By Village Missionary Movement
Wednesday, 24-Sep-2025ಧೈನಂದಿನ ಧ್ಯಾನ(Kannada) – 24.09.2025
ಅಪನಂಬಿಕೆ
"ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವದು ಅಸಾಧ್ಯ;..." - ಇಬ್ರಿಯ 11:6
ಒಂದು ಬಡ ಕುಟುಂಬವು ಬಡತನದಿಂದ ಬಳಲುತ್ತಿತ್ತು. ಒಂದು ದಿನ, ಹಸಿವಿನಿಂದ ತಿನ್ನಲು ಏನೂ ಇಲ್ಲದೆ ಬಳಲುತ್ತಿದ್ದಾಗ, ತಂದೆ ತನ್ನ ಮಕ್ಕಳಿಗೆ ದೇವರು ಎಲೀಯನನ್ನು ಕಾಗೆಯ ಮೂಲಕ ಹೇಗೆ ಪೋಷಿಸಿದರೆಂದು ಹೇಳುವ ಮೂಲಕ ಅವರಲ್ಲಿ ನಂಬಿಕೆಯನ್ನು ಹುಟ್ಟುಹಾಕಿದರು.
ಆ ರಾತ್ರಿ, ತುಂಬಾ ಹಿಮಪಾತವಾಗಿದ್ದ ಕಾರಣ, ತಾಯಿ ಕಿಟಕಿಗಳು ಮತ್ತು ಬಾಗಿಲುಗಳನ್ನು ಮುಚ್ಚಿ ಮಕ್ಕಳನ್ನು ಮಲಗಿಸಿದಳು. ಹಸಿವಿನಿಂದ ಮಲಗಿದ್ದ ಮಗುವೊಂದು ಎಚ್ಚರಗೊಂಡು ತನ್ನ ತಾಯಿಯ ಬಳಿಗೆ ಬಂದು, ಅಮ್ಮಾ ನನಗೆ ಒಂದು ಸಂದೇಹ. ಎಲೀಯನನ್ನು ಕಾಗೆಯ ಮೂಲಕ ಪೋಷಿಸಿದವರು ನಮಗೆ ಆಹಾರ ನೀಡುವುದಿಲ್ಲವಾ? ಹಾಗೆ ಪೋಷಿಸಲು ಅವರು ಕಾಗೆಯನ್ನು ಕಳುಹಿಸುವಾಗ, ನಮ್ಮ ಮನೆಯ ಕಿಟಕಿ ಮುಚ್ಚಿದ್ದರೆ ಕರ್ತನು ಕಳುಹಿಸುವ ಕಾಗೆ ನಮ್ಮ ಮನೆಯೊಳಗೆ ಹೇಗೆ ಬರುತ್ತದೆ? ಕರ್ತನು ನಮಗೆ ಕೊಟ್ಟು ಕಳುಹಿಸುವ ರೊಟ್ಟಿ ಮತ್ತು ಮಾಂಸವನ್ನು ನಾವು ಸ್ವೀಕರಿಸಲು ಸಾಧ್ಯವಾಗುವುದಿಲ್ಲವೇ ಎಂದಳು. ತನ್ನ ಮಗುವಿನ ನಂಬಿಕೆಯಿಂದ ಆಶ್ಚರ್ಯಚಕಿತಳಾದ ತಾಯಿ ಕಿಟಕಿಯ ಬಾಗಿಲನ್ನು ತೆರೆದಿಟ್ಟರು. ಆ ಸಮಯದಲ್ಲಿ, ಮಳೆಯ ನಿಮಿತ್ತವಾಗಿ ಮನೆಯ ಹೊರಗೆ ಒಂದು ಕಡೆ ನಿಂತುಕೊಂಡಿದ್ದ ಒಬ್ಬ ಮೇಯರ್ ಮನೆಯೊಳಗೆ ನಡೆದೆ ಸಂಭಾಷಣೆಯನ್ನು ಕೇಳುತ್ತಿದ್ದರು. ಅವರ ಹೃದಯ ಕರಗಿತು, ಅವರು ತಕ್ಷಣ ಓಡಿಹೋಗಿ ಬಹಳಷ್ಟು ಆಹಾರ ಪದಾರ್ಥಗಳನ್ನು ತೆಗೆದುಕೊಂಡು ಬಂದು ಕಿಟಕಿಯ ಮೂಲಕ ಹಾಕಿಬಿಟ್ಟು ಹೊರಟುಹೋದರು. ಆ ಪ್ಯಾಕೆಟ್ ನ ಶಬ್ದವನ್ನು ಕೇಳಿದ ಕೂಡಲೇ, ಮಕ್ಕಳು ಓಡಿಹೋಗಿ ಅಲ್ಲಿದ್ದ ಆಹಾರದ ಪಾರ್ಸೆಲ್ ಅನ್ನು ತೆಗೆದುಕೊಂಡು ತಿಂದರು. ಊಟ ಮಾಡಿದ ನಂತರ, ಅವರು ಬಹಳ ಸಂತೋಷದಿಂದ ಕರ್ತನಿಗೆ ಕೃತಜ್ಞತೆ ಸಲ್ಲಿಸಿದರು.
ನಂಬಿಗಸ್ಥರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಹನೋಕ ಎಂಬ ದೇವರ ಮನುಷ್ಯನು ನಮಗೆ ಗೊತ್ತು. ಅವರು ದೇವರೊಂದಿಗೆ ಸಂಚರಿಸುತ್ತಿರುವಾಗಲೇ ಮರಣವನ್ನು ನೋಡದಂತೆ ಎತ್ತಲ್ಪಟ್ಟರು. ಹನೋಕನು ದೇವರಿಗೆ ಮೆಚ್ಚಿಗೆಯಾದವನೆಂದು, ಆತನು ಎತ್ತಲ್ಪಡುವುದಕ್ಕಿಂತ ಮುಂಚೆಯೇ ಸಾಕ್ಷಿ ಹೊಂದಿದರು. ದೇವರ ಬಳಿಗೆ ಬರುವವನು ಆತನು ಇದ್ದಾನೆ ಮತ್ತು ಆತನನ್ನು ಹುಡುಕುವವರಿಗೆ ಪ್ರತಿಫಲ ಕೊಡುತ್ತಾನೆ ಎಂದು ನಂಬಬೇಕು.
ನನಗೆ ಪ್ರಿಯವಾದ ದೇವರ ಮಕ್ಕಳೇ! ನಮ್ಮ ನಂಬಿಕೆಯೇ ಲೋಕವನ್ನು ಜಯಿಸುವಂತಹ ಜಯವಾಗಿದೆ. ನಂಬುವವನಿಗೆ ಎಲ್ಲವೂ ಸಾಧ್ಯ. ಅಪನಂಬಿಕೆಯು ದೇವರಿಗೆ ಇಷ್ಟವಾಗದ ವಿಷಯ. ನಾವು ಸತ್ಯವೇದದಲ್ಲಿ ನಂಬಿಕೆಯ ಬಗ್ಗೆ ಅನೇಕ ವಚನಗಳನ್ನು ಓದುತ್ತೇವೆ. ನಾವು ನಂಬಿಕೆಯಲ್ಲಿ ಬೆಳೆಯಲು ಬಯಸಿದರೆ, ನಾವು ಅಪನಂಬಿಕೆಯನ್ನು ಸಂಪೂರ್ಣವಾಗಿ ತ್ಯಜಿಸಬೇಕು. "ನಂಬಿಕೆ"ಯ ಕಿಟಕಿಯನ್ನು ತೆರೆದಿಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಕರ್ತನು ನಮ್ಮೊಂದಿಗೆ ಸಂಚರಿಸಲು ಆತನ ಹಸ್ತವು ನಮ್ಮ ಜೀವನದಲ್ಲಿ ಕಾರ್ಯ ಮಾಡಲು ನಮ್ಮನ್ನು ಆತನ ಕೈಗಳಿಗೆ ಒಪ್ಪಿಸೋಣ. ನಂಬಿಕೆಯನ್ನು ಹುಟ್ಟಿಸುವವನೂ ಪೂರೈಸುವವನೂ ಆಗಿರುವ ಅವರನ್ನು ನೋಡುತ್ತಾ ನಮಗೆ ನೇಮಿಸಿರುವ ಓಟವನ್ನು ತಾಳ್ಮೆಯಿಂದ ಓಡೋಣ.
- D. ಸುಧಾ ದೇವಭಾಸ್ಕರ್
ಪ್ರಾರ್ಥನಾ ಅಂಶ:
50 ಸಾವಿರ ಹಳ್ಳಿಗಳಲ್ಲಿ ಒಂದು ಕೋಟಿ ಆತ್ಮಗಳಿಗೆ ಸುವಾರ್ತೆ ಎಂಬ ಯೋಜನೆಗಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482