Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 16.09.2025
Share:

By Village Missionary Movement

Tuesday, 16-Sep-2025

ಧೈನಂದಿನ ಧ್ಯಾನ(Kannada) – 16.09.2025

 

ಶ್ರಮಿಸುವಂತಹ ರೂಪವತಿ

 

"ನಿನ್ನ ಕೈಗೆ ಸಿಕ್ಕಿದ ಕೆಲಸವನ್ನೆಲ್ಲಾ ನಿನ್ನ ಪೂರ್ಣ ಶಕ್ತಿಯಿಂದ ಮಾಡು;..." - ಪ್ರಸಂಗಿ 9:10

 

ಈ ಲೋಕವು ತುಂಬಾ ದೊಡ್ಡದಾಗಿದೆ, ಸಂಪತ್ತು, ಸುಖಗಳು, ಖ್ಯಾತಿ, ಹೆಮ್ಮೆ ಮತ್ತು ದುರಾಸೆಯಿಂದ ತುಂಬಿದೆ. ಇದರಿಂದ ಮಾರುಹೋಗಿರುವವರು ಅಸಂಖ್ಯಾತರು. ಇದರ ಮಧ್ಯೆ, ಸಮಾಜದಿಂದ ಬೇಸತ್ತ, ದುರ್ಬಲ, ಹಿಂದುಳಿದ ಅನೇಕ ಮಹಿಳೆಯರು ತಾವು ಎಲ್ಲಿಗೆ ಹೋಗುತ್ತಿದ್ದೇವೆಂದು ತಿಳಿಯದೆ ಗೊಂದಲಕ್ಕೊಳಗಾಗಿರುವ ಮಹಿಳೆಯರು ಹೇರಳ! ಹೇರಳ! ಈ ದಿನಗಳಲ್ಲಿ ಸೌಂದರ್ಯವಿರುವ ಸ್ಥಳದಲ್ಲಿ ಗುಣವಿಲ್ಲ. ಆದರೆ ಪರಿಪೂರ್ಣ ರೂಪವತಿಯಾಗಿ ತೋರುವ ಒಂದು ಸ್ತೀ ಗುಣಶಾಲಿಯಾಗಿಯೂ ಇದ್ದಳು. ಮುಂದೆ ಓದಿ.

 

ಆದಿಕಾಂಡ 24 ನೇ ಅಧ್ಯಾಯದಲ್ಲಿ, ರೆಬೆಕ್ಕ ಎಂಬ ಸ್ತೀಯ ಬಗ್ಗೆ ಬರೆಯಲಾಗಿದೆ. ಆ ಮಹಿಳೆಯು ತುಂಬಾ ಸುಂದರಿ ಮತ್ತು ಪುರುಷನನ್ನು ತಿಳಿದಿಲ್ಲದ ಕನ್ಯೆಯಾಗಿದ್ದಳು. ಅವಳು ಬಾವಿಗೆ ಇಳಿದು, ತನ್ನ ಕೊಡವನ್ನು ತುಂಬಿಸಿಕೊಂಡು, ಮೇಲಕ್ಕೆ ಬಂದಳು. ಅಬ್ರಹಾಮನ ಸೇವಕನಿಗೆ ಪ್ರತ್ಯುತ್ತರವಾಗಿ ಒಂದು ಮಾತನ್ನೂ ಹೇಳದೆ, ತನ್ನ ಬಳಿ ಇದ್ದ ಕೊಡವನ್ನು ಇಳಿಸಿ ಸೇವಕರಿಗೆ ಮತ್ತು ಅವರ ಒಂಟೆಗಳಿಗೆ ನೀರುಣಿಸಿದಳು. ರೆಬೆಕ್ಕಳು ಈ ಸ್ಥಳದಲ್ಲಿ ತುಂಬಾ ಚುರು-ಚುರುಕಾಗಿ ಕ್ರಿಯೆ ಮಾಡಿದಳು. ಅವಳು, ಹಿಂದೆ ಮುಂದೆ ಪರಿಚಯವಿಲ್ಲದ ಒಬ್ಬ ವ್ಯಕ್ತಿ, ಕೆಲಸದವನಾಗಿ ಕಾಣುತ್ತಿದ್ದಾರೆ ಎಂದು ತನ್ನ ಮನಸ್ಸಿನಲ್ಲಿ ಹೀನವಾಗಿ ಯೋಚಿಸದೆ, ಗೌರವದಿಂದ ವಿಚಾರಿಸಿ, ಉಪಚರಿಸಿದಳು ಇವುಗಳಿಂದ ರೆಬೆಕ್ಕಳ ಸದ್ಗುಣಗಳನ್ನು ನಾವು ಅರಿತುಕೊಳ್ಳಬಹುದು. ಸೇವಕರ ಪ್ರಶ್ನೆಗಳಿಗೆ ರೆಬೆಕ್ಕಳ ಪ್ರತಿಕ್ರಿಯೆಯೂ ತುಂಬಾ ವಿನಮ್ರವಾಗಿತ್ತು.

 

ಈ ದಿನಗಳಲ್ಲಿ ಇರುವ ಮಹಿಳೆಯರು ಮತ್ತು ಯುವತಿಯರಿಗೆ ಉತ್ಸಾಹದಿಂದ ಸವಾಲು ಮಾಡುವ ಮಹಿಳೆ ರೆಬೆಕ್ಕಳು. ಇದನ್ನು ಓದುತ್ತಿರುವ ನೀವು ಯೌವನ ಸಹೋದರಿಯಾಗಿರಬಹುದು.ನಾನು ಬಹಳಷ್ಟು ಓದಿದ್ದೇನೆ. ನನ್ನ ಓದಿಗೆ ತಕ್ಕ ಕೆಲಸ ಇನ್ನೂ ನನಗೆ ಸಿಕ್ಕಿಲ್ಲ. ಆದ್ದರಿಂದ ನಾನು ಮನೆಯಲ್ಲಿ ಸುಮ್ಮನೆ ಇದ್ದೇನೆ ಎಂದು ಸೋಮಾರಿಯಾಗಿರಲು ಅಭ್ಯಾಸ ಮಾಡಿಕೊಳ್ಳಬೇಡಿರಿ. ನಿಮ್ಮ ಓದಿಗೆ ಸೂಕ್ತವಲ್ಲದ ಕೆಲಸವಾಗಿದ್ದರೂ ಸರಿ, ಅದು ಚಿಕ್ಕದಾಗಿದ್ದರೂ ಸಹ ನಿಮ್ಮನ್ನು ತೊಡಗಿಸಿಕೊಳ್ಳಿ. ಸರಿಯಾದ ಸಮಯ ಬರುವವರೆಗೆ ದೇವರ ಚಿತ್ತಕ್ಕೆ ನಿಮ್ಮನ್ನು ಒಪ್ಪಿಸಿಕೊಟ್ಟು ಕಾದಿರಿ. ಕಾದಿದ್ದು ಸ್ವೀಕರಿಸುವ ಆಶೀರ್ವಾದ ಖಂಡಿತವಾಗಿಯೂ ಶ್ರೇಷ್ಟವಾದದ್ದು. ಕಾಯುವ ದಿನಗಳಲ್ಲಿ ನಾವು ದೇವರಿಗೆ ವಿಧೇಯರಾಗಿದ್ದು ತಾಳ್ಮೆಯಿಂದಿದ್ದರೆ ಅದುವೇ ನಮ್ಮನ್ನು ಗುಣವತಿಯಾಗಿ ಪರಿವರ್ತಿಸುತ್ತದೆ. ರೆಬೆಕ್ಕಳ ಜೀವನವನ್ನು ಆಶೀರ್ವಾದವಾಗಿ ಪರಿವರ್ತಿಸಿದವರು ಖಂಡಿತವಾಗಿಯೂ ನಿಮ್ಮ ಜೀವನವನ್ನು ಸಹ ಪರಿವರ್ತಿಸುತ್ತಾರೆ. 

- Mrs. ಗ್ರೇಸ್ ಜೀವಮಣಿ

 

ಪ್ರಾರ್ಥನಾ ಅಂಶ:

ಉತ್ತರ ರಾಜ್ಯಗಳಲ್ಲಿನ ನಮ್ಮ ಸೇವಾ ಕ್ಷೇತ್ರಗಳಲ್ಲಿ ಅಗತ್ಯವಿರುವ ಸ್ಥಳಗಳಲ್ಲಿ ಆಲಯಗಳನ್ನು ಕಟ್ಟಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al deneme bonusu deneme bonusu veren siteler online casino online casino perabet perabet giriş perabet perabet giriş perabet perabet giriş perabet güncel giriş jojobet jojobet giriş jojobet güncel giriş Holiganbet Holiganbet Giriş Holiganbet Güncel Giriş Superbetin Superbetin Giriş Superbetin Güncel Giriş pashagaming pashagaming giriş pashagaming güncel giriş betcio Betcio Giriş betcio güncel giriş atlasbet atlasbet giriş atlasbet güncel giriş Piabet Piabet Giriş Ngsbahis Ngsbahis Giriş İnterbahis İnterbahis Giriş Klasbahis Klasbahis Giriş Coinbar Coinbar Giriş Limanbet Limanbet Giriş İmajbet İmajbet Giriş Restbet Restbet Giriş Matbet Matbet Giriş Jasminbet Jasminbet Giriş Belugabahis Belugabahis Giriş Online casino nz Best payout online casino nz matbet jojobet jojobet giriş jojobet güncel giriş bahsegel bahsegel bahsegel matbet romabet lunabet