲ್ಲಿ ಸಿಲುಕಿಕೊಂಡ ಕಾರಣ ನಾನು ತುಂಬಾ ಬಳಲಿದೆ. ನನ್ನ ಕಣ್ಣಲ್ಲಿ ನೀರು, ನನಗೆ ಈ ಜೀವನ ಮಟ್ಟವನ್ನು ಮುಂದುವರಿಸಬೇಕಾ? ಎಂಬ ಪ್ರಶ್ನೆ! ಆಗ ದೇವರು ಲೂಕ 9:62 ನೇ ವಾಕ್ಯವನ್ನು ನನ್ನ ಕಣ್ಣಿಗೆ ತೋರಿಸಿ, ನೇಗಿಲಿನ ಮೇಲೆ ಕೈ ಹಾಕಿರುವ ನೀನು ದೇವರ ರಾಜ್ಯಕ್ಕೆ ಅನರ್ಹಳಾಗಿ ಮಾರ್ಪಡಬಹುದಾ? ಎಂಬ ವಾಕ್ಯದ ಮೂಲಕ ಮಾತನಾಡಿದರು.

 

ನಮ್ಮ ಸೇವೆಯಲ್ಲಿ ಮಾಸಿಕ ಆದಾಯ ಕೇವಲ 700 ರೂಪಾಯಿಗಳು ಮಾತ್ರವೇ! ಬರುವ ಕಾಣಿಕೆಗಳು ಸಂಸ್ಥೆಗೆ ಸೇರಿದ್ದು. ಒಂದು ದಿನ, ಬೆಂಗಳೂರಿನ ಬೈಬಲ್ ಕಾಲೇಜಿನಲ್ಲಿ ಅಂತಿಮ ವರ್ಷದಲ್ಲಿರುವ 15 ವಿದ್ಯಾರ್ಥಿಗಳು ನಮ್ಮ ಸೇವಾ ಕ್ಷೇತ್ರವನ್ನು ಭೇಟಿ ಮಾಡಲು ನಮ್ಮ ಮನೆಗೆ ಬರುತ್ತಿದ್ದಾರೆ. ನೀನೇ ಅವರಿಗೆ ಅಡುಗೆ ಮಾಡಬೇಕು ಎಂದು ನನ್ನ ಪತಿ ಹೇಳಿದರು. ನಮ್ಮ ಮನೆಯಲ್ಲಿ ಸೀಮೆಎಣ್ಣೆ ಒಲೆ ಮಾತ್ರ ಇತ್ತು.

 

ಅತಿಥಿಗಳು ಬರುವ ಹಿಂದಿನ ಸಂಜೆ, ಪಕ್ಕದ ಹಳ್ಳಿಯ ವಿಶ್ವಾಸಿಯಲ್ಲದ ಒಂದು ತಾಯಿಯ ಮೂಲಕ ನನಗೆ ಅಕ್ಕಿ, ತೆಂಗಿನಕಾಯಿ ಮತ್ತು ಹಣ ಸಿಕ್ಕಿತು. ನಾನು ದಿಗ್ಭ್ರಮೆಗೊಂಡು ಆಶ್ಚರ್ಯಚಕಿತಳಾದೆ, ಈ ಸಣ್ಣ ಒಲೆಯ ಮೇಲೆ ಅಡುಗೆ ಮಾಡಲು ಸಾಧ್ಯವಾ? ಎಂದು ಯೋಚಿಸುತ್ತಿದ್ದ ನನಗೆ ಷಣ್ಮುಖತಾಯಿ ಎಂಬ ಯೌವನಸ್ಥ ಮಗಳು ಬಹು ದೊಡ್ಡ ಮಡಿಕೆಯಲ್ಲಿ ಅನ್ನ ಮಾಡಿ ಕೊಟ್ಟಳು. ತಾಯಿ ಕೊಟ್ಟ ಹಣದಿಂದ ಮಟನ್ ತಂದು ವಿಧ ವಿಧವಾಗಿ ಅಡುಗೆ ಮಾಡಿಕೊಟ್ಟೆ. ದೇವರು ನಮ್ಮ ಅಗತ್ಯಗಳನ್ನು ಅದ್ಭುತ ಮತ್ತು ಆಶ್ಚರ್ಯಕರ ರೀತಿಯಲ್ಲಿ ಪೂರೈಸಿದರು. ನಮ್ಮ ದೇವರು ನಿನ್ನೆ, ಇಂದು ಮತ್ತು ನಿರಂತರವೂ ಮಾರ್ಪಡದವರಾಗಿದ್ದಾರೆ. ಅವರು ನಮ್ಮನ್ನು, ನಮ್ಮ ಮಕ್ಕಳನ್ನು, ನಮ್ಮ ಮೊಮ್ಮಕ್ಕಳನ್ನು ಮತ್ತು ನಮ್ಮ ಸೇವೆಗಳನ್ನು ಯಾವುದೇ ಕೊರತೆಗಳಿಲ್ಲದೆ ಆಶೀರ್ವದಿಸುತ್ತಿದ್ದಾರೆ.

 

ಪ್ರಿಯ ಸ್ನೇಹಿತರೇ! ಆತನನ್ನೇ ನಂಬಿರುವ ನಿಮಗೂ ನಿಮ್ಮ ಕುಟುಂಬಕ್ಕೂ ಕೊರತೆ ಬರುವುದಿಲ್ಲ, ನಿಮ್ಮ ಸಂತತಿಗೂ ಸಹ ಯಾವ ಮೇಲಿಗೂ ಕೊರತೆಯಾಗುವುದಿಲ್ಲ. ಈಗಿರುವ ಪರಿಸ್ಥಿತಿಯನ್ನು ಕಂಡು ಚಿಂತಿಸಬೇಡಿ. ಕರ್ತನು ನಿಮ್ಮೊಂದಿಗಿದ್ದಾರೆ. 

- Mrs. ಸರೋಜಾ ಮೋಹನ್ ದಾಸ್ 

 

ಪ್ರಾರ್ಥನಾ ಅಂಶ:

ಆಮೆನ್, ವಿಲೇಜ್ ಟಿವಿಯನ್ನು ಸ್ಯಾಟಲೈಟ್ ಟಿವಿಯಾಗಿ ಪರಿವರ್ತಿಸಬೇಕೆಂದು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet matbet giriş holiganbet holiganbet güncel holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet grandpashabet holiganbet grandpashabet grandpashabet grandpashabet perabet perabet giriş padişahbet padişahbet giriş grandpashabet grandpashabet grandpashabet casinolevant grandpashabet meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş