By Village Missionary Movement
Friday, 01-Aug-2025ಧೈನಂದಿನ ಧ್ಯಾನ(Kannada) – 01.08.2025
ರಾಜಕಾರಣಿ
" ...ತನ್ನನ್ನು ಕಳುಹಿಸಿದವನಿಗೆ ಮಾನಬರಬೇಕೆಂದು ಅಪೇಕ್ಷಿಸುವವನು ಸತ್ಯವಂತನು..." - ಯೋಹಾನ 7:18
ಇಸ್ರಾಯೇಲ್ಯರು ಕಾನಾನ್‌ಗೆ ಪ್ರಯಾಣಿಸುವಾಗ, ಮೋವಾಬಿನಲ್ಲಿ ಪಾಳೆಯ ಹೂಡಿದಾಗ ಅರಸನಾದ ಬಾಲಾಕನು ಭಯಪಡುತ್ತಾರೆ. ಏಕೆಂದರೆ ಕರ್ತನು ಇಲ್ಲಿಯವರೆಗೆ ಅವರಿಗೆ ಮಾಡಿದ್ದನ್ನೆಲ್ಲಾ ಅವರು ಕೇಳಿದ್ದರು. ಆದ್ದರಿಂದ ಪ್ರವಾದಿಯ ಮೂಲಕ ಶಪಿಸಿಬಿಟ್ಟರೆ, ಅವರು ಶಾಪಕ್ಕೊಳಗಾಗುತ್ತಾರಲ್ಲಾ ಅಂದುಕೊಂಡು ಪ್ರವಾದಿಯಾದ ಬಿಳಾಮನನ್ನು ಕರೆಯಲು ಪ್ರಭುಗಳನ್ನು ಕಳುಹಿಸುತ್ತಾರೆ. ಬಿಳಾಮನು ಕರ್ತನು ಹೇಳಿದರೆ ಮಾತ್ರವೇ ಬರುತ್ತೇನೆ ಎಂದು ಹೇಳಿ, ಕರ್ತನ ಬಳಿ ವಿಚಾರಿಸುತ್ತಾರೆ. ಕರ್ತನು ಅದಕ್ಕೆ ಒಪ್ಪದೆ ಹೋದಾಗ ನಾನು ಬರುವುದಿಲ್ಲ ಎಂದು ಹೇಳಿ ಕಳುಹಿಸಿ ಬಿಡುತ್ತಾರೆ. ಅದಕ್ಕೆ ಬಾಲಾಕನು ಬಹಳ ಗೌರವಾನ್ವಿತ ಪ್ರಭುಗಳನ್ನು ಕಳುಹಿಸುತ್ತಾರೆ. ಅದಕ್ಕೆ ಬಿಳಾಮನು ಅವರ ಬಳಿ, "ಮನೆಯ ತುಂಬಾ ಚಿನ್ನ ಮತ್ತು ಬೆಳ್ಳಿಯಿಂದ ತುಂಬಿಸಿದರೂ, ನನ್ನ ದೇವರಾದ ಕರ್ತನ ಆಜ್ಞೆಯನ್ನು ಉಲ್ಲಂಘಿಸಲು ಸಾಧ್ಯವಿಲ್ಲ" ಎಂದರು. ಆದರೆ ಹೃದಯದಲ್ಲಿ ಹೋಗಲು ಬಯಸುತ್ತಿದ್ದಾರೆ. ದೇವರು, ಅವರು ಆಶೀರ್ವದಿಸಲ್ಪಟ್ಟವರು ಅವರನ್ನು ಶಪಿಸಬಾರದು ಎಂದು ಹೇಳಿದ ನಂತರವೂ, ಮನದೊಳಗೆ ಆಸೆ ಉಂಟಾಗಿದ್ದರಿಂದ ಇನ್ನು ಮೇಲೆ ಕರ್ತನು ಏನು ಹೇಳುತ್ತಾರೋ ನೋಡೋಣ ಎಂದು ಹೇಳುತ್ತಾರೆ. ಕರ್ತನು ಅವರ ಹೃದಯವನ್ನು ಕಂಡು ಹೋಗು, ಆದರೆ ನಾನು ಹೇಳುವದನ್ನು ಮಾತ್ರ ಮಾಡಬೇಕು ಎಂದು ಹೇಳಿದರು. ಬಿಳಾಮನು ಮರುದಿನ ಮುಂಜಾನೆಯೇ ಎದ್ದು ಹೋಗುತ್ತಾರೆ. ಇದರಿಂದ ದೇವರಿಗೆ ಕೋಪವುಂಟಾಯಿತು (ಅರಣ್ಯ. 22:22).
ಹೌದು, ಇಂದಿನ ಅನೇಕ ಕ್ರೈಸ್ತರ ಪರಿಸ್ಥಿತಿ ಹೀಗೇ ಇದೆ. ಅವರ ಬಾಯಿಗಳು ಕರ್ತನ ವಾಕ್ಯವನ್ನು ಮಾತನಾಡುತ್ತವೆ ಮತ್ತು ಆತನನ್ನು ಸ್ತುತಿಸುತ್ತವೆ. ಆದರೆ ಅವರ ಆಲೋಚನೆಗಳು ಮತ್ತು ಕಾರ್ಯಗಳು ಆತನನ್ನು ಕೋಪಗೊಳಿಸುತ್ತವೆ. ದೇವರು ಹೇಳುವುದು ಇದನ್ನೇ, “ಈ ಜನರು ಮಾತಿನಿಂದ ನನ್ನನ್ನು ಸಮೀಪಿಸಿ ತುಟಿಯಿಂದ ನನ್ನನ್ನು ಸನ್ಮಾನಿಸುತ್ತಾರೆ, ಮನಸ್ಸನ್ನೋ ದೂರಮಾಡಿಕೊಂಡು ಬಾಯಿಪಾಠವಾಗಿ ಕಲಿತಿರುವ ಮನುಷ್ಯರ ಆಜ್ಞೆಗೆ ಸರಿಯಾದ ಭಯಭಕ್ತಿಯನ್ನು ಮಾತ್ರ ನನ್ನಲ್ಲಿಟ್ಟಿದ್ದಾರೆ (ಯೆಶಾಯ 29:13) ಎಂದು ಹೇಳುತ್ತಾರೆ. ಕ್ರಿಸ್ತನ ಪ್ರೀತಿಯನ್ನು ಪಡೆದು ಕ್ರೈಸ್ತರಾಗಿರುವವರು, ಆತನ ಪ್ರೀತಿಯ ಮಾತುಗಳನ್ನು ಕೇಳಿಯೂ ಅವರು ಮಾಡುವುದೆಲ್ಲವೂ ಗದ್ದಲವೇ. ಕೆಲವು ರಾಜಕಾರಣಿಗಳು, ಅವರು ಮಾತನಾಡುವಾಗ, ಜನರಿಂದ ಬೆಂಬಲ ಮತ್ತು ಲಾಭವನ್ನು ಪಡೆಯಲು ಹೊಗಳಿಕೆಯ ಮಾತುಗಳನ್ನು ಬಳಸುತ್ತಾರೆ. ಅದೇ ರೀತಿಯಲ್ಲಿ, ಕ್ರೈಸ್ತರು ಸಹ ಅನೇಕ ಸಂದರ್ಭಗಳಲ್ಲಿ ಮಾತೊಂದು, ಕ್ರಿಯೆ ಒಂದು ಎಂಬುದಾಗಿ ಬದುಕುತ್ತಿದ್ದಾರೆ.
ಪ್ರಿಯರೇ, ಉಜ್ಜೀವನ ಎಂದು ಮಾತನಾಡುತ್ತಾ ರಾಜಕಾರಣಿಗಳಂತೆ ಬದುಕುವುದರಲ್ಲಿ ಪ್ರಯೋಜನವಿಲ್ಲ. ಕ್ರಿಸ್ತನ ಪ್ರೀತಿಯನ್ನು ಸವಿಯುವ ಪ್ರತಿಯೊಬ್ಬರೂ, ಆತನ ವಾಕ್ಯವನ್ನು ಓದುವ ಮತ್ತು ಕೇಳುವ ಪ್ರತಿಯೊಬ್ಬರೂ ಅದರ ಪ್ರಕಾರ ಜೀವಿಸಿದರೆ, ಉಜ್ಜೀವನ ಬಂದುಬಿಡುತ್ತದೆ. ಲೋಕವು ವಾಕ್ಯವನ್ನು ನೋಡುವುದಿಲ್ಲ, ನಮ್ಮ ಜೀವನವನ್ನು ನೋಡುತ್ತದೆ. ಪ್ರೀತಿಯನ್ನು ತೋರಿಸಬೇಕಾದ ಚರ್ಚುಗಳು ಸಹ ಕೆಲವೊಮ್ಮೆ ಜಗಳ ಮತ್ತು ಗೊಂದಲವನ್ನು ತೋರಿಸುತ್ತವೆ. ಅದಕ್ಕಾಗಿಯೇ ಯೇಸು ಕ್ರಿಸ್ತನು, "ವಾಕ್ಯದ ಪ್ರಕಾರ ನಡೆಯುವವರಾಗಿರಿ; ಅದನ್ನು ಕೇಳುವವರು ಮಾತ್ರವೇ ಆಗಿದ್ದು ನಿಮ್ಮನ್ನು ನೀವೇ ಮೋಸಗೊಳಿಸಬೇಡಿರಿ (ಯಾಕೋಬ 1:22) ಎಂದು ಹೇಳಿದರು. ಆತನು ಹೇಳಿದ ವಾಕ್ಯದ ಪ್ರಕಾರ ಬದುಕೋಣ. ಕರ್ತನು ಹೇಳಿದ ಆಶೀರ್ವಾದಗಳನ್ನು ಪಡೆದುಕೊಳ್ಳೋಣ.
- K. ಡೇವಿಡ್ ಗಣೇಶನ್
ಪ್ರಾರ್ಥನಾ ಅಂಶ:
ನಮ್ಮ ಸೇವಕರು ಮತ್ತು ಸಹ ಸೇವಕರು ವ್ಯವಸ್ಥೆ ಮಾಡಿರುವ ವ್ಯಾನ್‌ಗಳು ಮತ್ತು ಬಸ್‌ಗಳ ಅಗತ್ಯಗಳು ಪೂರೈಸಲ್ಪಡುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482