Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 06.06.2021 (Kids Special)
Share:

By Village Missionary Movement

Sunday, 06-Jun-2021

ಧೈನಂದಿನ ಧ್ಯಾನ(Kannada) – 06.06.2021 (Kids Special)

 

ಸೌಂದರ್ಯವಾ? ಪ್ರೀತಿಯ?

 

"...ಜನರು ನಿಮ್ಮ ಒಳ್ಳೇ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಮಹಿಮೆಪಡಿಸುವ ಹಾಗೆ ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ" - ಮತ್ತಾಯ 5:16

 

Hello, ಪುಟಾಣಿಗಳೇ! Birds ನಿಮಗೆ ತುಂಬಾ ಇಷ್ಟತಾನೇ. ಹೇಳಿ, ನೀವು ಯಾವ ಯಾವ ಪಕ್ಷಿಗಳನ್ನೆಲ್ಲಾ ನೋಡಿದ್ದೀರ, ಹೇಳಿ ನೋಡೋಣ. ನವಿಲು, ಗಿಳಿ, ಹದ್ದು, ಕಾಗೆ, ಕೊಕ್ಕರೆ, ಗುಬ್ಬಚ್ಚಿ, ಪಾರಿವಾಳ, ಬಾತುಕೋಳಿ ಓ..... ಬಿಟ್ರೆ ಹೇಳಿಕೊಂಡೇ ಹೋಗ್ತೀರ ತಾನೇ! ಗಿಳಿ, ಬಾತುಕೋಳಿ ಮತ್ತು ಪಾರಿವಾಳ ಇವೆಲ್ಲಾ ಮನೆಯಲ್ಲಿ ಮುದ್ದಾಗಿ ಬೆಳೆಯುತ್ತವಲ್ಲವೇ? ಅದರೊಂದಿಗೆ ಆಟವಾಡುತ್ತೀರ ಅಲ್ವಾ? ಇಂದು ನಾವು ಎರಡು ಪಕ್ಷಿಗಳ ನಡುವಿನ ಸ್ನೇಹದ ಕಥೆಯನ್ನು ಕೇಳಲಿದ್ದೇವೆ, ರೆಡಿಯಾ?

 

ಕಾಡಿನಲ್ಲಿ, ಬಹಳಷ್ಟು ಮರಗಳು ಅರಳಿ ಚುಂಬಿಸುತ್ತಾ, ನೋಡಲು ಸುಂದರವಾದ ಹಸಿರು ಬಣ್ಣದ್ದಾಗಿತ್ತು. ಆ ಕಾಡಿನಲ್ಲಿ ಬಹಳಷ್ಟು ಪಕ್ಷಿಗಳು ವಾಸಿಸುತ್ತಿದ್ದವು. ಪ್ರತಿಯೊಂದು ಪಕ್ಷಿ ಗುಂಪು ಗೂಡು ಕಟ್ಟಿ ಸಂತೋಷವಾಗಿದ್ದವು. ಆ ಕಾಡಿನಲ್ಲಿ ಸುಂದರವಾದ ನೀಲಿ ಬಣ್ಣದ ಹಕ್ಕಿಯೊಂದು ವಾಸಿಸುತ್ತಿತ್ತು. ಅದು ತನ್ನ ಸೌಂದರ್ಯದ ಬಗ್ಗೆ ಯಾವಾಗಲೂ ಹೆಮ್ಮೆಪಡುತ್ತಿತ್ತು. ನನ್ನಂತ ಕಲರ್, ಅಂದ ಯಾರಿಗೂ ಇಲ್ಲ ಎಂದು ನೆನೆಸುತ್ತಿತ್ತು. ಆಗಾಗ್ಗೆ ತನ್ನ ಸೌಂದರ್ಯವನ್ನು ಕನ್ನಡಿಯಲ್ಲಿ ನೋಡಿಕೊಳ್ಳುತ್ತಾ ನಾನು ಎಷ್ಟು ಸುಂದರವಾಗಿದ್ದೇನೆ ಎಂದು ಕೊಚ್ಚಿಕೊಳ್ಳುತ್ತಿತ್ತು. ತನ್ನಂತಹ ಸುಂದರ ಪಕ್ಷಿಗಳೊಂದಿಗೆ ಮಾತ್ರ ಸ್ನೇಹ ಬೆಳೆಸಿ ಸಂತೋಷ ಪಡುತ್ತಿತ್ತು. ಒಂದು ದಿನ ಕಾಗೆ ಬಂದು ನೀನು, ಮತ್ತು ನಾನು ಸ್ನೇಹಿತರಾಗೋಣ ಎಂದು ಹೇಳಿತು. ತಕ್ಷಣವೇ ಆ ಸುಂದರವಾದ ಹಕ್ಕಿಗೆ ಬಂತು ನೋಡು ಕೋಪ, ನಿನ್ನನ್ನು ನೀನು ಎಂದಾದರೂ ಕನ್ನಡಿಯಲ್ಲಿ ನೋಡಿಕೊಂಡಿದ್ದೀಯ? ನಾನು ಎಷ್ಟು ಸುಂದರವಾಗಿದ್ದೇನೆ. ನಿನ್ನೊಂದಿಗೆ ಹೇಗೆ Freind ಆಗಿರಲು ಸಾಧ್ಯ ಎಂದು ಬೈದು ಬಿಟ್ಟಿತು. ಕಾಗೆ ಬಹಳ ಬೇಸರದಿಂದ ಹೊರಟು ಹೋಯಿತು.

 

ಕೆಲವು ದಿನಗಳ ನಂತರ ಆ ಸುಂದರ ಹಕ್ಕಿಯ ದೇಹವು ಬಲಹೀನವಾಯಿತು, ಅದರ ಪುಕ್ಕಗಳೆಲ್ಲಾ ಉದುರಿಹೋಗಿ ನೋಡುವುದಕ್ಕೆ ಅಸಹ್ಯವಾಗಿತ್ತು. ಆದ್ದರಿಂದ ಹಾರಿ ಹೋಗಿ ಆಹಾರವನ್ನು ಹುಡುಕಲಾಗಲಿಲ್ಲ. ತನಗೆ ಸ್ನೇಹಿತರಾಗಿದ್ದ ಪ್ರತಿಯೊಬ್ಬರಿಂದಲೂ ಸಹಾಯ ಕೇಳಿತು. ಒಂದು ಹಕ್ಕಿ ಕೂಡ ಸಹಾಯ ಮಾಡಲಿಲ್ಲ. ಕಾಗೆ ಬಂದು ನೋಡಿತು, ಆ ಸುಂದರವಾದ ಹಕ್ಕಿಯ ಸ್ಥಿತಿಯನ್ನು ಅರ್ಥಮಾಡಿಕೊಂಡಿತು. ಅದಕ್ಕೆ ಬೇಕಾದ ಆಹಾರವನ್ನು ಹುಡುಕಿಕೊಂಡು ಬಂದು ಕೊಟ್ಟಿತು. ಆ ಹಕ್ಕಿ ಯೋಚಿಸಿತು " ನಾನು ಯಾರು ಸುಂದರವಾಗಿಲ್ಲ, ನೀನು ನನ್ನ Freind ಆಗಿರಲು ಅರ್ಹತೆಯಿಲ್ಲ ಎಂದು ತೊರೆದು ಬಿಟ್ಟೆನೋ ಆ ಕಾಗೆಯೇ ನನಗೆ ಎಲ್ಲಾ ಸಹಾಯವನ್ನು ಮಾಡಿ ನನ್ನನ್ನು ಪ್ರೀತಿಸಿತು. ಸೌಂದರ್ಯ ಮುಖ್ಯವಲ್ಲ, ಪ್ರೀತಿಯೇ ಶ್ರೇಷ್ಠವಾದದ್ದು” ಎಂಬುದನ್ನು ಹಕ್ಕಿ ಅರ್ಥಮಾಡಿಕೊಂಡಿತು.

 

ಪ್ರೀತಿಯ ಸಹೋದರ, ಸಹೋದರಿ! ಕಥೆಯನ್ನು ಕೇಳುದ್ರಿ ತಾನೇ. ನೀವು ಕೂಡ ಸೌಂದರ್ಯವನ್ನು ಕಂಡು, ಸೌಕರ್ಯವನ್ನು ಕಂಡು Freinds ನ್ನು ಆಯ್ಕೆ ಮಾಡಬಾರದು. ಯಾವುದೇ ತಾರತಮ್ಯ, ವ್ಯತ್ಯಾಸವನ್ನು ನೋಡದೆ ಪ್ರತಿಯೊಬ್ಬರನ್ನು ಪ್ರೀತಿಸಿ, ನಿಮ್ಮ ಮೂಲಕ ಯೇಸಪ್ಪನ ಪ್ರೀತಿಯನ್ನು ನಿಮ್ಮ ಮೂಲಕ ಇತರರು ತಿಳಿದುಕೊಳ್ಳಲು ಮಾರ್ಗದರ್ಶಿಯಾಗಿರಿ. Ok, ಡಬಲ್ ok ನಾ . Very good. Super.

- Mrs. ಜಾಸ್ಮಿನ್ ಪಾಲ್ ಪಾಂಡಿತುರೈ

 

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.

ವಾಟ್ಸಾಪ್.  

ತಮಿಳಿಗಾಗಿ +919444011864  

ಇಂಗ್ಲಿಷ್ ಗಾಗಿ +919444011769

ಹಿಂದಿಗಾಗಿ +91 93858 10496

ತೆಲುಗುಗಾಗಿ +919442493250

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet perabet perabet giriş padişahbet padişahbet giriş meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş jojobet jojobet jojobet jojobet jojobet holiganbet holiganbet grandpashabet betgit radissonbet