Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 30.10.2025
Share:

By Village Missionary Movement

Wednesday, 29-Oct-2025

ಧೈನಂದಿನ ಧ್ಯಾನ(Kannada) – 30.10.2025

 

ಎದ್ದೇಳು! ಎದ್ದೇಳು! 

 

"ಯೆಹೋವನ ಭುಜವೇ, ಎಚ್ಚರಗೊಳ್ಳು, ಎಚ್ಚರಗೊಳ್ಳು, ಬಲವನ್ನು ತಂದುಕೋ!..." - ಯೆಶಾಯ 51:9

 

ಪಾರಾ ಒಲಿಂಪಿಕ್ ಕ್ರೀಡಾಕೂಟವು ಬ್ರಹ್ಮಾಂಡವಾಗಿ ನಡೆಯುತ್ತಿತ್ತು. ಓಟ ಪಂದ್ಯವನ್ನು ಪ್ರಕಟಿಸಿದ ಕೂಡಲೇ, ಭಾಗವಹಿಸುವ ಹತ್ತು ಅಂಗವಿಕಲರು ತಮ್ಮ ತಮ್ಮ ಸ್ಥಳಗಳಲ್ಲಿ ಸಿದ್ಧವಾಗಿ ನಿಂತರು. ಶಿಳ್ಳೆ ಹೊಡೆದ ತಕ್ಷಣ, ಎಲ್ಲರೂ ಓಡಲು ಪ್ರಾರಂಭಿಸಿದರು. ಪ್ರೇಕ್ಷಕರು ಚಪ್ಪಾಳೆ ತಟ್ಟಿ ಅವರನ್ನು ಪ್ರೋತ್ಸಾಹಿಸಿದರು. ಕೆಲವು ಸೆಕೆಂಡುಗಳಲ್ಲಿ, ಒಬ್ಬ ಸ್ಪರ್ಧಿ ಎಡವಿ ಬಿದ್ದರು. ಮುಂದಿನ ಸೆಕೆಂಡ್, ಇತರ ಒಂಭತ್ತು ಸ್ಪರ್ಧಿಗಳೂ ನಿಂತುಬಿಟ್ಟರು. ಜನಸಮೂಹ ಮೌನ ಮತ್ತು ಆಘಾತದಿಂದ ನೋಡುತ್ತಿರುವಾಗ, ಉಳಿದ ಒಂಭತ್ತು ಮಂದಿ ಹಿಂದೆ ನಡೆದು, ಬಿದ್ದವನ ಕೈ ಹಿಡಿದು ಮೇಲಕ್ಕೆತ್ತಿದರು. ಹತ್ತು ಮಂದಿ ಕೈಜೋಡಿಸಿ ಒಗ್ಗಟ್ಟಿನಿಂದ ಓಡಿ, ಅದೇ ಸಮಯದಲ್ಲಿ ಗೆಲುವಿನ ಗೆರೆಯ ಮೇಲೆ ಹೆಜ್ಜೆ ಹಾಕಿದರು. ಕ್ರೀಡಾಂಗಣದಲ್ಲಿದ್ದ ಎಲ್ಲಾ ಪ್ರೇಕ್ಷಕರು ಎದ್ದು ನಿಂತು, ಚಪ್ಪಾಳೆ ತಟ್ಟಿ ಹುರಿದುಂಬಿಸಿದರು. ಹತ್ತು ಮಂದಿಯನ್ನೂ ವಿಜೇತರು ಎಂದು ಘೋಷಿಸಲಾಯಿತು. ಇದು ಒಂದು ರೋಮಾಂಚಕ ಘಟನೆಯಾಗಿತ್ತು.

 

ಹೌದು, ಪ್ರಿಯರೇ, ಕ್ರೈಸ್ತ ಪ್ರಯಾಣವೆಂದರೆ ನಾನು ಮಾತ್ರ ಸಿದ್ಧನಾಗಿ ಪರಲೋಕ ರಾಜ್ಯವನ್ನು ತಲುಪುವುದಲ್ಲ; ಸಿದ್ಧನಾಗಿರುವ ನಾನು ಇತರರನ್ನು ಸಿದ್ಧಪಡಿಸಿ ಗುರಿಯನ್ನು ತಲುಪುವುದೇ ಉತ್ತಮ. ಮಧ್ಯ ದಾರಿಯಲ್ಲಿ ಎಡವಿ ಬಿದ್ದವನನ್ನು ಎತ್ತಿ ನಿಲ್ಲಿಸಿ ಮತ್ತೆ ವಿಜಯದ ಪ್ರಯಾಣವನ್ನು ಮುಂದುವರಿಸಿದ ಇತರ ಒಂಭತ್ತು ಜನರಲ್ಲಿ ಒಬ್ಬರಾಗಿ ನೀವು ಯಾಕೆ ಇರಬಾರದು? ಈ ಕಾಳಜಿ ನಿಮ್ಮೊಳಗೆ ಬರುವಾಗ, ಕ್ರಿಸ್ತನಿಗಾಗಿ ನಿಮ್ಮ ಸ್ಥಾನದಿಂದ ಕೆಳಗಿಳಿಯಲು ನೀವು ಹಿಂಜರಿಯುವುದಿಲ್ಲ. ನೀವು ನೇಗಿಲಿನ ಮೇಲೆ ಕೈಯಿಟ್ಟು ಅಂದರೆ, ರಂಗದಲ್ಲಿ ಇಳಿಯಲು ಸಮರ್ಪಿಸಿದ ನೀವು ಹಿಂತಿರುಗಿ ನೋಡುವುದಿಲ್ಲ. ಆತನ ಬಲಗೈ ನಿಮ್ಮ ಕೈಯೊಂದಿಗೆ ಸೇರಿ ಪರಾಕ್ರಮವನ್ನು ಮಾಡುತ್ತದೆ. ಆ ಹತ್ತು ಕ್ರೀಡಾಪಟುಗಳು ಒಟ್ಟಾಗಿ ಗೆಲುವಿನ ಗೆರೆಯ ಮೇಲೆ ಹೆಜ್ಜೆ ಹಾಕಿದರು.

 

ಅದೇ ಗ್ರಹಿಕೆ, ಆ ಏಕತೆ, ಆ ದೇವರ ಪ್ರೀತಿ ನಿಮ್ಮನ್ನು ಒತ್ತಿ ಪ್ರೇರೇಪಿಸುವಂತೆ ಕರ್ತನು ಕೃಪೆ ಮಾಡಲಿ. ನಿಮ್ಮ ಬಿತ್ತನೆಯು ಹೇರಳವಾದ ಫಲವನ್ನು ಯಜಮಾನನಾದ ಯೇಸುವಿಗೆ ನೀಡಲು ನಿಮಗಾಗಿ ಮೊಣಕಾಲುಗಳ ಮೇಲೆ ನಿಲ್ಲುವ ಒಂದು ಪ್ರಾರ್ಥನಾ ಯೋಧರ ಗುಂಪು ಇದೆ. ಸವಾಲುಗಳನ್ನು ಮುರಿಯಲು ಉದ್ಭವಿಸುವ ಅಂಧಕಾರದ ಶಕ್ತಿಗಳನ್ನು ಯೇಸುರಾಜ ನೋಡಿಕೊಳ್ಳುತ್ತಾರೆ. "ಚೀಯೋನೇ, ಎಚ್ಚರವಾಗು, ಎಚ್ಚರವಾಗು, ನಿನ್ನ ಬಲವನ್ನು ಹೊಂದಿಕೋ." (ಯೆಶಾಯ 52:1). ದೇವರ ಕೆಲಸಕ್ಕಾಗಿ ಎದ್ದೇಳುವ ಪ್ರತಿಯೊಬ್ಬ ಸೇವಕನ ಮೇಲೆ ಕರ್ತನ ಕೃಪೆಯು ಹೇರಳವಾಗಿರಲಿ. ಆಮೆನ್.

- Mrs. ಎಮೀಮಾ ಸೌಂದರರಾಜನ್

 

ಪ್ರಾರ್ಥನಾ ಅಂಶ:

ಸುವಾರ್ತಾ ಕೂಟಗಳಲ್ಲಿ ಸಹೋದರ ಡೇವಿಡ್ ಗಣೇಶನ್ ಅವರನ್ನು ದೇವರು ಬಲವಾಗಿ ಎತ್ತಿ ಉಪಯೋಗಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet perabet perabet giriş padişahbet padişahbet giriş meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş jojobet jojobet betplay jojobet esbet sonbahis tambet grandpashabet betgit mercurecasino