Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 07.10.2025
Share:

By Village Missionary Movement

Tuesday, 07-Oct-2025

ಧೈನಂದಿನ ಧ್ಯಾನ(Kannada) – 07.10.2025

 

ದೀಪ ಮತ್ತು ಬೆಳಕು

 

"ನಿನ್ನ ವಾಕ್ಯವು ನನ್ನ ಕಾಲಿಗೆ ದೀಪವೂ ನನ್ನ ದಾರಿಗೆ ಬೆಳಕೂ ಆಗಿದೆ" - ಕೀರ್ತನೆ 119:105

 

"ಸತ್ಯವೇದವು ತುಂಬಾ ತುಂಬಾ ಹಳೆಯದು. ಸತ್ಯವೇದ ವಾಕ್ಯಗಳು ಆಧುನಿಕ ಜಗತ್ತಿಗೆ ಪ್ರಸ್ತುತವಲ್ಲ" ಎಂದು ಹೇಳುವವರಿಗೆ, ವಿಶ್ವಪ್ರಸಿದ್ಧ ಸುವಾರ್ತಾಬೋಧಕ ಡಿ.ಎಲ್. ಮೂಡಿ ಅವರ ಉತ್ತರ ಹೀಗಿದೆ, "ಸೂರ್ಯನು ತುಂಬಾ ಹಳೆಯದು ಎಂಬುದರಿಂದ ಅದರ ಬೆಳಕನ್ನು ಬಳಸಲು ಸಾಧ್ಯವಿಲ್ಲ ಎಂದೂ, ಕಿಟಕಿಗಳು ಇಲ್ಲದ ಮನೆಗಳನ್ನು ಕಟ್ಟಿ ಹಗಲಿನಲ್ಲಿಯೂ ವಿದ್ಯುತ್ ದೀಪಗಳನ್ನು ಬಳಸಬಹುದು ಎಂದೂ ನೀವು ಸವಾಲು ಹಾಕಲು ಸಾಧ್ಯವೇ? ಸತ್ಯವೇದ ವಾಕ್ಯಗಳೇ ನಮಗೆ ಪಾಪ, ಮರಣ, ಪಾಪಕ್ಷಮಾಪಣೆ ಮತ್ತು ರಕ್ಷಣೆಯ ಬಗ್ಗೆ ಬೋಧಿಸುತ್ತವೆ. ಅವು ನಮ್ಮ ಆತ್ಮಗಳನ್ನು ನಿತ್ಯಜೀವಕ್ಕೆ ನೇರವಾಗಿ ಕೊಂಡೊಯ್ಯುವ ಹಾದಿಯಲ್ಲಿ ದೀಪವಾಗಿಯೂ, ಬೆಳಕಾಗಿಯೂ ಇದ್ದು ನಡೆಸುತ್ತದೆ" ಎಂದರು. 

 

ನಾನು ಈ ಜಗತ್ತಿನಲ್ಲಿ ಏಕೆ ವಾಸಿಸುತ್ತಿದ್ದೇನೆ? ನಾನು ಎಲ್ಲಿಗೆ ಹೋಗುತ್ತಿದ್ದೇನೆ? ಶಾಂತಿಯ ಮಾರ್ಗವೇನು? ಸುಳ್ಳು ಮಾರ್ಗವೇನು? ನಿಜವಾದ ಮಾರ್ಗವೇನು? ನನ್ನ ಸಮಸ್ಯೆಗೆ ಪರಿಹಾರವೇನು? ಮಕ್ಕಳನ್ನು ಬೆಳೆಸುವುದು, ಅವರ ಭವಿಷ್ಯ ಮತ್ತು ಮದುವೆಯಂತಹ ಎಲ್ಲಾ ಪ್ರಶ್ನೆಗಳಿಗೆ ಸತ್ಯವೇದದ ವಾಕ್ಯಗಳು ದೀಪವಾಗಿಯೂ ಮತ್ತು ಬೆಳಕಾಗಿಯೂ ಇದ್ದು, ನಮ್ಮನ್ನು ಸರಿಯಾದ ಪರಿಹಾರಗಳೆಡೆಗೆ ನಡೆಸುತ್ತದೆ.

 

ಪ್ರಾಚೀನ ಜ್ಯೋತಿಷ್ಯ, ಶಕುನ, ಭವಿಷ್ಯ ಹೇಳುವಿಕೆ ಮೂಲಕವಾಗಿಯೋ, ಆಧುನಿಕ ಗೂಗಲ್ ಮೂಲಕವಾಗಿಯೋ ಸರಿಯಾದ ಉತ್ತರವೋ ಅಥವಾ ಪರಿಹಾರವೋ ಸಿಗುವುದಿಲ್ಲ. ಅದಕ್ಕಾಗಿಯೇ ಕೀರ್ತನೆಗಾರನು “ನಿನ್ನ ಧರ್ಮಶಾಸ್ತ್ರವನ್ನು ಪ್ರೀತಿಸುವವರಿಗೆ ಸಂಪೂರ್ಣ ಸಮಾಧಾನವಿರುತ್ತದೆ; ಅಂಥವರಿಗೆ ವಿಘ್ನಕರವಾದದ್ದೇನೂ ಇರುವದಿಲ್ಲ." (ಕೀರ್ತನೆ 119:165) ಎಂದು ಹೇಳಿದರು. ನಮ್ಮ ಕಾರ್ಯಗಳ ಬಗ್ಗೆ ದೇವರ ಮುಂದೆ ಪ್ರಾರ್ಥನೆಯಲ್ಲಿ ಕಾದಿರುವಾಗ, ದೇವರು ತನ್ನ ವಾಕ್ಯದ ಮೂಲಕ ಮತ್ತು ತನ್ನ ಸೇವಕರ ಮೂಲಕ ನಮ್ಮೊಂದಿಗೆ ಮಾತನಾಡುತ್ತಾರೆ, ವಾಗ್ದಾನಗಳನ್ನು ನೀಡುತ್ತಾರೆ. “ನಿನ್ನ ವಾಗ್ದಾನವನ್ನು ನಿನ್ನ ಸೇವಕನಿಗೋಸ್ಕರ ನೆನಪುಮಾಡಿಕೋ" (ಕೀರ್ತನೆ 119:49) ಎಂದು ಪ್ರಾರ್ಥಿಸುತ್ತಾ ಬಂದರೆ, ದೇವರು ನಮ್ಮ ವಿಷಯಗಳಲ್ಲಿ ಅದ್ಭುತಗಳನ್ನು ಮಾಡುತ್ತಾರೆ. ನನ್ನ ಮಗನ ಜೀವನ ಸಂಗಾತಿಗಾಗಿ ನಾನು ಪ್ರಾರ್ಥಿಸುತ್ತಿದ್ದಾಗ, ಆದಿಕಾಂಡ 24:17-19 ರಲ್ಲಿ ಇರುವ ವಚನಗಳ ಮೂಲಕ ದೇವರು ನನ್ನೊಂದಿಗೆ ಮಾತನಾಡಿದರು. ಯಾವ ಹುಡುಗಿ ಮನೆಯವರು, ಹುಡುಗಿಗೆ ಅಧಿಕವಾಗಿ ಆತಿಥ್ಯ ವಹಿಸುವ ಗುಣ ಇದೆ ಎಂದು ಹೇಳುತ್ತಾರೋ, ಆ ಹುಡುಗಿಯೇ ನಾನು ನಿನ್ನ ಮಗನಿಗೆ ನೇಮಿಸಿರುವ ಹುಡುಗಿ ಎಂದು ಹೇಳಿದರು. ಹಾಗೆಯೇ ಅವನಿಗೆ ಆಶೀರ್ವಾದಕರವಾದ ವೈವಾಹಿಕ ಜೀವನವು ಲಭಿಸಿತು.

 

ಪ್ರಿಯರೇ! ನಮ್ಮ ಪ್ರಾಣ, ಆತ್ಮ, ಶರೀರ ಎಲ್ಲಾ ಲೌಕಿಕ ವ್ಯವಹಾರಗಳಿಗೂ ಸತ್ಯವೇದದ ವಾಕ್ಯಗಳೇ ದೀಪವೂ ಮತ್ತು ಬೆಳಕೂ ಆಗಿದೆ. ನಾವು ಪ್ರತಿದಿನ ಸತ್ಯವೇದವನ್ನು ಓದಿ ನಮ್ಮ ಜೀವನದಲ್ಲಿ ಅವುಗಳನ್ನು ಅಭ್ಯಾಸ ಮಾಡಿದಾಗ, ವಾಕ್ಯವು ನಮ್ಮ ಪಾದಗಳಿಗೆ ದೀಪವೂ ದಾರಿಗೆ ಬೆಳಕೂ ಆಗಿರುತ್ತದೆ. ಆದ್ದರಿಂದ ವಾಕ್ಯವನ್ನು ಓದಿ ಧ್ಯಾನಿಸೋಣ. ಆಶೀರ್ವಾದ ಹೊಂದೋಣ.

- Mrs. ಗೀತಾ ರಿಚರ್ಡ್

 

ಪ್ರಾರ್ಥನಾ ಅಂಶ:

ದೆಬೋರಾಳ್ ಸೇವಕರುಗಳ ಆರೋಗ್ಯಕ್ಕಾಗಿ ಮತ್ತು ಅವರ ಪ್ರಯಾಣದ ಸುರಕ್ಷತೆಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet holiganbet sahabet onwin bets10 bets10 giriş bets10 güncel giriş betcio atlasbet casibom meritking perabet casibom holiganbet galabet casibom padişahbet padişahbet giriş grandpashabet jojobet tambet grandpashabet jojobet nesinecasino betbey betgit grandpashabet betpuan cashwin matbet meritking perabet perabet giriş instagram ban service betsilin betsilin giris pashagaming pashagaming giris gorabet gorabet giris kralbet holiganbet grandpashabet grandpashabet giriş https://tr.holiganbet-30temmuz.art/ çarkbet çarkbet giriş