Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 23.07.2025
Share:

By Village Missionary Movement

Wednesday, 23-Jul-2025

ಧೈನಂದಿನ ಧ್ಯಾನ(Kannada) – 23.07.2025

 

ಕರ್ತನನ್ನು ಒರಗಿಕೋ

 

"ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು" - ಜ್ಞಾನೋಕ್ತಿ 3:5

 

ನಾನು ಕ್ರೈಸ್ತ ಕುಟುಂಬದಲ್ಲಿ ಜನಿಸಿದ್ದರೂ, ನನಗೂ ಕರ್ತನಿಗೂ ಯಾವುದೇ ರೀತಿಯ ಸಂಬಂಧವಿಲ್ಲದೇ ಇತ್ತು. ಆದರೆ ನಾನು ಚರ್ಚ್‌ಗೆ ಹೋಗುತ್ತಿದ್ದೆ, ಮನೆಯಲ್ಲಿ ಕ್ರಿಶ್ಚಿಯನ್ ಹಾಡುಗಳನ್ನು ಕೇಳುತ್ತಿದ್ದೆ ಮತ್ತು ಕ್ರಿಸ್‌ಮಸ್‌ಗೆ ಮನೆಯನ್ನು ಅಲಂಕರಿಸುತ್ತಿದ್ದೆ. ಆದರೆ ನಾನು ದೇವರಿಂದ ದೂರವಿದ್ದೆ. ನನಗೆ ಅಧ್ಯಯನದಲ್ಲಿ ಆಸಕ್ತಿ ಇಲ್ಲದ ಕಾರಣ, ಹತ್ತನೇ ತರಗತಿಯನ್ನು ಪೂರ್ಣಗೊಳಿಸಿದ ನಂತರ, ನಾನು ನನ್ನ ತಂದೆಗೆ ಅಂಗಡಿಯಲ್ಲಿ ಸಹಾಯ ಮಾಡುತ್ತಿದ್ದೆ. ಸ್ನೇಹಿತರೊಂದಿಗೆ ಸೇರಿ ಸಿನಿಮಾ ನೋಡಲು ಹೋದೆ. ನನ್ನ ತಾಯಿ ಮತ್ತು ಒಡಹುಟ್ಟಿದವರು ಬೈಯ್ಯುತ್ತಿದ್ದರು. ನಾನು ನೆಮ್ಮದಿ ಇಲ್ಲದೆ ಮನದೊಳಗೆ ಯಾವುದೋ ಒಂದು ರೀತಿಯ ಶೂನ್ಯದೊಂದಿಗೆ ಕಾಣಲ್ಪಟ್ಟೆ.

 

ಹಾಗಾಗಿ ನಾನು ಚೆನ್ನೈಗೆ ಹೋಗಿ ಅಲ್ಲಿ ಒಂದು ಕೆಲಸಕ್ಕೆ ಸೇರಿಕೊಂಡೆ. ಅಲ್ಲಿಯೂ ಸಹ, ಸ್ನೇಹಿತರೊಂದಿಗೆ ಸೇರಿ ಸಿನಿಮಾ ನೋಡುವುದು ಮಾತ್ರವಲ್ಲದೆ, ಕುಡಿಯುವ ಅಭ್ಯಾಸವೂ ಬಂತು. ನಾನು ಸಿನಿಮಾ ಮತ್ತು ಕುಡಿತ ಎರಡಕ್ಕೂ ವ್ಯಸನಿಯಾದೆ. ನನ್ನ ಹೆತ್ತವರು ಮತ್ತು ಒಡಹುಟ್ಟಿದವರು ನನಗಾಗಿ ಆಸಕ್ತಿಯಿಂದ ಪ್ರಾರ್ಥಿಸಿದರು. ನಾನು ಬಿಡುಗಡೆಯಾಗದ ಕಾರಣ ಅವರು ನನ್ನನ್ನು ದ್ವೇಷಿಸಲು ಪ್ರಾರಂಭಿಸಿದರು. ನಾನು ಈ ಕುಡಿಯುವ ಅಭ್ಯಾಸವನ್ನು ಬಿಡಲು ಬಯಸಿದ್ದರೂ, ನನಗೆ ಸಾಧ್ಯವಾಗಲೇ ಇಲ್ಲ. ಮನೆಗೆ ಹೋಗೋಣ ಅಂದುಕೊಂಡು ರೈಲು ನಿಲ್ದಾಣಕ್ಕೆ ಬಂದು ಟಿಕೆಟ್ ತೆಗೆದುಕೊಂಡರೂ ಟಿಕೆಟ್ ಹರಿದು ಹಾಕಿ ನನ್ನ ಕೋಣೆಗೆ ಹಿಂತಿರುಗುತ್ತಿದ್ದೆ. ನನಗೆ ಎರಡು ಅಪಘಾತಗಳು ಸಂಭವಿಸಿ ಬಹುತೇಕ ಸಾಯುವ ಹಂತಕ್ಕೆ ತಲುಪಿತ್ತು, ಆದರೆ ದೇವರ ಮಹಾ ಕೃಪೆಯಿಂದ ನಾನು ಪಾರಾದೆ. ನನ್ನ ಮನೆಯವರು ನನ್ನನ್ನು ದ್ವೇಷಿಸುತ್ತಿರುವುದನ್ನು ಯೋಚಿಸಿದಾಗ ಇನ್ನು ನಾನು ಸತ್ತುಹೋಗುವುದೇ ಒಳ್ಳೇದೆಂದು ಭಾವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದೆ. ಆದರೆ ಕರ್ತನು ನನ್ನನ್ನು ರಕ್ಷಿಸಿದರು. 

 

ಒಬ್ಬ ಸಹೋದರ ನನ್ನನ್ನು ಮನೆಗೆ ಕರೆತಂದು ತೂತುಕುಡಿಯಲ್ಲಿರುವ ನನ್ನ ಸಹೋದರನ ಮನೆಯಲ್ಲಿ ಬಿಟ್ಟರು. ನನ್ನ ಸಹೋದರ ನನ್ನನ್ನು ಒಂದು ಪ್ರಾರ್ಥನಾ ಕೂಟಕ್ಕೆ ಕರೆದೊಯ್ದರು. ನಂತರ, ನನ್ನ ಕಾಲಿನ ಪಾದದಲ್ಲಿದ್ದ ದೊಡ್ಡ ಹುಣ್ಣು ಪ್ರಾರ್ಥಿಸಿದ ಕೂಡಲೇ, ಗುಣವಾಗಲು ಪ್ರಾರಂಭಿಸಿತು. ಹಲವು ತಿಂಗಳುಗಳ ನಂತರ, ಆ ದಿನ ನಾನು ಚೆನ್ನಾಗಿ ಮಲಗಿದೆ. ಮನೆಗೆ ಬಂದು, ಚಿಕ್ಕ ಮಗುವಿನಂತೆ ಅತ್ತು "ನನ್ನ ಜೀವನ ನಿನಗಾಗಿಯೇ" ಎಂದು ಪ್ರಾರ್ಥಿಸಿದೆ. ನಂತರ, ನಾನು ಅದೇ ಸಹೋದರನ ಮನೆಯಲ್ಲಿ ಪ್ರಾರ್ಥನಾ ಕೂಟಕ್ಕೆ ಹೋದಾಗ, ಡೇವಿಡ್ ಅಣ್ಣನವರು, ನನ್ನನ್ನು "ಸೇವೆ ಮಾಡಿ ಕರ್ತನ ಕಣ್ಣೀರನ್ನು ಒರೆಸಲು ಬನ್ನಿ" ಎಂದು ಕರೆದರು. VMM ನಲ್ಲಿ ಸೇರಿ ನನ್ನಿಂದ ಸಾಧ್ಯವಾದಷ್ಟು ಸೇವೆಯನ್ನು ಉತ್ತಮವಾಗಿ ಮಾಡಿದೆ. ಕರ್ತನು ನನ್ನ ಶೂನ್ಯತೆಯನ್ನು ಬದಲಾಯಿಸಿ ನನಗೆ ನೆಮ್ಮದಿ ಮತ್ತು ಸಂತೋಷವನ್ನು ಕೊಟ್ಟರು.

 

ಅಷ್ಟೇ ಅಲ್ಲದೆ, ನನ್ನ ಮೇಲೆ ನಾನೇ ಅಸಹ್ಯಗೊಂಡು ಮದುವೆ ಬೇಡ ಎಂದಿದ್ದ ನನಗೆ ಒಳ್ಳೆಯ ರಕ್ಷಣೆ ಹೊಂದಿರುವ, ಸೇವೆ ಮಾಡುವಂತಹ ಹೆಂಡತಿಯನ್ನು ಕೊಟ್ಟು ಮಗುವನ್ನು ಕೊಟ್ಟರು. ಕುಟುಂಬವಾಗಿ ಆರು ವರ್ಷಗಳಿಂದ ಸೇವೆ ಮಾಡುತ್ತಿದ್ದೇವೆ. ನೀವು ಸಹ ನಿಮ್ಮ ಜೀವನದಲ್ಲಿ ಖಾಲಿತನದ ಸ್ಥಿತಿಯಲ್ಲಿದ್ದರೆ, ಜನರಿಂದ ದ್ವೇಷಿಸಲ್ಪಟ್ಟು ನಿರ್ಲಕ್ಷಿಸಲ್ಪಟ್ಟಿದ್ದರೆ, ನಿಮ್ಮ ಮಾರ್ಗವನ್ನು ದೇವರಿಗೆ ಒಪ್ಪಿಸಿರಿ. ಆತನು ನಿಮ್ಮನ್ನು ಪ್ರೀತಿಸಿ ಇಹಲೋಕದಲ್ಲಿ ಸಂತೋಷ ಮತ್ತು ಶಾಂತಿಯನ್ನು ಕೊಟ್ಟು ಪರಲೋಕದಲ್ಲಿ ಶಾಶ್ವತ ಜೀವನವನ್ನು ನೀಡುತ್ತಾರೆ.

- M. ಸ್ಟಾಲಿನ್ ರಾಜಾ

 

ಪ್ರಾರ್ಥನಾ ಅಂಶ:

ಆಗಸ್ಟ್ 15 ರ ಶಿಬಿರಕ್ಕಾಗಿ ಕಟ್ಟಿರುವಂತಹ ಬ್ಯಾನರ್ ಗಳನ್ನು ನೋಡುವವರೆಲ್ಲರೂ, ಆ ಶಿಬಿರದಲ್ಲಿ ಪಾಲ್ಗೊಳ್ಳುವಂತೆ ಶಿಬಿರಕ್ಕಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet perabet perabet giriş padişahbet padişahbet giriş meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş jojobet jojobet jojobet jojobet jojobet holiganbet holiganbet grandpashabet betgit radissonbet