Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 30.09.2025
Share:

By Village Missionary Movement

Tuesday, 30-Sep-2025

ಧೈನಂದಿನ ಧ್ಯಾನ(Kannada) – 30.09.2025

 

ಅಂತ್ಯವು ಒಳ್ಳೆಯದು

 

"ಆದಿಗಿಂತ ಅಂತ್ಯವು ಲೇಸು;..." - ಪ್ರಸಂಗಿ 7:8

 

ರಾಜಗೋಪಾಲ್ ಎಂಬವರು, ತನ್ನ ಯೌವನ ಪ್ರಾಯಕ್ಕಿಂತ ಮೊದಲೇ, 'ದೇವರು ಇಲ್ಲ' ಎಂಬ ನಿರಾಕರಣೆ ಚಳವಳಿ ಸದಸ್ಯರಾಗಿದ್ದರು. ಅವರು ರಾಜಕೀಯದಲ್ಲಿಯೂ ಪ್ರಭಾವಶಾಲಿಯಾಗಿದ್ದರು ಮತ್ತು ಒಬ್ಬ ಶ್ರೀಮಂತ ರೈತರಾಗಿದ್ದರು. ಒಂದು ದಿನ, ಯಾರೋ ಒಬ್ಬರು ಅವರಿಗೆ ಯೇಸು ಕ್ರಿಸ್ತನ ಬಗ್ಗೆ ಹೇಳಿ ಬೈಬಲ್ ನೀಡಿದರು. ಅವರು ಅದನ್ನು ಓದಲು ಪ್ರಾರಂಭಿಸಿ ಯೇಸುವಿನ ಬಗ್ಗೆ ಮತ್ತು ಪರಲೋಕ ರಾಜ್ಯದ ಬಗ್ಗೆ ತಿಳಿದುಕೊಂಡರು. ಕೆಲವೊಮ್ಮೆ ಅವರಿಗೆ ಬೈಬಲ್‌ನಲ್ಲಿಯೂ ಸಹ ಪ್ರಶ್ನೆಗಳು ಎದ್ದೇಳುತ್ತಿತ್ತು. ಅವರಿಗೆ 80 ವರ್ಷ ವಯಸ್ಸಾಗಿದ್ದಾಗ, ಒಬ್ಬ ಸೇವಕರು ಅವರನ್ನು ನೋಡಲು ಬಂದರು. ಅವರು ಕೂಡ ತನ್ನನ್ನು ಬಲಪಡಿಸಿಕೊಂಡು, ಎದ್ದು ಕುಳಿತುಕೊಂಡು ಅವರಿಗೆ, "ಅಯ್ಯಾ, ನಾನು ಸಾಯಲಿದ್ದೇನೆ. ನಾನು ಈ ಹಳ್ಳಿಯಲ್ಲಿ ಗಂಭೀರವಾಗಿ ಬದುಕಿಬಿಟ್ಟೆ. ಯಾರಾದರೂ ದೇವರ ಕೆಲಸಕ್ಕೆ ಹಣ ಕೇಳಿದರೆ, ನಾನು ಆ ಕೆಲಸಕ್ಕೆ ವಿರುದ್ಧವಾಗಿ ಮಾತನಾಡುತ್ತಿದ್ದೆ. ಈಗ ನೀವು ನನಗಾಗಿ ಯೇಸುವಿನ ಬಳಿ ಪ್ರಾರ್ಥಿಸಬೇಕು. ನಾನು ಹಾಸಿಗೆಯಲ್ಲಿ ಬಿದ್ದುಕೊಂಡಿರದೇ ಯೇಸುವಿನ ಬಳಿಗೆ ಹೋಗಬೇಕು ಎಂದು ಮಗುವಿನಂತೆ ತನ್ನ ಪಾಪಗಳನ್ನು ಒಪ್ಪಿಕೊಂಡು ಪ್ರಾರ್ಥಿಸಿದರು. ಕೆಲವೇ ದಿನಗಳಲ್ಲಿ ರಕ್ಷಣೆಹೊಂದಿ ದೇವರ ರಾಜ್ಯಕ್ಕೆ ಹೊರಟುಹೋದರು.

 

ಯೇಸುವಿನೊಂದಿಗೆ ಶಿಲುಬೆಗೇರಿಸಲ್ಪಟ್ಟ ಕಳ್ಳರಲ್ಲಿ ಒಬ್ಬನು, "ಶಿಲುಬೆಯಿಂದ ಇಳಿದು ಬಾ" ಎಂದು ಅವರನ್ನು ದೂಷಿಸಿದನು. ಯೇಸು ತಂದೆಯ ಬಳಿ ಪ್ರಾರ್ಥಿಸುವುದನ್ನು ಮತ್ತು ಇತರರನ್ನು ಕ್ಷಮಿಸುವುದನ್ನು ನೋಡಿದ ಒಬ್ಬ ಕಳ್ಳನು, ದೂಷಿಸಿದ ಕಳ್ಳನನ್ನು ಗದರಿಸಿದನು. ಯೇಸುವಿನ ಬಳಿ, "ಯೇಸುವೇ, ನೀನು ನಿನ್ನ ರಾಜ್ಯವನ್ನು ಪಡೆದವನಾಗಿ ಬರುವಾಗ ನನ್ನನ್ನು ನೆನಸಿಕೋ ಎಂದು ಹೇಳುತ್ತಾನೆ. ಯೇಸು ಸಹ "ಈಹೊತ್ತೇ ನೀನು ನನ್ನ ಸಂಗಡ ಪರದೈಸಿನಲ್ಲಿರುವಿ ಎಂದು ಉತ್ತರಕೊಟ್ಟರು. ಕಳ್ಳನಾಗಿ ಬದುಕಿದ ಒಬ್ಬನು ತನ್ನ ಜೀವನದ ಕೊನೆಯ ಸಮಯದಲ್ಲಿ ತನಗೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಪರದೈಸಿಗೆ ಹೊರಟು ಹೋದನು.

 

ಇಂದು ನಾವು ಹೇಗಿದ್ದೇವೆ? ನಮ್ಮ ಆರಂಭವು ಅತ್ಯಲ್ಪವಾಗಿದ್ದರೂ, ನಮ್ಮ ಅಂತ್ಯವು ಪರಿಪೂರ್ಣವಾಗಿರಬೇಕು. ನಾವು ನಮ್ಮ ಓಟವನ್ನು ಮುಗಿಸಿದಾಗ, ನಾವು ಯೇಸುವಿನೊಂದಿಗೆ ಅವರ ರಾಜ್ಯಕ್ಕೆ ಹೋಗಬೇಕು. ನಮ್ಮ ಸಂಪತ್ತು ಅಥವಾ ನಮ್ಮ ಹಣವು ನಮ್ಮನ್ನು ಪರಲೋಕ ರಾಜ್ಯಕ್ಕೆ ಕರೆದೊಯ್ಯಲು ಸಾಧ್ಯವಿಲ್ಲ. ನಾವು ನಮ್ಮ ಪಾಪಗಳನ್ನು ಒಪ್ಪಿಕೊಂಡು ಪಶ್ಚಾತ್ತಾಪ ಪಟ್ಟರೆ ಮಾತ್ರವೇ ನಾವು ಪರಲೋಕಕ್ಕೆ ಹೋಗಲು ಸಾಧ್ಯ. ಪರಲೋಕಕ್ಕೆ ಹೋಗಲು ಅದೇ ಏಕೈಕ ಮಾರ್ಗ. ಶೋಧನೆಗಳು ಮತ್ತು ಸಂಕಟಗಳ ನಡುವೆಯೂ ನಾವು ದೇವರ ಆಜ್ಞೆಯನ್ನು ಪಾಲಿಸಬೇಕು. ಆದ್ದರಿಂದ, ನಾವು ಪಡೆದ ರಕ್ಷಣೆಯನ್ನು ಕೊನೆಯವರೆಗೂ ಹಿಡಿದಿಟ್ಟುಕೊಳ್ಳಬೇಕು. ಕೊನೆಯವರೆಗೂ ಸಹಿಸಿಕೊಳ್ಳುವವನು ರಕ್ಷಿಸಲ್ಪಡುತ್ತಾನೆ.

 

ಪ್ರಾರ್ಥನಾ ಅಂಶ:

50 ಸಾವಿರ ಹಳ್ಳಿಗಳಿಗೆ ಸುವಾರ್ತೆ ಸಾರುವ ಯೋಜನೆಯನ್ನು ಸಾಧಿಸಲು, ಅದನ್ನು ಪ್ರಾರ್ಥನೆಯಲ್ಲಿ ಬೆಂಬಲಿಸುವ ಪ್ರಾರ್ಥನಾ ಗುಂಪುಗಳು ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet perabet perabet giriş padişahbet padişahbet giriş meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş jojobet jojobet jojobet jojobet esbet sonbahis tambet grandpashabet betgit mercurecasino