Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 04.06.2021
Share:

By Village Missionary Movement

Friday, 04-Jun-2021

ಧೈನಂದಿನ ಧ್ಯಾನ(Kannada) – 04.06.2021

 

ನಂಬಿಕೆ ಇಡು! ಭಯಪಡಬೇಡ!

 

"ಮನುಷ್ಯರು ಸಹಿಸಬಹುದಾದ ಶೋಧನೆಯೇ ಹೊರತು ಬೇರೆ ಯಾವದೂ ನಿಮಗೆ ಸಂಭವಿಸಲಿಲ್ಲ. ದೇವರು ನಂಬಿಗಸ್ಥನು; ನಿಮ್ಮ ಶಕ್ತಿಯನ್ನು ಮೀರುವ ಶೋಧನೆಯನ್ನು ನಿಮಗೆ ಬರಗೊಡಿಸದೆ ನೀವು ಅದನ್ನು ಸಹಿಸುವದಕ್ಕೆ ಶಕ್ತರಾಗುವಂತೆ ಶೋಧನೆಯಾಗುತ್ತಲೇ ತಪ್ಪಿಸಿಕೊಳ್ಳುವ ಮಾರ್ಗವನ್ನು ಸಿದ್ಧಮಾಡುವನು." - 1 ಕೊರಿಂಥ 10:13

 

ನಾನು ಇತ್ತೀಚೆಗೆ ಖಾಸಗಿ ಬ್ಯಾಂಕ್‌ಗೆ ಹೋದಾಗ, ನನಗೆ ತಿಳಿದ ಒಬ್ಬ ಹಾಸ್ಯನಟ, “ಏನು ಮೇಡಂ, ಈ ಸಾಂಕ್ರಾಮಿಕ ರೋಗ ಯಾವಾಗ ಹೋಗುತ್ತದೆ? ಒಂದೇ ಭಯ, ಉದ್ವೇಗ, ಚಿಂತೆಯಾಗುತ್ತಿದೆ. ನನಗಾಗಿ ಮತ್ತು ನನ್ನ ಕುಟುಂಬಕ್ಕಾಗಿ ಪ್ರಾರ್ಥಿಸಿ. ” ಎಂದು ದುಃಖದಿಂದ ಹೇಳಿದರು. ನಾನು ಕೆಲವು ನಿಮಿಷಗಳ ಕಾಲ ಅವರಿಗೆ ಸಮಾಧಾನಕರ ಮಾತುಗಳನ್ನು ಹೇಳಿ ಧೈರ್ಯಪಡಿಸಿ ಬಂದೆನು.

 

 ಹೌದು, ಈ 2 ನೇ ಅಲೆಯು ತುಂಬಾ ಭೀಕರವಾಗಿ ತಾಂಡವಾಡುತ್ತಿದೆ, ಅದು ಅನೇಕ ದೇವ ಜನರನ್ನು, ಶ್ರೇಷ್ಠ ಸೆಲೆಬ್ರಿಟಿಗಳನ್ನು, ವೈದ್ಯರನ್ನು, ದಾದಿಯರನ್ನು, ಕಾವಲುಗಾರರನ್ನು, ನಮ್ಮ ಸ್ನೇಹಿತರನ್ನು ಮತ್ತು ಕೆಲವು ಸಂಬಂಧಿಕರನ್ನು ಕೂಡ ದೋಚುತ್ತಿದೆ. ಈ ಸೋಂಕು ಹೆಚ್ಚಾಗುತ್ತಿದ್ದಂತೆ, ಆಸ್ಪತ್ರೆಗಳಲ್ಲಿ ಸ್ಥಳಾವಕಾಶದ ಕೊರತೆ, ಔಷಧಿಗಳ ಕೊರತೆ, ಆಮ್ಲಜನಕದ ಕೊರತೆ ಮುಂತಾದ ಅನೇಕ ಸಮಸ್ಯೆಗಳುಂಟಾಗುತ್ತಿವೆ. ಆದರೆ ಈ ರೋಗಕ್ಕಿಂತ ಬಹು ಮಾರಕವಾದದ್ದು ನಮ್ಮಲ್ಲಿ ಕಾಣುತ್ತಿರುವ ಒಂದು ರೀತಿಯ ಭಯ ಮತ್ತು ಉದ್ವೇಗವೇ! ನಾನು ಇದನ್ನು ಬರೆಯುತ್ತಿರುವಾಗ, ಕರ್ನಾಟಕದ ಚಿಕ್ಕಮಂಗಳೂರು ಎಂಬ ಊರಿನಲ್ಲಿ ನಡೆದ ಸುದ್ದಿ ಕೇಳಿ ಬಹಳ ನೊಂದು ಹೋದೆನು. ಒಳ್ಳೆಯ ಸೌಕರ್ಯವುಳ್ಳ ನಿವೃತ್ತ ತಹಶೀಲ್ದಾರ್ ತನಗೆ ಈ ರೋಗವು ಪತ್ತೆಯಾಗಿದೆ ಎಂದು ತಿಳಿದಾಗ, ಅದು ತನ್ನ ಕುಟುಂಬಕ್ಕೆ ಹರಡಬಹುದೆಂಬ ಭಯದಿಂದ ಪತ್ರ ಬರೆದು ಬಿಟ್ಟು ತನ್ನನ್ನು ತಾನೇ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡರು. ಎಷ್ಟು ಶೋಚನೀಯ! "ದೇವರು ನಮಗೆ ಕೊಟ್ಟಿರುವ ಆತ್ಮವು ಬಲ ಪ್ರೀತಿ ಶಿಕ್ಷಣಗಳ ಆತ್ಮವೇ ಹೊರತು ಹೇಡಿತನದ ಆತ್ಮವಲ್ಲ." (2 ತಿಮೊಥೆಯನಿಗೆ 1: 7). ಭಯ, ಚಿಂತೆ, ಆತಂಕ ಬೇಡ.

 

ಇಂದಿನ ಸತ್ಯವೇದ ಭಾಗದಲ್ಲಿ ವೃದ್ಧಾಪ್ಯದಲ್ಲಿ, ವಾಗ್ದಾನದಂತೆ ಹುಟ್ಟಿದ ಮಗನಾದ ಇಸಾಕನನ್ನು ಸರ್ವಾಂಗ ಹೋಮವಾಗಿ ಅರ್ಪಿಸಬೇಕೆಂಬ ಶೋಧನೆಯು ದೇವರ ಆಜ್ಞೆಯಾಗಿ ಬಂದಿತು. ಮುಂಜಾನೆಯೇ ಎದ್ದು ತನಗೆ ಬೇಕಾದುದನ್ನು ತೆಗೆದುಕೊಂಡು ತನ್ನ ಪ್ರೀತಿಯ ಮಗನನ್ನು ತನ್ನೊಂದಿಗೆ ಕರೆದುಕೊಂಡು ಹೋದ ಅಬ್ರಹಾಮನ ವಿಧೇಯತೆಯು ನಮ್ಮನ್ನು ನಡುಗಿಸುತ್ತದೆ ಅಲ್ಲವೇ? ನಾವು ಹೀಗೆ ಮಾಡಲಾಗುತ್ತದಾ? ಆದರೆ “ಮರಳಿ ಬರುತ್ತೇವೆ” ಎಂಬ ಅಬ್ರಹಾಮನ ನಂಬಿಕೆಯು, “ದೇವರು ದಹನಬಲಿಗಾಗಿ ಕುರಿಮರಿಯನ್ನು ನೋಡಿಕೊಳ್ಳುತ್ತಾನೆ” ಎಂಬ ನಂಬಿಕೆಯ ಮಾತುಗಳು ಎಲ್ಲಾದಕ್ಕೂ ಮೇಲಾಗಿ "ನಿನ್ನ ಸಂತತಿಯನ್ನು ಹೆಚ್ಚಿಸುತ್ತೇನೆ" ಎಂಬ ದೇವರ ವಾಗ್ದಾನವನ್ನು ಚೆನ್ನಾಗಿ ತಿಳಿದಿದ್ದನು. ತನ್ನ ಮಗನೊಂದಿಗೆ ಜಯಕರವಾಗಿ ಬಂದನು.

 

ನನ್ನ ಪ್ರಿಯರೇ! "ಲೋಕದಲ್ಲಿ ನಿಮಗೆ ಸಂಕಟ ಉಂಟು; ಧೈರ್ಯವಾಗಿರಿ, ನಾನು ಲೋಕವನ್ನು ಜಯಿಸಿದ್ದೇನೆ" (ಯೋಹಾನ 16:13) ಎಂಬ ಜಯಕ್ರಿಸ್ತನು ನಿಮ್ಮೊಂದಿಗಿದ್ದಾರೆ. ಬಹುಬಲವಾದ ಧೈರ್ಯವನ್ನು ಬಿಟ್ಟು ಬಿಡಬೇಡಿರಿ. ಸತ್ಯವೇದದಲ್ಲಿ ದೇವರು ಅನೇಕ ದೇವದಾಸರನ್ನು ಉಪದ್ರವಗಳಿಂದ ಬಿಡಿಸಿದ್ದಾರೆ. ಅವರು ನಿಮ್ಮನ್ನೂ ಬಿಡಿಸುತ್ತಾರೆ. ಕರೋನಾ ವಿಧಿ ವಿಧಾನಗಳನ್ನು ಅನುಸರಿಸುವ ಮೂಲಕ, ಎಲ್ಲರೂ ಸುರಕ್ಷಿತವಾಗಿರಲು ದೇವರು ಸಹಾಯ ಮಾಡಲಿ! ಆಮೆನ್.

- Mrs. ಸರೋಜ ಮೋಹನ್‌ದಾಸ್

 

ಪ್ರಾರ್ಥನಾ ಅಂಶ:-

ಮಧ್ಯಪಾನಕ್ಕೆ ವ್ಯಸನಿಗಳಾಗಿರುವ ಜನರು ಅದರಿಂದ ಬಿಡುಗಡೆ ಹೊಂದಿಕೊಳ್ಳುವಂತೆ ಪ್ರಾರಂಭಿಸಲಾಗಿರುವ peace centre- ಗಾಗಿ ಪ್ರಾರ್ಥಿಸೋಣ.

 

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.

ವಾಟ್ಸಾಪ್.  

ತಮಿಳಿಗಾಗಿ +919444011864  

ಇಂಗ್ಲಿಷ್ ಗಾಗಿ +919444011769

ಹಿಂದಿಗಾಗಿ +91 93858 10496

ತೆಲುಗುಗಾಗಿ +919442493250

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş matbet giriş sahabet onwin bets10 bets10 giriş bets10 güncel giriş betcio atlasbet casibom meritking perabet casibom holiganbet galabet casibom padişahbet padişahbet giriş grandpashabet jojobet cashwin grandpashabet radissonbet palacebet amgbahis cratosroyalbet grandpashabet betpuan betsalvador matbet meritking perabet perabet giriş instagram ban service betsilin betsilin giris pashagaming pashagaming giris gorabet gorabet giris kralbet holiganbet