Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 28.10.2025
Share:

By Village Missionary Movement

Tuesday, 28-Oct-2025

ಧೈನಂದಿನ ಧ್ಯಾನ(Kannada) – 28.10.2025

 

ನಿಧಾನ ಅಗತ್ಯ

 

"ಮನುಷ್ಯನ ವಿವೇಕವು ಅವನ ಸಿಟ್ಟಿಗೆ ಅಡ್ಡಿ; [ಪರರ] ದೋಷವನ್ನು ಲಕ್ಷಿಸದಿರುವದು ಅವನಿಗೆ ಭೂಷಣ" - ಜ್ಞಾನೋಕ್ತಿ 19:11

 

ಒಂದು ಕಾಡಿನಲ್ಲಿ, ನದಿಯ ಪಕ್ಕದಲ್ಲಿ ಒಂದು ದೊಡ್ಡ ಹಣ್ಣಿನ ಮರವಿತ್ತು. ಆ ಮರದಲ್ಲಿ ಒಂದು ಕೋತಿ ಆಟವಾಡುತ್ತಾ ಅಲ್ಲಿ ಇಲ್ಲಿ ಜಿಗಿಯುತ್ತಿತ್ತು. ಅದಕ್ಕೆ ಬಾಯಾರಿಕೆಯಾಗಿ ಮರದಿಂದ ಇಳಿದು ನದಿಯ ನೀರನ್ನು ಕುಡಿಯುತ್ತಿತ್ತು. ಆಗ ಮರದ ಒಂದು ಹಣ್ಣು ಸರಿಯಾಗಿ ಕೋತಿಯ ತಲೆಯ ಮೇಲೆ ಬಿತ್ತು. ಕೋತಿಗೆ ಬಂತು ನೋಡಿ ಕೋಪ! ಮರವನ್ನು ಹತ್ತಿ ಅದರಲ್ಲಿದ್ದ ಕಾಯಿಗಳನ್ನು, ಹಣ್ಣುಗಳನ್ನು, ಚಿಗುರುಗಳನ್ನು ಸಾಲಾಗಿ ಕಿತ್ತು ಬಿಸಾಡಿತು. ಕೆಲವು ಹಣ್ಣುಗಳು ನದಿಗೆ ಕೊಚ್ಚಿಹೋದವು, ಆದರೆ ಕೆಲವು ಹಣ್ಣುಗಳು ಆ ಭಾಗದಲ್ಲಿ ಅಲ್ಲಲ್ಲಿ ಚದರಿಹೋದವು. ಮರದ ಮೇಲೆ ಸೇಡು ತೀರಿಸಿಕೊಂಡುಬಿಟ್ಟೆ ಎಂದು ಕೋತಿಗೆ ಒಂದೇ ಸಂತೋಷ. ಕೋತಿ ಮತ್ತೆ ತನ್ನ ದಾರಿಯಲ್ಲಿ ಹೊರಟು ಹೋಯಿತು. ಕೆಲವು ದಿನಗಳ ನಂತರ, ಬಿದ್ದ ಹಣ್ಣುಗಳು ಸಸ್ಯಗಳಾಗಿ ಮೊಳಕೆಯೊಡೆಯಲು ಪ್ರಾರಂಭಿಸಿ ಮುಂದಿನ ದಿನಗಳಲ್ಲಿ ದೊಡ್ಡ ಮರಗಳಾಗಿ ಬೆಳೆದವು. ಆ ಕೋತಿಗೆ ಗೊತ್ತಿಲ್ಲ ಈ ಎಲ್ಲಾ ಮರಗಳು ತನ್ನಿಂದಲೇ ಉಂಟಾದವು ಎಂದು! ತಮಿಳಿನಲ್ಲಿ ಒಂದು ಗಾದೆ ಇದೆ, "ಆತುರ ಪಡುವವನಿಗೆ ಬುದ್ಧಿ ಮಾಂದ್ಯ" ಎಂದು. ಹೌದು, ಕೋಪದಲ್ಲಿ ನಾವು ಮಾಡುವ ಕ್ರಿಯೆಗಳು, ತೆಗೆದುಕೊಳ್ಳುವ ನಿರ್ಧಾರಗಳು ಜ್ಞಾನವಾಗಿ ಇರುವುದಿಲ್ಲ.

 

ಸತ್ಯವೇದದಲ್ಲಿ, ದಾವೀದನ ವಿರುದ್ಧ ಸೌಲನಿಗೆ ಉಂಟಾದ ಕೋಪದಿಂದಾಗಿ ನಷ್ಟವು ಸೌಲನಿಗೇ ಬಂತು. ಆದರೆ ದಾವೀದನು ಕರ್ತನ ಕೃಪೆಯಿಂದ ಬೆಳೆದು ಸಮೃದ್ಧಿಯಾದನು. ಕೊನೆಯಲ್ಲಿ, ಸೌಲ ಮತ್ತು ಅವನ ಕುಟುಂಬವು ನಾಶವಾದದ್ದನ್ನು ಸತ್ಯವೇದದಲ್ಲಿ ಓದುತ್ತೇವೆ. ಸೌಲನಿಗೆ ಉಂಟಾದ ಕಾರಣವಿಲ್ಲದ ಕೋಪ ಮತ್ತು ದಾವೀದನನ್ನು ನಿರ್ಮೂಲನೆ ಮಾಡಬೇಕೆಂಬ ಅಸೂಯೆಯೇ ಇದಕ್ಕೆಲ್ಲಾ ಕಾರಣವಾಗಿತ್ತು.

 

ಪ್ರಿಯರೇ! ಶರೀರದಲ್ಲಿರುವ ನಾವೆಲ್ಲರೂ ಕೋಪಗೊಳ್ಳುವುದು ಸಹಜ. ಆದರೆ ಆ ಕೋಪದಲ್ಲಿ ನಾವು ನಮ್ಮ ನಿಧಾನವನ್ನು ಕಳೆದುಕೊಳ್ಳಬಾರದು. ಕೋಪದಲ್ಲಿ ನಾವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ಒಬ್ಬ ದೇವ ಮನುಷ್ಯನು ಹೀಗೆ ಹೇಳುತ್ತಾರೆ, "ನಿಮ್ಮನ್ನು ಅರ್ಥಮಾಡಿಕೊಳ್ಳದೆ ತೊಂದರೆ ಉಂಟುಮಾಡಿದ ವ್ಯಕ್ತಿಗಳಿಗೆ ನೀವು ಕೋಪದಲ್ಲಿ ಉತ್ತರ ಪತ್ರವನ್ನು ಬರೆದರೂ, ಅದನ್ನು ತಕ್ಷಣ ಪೋಸ್ಟ್ ಮಾಡಬೇಡಿ. ಅದನ್ನು ಎರಡು ದಿನಗಳವರೆಗೆ ಇಟ್ಟುಕೊಳ್ಳಿ. ಅದರ ನಂತರ ಅಗತ್ಯವಿದ್ದರೆ ನೀವು ಅದನ್ನು ಕಳುಹಿಸಬಹುದು" ಎಂದು. ಹೌದು, ಆ ಎರಡು ದಿನಗಳಲ್ಲಿ ಕಾರ್ಯವನ್ನು ನಿಧಾನಿಸೋಣ, ನಮ್ಮ ಕೋಪವು ಬದಲಾಗುತ್ತದೆ. ಇದು ಸಮಸ್ಯೆ ಭೂಕಂಪವಾಗುವುದನ್ನು ತಡೆಯುತ್ತದೆ. ಪ್ರಿಯರೇ, ಸೇಡು ತೀರಿಸಿಕೊಳ್ಳುವುದು ನಮ್ಮದಲ್ಲ, ಅದು ಕರ್ತನದು. ಆದ್ದರಿಂದ, ನಿಧಾನವಾಗಿ ಬದುಕೋಣ.

ಕೋಪವು ನಮಗೆ ಶಾಪ!

ಕ್ಷಮೆಯು ನಮಗೆ ಲಾಭ!

- Bro. ಅನೀಸ್ ರಾಜಾ

 

ಪ್ರಾರ್ಥನಾ ಅಂಶ:

50,000 ಗ್ರಾಮಗಳಿಗೆ ಸುವಾರ್ತೆ ಎಂಬ ಯೋಜನೆಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಸೇವಕರನ್ನು ದೇವರು ಶಕ್ತಿಯುತವಾಗಿ ಎತ್ತಿ ಉಪಯೋಗಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet perabet perabet giriş padişahbet padişahbet giriş meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş jojobet jojobet betplay jojobet esbet sonbahis tambet grandpashabet betgit mercurecasino