Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 21.09.2025 (Kids Special)
Share:

By Village Missionary Movement

Sunday, 21-Sep-2025

ಧೈನಂದಿನ ಧ್ಯಾನ(Kannada) – 21.09.2025 (Kids Special)

 

ಬಂದು ನೋಡು

 

"ನನ್ನ ನಾಲಿಗೆಯು ನಿನ್ನ ನೀತಿಯನ್ನೂ ಮಹಿಮೆಯನ್ನೂ ದಿನವೆಲ್ಲಾ ವರ್ಣಿಸುವದು" - ಕೀರ್ತನೆ 35:28

 

ಹಾಯ್ ಪುಟಾಣಿಗಳೇ! ನಿಮಗೆ School ನಲ್ಲಿ ತುಂಬಾ ಸ್ನೇಹಿತರಿದ್ದಾರಾ? ಅವರ ಜೊತೆ ಮಾತನಾಡುವಾಗ, ಆಟವಾಡುವಾಗ ತುಂಬಾ ಸಂತೋಷವಾಗಿರುತ್ತೆ ಹೌದು ತಾನೇ? ಆಟವಾಡೋದು ಮಾತ್ರ ಅಲ್ಲ, ಅವರು ದಾರಿ ತಪ್ಪಿದರೆ ಅವರನ್ನು ಸರಿಯಾದ ದಾರಿಯಲ್ಲಿ ನಡೆಸೋದು ಕೂಡ ನಿಮ್ಮ ಜವಾಬ್ದಾರೀನೆ. ಅದರ ಬಗ್ಗೆ ಒಂದು ಕಥೆ ಕೇಳೋಣ್ವಾ?

 

ದೀಪಕ್ ಮತ್ತು ನೇಟ್ ಒಳ್ಳೆಯ ಸ್ನೇಹಿತರು. ಅವರು ರಜಾದಿನಗಳಲ್ಲಿ ಕ್ರಿಕೆಟ್ ಆಡುವುದು, ಒಟ್ಟಿಗೆ ಸೇರಿ Home work ಬರೆಯುವುದು ಹೀಗೆ ತುಂಬಾ ಕ್ಲೋಸ್ ಫ್ರೆಂಡ್ಸ್. ಒಂದು ದಿನ ಇಬ್ಬರು School ground ನಲ್ಲಿ ಮಾತನಾಡುತ್ತಾ ನಡೆಯುತ್ತಿದ್ದರು. ನೇಟ್ ದೀಪಕ್ ಬಳಿ ನಾಳೆ ಭಾನುವಾರ ಕಣೋ ಏನು ಮಾಡಲಿದ್ದೀಯ ಎಂದು ಕೇಳಿದನು. T.V. ಯಲ್ಲಿ Cricket final match ನೋಡಲಿದ್ದೇನೆ ಕಣೋ ನೀನೂ ಬಾರೋ ಅಂದನು ದೀಪಕ್. ಇಲ್ಲ, ಇಲ್ಲ, ನಾಳೆ ನನಗೆ Sunday class ಇದೆ. ನಾನು ಅದನ್ನು Miss ಮಾಡೋದೇ ಇಲ್ಲ. ಅಮುದಾ ಅಕ್ಕ Super ಆಗಿ ಹಾಡು, ಕಥೆ ಹೇಳಿ ಕೊಡ್ತಾರೆ. ನೀನು ಕೂಡ ಅಲ್ಲಿಗೆ ಬಂದು ನೋಡೋ ನಿನಗೂ ಹಾಡು ಅಂದ್ರೆ ಇಷ್ಟ ಅಲ್ವಾ..... ಅಂದನು ನೇಟ್. ದೀಪಕ್ ಕೋಪದಿಂದ ನೀನು ಯಾಕೆ ಇಷ್ಟೊಂದು ಮೂರ್ಖನಾಗಿದ್ದೀಯ. ಸಿಗೋ ರಜಾದಿನಗಳನ್ನು enjoy ಮಾಡ್ಬೇಕು. ಅದು ಬಿಟ್ಬಿಟ್ಟು.... ಎಂದು ಮಾತಾಡುತ್ತಿರುವಾಗ, Bell ಹೊಡೆಯುವ ಶಬ್ದ ಕೇಳಿಸಿದ ಕೂಡಲೇ, ಅವರವರ ಬ್ಯಾಗ್‌ಗಳನ್ನು ತೆಗೆದುಕೊಂಡು ಮನೆಗೆ ಹೋದರು.

 

ಸೋಮವಾರ, ದೀಪಕ್ ಶಾಲೆಯೊಳಗೆ ಬಂದಾಗ ಯಾರೋ ತುಂಬಾ ಸಂತೋಷದಿಂದ ಹಾಡುವ ಶಬ್ದ ಕೇಳಿಸಿತು. ಏನೋ ನೇಟ್, ನೀನಾ ಹಾಡಿದ್ದು? ಈ ಹಾಡು ತುಂಬಾ ಇಂಪಾಗಿ ಸುಂದರವಾಗಿ ಇದೆಯಲ್ಲಾ ಅಂದನು ದೀಪಕ್. ಹೌದು ಕಣೋ, ನಿನ್ನೆ Sunday class ಗೆ ಹೋದಾಗ ಈ song ಹೇಳಿಕೊಟ್ರು. ಅಷ್ಟೇ ಅಲ್ಲ, ಕಥೆ, games, gift ಎಲ್ಲ ಜಾಲಿಯಾಗಿತ್ತು. ತಕ್ಷಣ ದೀಪಕ್, ಖಂಡಿತ, ಮುಂದಿನ ವಾರ ನಾನು ನಿನ್ ಜೊತೆ Sunday class ಗೆ ಬರ್ತೀನಿ ಕಣೋ ಅಂದಕೂಡಲೇ, ನೇಟ್ ಗೆ ತುಂಬಾ ಸಂತೋಷ. ನಾನು ನಿನಗಾಗಿ JESUS ಹತ್ರ Pray ಮಾಡ್ದೆ. ನೀನು ಬಂದು ನೋಡು ಎಂದು ಕರೆದನು ನೇಟ್. ನಾವು ಪ್ರಾರ್ಥಿಸಿದರೆ, ನಮಗೆ ಯೇಸಪ್ಪನಿಂದ ಉತ್ತರ ಸಿಗುತ್ತದೆ ಎಂದು ಸಹ ಹೇಳಿದನು. ಪ್ರಾರ್ಥನೆಯನ್ನು ಕೇಳಿದ್ದಕ್ಕಾಗಿ ನೇಟ್ ಯೇಸಪ್ಪಾಗೆ ಧನ್ಯವಾದ ಹೇಳಿದನು. ಮುಂದಿನ ಪಿರಿಯಡ್ ಇಂಗ್ಲಿಷ್ ಮಿಸ್ ಬಂದರು.... Test ಬರೆಯಲು ರೆಡೀನಾ? ಎಂದು ಕೇಳುತ್ತಲೇ ಪ್ರಶ್ನೆ ಪತ್ರಿಕೆಯನ್ನು ಕೊಟ್ಟರು. ದೀಪಕ್ ಗೆ ತಾನು ಓದಿದ್ದು ನೆನಪಿಗೆ ಬರುತ್ತದಾ ಎಂಬ ಭಯ! ಯೇಸಪ್ಪನ ಬಳಿ ಪ್ರಾರ್ಥಿಸೋದಕ್ಕೆ ಮುಂದಿನ ವಾರದವರೆಗೆ ಏಕೆ ಕಾಯಬೇಕು. ಈಗಲೇ ಪ್ರಾರ್ಥಿಸುತ್ತೇನೆ ಎಂದು ಮನಸ್ಸಿನಲ್ಲಿಯೇ ಒಂದು ಸಣ್ಣ ಪ್ರಾರ್ಥನೆ ಮಾಡಿ ಸೂಪರ್ ಆಗಿ test ಬರೆದನು.

 

ನೀವು ಹೇಗೆ ಪುಟಾಣಿಗಳೇ! School ನಲ್ಲಿ ಓದುವಾಗ, ಊಟ ಮಾಡುವಾಗ, ಆಟವಾಡುವಾಗ, ನಿಮ್ಮ ಸ್ನೇಹಿತರಿಗೆ ಯೇಸುವಿನ ಬಗ್ಗೆ ಹೇಳಿ ಅವರಿಗಾಗಿ ಪ್ರಾರ್ಥಿಸಬೇಕು, o.k ನಾ. ಯೇಸುವಿನ ಬಗ್ಗೆ ಇತರರಿಗೆ ಹೇಳುವುದಕ್ಕಿಂತ ಉತ್ತಮವಾದದ್ದು ಯಾವುದೂ ಇಲ್ಲ ಪುಟಾಣಿಗಳೇ!

- Mrs. ಬ್ಯೂಲಾ

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş matbet giriş sahabet onwin bets10 bets10 giriş bets10 güncel giriş betcio atlasbet casibom meritking perabet casibom holiganbet galabet casibom padişahbet padişahbet giriş grandpashabet jojobet cashwin grandpashabet radissonbet palacebet amgbahis cratosroyalbet grandpashabet betpuan betsalvador matbet meritking perabet perabet giriş instagram ban service betsilin betsilin giris pashagaming pashagaming giris gorabet gorabet giris kralbet holiganbet