Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 27.05.2021
Share:

By Village Missionary Movement

Thursday, 27-May-2021

ಧೈನಂದಿನ ಧ್ಯಾನ(Kannada) – 27.05.2021

ದೃಷ್ಟಿಸಿ ನೋಡು

"ಆತನನ್ನೇ ದೃಷ್ಟಿಸಿದವರು ಪ್ರಕಾಶವನ್ನು ಹೊಂದಿದರು; ಅವರ ಮುಖವು ಲಜ್ಜೆಯಿಂದ ಕೆಡುವದೇ ಇಲ್ಲ" - ಕೀರ್ತನೆಗಳು 34:5

ನನ್ನ ಮನೆಯ ಹತ್ತಿರ ಸೂರ್ಯಕಾಂತಿ ತೋಟವೊಂದು ಇದೆ. ಅದರಲ್ಲಿ ಒಂದು ಅತಿಶಯವಾದ ದೃಶ್ಯವನ್ನು ನಾನು ನೋಡುವುದುಂಟು. ಸೂರ್ಯಕಾಂತಿ ಹೂವು ಅರಳಿದಾಗ ಮುಂಜಾನೆಯಲ್ಲಿ ಸೂರ್ಯನು ಉದಯಿಸುವ ದಿಕ್ಕಿನಲ್ಲಿರುತ್ತದೆ. ಸೂರ್ಯನು ಸ್ವಲ್ಪ ಸರಿದು ನೇರವಾಗಿ ಬರುವಾಗ ಆ ಹೂವು ಕೂಡ ನೇರವಾಗಿ ಮೇಲಿರುತ್ತದೆ. ಸಂಜೆ ವೇಳೆ ಸಮೀಪಿಸುತ್ತಾ ಸೂರ್ಯನು ಮರೆಯುವಾಗ ಹೂಗಳೆಲ್ಲಾ ಪಶ್ಚಿಮ ದಿಕ್ಕಿನ ಕಡೆಗೆ ಬಾಗಿರುತ್ತದೆ. ಎಂಥಾ ಒಂದು ಅತಿಶಯ, ನೋಡಿರಿ! ಪ್ರಕೃತಿಯ ಮೂಲಕ ದೇವರು ಒಂದು ಪಾಠವನ್ನು ನಮಗೆ ಕಲಿಸಿಕೊಡುತ್ತಿದ್ದಾರೆ. ಏನದು? ನಾವು ಬದಲಾಗುವ ಲೋಕವನ್ನೋ, ಬಣ್ಣ ಬದಲಾಗುವ ಮನುಷ್ಯನನ್ನೋ ನೋಡದೆ ದೇವರನ್ನು ನೋಡುತ್ತಾ ಜೀವಿಸಲು ಕಲಿತುಕೊಳ್ಳಬೇಕು.

ಇದನ್ನು ಚೆನ್ನಾಗಿ ಗ್ರಹಿಸಿ ಕೀರ್ತನೆಗಾರನು ನಾನು ಕಣ್ಣೆತ್ತಿ ಪರ್ವತಗಳ ಕಡೆಗೆ ನೋಡುತ್ತೇನೆ ನನ್ನ ಸಹಾಯವು ಎಲ್ಲಿಂದ ಬರುವುದು ಭೂಮ್ಯಾಕಾಶಗಳನ್ನು ನಿರ್ಮಿಸಿದ ಯೆಹೋವನಿಂದಲೇ ನನ್ನ ಸಹಾಯ ಬರುವುದು ಎಂದು ಹೇಳಿದರು. ಅಷ್ಟು ಮಾತ್ರವಲ್ಲ, ಇನ್ನೂ ತನ್ನನ್ನು ತಗ್ಗಿಸಿಕೊಂಡು, ದೇವರನ್ನು ನೋಡಿ ಹೀಗೆ ಹೇಳಿದರು. ಯಜಮಾನನ ಕೈಯನ್ನು ದಾಸನ ಕಣ್ಣುಗಳೂ ಯಜಮಾನಿಯ ಕೈಯನ್ನು ದಾಸಿಯ ಕಣ್ಣುಗಳೂ ನೋಡುವ ಪ್ರಕಾರವೇ ನಮ್ಮ ಕಣ್ಣುಗಳು ನಮ್ಮ ಯೆಹೋವ ದೇವರನ್ನು ನೋಡುತ್ತಾ ಆತನ ಕಟಾಕ್ಷವನ್ನು ನಿರೀಕ್ಷಿಸಿಕೊಂಡಿವೆ  ಎಂದು ಹೇಳಿದರು. ಅವರ ದೃಢವಾದ ನಂಬಿಕೆ ನನ್ನ ದೇವರನ್ನು ದೃಷ್ಟಿಸಿ ನೋಡಿದರೆ ನಾನು ಎಂದಿಗೂ ಆಶಾಭಂಗ ಪಡುವುದಿಲ್ಲ ಎಂಬುದೇ. ದೇವರನ್ನು ದೃಷ್ಟಿಸಿ ನೋಡುವುದೆಂದರೆ ಏನು? ಪ್ರಾರ್ಥಿಸುವುದು! ಹೌದು, "ಒಂದೊಂದು ದಿನವೂ ತೆರೆಯುವ ಬೀಗದ ಕೈ ಹಾಗೂ, ರಾತ್ರಿಯಲ್ಲಿ ಹಾಕುವ ಬೀಗದಂತೆಯು ಪ್ರಾರ್ಥನೆ ಇರಬೇಕು"  (prayer is the key for the day, lock for the night). ಹೀಗೆ ನಾವು ದೇವರನ್ನು ದೃಷ್ಟಿಸಿ ನೋಡುವಾಗ ನಾವು ಹೆಚ್ಚಿಸಲ್ಪಡುತ್ತೇವೆ! ದಾವೀದನು ದಿನಕ್ಕೆ ಏಳು ಬಾರಿ ದೇವರನ್ನು ದೃಷ್ಟಿಸಿ ನೋಡುತ್ತಿದ್ದರು. ದಾನಿಯೇಲನು ಬಾಬೆಲ್ ನಲ್ಲಿ ಇದ್ದರೂ ಯೆರೂಸಲೇಮಿನ ಕಡೆಗೆ ತನ್ನ ಕೈಚಾಚಿ ದಿನಕ್ಕೆ ಮೂರು ಬಾರಿ ಪ್ರಾರ್ಥಿಸಿದರು. ಇವರ ಜೀವನವು ಹೆಚ್ಚಿಸಲ್ಪಟ್ಟಿತು. ಜಯಕರವಾಗಿ ಮಾರ್ಪಟ್ಟಿತು.

ಇದನ್ನು ಓದುತ್ತಿರುವ ಪ್ರಿಯರೇ! ಈ ಹೂವಿನ ಹಾಗೆ, ನಾವು ನೀತಿ ಸೂರ್ಯನಾಗಿರುವ ಯೇಸುವನ್ನು ದೃಷ್ಟಿಸಿ ನೋಡುತ್ತಲೇ ಜೀವಿಸಲು ಕಲಿತುಕೊಳ್ಳೋಣ. ಅದೇ ನಮಗೆ ಸಂರಕ್ಷಣೆ! ಅದುವೇ ನಮ್ಮ ಜೀವನ ಸಮೃದ್ಧಿಯಾಗಿರಲು ದಾರಿ!  "ಪ್ರಾರ್ಥನೆ ಮೇಲೆ ಹೋಗುತ್ತಾ  ಹೋಗುತ್ತಾ ಆಶೀರ್ವಾದವು ಕೆಳಗೆ ಬರುತ್ತದೆ"
"Prayer goes up and blessings come down"
-    Mrs. ರೂಬಿ ಜೆಬರಾಜ್

ಪ್ರಾರ್ಥನಾ ಅಂಶ:-
ಕತ್ತೆಗಳ ಗ್ರಂಥ ಎಂಬ ಮಾಸ ಪತ್ರಿಕೆಯನ್ನು ತಡೆಯಿಲ್ಲದೆ ಮುದ್ರಿಸಲು ಮತ್ತು ಅದು ಸೇವಕರಿಗೆ ಆಶೀರ್ವಾದಕರವಾಗಿರುವಂತೆಯೂ ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet perabet perabet giriş padişahbet padişahbet giriş meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş jojobet jojobet betplay jojobet esbet sonbahis tambet grandpashabet betgit mercurecasino