Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 25.09.2025
Share:

By Village Missionary Movement

Thursday, 25-Sep-2025

ಧೈನಂದಿನ ಧ್ಯಾನ(Kannada) – 25.09.2025

 

ಕಾಲವನ್ನು ತಿಳಿದು

 

"... ಯೋಸೇಫನು ದವಸ ಧಾನ್ಯವನ್ನು ಸಮುದ್ರದ ಮರಳಿನಷ್ಟು ರಾಶಿರಾಶಿಯಾಗಿ ಕೂಡಿಸಿ;..." - ಆದಿ.41:49

 

ಬೇಸಿಗೆಯ ಸೂರ್ಯನು ಪ್ರಕಾಶಮಾನವಾಗಿ ಬೆಳಗುತ್ತಿದ್ದರೂ, ಒಂದು ಮಿಡತೆ ಹೊಲದಲ್ಲಿ ಹಾಡುತ್ತಾ, ನೃತ್ಯ ಮಾಡುತ್ತಾ ಮತ್ತು ಶಬ್ದ ಮಾಡುತ್ತಾ ಇತ್ತು. ಆ ಸಮಯದಲ್ಲಿ, ಒಂದು ಇರುವೆ ಅಕ್ಕಿಯ ತುಂಡನ್ನು ಬಹಳ ಕಷ್ಟದಿಂದ ಸಾಗಿಸುತ್ತಿರುವುದನ್ನು ಕಂಡಿತು. ಮಿಡತೆ ಇರುವೆಗೆ, "ಬಾ, ನಾವು ಒಟ್ಟಿಗೆ ಆಟವಾಡೋಣ ಮತ್ತು ಕಥೆ ಮಾತಾಡೋಣ ಅಂದಿತು. ಇರುವೆ ನಾನು ಈಗ ಬರಲು ಸಾಧ್ಯವಿಲ್ಲ. ಮಳೆಗಾಲವನ್ನು ತಡೆದುಕೊಳ್ಳಲು ನಾವು ಧಾನ್ಯವನ್ನು ಸಂಗ್ರಹಿಸಬೇಕು ಎಂದು ಹೇಳಿತು. ಮಳೆಗಾಲವೂ ಬಂದಿತು, ಆದರೆ ಮಿಡತೆ ಆಹಾರ ಹುಡುಕುತ್ತಾ ಹೊರಗೆ ಹೋಗಲು ಸಾಧ್ಯವಾಗಲಿಲ್ಲ. ಹಸಿವು ತನ್ನ ಹೊಟ್ಟೆಯನ್ನು ಕಚ್ಚಿತು. ಆದರೆ ಇರುವೆ ಹೊಟ್ಟೆತುಂಬ ತಿಂದು ಸಂತೋಷವಾಗಿತ್ತು. ಅದನ್ನು ನೋಡಿದ ಮಿಡತೆ ತನ್ನ ಮೂರ್ಖತನವನ್ನು ಅರಿತುಕೊಂಡಿತು.

 

ಯೋಸೇಫನು ಐಗುಪ್ತ ದೇಶದ ಮೇಲೆ ಅಧಿಕಾರಿಯಾಗಿ ನೇಮಕಗೊಂಡಾಗ, ಏಳು ವರ್ಷಗಳ ಕಾಲ ಬರಗಾಲವೂ, ಏಳು ವರ್ಷಗಳ ಕಾಲ ಸಮೃದ್ಧಿಯೂ ಉಂಟಾಗಿದ್ದಾಗ ಕಾಲವನ್ನು ತಿಳಿದುಕೊಂಡು ಐಗುಪ್ತ ದೇಶದ ಬೆಳೆಗಳಲ್ಲಿ ಐದನೇ ಒಂದು ಭಾಗವನ್ನು ಜನರಿಂದ ತೆಗೆದುಕೊಂಡು, ದವಸಧಾನ್ಯಗಳನ್ನು ಕೂಡಿಸಿ ಜೋಪಾನ ಮಾಡಲು ಹೇಳಿದರು. ಯೋಸೇಫನು ಜನರಿಂದ ಒಂದು ಭಾಗವನ್ನು ತೆಗೆದುಕೊಂಡು ಸಮುದ್ರ ತೀರದ ಮರಳಿನಷ್ಟು ಹೇರಳವಾಗಿ ಧಾನ್ಯಗಳನ್ನು ಸಂಗ್ರಹಿಸಿಟ್ಟರು. ಸಮೃದ್ಧಿಯ ಏಳು ವರ್ಷಗಳಲ್ಲಿ, ಯೋಸೇಫನು ಬುದ್ಧಿವಂತಿಕೆಯಿಂದ ತಾನು ನಿಭಾಯಿಸಲು ಸಾಧ್ಯವಾಗುವುದಕ್ಕಿಂತ ಹೆಚ್ಚಿನದನ್ನು ಸಂಗ್ರಹಿಸಿದರು. ಸಮೃದ್ಧಿಯ ಏಳು ವರ್ಷಗಳ ನಂತರ, ಏಳು ವರ್ಷಗಳ ಕ್ಷಾಮ ಪ್ರಾರಂಭವಾಯಿತು. ಎಲ್ಲಾ ದೇಶಗಳಲ್ಲಿ ಬರಗಾಲವಿತ್ತು. ಆದರೆ ಐಗುಪ್ತ ದೇಶದಾದ್ಯಂತ ಆಹಾರವಿತ್ತು. ಜನರು ಆಹಾರಕ್ಕಾಗಿ ಯೋಸೇಫನ ಬಳಿಗೆ ಬಂದರು. ಯೋಸೇಫನು ಉಗ್ರಾಣಗಳನ್ನು ತೆರೆದು ಜನರಿಗೆ ಧಾನ್ಯವನ್ನು ಕೊಟ್ಟನು. ಜನರು ತಿಂದು ಸಂತೋಷಪಟ್ಟರು. ಐಗುಪ್ತದಲ್ಲಿ ಮಾತ್ರವಲ್ಲ, ಎಲ್ಲಾ ರಾಷ್ಟ್ರಗಳು ಧಾನ್ಯವನ್ನು ಖರೀದಿಸಲು ಯೋಸೇಫನ ಬಳಿಗೆ ಬಂದವು. ವಿಶೇಷವಾಗಿ ತನ್ನ ಸ್ವಂತ ಕುಟುಂಬವನ್ನೂ ಪೋಷಿಸಿದನು.

 

ದೇವರ ಮಕ್ಕಳೇ! ನೀವು ಸಹ ಕಾಲವನ್ನು ಸರಿಯಾಗಿ ತಿಳಿದು ಕಾರ್ಯನಿರ್ವಹಿಸಬೇಕು. ಹಾಗೆ ಕಾಲವನ್ನು ಸರಿಯಾಗಿ ತಿಳಿದು ಬುದ್ಧಿವಂತಿಕೆಯಿಂದ ಉಪಯೋಗಿಸುವಾಗ, ನೀವು ಸಹ ಪೋಷಿಸಲ್ಪಡುತ್ತೀರಿ ಮತ್ತು ನಿಮ್ಮ ಸುತ್ತಮುತ್ತಲಿನವರನ್ನು ಪೋಷಿಸುವವರಾಗುತ್ತೀರಿ. ಅದು ಅನ್ನದ ಕ್ಷಾಮವಲ್ಲ, ನೀರಿನ ಕ್ಷಾಮವಲ್ಲ, ಯೆಹೋವನ ವಾಕ್ಯಗಳ ಕ್ಷಾಮವೇ ಎಂದು ಆಮೋಸ 8ನೇ ಅಧ್ಯಾಯದಲ್ಲಿ ಓದುತ್ತೇವೆ. ಆದ್ದರಿಂದ ವಾಕ್ಯವು ಸಿಗುವಾಗ, ಅದನ್ನು ಓದಿ, ಧ್ಯಾನಿಸಿ ಅದನ್ನು ನಿಮ್ಮ ಹೃದಯದ ನಿಧಿಯಲ್ಲಿ ಸಂಗ್ರಹಿಸಿಡಿ. ಆಮೆನ್.

- Sis. ಸಲೋಮಿ

 

ಪ್ರಾರ್ಥನಾ ಅಂಶ:

50,000 ಹಳ್ಳಿಗಳಿಗೆ ಸುವಾರ್ತೆಯನ್ನು ಸಾರಲು ದೇವರು ತೆರೆದ ಬಾಗಿಲನ್ನು ಆಜ್ಞಾಪಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al Elexbet matbet giriş matbet instagram unban x unban twitter unban palacebet setrabet