Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 23.09.2025
Share:

By Village Missionary Movement

Tuesday, 23-Sep-2025

ಧೈನಂದಿನ ಧ್ಯಾನ(Kannada) – 23.09.2025

 

ಪವಿತ್ರಾತ್ಮನು ನಮ್ಮೊಳಗೆ 

 

"ಪವಿತ್ರಾತ್ಮ ನಿಮ್ಮ ಮೇಲೆ ಬರಲು ನೀವು ಬಲವನ್ನು ಹೊಂದಿ.... ನನಗೆ ಸಾಕ್ಷಿಗಳಾಗಿರಬೇಕು ಅಂದನು." - ಅಪೊಸ್ತಲರ ಕೃತ್ಯಗಳು 1:8

 

ಪವಿತ್ರಾತ್ಮನನ್ನು ನಮ್ಮೊಳಗೆ ಉಳಿಸಿಕೊಳ್ಳುವುದು ಹೇಗೆ ? ಅಂದರೆ, ನಾವು ಏನೆಲ್ಲಾ ಮಾಡಿದರೆ ಆತನು ನಮ್ಮಲ್ಲಿ ಸಂತೋಷಪಡುತ್ತಾರೆ ಎಂಬುದರ ಕುರಿತು ನೋಡೋಣ. ಪರಿಶುದ್ಧಾತ್ಮನಿಗೆ ಒಂದು ವ್ಯಕ್ತಿತ್ವವಿದೆ. ನಾವು ಆತನಿಗೆ ಇಷ್ಟವಾಗದ ಕೆಲಸಗಳನ್ನು ಮಾಡಿದರೆ, ಆತನು ನಮ್ಮನ್ನು ಬಿಟ್ಟು ಹೋಗುತ್ತಾರೆ. ಒಬ್ಬ ಬ್ರಿಟಿಷ್ ದಂಪತಿಗಳು ಇಸ್ರಾಯೇಲ್ ದೇಶಕ್ಕೆ ಮಿಷನರಿಗಳಾಗಿ ತಮ್ಮ ಸಭೆಯ ಮೂಲಕ ಕಳುಹಿಸಲ್ಪಟ್ಟರು. ಅವರಿಗೆ ಅಲ್ಲಿ ಒಂದು ಮನೆಯನ್ನು ನೀಡಲಾಯಿತು. ಅವರು ಆ ಮನೆಯಲ್ಲಿ ಉಳಿದು ತಮ್ಮ ಸೇವೆಯನ್ನು ಮಾಡಲು ಪ್ರಾರಂಭಿಸಿದರು. ಒಂದು ಪಾರಿವಾಳವು ಅವರ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿತು. ಅದನ್ನು ನೋಡಿ ಅವರು ಆಶ್ಚರ್ಯ ಮತ್ತು ಸಂತೋಷಪಟ್ಟರು.

 

ಪ್ರತಿದಿನ ಆ ಪಾರಿವಾಳವನ್ನು ಗಮನಿಸುತ್ತಿದ್ದ ಗಂಡ, ಅದರ ನಡವಳಿಕೆಯಲ್ಲಿ ಒಂದು ಬದಲಾವಣೆಯನ್ನು ಕಂಡರು. ಅಂದರೆ, ಅವರು ಮನೆಯಲ್ಲಿ ಜೋರಾಗಿ ಮಾತನಾಡಿದಾಗಲೆಲ್ಲಾ ಅಥವಾ ಬಾಗಿಲು ಜೋರಾಗಿ ಮುಚ್ಚಿದಾಗಲೆಲ್ಲಾ, ಅಂದರೆ, ಮನೆಯಿಂದ ಸಾಕಷ್ಟು ಶಬ್ದ ಬಂದಾಗಲೆಲ್ಲಾ, ಪಾರಿವಾಳವು ತಕ್ಷಣವೇ ಹಾರಿಹೋಗಿ ಮನೆಯಿಂದ ಓಡಿಹೋಗುತ್ತಿತ್ತು. ಕೆಲವೊಮ್ಮೆ ಅದು ಮನೆಗೆ ಹಿಂತಿರುಗುತ್ತಿರಲಿಲ್ಲ. ಇದು ಗಂಡನನ್ನು ಚಿಂತೆಗೀಡು ಮಾಡಿತು. ಪಾರಿವಾಳ ಇನ್ನು ಮುಂದೆ ಮನೆಗೆ ಬರುವುದಿಲ್ಲವಾ ಎಂದು ಯೋಚಿಸುತ್ತಾ ಅದನ್ನು ತನ್ನ ಹೆಂಡತಿಯೊಂದಿಗೆ ಹಂಚಿಕೊಂಡರು. ಅವರ ಹೆಂಡತಿಯೂ ಸಹ, "ಹೌದೌದು, ನಾನು ಸಹ ಆ ಪಾರಿವಾಳ ಮಾಡುವುದನ್ನು ಗಮನಿಸಿದ್ದೇನೆ. ಈ ಪರಿಸ್ಥಿತಿ ಮುಂದುವರಿದರೆ, ಪಾರಿವಾಳವು ನಮ್ಮ ಮನೆಗೆ ಶಾಶ್ವತವಾಗಿ ಬರುವುದೇ ಇಲ್ಲವೇನೋ ಎಂದು ನಾನೂ ಹೆದರುತ್ತಿದ್ದೇನೆ" ಎಂದು ಹೇಳಿದರು. ಆದ್ದರಿಂದ ಇಂದಿನಿಂದ, ಈ ಪಾರಿವಾಳವು ನಮ್ಮ ಮನೆಯಲ್ಲಿ ಶಾಶ್ವತವಾಗಿ ಉಳಿಯಲು ನಾವು ಶಾಂತಿಯುತ ವಾತಾವರಣವನ್ನು ಸೃಷ್ಟಿಸಬೇಕು ಎಂದು ಗಂಡ ಮತ್ತು ಹೆಂಡತಿ ನಿರ್ಧರಿಸಿದರು. ಪಾರಿವಾಳವು ತನ್ನನ್ನು ತಾನು ಬದಲಾಯಿಸಿಕೊಳ್ಳಲು ಸಾಧ್ಯವಿಲ್ಲ. ಪಾರಿವಾಳಕ್ಕೆ ತಕ್ಕಂತೆ ನಾವು ನಮ್ಮ ಕ್ರಿಯೆಗಳನ್ನು ಬದಲಾಯಿಸಿಕೊಳ್ಳಬೇಕು ಎಂದು ಅವರು ಕಲಿತರು.

 

ಹೌದು, ಪ್ರಿಯರೇ ಹೀಗೆಯೇ ಪರಿಶುದ್ದಾತ್ಮನು ಸಹ ನಾವು ಅವರಿಗೆ ಇಷ್ಟವಾಗದದ್ದನ್ನು ಮಾಡಿದಾಗ ನಮ್ಮನ್ನು ಬಿಟ್ಟು ಹೋಗುತ್ತಾರೆ. ಪರಿಶುದ್ದಾತ್ಮನು ನಮ್ಮೊಳಗೆ ಬರುವುದು ಗೊತ್ತಾಗುತ್ತದೆ, ನಮ್ಮನ್ನು ಬಿಟ್ಟು ಹೋಗುವುದು ಗೊತ್ತಾಗುವುದಿಲ್ಲ. ಅವರು ತುಂಬಾ ಸೌಮ್ಯ. ಆದ್ದರಿಂದ, ಪರಿಶುದ್ದಾತ್ಮನು ನಮ್ಮನ್ನು ಮುನ್ನಡೆಸಲು ನಾವು ಬಹಳ ಜಾಗರೂಕರಾಕತೆಯಿಂದ ಆತನಿಗೆ ಬಿಟ್ಟುಕೊಡಬೇಕು. "ಯಾರಾರು ದೇವರ ಆತ್ಮನಿಂದ ನಡಿಸಿಕೊಳ್ಳುತ್ತಾರೋ ಅವರು ದೇವರ ಮಕ್ಕಳು" ಎಂದು ರೋಮಾ 8:14 ರಲ್ಲಿ ಓದುತ್ತೇವೆ. ನಾವು ಆತನ ಮಾರ್ಗದರ್ಶನದಂತೆ ನಡೆದರೆ, ಆತನು ನಮ್ಮಲ್ಲಿ ಸಂತೋಷಪಡುತ್ತಾರೆ. "ಅದೇ ರೀತಿಯಲ್ಲಿ, ಪರಿಶುದ್ದಾತ್ಮನು ಸಹ ನಮ್ಮ ಬಲಹೀನತೆಯಲ್ಲಿ ನಮಗೆ ಸಹಾಯ ಮಾಡುತ್ತಾರೆ". ನಾವು ಪರಿಶುದ್ದಾತ್ಮನ ಶಬ್ದಕ್ಕೆ ಕಿವಿಗೊಟ್ಟು, ಆತನನ್ನು ಅನುಸರಿಸಿದರೆ, ನಾವು ಪರಲೋಕಕ್ಕೆ ಹೋಗಲು ಸಾಧ್ಯ. ನಮ್ಮ ಮಾರ್ಗಗಳನ್ನು ನಾವು ನಿಧಾನಿಸಿ ಯೋಚಿಸಿ ನೋಡೋಣ. 

- Mrs.ದಿವ್ಯಾ ಅಲೆಕ್ಸ್

 

ಪ್ರಾರ್ಥನಾ ಅಂಶ:

ನಮ್ಮ ಶಾಖಾ ಕಚೇರಿಗಳಲ್ಲಿ ಸೇವೆ ಮಾಡುವ ಸೇವಕರನ್ನು ದೇವರು ಉಪಯೋಗಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al Elexbet matbet giriş matbet instagram unban x unban twitter unban palacebet setrabet