Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 25.10.2025
Share:

By Village Missionary Movement

Saturday, 25-Oct-2025

ಧೈನಂದಿನ ಧ್ಯಾನ(Kannada) – 25.10.2025

 

ಕಳೆದುಕೊಳ್ಳದ ಒಂದು

 

"...ನನ್ನ ವಿಮೋಚಕನು ಜೀವಸ್ವರೂಪನೆಂದು ಬಲ್ಲೆನು..." - ಯೋಬ 19:25

 

ದೈವಭಕ್ತಿಯಿಂದ ಜೀವಿಸಿದ ವ್ಯಕ್ತಿಯೊಬ್ಬರು ಇದ್ದಕ್ಕಿದ್ದಂತೆ ತಮ್ಮ ಉತ್ತಮ ವ್ಯಾಪಾರವನ್ನು ಕಳೆದುಕೊಂಡರು. ಅದರ ನಿಮಿತ್ತವಾಗಿ, ಅನೇಕ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವಾಗ, ಅನಾರೋಗ್ಯದ ನಿಮಿತ್ತವಾಗಿ ತಮ್ಮ ಹೆಂಡತಿಯನ್ನು ಸಹ ಕಳೆದುಕೊಂಡರು. ಈ ರೀತಿಯಾಗಿ ಅವರು ಅನೇಕ ನಷ್ಟಗಳನ್ನು ಹಾದು ಹೋಗಬೇಕಾಗಿದ್ದರೂ, ಅವರು ದೇವರ ಮೇಲಿನ ನಂಬಿಕೆ ಅಥವಾ ಭರವಸೆಯನ್ನು ಕಳೆದುಕೊಳ್ಳಲೇ ಇಲ್ಲ. ನಿರುತ್ಸಾಹದ ನಡುವೆಯೂ ಅವರು ತಮ್ಮ ದೃಢತೆಯನ್ನು ಕಳೆದುಕೊಳ್ಳದ ಸ್ಥಿತಿಯು ಅನೇಕ ಜನರನ್ನು ಆಶ್ಚರ್ಯಗೊಳಿಸಿತು.

 

ಈ ಎಲ್ಲಾ ನಷ್ಟಗಳು ಎದುರಾದರೂ ಮನೋಧೈರ್ಯವನ್ನೂ, ನಂಬಿಕೆಯನ್ನೂ ಕಳೆದುಕೊಳ್ಳದಿರಲು ಅವರು ಹೇಳಿದ ಕಾರಣ ವಿಭಿನ್ನವಾಗಿತ್ತು. ನನ್ನ ಸಂತೋಷಕ್ಕೆ ಪ್ರಯೋಜನಕಾರಿಯಾದ ಅನೇಕ ವಿಷಯಗಳನ್ನು ನಾನು ಕಳೆದುಕೊಳ್ಳಬೇಕಾಗಿದ್ದರೂ, ನಾನು ದೇವರೊಂದಿಗಿನ ನನ್ನ ಸಂಬಂಧ ಮತ್ತು ಭರವಸೆಯನ್ನು ಕಳೆದುಕೊಳ್ಳಲಿಲ್ಲ. ದೇವರೊಂದಿಗಿನ ಸಂಬಂಧದಿಂದ ಬರುವ ಸಮಾಧಾನ ಮತ್ತು ಆದರಣೆ ನನ್ನನ್ನು ಬಿಟ್ಟು ಹೋಗಲಿಲ್ಲ ಎಂದರು.

 

ಸಂಬಂಧಗಳು, ಸ್ನೇಹಗಳು, ಸಂಪತ್ತು, ಸ್ಥಾನಮಾನ, ಒಳ್ಳೆಯ ಖ್ಯಾತಿ ಮತ್ತು ಗೌರವಗಳನ್ನು ಕಾಪಾಡಿಕೊಳ್ಳಲು ನಾವು ಎಷ್ಟೇ ಪ್ರಯತ್ನಿಸಿದರೂ, ಕೆಲವು ಸಂದರ್ಭಗಳಲ್ಲಿ ನಾವು ಅವುಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಯೋಬನು ಹೇರಳವಾದ ಸಂಪತ್ತು, ಉತ್ತಮ ಸಂಬಂಧಗಳು, ವಿವಿಧ ಗೌರವಗಳು ಮತ್ತು ಮುಂತಾದ ಅನೇಕ ಸಕಾರಾತ್ಮಕ ವಿಷಯಗಳನ್ನು ಹೊಂದಿದ್ದರು. ಆದರೆ, ಅವರು ಅವೆಲ್ಲವನ್ನೂ ಕಣ್ಣು ಮಿಟುಕಿಸುವುದರೊಳಗೆ ಕಳೆದುಕೊಂಡರು. ಒಳ್ಳೆಯ ಭಕ್ತಿ ಜೀವನವನ್ನು ನಡೆಸುತ್ತಿದ್ದರೂ, ಅವುಗಳನ್ನು ಕಟ್ಟಿ ಭದ್ರಪಡಿಸಿ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

 

ಆದಾಗ್ಯೂ, ಅವರು ಕಳೆದುಕೊಳ್ಳದ ಒಂದು ವಿಷಯವಿತ್ತು. ಅದು ದೇವರ ಸಂಬಂಧದಲ್ಲಿನ ನಂಬಿಕೆ. ನಂಬಿಕೆ ನೀಡಿದ ಬಲದಿಂದಾಗಿ ಅವರು "ನಾನಂತು ನನ್ನ ವಿಮೋಚಕನು ಜೀವಸ್ವರೂಪನೆಂದು ಬಲ್ಲೆನು" ಎಂದು ಹೇಳಿದರು. ಅದುವೇ ಅವರನ್ನು ಅಲುಗಾಡದೆ ನಿಲ್ಲುವಂತೆ ಮಾಡಿತು. ಎಲ್ಲಾ ಸಂಪತ್ತು, ಸಂಬಂಧಗಳು, ಸ್ನೇಹಗಳು ಮತ್ತು ಸ್ಥಾನಮಾನಗಳು ಕಣ್ಮರೆಯಾದ ನಂತರವೂ, ದೇವರ ಸಂಬಂಧವನ್ನು ಒರಗಿಕೊಂಡಿದ್ದ ನಂಬಿಕೆಯೇ ಕತ್ತಲೆಯ ನಡುವೆ ಒಂದು ದೀಪದಂತೆ ಬೆಳಕು ನೀಡಿ ಬೆಂಬಲಿಸಿತು.

 

ದೇವರ ಮಕ್ಕಳೇ! ದೇವರ ಸಂಬಂಧವನ್ನು ನಾವಾಗಿ ಕಳೆದುಕೊಳ್ಳದಿರುವವರೆಗೂ, ಆ ಸಂಬಂಧದಿಂದ ಬರುವ ನಂಬಿಕೆಯನ್ನು, ಮನಶ್ಯಾಂತಿಯನ್ನು, ಆದರಣೆಯನ್ನು ಮತ್ತು ಸಂತೋಷವನ್ನು ನಾವು ಕಳೆದುಕೊಳ್ಳುವುದಿಲ್ಲ. ಯಾವುದೇ ನಷ್ಟವನ್ನು ಸಹಿಸಿಕೊಳ್ಳುವ ಶಕ್ತಿ, ದೇವರ ಸಂಬಂಧವನ್ನು ಕಳೆದುಕೊಳ್ಳದೆ ಹಿಡಿದಿಟ್ಟುಕೊಳ್ಳುವುದರಿಂದಲೇ ಬರುತ್ತದೆ.

        ದೇವರಿಗಾಗಿ ಏನು ಬೇಕಾದರೂ ಕಳೆದುಕೊಳ್ಳಬಹುದು, ಆದರೆ

            ಯಾವುದಕ್ಕಾಗಿಯೂ ದೇವರ ಸಂಬಂಧವನ್ನು ಕಳೆದುಕೊಳ್ಳಬಾರದು.

- Bro.ಎಡ್ವಿನ್ ಚಾರ್ಲ್ಸ್

 

ಪ್ರಾರ್ಥನಾ ಅಂಶ:

50,000 ಹಳ್ಳಿಗಳಲ್ಲಿ ಸುವಾರ್ತೆಯನ್ನು ಸಾರಲು, ಹೋಗುವ ಸ್ಥಳಗಳಲ್ಲಿ ದೇವರು ತೆರೆದ ಬಾಗಿಲನ್ನು ಆಜ್ಞಾಪಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al Elexbet matbet giriş matbet instagram unban x unban twitter unban palacebet setrabet