Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 03.06.2021
Share:

By Village Missionary Movement

Thursday, 03-Jun-2021

ಧೈನಂದಿನ ಧ್ಯಾನ(Kannada) – 03.06.2021

 

ಸಂಪೂರ್ಣ ಭರವಸೆ

 

"ದೇವರನ್ನು ಘನಪಡಿಸುವವನಾಗಿ ಆತನು ತನ್ನ ವಾಗ್ದಾನವನ್ನು ನೆರವೇರಿಸುವದಕ್ಕೆ ಸಮರ್ಥನೆಂದು ಪೂರಾ ಭರವಸವಿಟ್ಟು ದೃಢನಂಬಿಕೆಯುಳ್ಳವನಾದನು." - ರೋಮಾ 4:21

 

 ರಾತ್ರಿ ಸಮಯದಲ್ಲಿ ಒಬ್ಬ ಮನುಷ್ಯ ಬೆಟ್ಟದ ಮೇಲೆ ನಡೆದುಕೊಂಡು ಹೋಗುತ್ತಿದ್ದ. ಇದ್ದಕ್ಕಿದ್ದಂತೆ ಅವನ ಕಾಲು ಜಾರಿಬೀಳಲು ಪ್ರಾರಂಭಿಸಿತು, ಕಠಿಣ ಪ್ರಯತ್ನದ ನಂತರ ಅವನು ತನ್ನ ಕೈಗೆ ಸಿಕ್ಕಿದ ಮರದ ಕೊಂಬೆಯನ್ನು ಹಿಡಿದು ನೇತಾಡಿದನು. ಕರ್ತನೇ ಸಹಾಯ ಮಾಡಿ ಎಂದು ಪ್ರಾರ್ಥಿಸಿದನು. ಅದಕ್ಕೆ ದೇವರು, "ಕೈ ಬಿಟ್ಟು ಬಿಡು ನಾನು ಸಹಾಯ ಮಾಡುತ್ತೇನೆ" ಎಂದು ಹೇಳಿದರು. "ಸ್ವಾಮಿ, ಅದು ಹೇಗೆ ಸಾಧ್ಯ?" ಎಂದು ಕೇಳಿದನು. ಕೈ ತುಂಬಾ ನೋವಾಯಿತು ಪುನಃ ಅವನು ಸಹಾಯಕ್ಕಾಗಿ ಬೇಡಿಕೊಂಡನು. ನನ್ನ ಮೇಲೆ ನಂಬಿಕೆ ಇಟ್ಟು ಕೊಂಬೆಯನ್ನು ಬಿಟ್ಟು ಬಿಡು ಎಂದು ಮತ್ತೆ ಉತ್ತರ ಬಂದಿತು. ಎಷ್ಟು ಆಳವೋ ಎಂದು ನೆನೆಸಿ ಕೊಂಬೆಯನ್ನು ಬಿಡಲು ಮನಸ್ಸಿಲ್ಲದೆ ನೇತಾಡುತ್ತಲೇ ಇದ್ದನು. ಸಮಯ ಕಳೆದು ಮುಂಜಾನೆ ಪ್ರಾರಂಭವಾಯಿತು. ಅವನು ನಿಧಾನವಾಗಿ ಬೆಳಕಿನಲ್ಲಿ ಕೆಳಗೆ ಬೊಗ್ಗಿ ನೋಡಿದನು, ಕಾಲಿಗೂ ನೆಲಕ್ಕೂ ಕೇವಲ ಮೂರು ಅಡಿಗಳು ಮಾತ್ರವೇ ಇತ್ತು. ಅವನು ದೇವರ ಮಾತನ್ನು ಕೇಳಿ ಕೊಂಬೆಯನ್ನು ಬಿಟ್ಟು ಬಿಟ್ಟಿದ್ದರೆ ಭಯದಲ್ಲಿ ರಾತ್ರಿಯಿಡೀ ಮರಣ ಭಯದೊಂದಿಗೆ, ನಡುಗುತ್ತಾ, ನೋವಿನೊಂದಿಗೆ ನೇತಾಡುವ ಅಗತ್ಯವಿರಲಿಲ್ಲ.

 

ಸತ್ಯವೇದದಲ್ಲಿ ಅಬ್ರಹಾಮನ ಬಗ್ಗೆ, “ಅವನು ನಂಬಿಕೆಯಲ್ಲಿ ದುರ್ಬಲನಾಗಿರಲಿಲ್ಲ; ಅವನು ಸುಮಾರು ನೂರು ವರ್ಷ ವಯಸ್ಸಿನವನಾಗಿದ್ದಾಗ, ಅವನ ದೇಹವು ಸತ್ತಿದೆ ಮತ್ತು ಸಾರಳ ಗರ್ಭವು ಸತ್ತಿದೆ ಎಂದು ಅವನು ಭಾವಿಸಲಿಲ್ಲ. ಅವನು ದೇವರ ವಾಗ್ದಾನದ ಮೇಲೆ ಅಪನಂಬಿಕೆಯಿಂದ ಸಂದೇಹ ಪಡದೇ,ದೇವರನ್ನು ಘನಪಡಿಸುವವನಾಗಿ ಆತನು ತನ್ನ ವಾಗ್ದಾನವನ್ನು ನೆರವೇರಿಸುವದಕ್ಕೆ ಸಮರ್ಥನೆಂದು ಪೂರಾ ಭರವಸವಿಟ್ಟು ದೃಢನಂಬಿಕೆಯುಳ್ಳವನಾದನು." (ರೋಮಾ 4:19-21) ಎಂದು ಓದುತ್ತೇವೆ.

 

ಕ್ರಿಸ್ತನಲ್ಲಿ ಪ್ರೀತಿಯ ಸಹೋದರ ಸಹೋದರಿಯೇ! ನೀವು ಎದುರು ನೋಡುತ್ತಿರುವ ಯಾವ ಕಾರ್ಯವನ್ನಾದರೂ ಕರ್ತನನ್ನು ನಂಬಿ ಆತನ ಕೈಯಲ್ಲಿ ಬಿಟ್ಟಿದ್ದೀರಾ? ಅಥವಾ ಹಾಗೆ ನಡೆಯಬೇಕು ಹೀಗೆ ನಡೆಯಬೇಕು ಎಂದು ಇನ್ನೂ ಕೊಂಬೆಯನ್ನು ಹಿಡಿದಿದ್ದ ಹಾಗೆ ಹಿಡಿದು ಕೊಂಡಿದ್ದೀರಾ? ಕರ್ತನನ್ನು ನಂಬಿ ಆತನ ಕೈಯಲ್ಲಿ ಒಪ್ಪಿಸಿದ ನಿಮ್ಮ ಕಾರ್ಯಗಳು ಯಾವುದಾಗಿದ್ದರೂ ಸರಿಯಾಗಿ, ಪ್ರಾಮಾಣಿಕವಾಗಿ ಮಾಡಿ ಮುಗಿಸಲು ಅವರು ಸಿದ್ಧವಾಗಿದ್ದಾರೆ. ಅದ್ಭುತ ಹೊಂದಿಕೊಳ್ಳಲು ನೀವು ಸಿದ್ಧರಿದ್ದೀರಾ?

- L. ಅಲಗರಸಾಮಿ

 

ಪ್ರಾರ್ಥನಾ ಅಂಶ:-

ಮಿಷನರಿಯ ಪತ್ನಿ ನಿರೋಷಾರವರಿಗೆ ಕರ್ತನು ನಾರ್ಮಲ್ ಡೆಲಿವರಿ ಆಗಲು ಸಹಾಯ ಮಾಡುವಂತೆ ಪ್ರಾರ್ಥಿಸೋಣ.

 

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.

ವಾಟ್ಸಾಪ್.  

ತಮಿಳಿಗಾಗಿ +919444011864  

ಇಂಗ್ಲಿಷ್ ಗಾಗಿ +919444011769

ಹಿಂದಿಗಾಗಿ +91 93858 10496

ತೆಲುಗುಗಾಗಿ +919442493250

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet perabet perabet giriş padişahbet padişahbet giriş meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş jojobet jojobet jojobet jojobet jojobet holiganbet holiganbet holiganbet grandpashabet grandpashabet