Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 10.09.2025
Share:

By Village Missionary Movement

Wednesday, 10-Sep-2025

ಧೈನಂದಿನ ಧ್ಯಾನ(Kannada) – 10.09.2025

 

ನಿದ್ರೆ ಮಾಡದ ಕಾವಲುಗಾರ

 

"ಇಗೋ, ಇಸ್ರಾಯೇಲ್ಯರನ್ನು ಕಾಯುವಾತನು ತೂಕಡಿಸುವದಿಲ್ಲ, ನಿದ್ರಿಸುವದಿಲ್ಲ." - ಕೀರ್ತನೆ 121:4

 

ನಿದ್ರೆಯು ದೇವರು ನಮಗೆ ದಯೆಯಿಂದ ನೀಡಿದ ಉಡುಗೊರೆಯಾಗಿದೆ. ಕೆಲಸ ಮಾಡುವ ಮನುಷ್ಯನು ವಿಶ್ರಾಂತಿ ಪಡೆಯಲು ನಿದ್ರೆ ಅವಶ್ಯಕ. ಕರ್ತನು ತಾನು ಪ್ರೀತಿಸುವವರಿಗೆ ನಿದ್ರೆಯನ್ನು ನೀಡುತ್ತಾರೆ ಎಂದೂ ನಾನು ನಿರ್ಭಯವಾಗಿರುವದರಿಂದ ಮಲಗಿಕೊಂಡು ಕೂಡಲೆ ನಿದ್ದೆ ಮಾಡುವೆನು; ಯಾಕಂದರೆ ಯೆಹೋವನೇ, ನಾನು ಯಾವ ಅಪಾಯವೂ ಇಲ್ಲದೆ ಸುರಕ್ಷಿತನಾಗಿರುವಂತೆ ನೀನು ಕಾಪಾಡುತ್ತೀ (ಕೀರ್ತನೆ 4:8) ಎಂದೂ ಸತ್ಯವೇದದಲ್ಲಿ ಓದುತ್ತೇವೆ. 

 

ಇಂದು, ಕೋಟಿಗಟ್ಟಲೆ ಹಣ ಇಟ್ಟುಕೊಂಡಿರುವವರು ಸಹ ನಿದ್ರಿಸಲು ಕಷ್ಟಪಡುತ್ತಿದ್ದಾರೆ. ನಿಯಮಿತವಾಗಿ ನಿದ್ರಿಸಲು ನಿದ್ರೆ ಮಾತ್ರೆಗಳನ್ನು ತೆಗೆದುಕೊಳ್ಳುವವರೂ ಇದ್ದಾರೆ. ನಿದ್ರಿಸದಿರುವುದು ದೇಹಕ್ಕೆ ಹಾನಿಕಾರಕ ಎಂದು ವೈದ್ಯರು ಹೇಳುತ್ತಾರೆ. ಒತ್ತಡದಲ್ಲಿ ಬಾಧಿಸಲ್ಪಡುವಾಗ ನಿದ್ರೆ ಬರುವುದಿಲ್ಲ, ಅಂತಹ ಸಂದರ್ಭಗಳಲ್ಲಿಯೂ ಸಹ, ನಾವು ಎಚ್ಚರಗೊಂಡು ನಮ್ಮನ್ನು ಕಾಪಾಡುವ ನಮ್ಮ ದೇವರನ್ನು ನೋಡುವುದಿಲ್ಲ.

 

ಇಂಗ್ಲೆಂಡ್‌ ದೇಶದಲ್ಲಿರುವ ಪೀಟರ್ಸ್‌ಬರ್ಗ್‌ನ ಮೆಲೋರಿನ್ ವೆಸ್ಟನ್ ಎಂಬ ಮಹಿಳೆ 449 ಗಂಟೆಗಳ ಕಾಲ ನಿದ್ರಿಸದೆ ಎಚ್ಚರವಾಗಿರುವ ಸಾಧನೆಯನ್ನು ಸಾಧಿಸಿದ್ದಾರೆ. ಏಪ್ರಿಲ್ 14 ರಿಂದ ಮೇ 5 ರವರೆಗೆ ರಾಕಿಂಗ್ ಚೇರ್‌ನಲ್ಲಿ ಕುಳಿತು ಈ ಕಾರ್ಯವನ್ನು ಮಾಡಿದ್ದಾರೆ. ಇಂದಿನ ವೇಗದ ಆಧುನಿಕ ಜಗತ್ತಿನಲ್ಲಿ, ನಿದ್ರೆಗೆ ಸಮಯವಿಲ್ಲ ಎಂದು ಅನೇಕ ಜನರು ಹೇಳುತ್ತಿದ್ದಾರೆ.

 

ಸರಾಸರಿ ಒಬ್ಬ ವ್ಯಕ್ತಿ ದಿನಕ್ಕೆ ಕನಿಷ್ಠ 6 ಗಂಟೆಗಳು ನಿದ್ರೆ ಮಾಡಿ ವಿಶ್ರಾಂತಿ ತೆಗೆದುಕೊಳ್ಳಬೇಕು ಎಂದು ಹೇಳಲಾಗುತ್ತದೆ. ನಾವು ಚೆನ್ನಾಗಿ ನಿದ್ರಿಸುತ್ತಾ ವಿಶ್ರಾಂತಿಯಲ್ಲಿರುವಾಗ ನಮ್ಮನ್ನು ಕಾಪಾಡುವ ದೇವರು, ನಿದ್ರಿಸದೆ ಎಚ್ಚರವಾಗಿದ್ದು ನಮ್ಮನ್ನು ಕಾಪಾಡುವುದು ಎಂಬುದು ಎಂತಹ ದೊಡ್ಡ ಕೃಪೆಯ ಸೌಭಾಗ್ಯ. ಅವರ ಕಣ್ಣುಗಳು ಯಾವಾಗಲೂ ನಮ್ಮನ್ನು ನೋಡುತ್ತಿರುತ್ತವೆ ಮತ್ತು ಅವರ ಕಿವಿಗಳು ಯಾವಾಗಲೂ ನಮಗಾಗಿ ತೆರೆದಿರುತ್ತವೆ ಎಂಬುದು ಎಷ್ಟು ವಿಸ್ಮಯ. ನಾವು ಅದಕ್ಕಾಗಿ ಕೃತಜ್ಞರಾಗಿದ್ದೇವೆಯೇ? ಕಣ್ಣುರೆಪ್ಪೆಯು ಕಣ್ಣುಗುಡ್ಡೆಯನ್ನು ಕಾಪಾಡುವಂತೆಯೇ, ನಮ್ಮ ದೇವರು ನಮ್ಮನ್ನು ಕಾಪಾಡುತ್ತಿದ್ದಾರೆ. ತನ್ನ ಮಕ್ಕಳಾದ ನಮ್ಮನ್ನು, ಸಕಲ ವಿಧವಾದ ದುಷ್ಟತನ ಮತ್ತು ಶತ್ರುವಿನ ಕಾರ್ಯಗಳಿಂದ ಕಣ್ಣು ಮುಚ್ಚದೇ ಕಾಪಾಡುತ್ತಿರುವ ನಮ್ಮ ದೇವರ ಅಮೂಲ್ಯ ಪ್ರೀತಿಯನ್ನು ಅರಿತುಕೊಂಡು, ನಮ್ಮ ಜೀವನವನ್ನು ಆತನ ಕೈಗಳಲ್ಲಿ ಸಮರ್ಪಿಸೋಣ.

 

ಹಗಲಿರುಳು ಕಣ್ಣು ಮುಚ್ಚದೇ ನನ್ನನ್ನು ಕಾಪಾಡುವ ದೇವರೇ! ಕಲ್ವಾರಿಯ ನಾಯಕನೇ! ನಾನು ಸಹ ಎಚ್ಚರವಾಗಿದ್ದು ನನ್ನ ಜೀವನವನ್ನು ಕಾಪಾಡಿಕೊಳ್ಳಲು ನನಗೆ ಸಹಾಯ ಮಾಡಿ. ಆಮೆನ್!

- Mrs. ಜಾಸ್ಮಿನ್ ಪಾಲ್

 

ಪ್ರಾರ್ಥನಾ ಅಂಶ:

ನಮ್ಮ ಟ್ಯೂಷನ್ ಸೆಂಟರ್ ಗೆ ಬರುವ ಮಕ್ಕಳು ಜ್ಞಾನದಿಂದ ತುಂಬಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking perabet casibom holiganbet galabet casibom perabet perabet giriş padişahbet padişahbet giriş grandpashabet kalitebet kalitebet giris betsmove betsmove giris gonebet gonebet giris betnano betnano giriş jojobet jojobet betplay jojobet esbet sonbahis tambet grandpashabet betgit mercurecasino matbet