By Village Missionary Movement
Monday, 18-Aug-2025ಧೈನಂದಿನ ಧ್ಯಾನ(Kannada) – 18.08.2025
ರಕ್ಷಣೆಯ ಮಾರ್ಗ
"ಯಾರಾರು ಆತನನ್ನು ಅಂಗೀಕರಿಸಿದರೋ,... ಅವರಿಗೆ ದೇವರ ಮಕ್ಕಳಾಗುವ ಅಧಿಕಾರ ಕೊಟ್ಟನು" - ಯೋಹಾನ 1:12
ಒಮ್ಮೆ ಬಿಲ್ಲಿ ಗ್ರಹಾಂ ರಕ್ಷಣೆಯನ್ನು ಒಂದು ಉದಾಹರಣೆಯ ಮೂಲಕ ವಿವರಿಸಿದರು. ಅವರು ಹೇಳಿದ್ದು, "ಅನೇಕರು ನಾನು ಕರ್ತನನ್ನು ನಂಬುತ್ತೇನೆ, ಸತ್ಯವೇದವನ್ನು ನಂಬುತ್ತೇನೆ, ಚರ್ಚ್‌ಗೆ ಬರುವುದನ್ನು ನಿಲ್ಲಿಸುವುದಿಲ್ಲ, ನಾನು ಪರಲೋಕಕ್ಕೆ ಹೋಗಲು ಇದು ಸಾಕಾಗುವುದಿಲ್ಲವೇ ಎಂದು ವಾದಿಸುತ್ತಾರೆ" ಇಲ್ಲ, ಇದು ಎಂದಿಗೂ ಸಾಕಾಗುವುದಿಲ್ಲ. ನೀವು ಯೇಸು ಕ್ರಿಸ್ತನನ್ನು ನಿಮ್ಮ ಸ್ವಂತ ರಕ್ಷಕನಾಗಿ ಅಂಗೀಕರಿಸಬೇಕು. ಉದಾಹರಣೆಗೆ, ಒಬ್ಬ ವ್ಯಕ್ತಿಯು ಎಲ್ಲೋ ಹೋಗಲು ತುಂಬಾ ದುಬಾರಿ ವಿಮಾನದಲ್ಲಿ ಟಿಕೆಟ್ ಖರೀದಿಸಿ ನಿರ್ದಿಷ್ಟ ಸಮಯದಲ್ಲಿ ವಿಮಾನ ನಿಲ್ದಾಣಕ್ಕೆ ಬರುತ್ತಾನೆ. ವಿಮಾನವು ಹೊರಡುವ ಕೆಲವು ನಿಮಿಷಗಳ ಮೊದಲು, ಅವನ ಹೆಸರನ್ನು ಕರೆಯಲಾಗುತ್ತದೆ. ಆದರೆ ಅವನು ವಿಮಾನವನ್ನು ಹತ್ತದಿದ್ದರೆ ಮತ್ತು ತಡವಾದರೆ, ವಿಮಾನದ ಬಾಗಿಲು ಮುಚ್ಚಲ್ಪಡುತ್ತದೆ. ವಿಮಾನವು ರನ್‌ವೇಯಲ್ಲಿ ಓಡುತ್ತದೆ ಮತ್ತು ಎತ್ತರಕ್ಕೆ ಹಾರಲು ಪ್ರಾರಂಭಿಸುತ್ತದೆ. ವಿಮಾನವು ತನ್ನ ಗಮ್ಯಸ್ಥಾನಕ್ಕೆ ಕರೆದೊಯ್ಯುತ್ತದೆ ಎಂದು ಆ ವ್ಯಕ್ತಿಗೆ ವಿಶ್ವಾಸವಿತ್ತು. ಎಲ್ಲವೂ ಸಿದ್ಧವಾಗಿದ್ದರೂ, ಅವನು ಅದನ್ನು ಹತ್ತದ ಕಾರಣ ಅವನು ಸೇರಬೇಕಾದ ಸ್ಥಳಕ್ಕೆ ಹೋಗಿ ಸೇರಲು ಸಾಧ್ಯವಾಗಲಿಲ್ಲ. ಹೌದು, ಕ್ರೈಸ್ತ ಹೆಸರಿನೊಂದಿಗೆ ಚರ್ಚ್, ಬೈಬಲ್, ಪರಲೋಕ ಮತ್ತು ನರಕದ ಬಗ್ಗೆ ಎಲ್ಲವನ್ನೂ ಅವನು ತಿಳಿದಿದ್ದರೂ, ತನ್ನ ವೈಯಕ್ತಿಕ ಜೀವನದಲ್ಲಿ ಯೇಸುವನ್ನು ತನ್ನ ಸ್ವಂತ ರಕ್ಷಕನಾಗಿ ಸ್ವೀಕರಿಸದಿದ್ದರೆ ಪರಲೋಕವು ಸಾಧ್ಯವಿಲ್ಲ.
ಯೋಹಾನನು ಬರೆದ ಸುವಾರ್ತೆಯಲ್ಲಿ, ಯಾರಾರು ಆತನನ್ನು ಅಂಗೀಕರಿಸಿದರೋ, ಅಂದರೆ ಆತನ ಹೆಸರಿನಲ್ಲಿ ನಂಬಿಕೆಯಿಟ್ಟರೋ, ಅವರಿಗೆ ದೇವರ ಮಕ್ಕಳಾಗುವ ಅಧಿಕಾರ ಕೊಟ್ಟರು ಎಂದು ಓದುತ್ತೇವೆ. ಯೇಸುವನ್ನು ಸ್ವೀಕರಿಸಿದವರೆಲ್ಲರೂ ಯೇಸುವಿನ ಮಕ್ಕಳು ಎಂಬುದು ಮಾತ್ರವಲ್ಲ, ಅವರು ರಕ್ಷಣೆಹೊಂದಿ, ಪರಲೋಕದ ನಿವಾಸಿಗಳಾಗುವ ಹಕ್ಕನ್ನು ಪಡೆದಿದ್ದಾರೆ.
ಪ್ರಿಯರೇ! ನಾನು ಯೇಸುವನ್ನು ಅರಿತಿದ್ದೇನೆ, ನಾನು ಪ್ರತಿದಿನ ಸತ್ಯವೇದದಲ್ಲಿರುವ ವಾಕ್ಯಗಳನ್ನು ಧ್ಯಾನಿಸುತ್ತೇನೆ, ನಿಯಮಿತವಾಗಿ ಆಲಯಕ್ಕೆ ಹೋಗುತ್ತೇನೆ ಎಂದು ಹೇಳಲು ಸಾಧ್ಯವಿಲ್ಲ. ಕರ್ತನಾದ ಯೇಸುವಿನ ಬಳಿ ನಮ್ಮ ಪಾಪಗಳನ್ನು ಒಪ್ಪಿಕೊಂಡರೆ, ಅವರು ನಮ್ಮನ್ನು ತನ್ನ ರಕ್ತದಿಂದ ತೊಳೆದು, ನಮ್ಮನ್ನು ಶುದ್ಧೀಕರಿಸಿ, ನಮ್ಮನ್ನು ತನ್ನ ಮಕ್ಕಳಾಗಿ ಸ್ವೀಕರಿಸುತ್ತಾರೆ. ನಾವು ಅವರನ್ನು ನಮ್ಮ ಸ್ವಂತ ರಕ್ಷಕನಾಗಿ ಸ್ವೀಕರಿಸಿದರೆ ಮಾತ್ರವೇ ರಕ್ಷಣೆಯ ಮಾರ್ಗವನ್ನು ಕಂಡುಕೊಳ್ಳುತ್ತೇವೆ. ಯೇಸುವನ್ನು ಅಂಗೀಕರಿಸಿ ಆತನ ಮಕ್ಕಳಾಗಿ, ರಕ್ಷಣೆಯ ಮಾರ್ಗದ ಕುರಿತು ತಿಳಿಯದವರಿಗೆ ಅದನ್ನು ತಿಳಿಸಲು, ನಮ್ಮಲ್ಲಿ ಪ್ರತಿಯೊಬ್ಬರನ್ನೂ ಯೇಸುಕ್ರಿಸ್ತನು ಕರೆಯುತ್ತಿದ್ದಾರೆ. ಯೇಸುವಿನ ಬಳಿಗೆ ಬರೋಣ. ನಾವು ರಕ್ಷಣೆಯ ಮಾರ್ಗವನ್ನು ಕಂಡುಕೊಳ್ಳೋಣ. ಇತರರಿಗೆ ಅದನ್ನು ಘೋಷಿಸೋಣ, ಇಂದೇ ಅದನ್ನು ಮಾಡಲು ಪ್ರಯತ್ನಿಸೋಣ.
- Bro. ಶಂಕರ್‌ರಾಜ್
ಪ್ರಾರ್ಥನಾ ಅಂಶ:
ಶಿಬಿರದಲ್ಲಿ ಹೊಸದಾಗಿ ಅಭಿಷೇಕವನ್ನು ಹೊಂದಿಕೊಂಡವರು ಪ್ರತಿದಿನ ತಮ್ಮನ್ನು ತಾವು ನವೀಕರಿಸಿಕೊಳ್ಳುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482