Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 31.07.2025
Share:

By Village Missionary Movement

Thursday, 31-Jul-2025

ಧೈನಂದಿನ ಧ್ಯಾನ(Kannada) – 31.07.2025

 

ಮುಟ್ಟಿದರು

 

"ಆತನು ಕೈನೀಡಿ ಅವನನ್ನು ಮುಟ್ಟಿ - ನನಗೆ ಮನಸ್ಸುಂಟು; ಶುದ್ಧವಾಗು ಅಂದನು..." - ಮತ್ತಾಯ 8:3

 

ನೀವು ಗುಣವಾಗಬೇಕೆಂದು ಬಯಸುತ್ತೀರಾ? ಈ ಸಾಕ್ಷಿಗಳನ್ನು ಓದಿ ನಿಮ್ಮ ನಂಬಿಕೆಯನ್ನು ಬಲಪಡಿಸಿಕೊಳ್ಳಿ. ಒಬ್ಬ ಯುವ ಅವಿವಾಹಿತ ಸಹೋದರಿಗೆ ದೇಹದಲ್ಲಿ ಚರ್ಮದ ಖಾಯಿಲೆ ಉಂಟಾಗಿ ನೀರು ಸೋರುತ್ತಿತ್ತು. ಆ ಸ್ರಾವವು ಅವಳು ಧರಿಸಿದ್ದ ಬಟ್ಟೆಯ ಮೇಲೆ ಹರಿದು ಅವಳ ದೇಹಕ್ಕೆ ಅಂಟಿಕೊಳ್ಳುತ್ತಿತ್ತು. ಅವಳು ತನ್ನ ಬಟ್ಟೆಗಳನ್ನು ಬದಲಾಯಿಸುವಾಗ ರಕ್ತ ಹೊರಬರುತ್ತಿತ್ತು. ಅವಳು ತೀವ್ರವಾದ ನೋವನ್ನು ಅನುಭವಿಸಿದಳು. ತನ್ನ ತಾಯಿಗೆ ಹೇಳಿದರೆ, ಅವರು ಅವಳನ್ನು ವೈದ್ಯರ ಬಳಿಗೆ ಕರೆದೊಯ್ಯುತ್ತಾರೆ ಎಂದು ಹೆದರುತ್ತಿದ್ದಳು. ಅವಳಿಗೆ ಯೇಸು ಕ್ರಿಸ್ತನೊಂದಿಗೆ ಯಾವುದೇ ಸಂಬಂಧವಿರಲಿಲ್ಲ. ಒಂದು ದಿನ, ನಮ್ಮ ದೂರದರ್ಶನದಲ್ಲಿ ಪ್ರಸಾರವಾದ ಕರ್ತನ ಮಾತುಗಳನ್ನು ಅವಳು ಕೇಳಿದಳು. ಆ ಸಂದೇಶದಲ್ಲಿ, "ಇಗೋ, ನಾನು ಅದಕ್ಕೆ ಕ್ಷೇಮವನ್ನೂ ಸ್ವಸ್ಥತೆಯನ್ನೂ ಹುಟ್ಟಿಸಿ ಅವರನ್ನು ಗುಣಮಾಡಿ ಸಮಾಧಾನದ ಸತ್ಯವನ್ನು ಸಮೃದ್ಧಿಯಾಗಿ ಅವರಿಗೆ ಪ್ರಕಟಮಾಡುವೆನು" (ಯೆರೆಮಿಯ 33:6) ಎಂಬ ಸತ್ಯವೇದದ ವಾಕ್ಯವನ್ನು ಕೇಳಿದಳು. ಕರ್ತನ ವಾಕ್ಯಗಳನ್ನು ಹಿಡಿದುಕೊಂಡು, ಅವಳು ಪ್ರತಿದಿನ ಆ ವಾಕ್ಯಗಳನ್ನು ಮತ್ತೆ ಮತ್ತೆ ಹೇಳುತ್ತಾ, ಬಿಡದೆ ಪ್ರಾರ್ಥಿಸುತ್ತಿದ್ದಳು.

 

ಒಂದು ದಿನ ಬೆಳಿಗ್ಗೆ, ಅವಳು ಎಚ್ಚರವಾದಾಗ, ಒಂದು ಅದ್ಭುತ ಸಂಭವಿಸಿತ್ತು. ಅವಳ ದೇಹದಾದ್ಯಂತ ಹರಿಯುತ್ತಿದ್ದ ರಕ್ತಸ್ರಾವ ಮತ್ತು ಊತ ಸಂಪೂರ್ಣವಾಗಿ ನಿಂತುಹೋಗಿತ್ತು. ಆ ಆಶ್ಚರ್ಯವನ್ನು ಅವಳು ಸಹಿಸಲಾಗಲಿಲ್ಲ. ಅವಳನ್ನು ಮುಟ್ಟಿದ ದೇವರ ವಾಕ್ಯದಲ್ಲಿನ ದೇವರ ಶಕ್ತಿಯು ಅವಳಿಗೆ ಸಂಪೂರ್ಣ ದೈವಿಕ ಗುಣಪಡಿಸುವಿಕೆಯನ್ನು ತಂದಿತು. ಯೇಸು ಕ್ರಿಸ್ತನ ಬಳಿಗೆ ಯಾರು ಬೇಕಾದರೂ ಬರಬಹುದು. ಅವರನ್ನು ಅರಿಯದ ಯಾರೇ ಆಗಿದ್ದರೂ, ಅವರನ್ನು ನಂಬಿದಾಗ ಅದ್ಭುತ ನಡೆಯುತ್ತದೆ. ಒಬ್ಬ ಕುಷ್ಠರೋಗಿ ಯೇಸುವಿನ ಬಳಿಗೆ ಓಡಿಬಂದನು. ನನ್ನನ್ನು ಶುದ್ಧೀಕರಿಸಲು ನಿನ್ನಿಂದ ಸಾಧ್ಯ ಎಂದು ನಂಬಿದನು. ಯೇಸು ತನ್ನ ಕೈಯನ್ನು ಚಾಚಿ ಅವನನ್ನು ಮುಟ್ಟಿದರು, ಅವನು ತಕ್ಷಣವೇ ಗುಣಮುಖನಾದನು. 18 ವರ್ಷಗಳಿಂದ ಬಾಗಿ ಹೋಗಿದ್ದ ಒಬ್ಬ ಮಹಿಳೆ ಕರ್ತನ ಮಾತುಗಳನ್ನು ಕೇಳಲು ಬಂದಳು. ಯೇಸು ಅವಳನ್ನು ಕರೆದು ಅವಳ ಮೇಲೆ ತನ್ನ ಕೈಯನ್ನು ಇಟ್ಟರು. ತಕ್ಷಣ ಅವಳು ಎದ್ದು ನಿಂತಳು. ಯೇಸು ತನ್ನ ಬಳಿಗೆ ಬಂದ ಎಲ್ಲರನ್ನೂ ಮುಟ್ಟಿ ಗುಣಪಡಿಸಿದರು. ಇಬ್ಬರು ಕುರುಡರು, “ದಾವೀದನ ಮಗನೇ, ನಮ್ಮನ್ನು ಕರುಣಿಸು” ಎಂದ ಕೂಡಲೇ ಅವರನ್ನು ಮುಟ್ಟಿ ಗುಣಪಡಿಸಿದರು. 

 

ಯೇಸು ಕ್ರಿಸ್ತನು ನಮ್ಮ ಕಣ್ಣೀರನ್ನು ಒರೆಸುವಾತನು, ನಮ್ಮ ಅಗತ್ಯಗಳನ್ನು ಪೂರೈಸುವಾತನು, ನಮ್ಮನ್ನು ವಿಚಾರಿಸುವಾತನು ಮತ್ತು ನಮ್ಮ ಕಷ್ಟಗಳನ್ನು ಬಲ್ಲಾತನು. ಆತನು ತನ್ನನ್ನು ಬೇಡಿಕೊಳ್ಳುವ ಎಲ್ಲರನ್ನೂ ಮುಟ್ಟಿ ಗುಣಪಡಿಸುವಾತನು. ಆತನನ್ನು ಹುಡುಕಿ ಬರುವವರ ಆಸೆಗಳನ್ನು ಪೂರೈಸುವವರು. ಆತನನ್ನು ಅಂಗೀಕರಿಸಿದ ಒಬ್ಬರಾದರೂ ಬರಿಗೈಯಲ್ಲಿ ಹಿಂತಿರುಗುವುದಿಲ್ಲ. ಆತನು ತನ್ನ ವಾಕ್ಯವನ್ನು ಕಳುಹಿಸಿ ನಮ್ಮನ್ನು ಗುಣಪಡಿಸುತ್ತಾರೆ. ನಾವು ಯೇಸು ಕ್ರಿಸ್ತನನ್ನು ಹುಡುಕುವವರಾದಾಗ, ಆತನು ನಮ್ಮ ಹೃದಯವನ್ನು ಮುಟ್ಟುತ್ತಾರೆ. ನಮ್ಮೊಂದಿಗೇ ಇರುತ್ತಾರೆ. ಆತನು ಯಾವಾಗಲೂ ನಮ್ಮನ್ನು ಮುಟ್ಟಿ ಗುಣಪಡಿಸುವವರಾಗಿದ್ದಾರೆ. ಹಲ್ಲೇಲೂಯಾ. 

- Mrs. ಹೆಪ್ಸಿಬಾ ರವಿಚಂದ್ರನ್

 

ಪ್ರಾರ್ಥನಾ ಅಂಶ:

ಯೌವನಸ್ಥರ ಉಜ್ಜೀವನ ಶಿಬಿರದ ಬಗ್ಗೆ ತಿಳಿದಿರುವ ಪ್ರತಿಯೊಬ್ಬರೂ, ಕನಿಷ್ಠ ಒಬ್ಬ ಯುವಕರನ್ನಾದರೂ ಕರೆತರುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al Elexbet matbet giriş matbet instagram unban x unban twitter unban palacebet setrabet