Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 08.10.2025
Share:

By Village Missionary Movement

Wednesday, 08-Oct-2025

ಧೈನಂದಿನ ಧ್ಯಾನ(Kannada) – 08.10.2025

 

ಪ್ರಾಮಾಣಿಕವಾದ ಗೆಲುವು

 

"ಸತ್ಕಾರ್ಯಮಾಡುವದರಲ್ಲಿ ನೀನೇ ಮಾದರಿಯಾಗಿರು. ನೀನು ಮಾಡುವ ಉಪದೇಶದಲ್ಲಿ ಯಥಾರ್ಥತ್ವವೂ ಗೌರವವೂ ಆಕ್ಷೇಪಣೆಗೆ ಆಸ್ಪದವಿಲ್ಲದಂಥ ಸ್ವಸ್ಥಬುದ್ಧಿಯೂ ಇರಬೇಕು" - ತೀತ 2:8

 

ಪೂರ್ವ ಏಷ್ಯನ್ ಕ್ರೀಡಾಕೂಟದಲ್ಲಿ ನಡೆದ ಮ್ಯಾರಥಾನ್‌ನಲ್ಲಿ, ಸಿಂಗಾಪುರದ ಕ್ರೀಡಾಪಟು ಆಶ್ಲೇ ಲುಯಿ ಎಲ್ಲರಿಗಿಂತ ಮುಂದೆ ಓಡುತ್ತಿದ್ದರು ಮತ್ತು ಅಂತಿಮ ಗೆರೆಯತ್ತ ಮುನ್ನಡೆಯುತ್ತಿದ್ದರು. ಆದರೆ ಏನೋ ತಪ್ಪಾಗಿದೆ ಎಂದು ಅವರಿಗೆ ಅನಿಸಿತು, ಮತ್ತು ಅವರ ಮುಂದೆ ಓಡುವವರು ತಪ್ಪು ತಿರುವು ಪಡೆದಿದ್ದಾರೆ ಎಂದು ಅವರಿಗೆ ಅರಿವಾಯಿತು. ಆಶ್ಲೇ ತಮ್ಮ ತಪ್ಪಿನ ಲಾಭ ಪಡೆದು ಓಟವನ್ನು ಮುಂದುವರಿಸಬಹುದಿತ್ತು ಮತ್ತು ಗೆಲ್ಲಬಹುದಿತ್ತು. ಆದರೆ ಅವರೊಳಗಿನ ಪ್ರಾಮಾಣಿಕ ಮನೋಭಾವವು ಹಾಗೆ ಗೆಲ್ಲುವುದು ನಿಜವಾದ ಗೆಲುವು ಅಲ್ಲ ಎಂದು ಅರಿತುಕೊಳ್ಳುವಂತೆ ಮಾಡಿತು. ಅವರು ಇತರರಿಗಿಂತ ವೇಗವಾಗಿ ಓಡಿ ಗೆಲ್ಲಬಹುದೇ ಹೊರತು ಆದರೆ ಇತರರ ತಪ್ಪುಗಳು ಅವರ ಗೆಲುವಿಗೆ ಕಾರಣವಾಗಬಾರದು ಎಂದು ಭಾವಿಸಿದರು. ಅವರಲ್ಲಿ ಉದ್ಭವಿಸಿದ ಈ ಭಾವನೆಯಿಂದಾಗಿ, ಅವರು ತನ್ನ ಓಟದ ವೇಗವನ್ನು ಸ್ವಲ್ಪ ಕಡಿಮೆ ಮಾಡಿ ತನ್ನ ಹಿಂದೆ ಓಡುವವರೊಂದಿಗೆ ಸೇರಿಕೊಂಡರು.

 

ಆಶ್ಲೇ ಪಂದ್ಯದ ಅಂತ್ಯದಲ್ಲಿ ಸೋತು ಪದಕ ಗೆಲ್ಲುವ ಅವಕಾಶವನ್ನು ಕಳೆದುಕೊಂಡರೂ, ತನ್ನ ದೇಶವಾಸಿಗಳ ಹೃದಯಗಳನ್ನು ಗೆದ್ದರು. ಅವರ ಪ್ರಾಮಾಣಿಕತೆಯನ್ನು ಮೆಚ್ಚಿ ಅವರಿಗೆ ಅಂತರರಾಷ್ಟ್ರೀಯ ಪ್ರಶಸ್ತಿಯನ್ನೂ ನೀಡಲಾಯಿತು. ಇವರ ಕಾರ್ಯಗಳು ಕ್ರೈಸ್ತರು ಎಂಬುದಕ್ಕೆ ಒಂದು ಸಾಕ್ಷಿಯಾಗಿತ್ತು. ಇವರಿಂದ ಹೀಗೆ ಮಾಡಲು ಹೇಗೆ ಸಾಧ್ಯವಾಯಿತು? ಎಂಬ ಪ್ರಶ್ನೆಯು ಅನೇಕರ ಹೃದಯದಲ್ಲಿ ಉದ್ಭವಿಸಿತು. ಕ್ರಿಸ್ತನ ಪ್ರೀತಿಯ ಬಗ್ಗೆ ಮಾತುಗಳಿಂದ ಮಾತ್ರವಲ್ಲದೆ, ತನ್ನ ಕಾರ್ಯಗಳಲ್ಲಿಯೂ ಪ್ರಾಮಾಣಿಕವಾಗಿದ್ದು ತೋರಿಸಿದರು. ನಾವು ಇತರರಿಗೆ ಸಲಹೆ ನೀಡಬೇಕಾದಾಗ, ಸುಲಭವಾಗಿ ಮಾತನಾಡುತ್ತೇವೆ. ಸತ್ಯವೇದ ವಾಕ್ಯಗಳ ಘಟನೆಗಳ ಪುರಾವೆಗಳೊಂದಿಗೆ ನಾವು ಹೇಳುತ್ತೇವೆ. ಆದರೆ ನಾವು ನಮ್ಮ ಜೀವನದಲ್ಲಿ ಅವುಗಳ ಬಗ್ಗೆ ಯೋಚಿಸುವುದಿಲ್ಲ. ಅಪೊಸ್ತಲನಾದ ಪೌಲನು "ನನ್ನನ್ನು ಹಿಂಬಾಲಿಸಿರಿ" ಎಂದು ಧೈರ್ಯದಿಂದ ಹೇಳಲು ಸಾಧ್ಯವಾಯಿತು. ಹೌದು, ಅವರ ಜೀವನವು ಕ್ರಿಸ್ತನ ಪ್ರತಿಬಿಂಬವಾಗಿತ್ತು.

 

ಪ್ರಿಯರೇ, ಪ್ರತಿದಿನ ಸತ್ಯವೇದವನ್ನು ಓದುವ ನಾವು, ನಮ್ಮ ಕ್ರಿಯೆಗಳಲ್ಲಿ ಸತ್ಯವೇದವನ್ನು ಅನುಸರಿಸುತ್ತಿದ್ದೇವೆಯೇ ಎಂದು ಯೋಚಿಸೋಣ. ನನ್ನ ಬಾಯಿ ಮಾತ್ರ ವಾಕ್ಯಗಳನ್ನು ಹೇಳುತ್ತಿದೆಯಲ್ಲಾ, ನನ್ನ ಜೀವನವು ಆತನನ್ನು ಪ್ರತಿಬಿಂಬಿಸುತ್ತಿದೆಯೇ ಎಂದು ಯೋಚಿಸೋಣ. ಪರಿಶುದ್ಧಾತ್ಮನು ನಮ್ಮೊಳಗೆ ಇರುವುದರಿಂದ ನಾವು ವ್ಯತ್ಯಾಸವಾಗಿ ಜೀವಿಸಲು ಸಾಧ್ಯ ಎಂಬುದನ್ನು ನಾವು ಇತರರಿಗಾಗಿ ಮಾಡುವ ಒಳ್ಳೆಯ ಕಾರ್ಯಗಳು ಈ ಲೋಕಕ್ಕೆ ಬಹಿರಂಗಪಡಿಸುತ್ತದೆ . ನಮ್ಮ ಕಾರ್ಯಗಳು ನಮ್ಮ ಮಾತುಗಳಿಗಿಂತ ಪ್ರಭಾವಶಾಲಿಯಾದದ್ದು. ಅನ್ಯಜನರ ಗಮನವನ್ನು ಸೆಳೆಯುವಂಥದ್ದು. ಭಕ್ತಿಹೀನತೆ ಮತ್ತು ಲೌಕಿಕ ಇಚ್ಚೆಗಳನ್ನು ತೊರೆಯುವಂಥದ್ದು, ಜನರನ್ನು ದೇವರ ಕಡೆಗೆ ತಿರುಗಿಸಬಹುದು. ಅಂತಹ ಜೀವನವನ್ನು ನಡೆಸಲು ದೇವರು ನಮಗೆ ಸಹಾಯ ಮಾಡಲಿ. ಆಶ್ಲೇ ಲೂಯಿಸ್ ರವರು ಆ ದಿನ ಪ್ರಾಮಾಣಿಕವಾದ ಮಾರ್ಗದಲ್ಲಿ ಗೆದ್ದದ್ದರಿಂದ, ಇಂದಿಗೂ ಎಲ್ಲರು ಅವರ ಕುರಿತು ಮಾತನಾಡಲ್ಪಡುವಂಥಹ ವ್ಯಕ್ತಿಯಾಗಿದ್ದಾರೆ. ನಮಗೆ ಯಾವುದೇ ರೀತಿಯ ಪರಿಸ್ಥಿತಿಗಳು ಎದುರಾದರೂ ಪ್ರಾಮಾಣಿಕತೆಯನ್ನು ಮಾತ್ರ ಅಭ್ಯಾಸ ಮಾಡೋಣ.

- Mrs.ಜಾಸ್ಮಿನ್ ಪಾಲ್

 

ಪ್ರಾರ್ಥನಾ ಅಂಶ:

ದೆಬೋರಾಳ್ ಸೇವೆ ಮಾಡುವ ಹಳ್ಳಿಗಳಲ್ಲಿ ಉಜ್ಜೀವನ ಉಂಟಾಗುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet perabet perabet giriş padişahbet padişahbet giriş meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş jojobet jojobet jojobet jojobet jojobet holiganbet holiganbet grandpashabet betgit radissonbet