Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 18.09.2025
Share:

By Village Missionary Movement

Thursday, 18-Sep-2025

ಧೈನಂದಿನ ಧ್ಯಾನ(Kannada) – 18.09.2025

 

ನಮ್ಮ ಕರ್ತವ್ಯ

 

"...ಅದು ನಿನ್ನಲ್ಲಿಯೂ ವಾಸವಾಗಿದೆ ಎಂದು ನಾನು ದೃಢವಾಗಿ ನಂಬಿದ್ದೇನೆ" - 2 ತಿಮೊ. 1:5

 

ಒಬ್ಬ ಶಿಕ್ಷಕಿ ತನ್ನ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಪಾಠದ ಕೊನೆಯಲ್ಲಿ ಪರೀಕ್ಷೆಯನ್ನು ನಡೆಸಿದರು. ವಿಜೇತರಿಗೆ ಹೊಸ ಜೋಡಿ ಶೂಗಳನ್ನು ನೀಡಲಾಗುವುದು ಎಂದು ಘೋಷಿಸಿದರು. ಎಲ್ಲಾ ವಿದ್ಯಾರ್ಥಿಗಳು ಬಹಳ ನಿರೀಕ್ಷೆಯಿಂದ ಪರೀಕ್ಷೆಯನ್ನು ಬರೆದರು. ಅಂತಿಮವಾಗಿ ಶಿಕ್ಷಕರು ತಮ್ಮ ಉತ್ತರ ಪತ್ರಿಕೆಗಳನ್ನು ಸರಿಪಡಿಸಿದಾಗ, ಅವರೆಲ್ಲರೂ ಸರಿಯಾದ ಉತ್ತರಗಳನ್ನು ಬರೆದಿದ್ದರು. ಬಹುಮಾನವನ್ನು ಯಾರಿಗೆ ನೀಡಬೇಕೆಂದು ಶಿಕ್ಷಕರು ಯೋಚಿಸಿದರು, ಆದ್ದರಿಂದ ಅವರು ಎಲ್ಲಾ ವಿದ್ಯಾರ್ಥಿಗಳು ತಮ್ಮ ಹೆಸರುಗಳನ್ನು ಒಂದು ಕಾಗದದ ಮೇಲೆ ಬರೆದು ಅದನ್ನು ಸುತ್ತಿ ಒಂದು ಪೆಟ್ಟಿಗೆಯಲ್ಲಿ ಹಾಕುವಂತೆ ಹೇಳಿದರು. ಎಲ್ಲರೂ ಬರೆದು ಹಾಕಿದ ತಕ್ಷಣ, ಶಿಕ್ಷಕರು ಪೆಟ್ಟಿಗೆಯನ್ನು ಅಲ್ಲಾಡಿಸಿ ಒಂದು ಕಾಗದವನ್ನು ಹೊರತೆಗೆದರು. ಅದರಲ್ಲಿ 'ವಫಾ' ಎಂಬ ವಿದ್ಯಾರ್ಥಿಯ ಹೆಸರಿತ್ತು. ಬಹುಮಾನವನ್ನು ತಕ್ಷಣವೇ ಆ ವಿದ್ಯಾರ್ಥಿಗೆ ನೀಡಲಾಯಿತು.

 

ಆ ವಿದ್ಯಾರ್ಥಿನಿ ತರಗತಿಯಲ್ಲಿ ಅತ್ಯಂತ ಬಡ ವಿದ್ಯಾರ್ಥಿನಿಯಾಗಿದ್ದಳು, ಮತ್ತು ತಿಂಗಳುಗಳಿಂದ ಸವೆದುಹೋದ ಶೂಗಳನ್ನು ಧರಿಸುತ್ತಿದ್ದ ಆ ವಿದ್ಯಾರ್ಥಿನಿಗೆ ಆ ದಿನ ತುಂಬಾ ಸಂತೋಷವಾಯಿತು. ನಂತರ ಆ ಶಿಕ್ಷಕಿ ಸಂತೋಷದಿಂದ ಮನೆಗೆ ಹಿಂತಿರುಗಿದಳು ಮತ್ತು ಆ ದಿನ ತರಗತಿಯಲ್ಲಿ ನಡೆದದ್ದನ್ನು ಕಣ್ಣೀರಿನಿಂದ ತನ್ನ ಗಂಡನಿಗೆ ಹೇಳಿದರು. ಗಂಡನೂ ಸಹ ತುಂಬಾ ಸಂತೋಷಪಟ್ಟರು. ಆದಾಗ್ಯೂ, ಅವರ ಕಣ್ಣುಗಳಿಂದ ಕಣ್ಣೀರು ಹರಿಯುತ್ತಲೇ ಇತ್ತು. ಅವರ ಗಂಡ ಅವಳನ್ನು ಏಕೆ ಎಂದು ಕೇಳಿದಾಗ, ಅದಕ್ಕೆ ಅವರು, "ನಾನು ಮನೆಗೆ ಬಂದು ಹೆಸರುಗಳು ಬರೆದಿದ್ದ ಆ ಪೆಟ್ಟಿಗೆಯಲ್ಲಿರುವ ಎಲ್ಲಾ ಕಾಗದಗಳನ್ನು ತೆಗೆದು ನೋಡಿದೆ. ಅದರಲ್ಲಿ, ಎಲ್ಲಾ ವಿದ್ಯಾರ್ಥಿಗಳು ತಮ್ಮ ಹೆಸರುಗಳನ್ನು ಬರೆದಿರಲಿಲ್ಲ, ಆದರೆ ತರಗತಿಯಲ್ಲಿ ಬಡ ವಿದ್ಯಾರ್ಥಿಯಾಗಿದ್ದ 'ವಫಾ' ಹೆಸರನ್ನು ಬರೆದಿದ್ದರು." 

 

ಸತ್ಯವೇದದಲ್ಲಿ, ತಿಮೊಥೆಯನ ಬಗ್ಗೆ ನಮಗೆ ಗೊತ್ತು. ಅವರ ಬಗ್ಗೆ ಇಂದಿಗೂ ಮಾತನಾಡಲ್ಪಡುವ ಸೇವಕನಾಗಿ ರೂಪುಗೊಳ್ಳಲು ಕಾರಣ ಅವರ ಅಜ್ಜಿ ಲೋವಿ ಮತ್ತು ತಾಯಿಯಾದ ಯೂನೀಕೆಯಳು. ಇವರ ನಂಬಿಕೆಯು ತಿಮೊಥೆಯನನ್ನು ಒಬ್ಬ ಮಹಾನ್ ಸೇವಕನನ್ನಾಗಿ ಮಾಡಿತು. ಅವರು ಅಪೊಸ್ತಲನಾದ ಪೌಲನಿಗೆ ಎಲ್ಲಾ ರೀತಿಯಲ್ಲೂ ಸಹಾಯಕನಾಗಿದ್ದರು. ಅವರು ನಿಸ್ವಾರ್ಥ ಮಗುವಾಗಿ ಬೆಳೆಸಲ್ಪಟ್ಟರು. 

 

ಪ್ರಿಯರೇ! ಈಗಿನ ಕಾಲದಲ್ಲಿ ಮಕ್ಕಳನ್ನು ಬೆಳೆಸುವುದು ಎಂಬುದು ಬಹಳ ಕಷ್ಟಕರವಾದ ಕಾರ್ಯ. ಅದರಲ್ಲೂ ವಿಶೇಷವಾಗಿ ಕ್ರೈಸ್ತ ಪೋಷಕರು, ತಮ್ಮ ಮಕ್ಕಳನ್ನು ಆಧ್ಯಾತ್ಮಿಕ ಜೀವನದಲ್ಲಿ ಬೆಳೆಸುವುದು ಎಂಬುದು ಒಂದು ಸವಾಲಾಗಿಯೇ ಇದೆ. ಅಂತಹ ಕಷ್ಟಕರವಾದ ಕೆಲಸವನ್ನು ನಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಮತ್ತೊಬ್ಬರಿಗೆ ಹಂಚಿಕೊಡಲು ಕಲಿಸಬೇಕು. ನಮ್ಮ ಸಹಾಯದ ಅಗತ್ಯವಿರುವವರ ಮೇಲೆ ಅಕ್ಕರೆ ತೋರಿಸಿ, ಅವರಿಗೆ ಸಹಾಯ ಮಾಡುವ ಮಕ್ಕಳಾಗಿ ನಮ್ಮ ಮಕ್ಕಳನ್ನು ಬೆಳೆಸುವುದು ನಮ್ಮ ಕರ್ತವ್ಯವಾಗಿದೆ.

- Bro. ಶಂಕರ್ ರಾಜ್

 

ಪ್ರಾರ್ಥನಾ ಅಂಶ:

ಉತ್ತರ ರಾಜ್ಯಗಳಲ್ಲಿರುವ ಮಿಷನರಿಗಳನ್ನು ದೇವರು ಬಲವಾಗಿ ಉಪಯೋಗಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al deneme bonusu deneme bonusu veren siteler online casino online casino perabet perabet giriş perabet perabet giriş perabet perabet giriş perabet güncel giriş jojobet jojobet giriş jojobet güncel giriş Holiganbet Holiganbet Giriş Holiganbet Güncel Giriş Superbetin Superbetin Giriş Superbetin Güncel Giriş pashagaming pashagaming giriş pashagaming güncel giriş betcio Betcio Giriş betcio güncel giriş atlasbet atlasbet giriş atlasbet güncel giriş Piabet Piabet Giriş Ngsbahis Ngsbahis Giriş İnterbahis İnterbahis Giriş Klasbahis Klasbahis Giriş Coinbar Coinbar Giriş Limanbet Limanbet Giriş İmajbet İmajbet Giriş Restbet Restbet Giriş Matbet Matbet Giriş Jasminbet Jasminbet Giriş Belugabahis Belugabahis Giriş Online casino nz Best payout online casino nz matbet jojobet jojobet giriş jojobet güncel giriş bahsegel bahsegel bahsegel matbet romabet lunabet