Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 28.11.2025
Share:

By Village Missionary Movement

Friday, 28-Nov-2025

ಧೈನಂದಿನ ಧ್ಯಾನ(Kannada) – 28.11.2025

 

ಗರ್ವ ಮತ್ತು ವಿನಾಶ

 

"...ಬೀಳುವಿಕೆಯ ಮುಂಚೆ ಜಂಬದ ಮನಸ್ಸು" - ಜ್ಞಾನೋಕ್ತಿ 16:18

 

ನಮಗೆ ಯಾವಾಗಲು ದೇವರ ಭಯ ಮತ್ತು ಮನತಾಳ್ಮೆಯು ಇರಬೇಕು. ನಾವು ಹೆಮ್ಮೆಯ ಮನೋಭಾವದಿಂದ ಕಾಣಿಸಿಕೊಂಡರೆ, ಅದು ನಮ್ಮನ್ನು ನೇರವಾಗಿ ವಿನಾಶಕ್ಕೆ ಕರೆದೊಯ್ಯುತ್ತದೆ ಎಂಬುದರ ಕುರಿತು ಸತ್ಯವೇದದಿಂದ ಕೆಲವು ಉದಾಹರಣೆಗಳನ್ನು ನೋಡೋಣ. 

 

ಮೊದಲನೆಯದಾಗಿ, ಹಾಗರಳು ನಮಗೆ ತಿಳಿದಿರುವಂತೆ ಅವಳು ಗುಲಾಮಳಾಗಿದ್ದಳು. ಆದರೆ ಅವಳು ಗರ್ಭಿಣಿಯಾದಾಗ, ತನ್ನ ಯಜಮಾನಿಯನ್ನು ಹೀನವಾಗಿ ನೆನೆಸಿದಳು. ಇನ್ನು ಮುಂದೆ ನಾನೇ ಯಜಮಾನಿ ಎಂಬ ಮನೋಭಾವವನ್ನು ಹೊಂದಿದ್ದಳು. ಪರಿಣಾಮವಾಗಿ, ಅಬ್ರಹಾಮನಿಂದ ಮಗುವಿನೊಂದಿಗೆ ಮನೆಯಿಂದ ಹೊರಗೆ ಓಡಿಸಲ್ಪಟ್ಟಳು. ಸೌಕರ್ಯವಾಗಿದ್ದ ಸ್ಥಳದಿಂದ ಅರಣ್ಯಕ್ಕೆ ಓಡಿಸಲ್ಪಟ್ಟಳು.

 

ಎರಡನೆಯದಾಗಿ, ಅರಸನಾದ ಉಜ್ಜೀಯನು ಚಿಕ್ಕ ವಯಸ್ಸಿನಲ್ಲಿ ಅಂದರೆ 16 ನೇ ವಯಸ್ಸಿನಿಂದಲೇ ಆಳ್ವಿಕೆ ಮಾಡುತ್ತಾರೆ. ಅನೇಕ ಯುದ್ಧಗಳಲ್ಲಿ ಗೆದ್ದರು, ಗೋಪುರಗಳನ್ನು ಕಟ್ಟಿದರು ಮತ್ತು ಕೃಷಿಯಲ್ಲಿ ಕ್ರಾಂತಿಯನ್ನುಂಟುಮಾಡಿದರು. ಅವರು ಕರ್ತನನ್ನು ಹುಡುಕಿದ ದಿನಗಳಲ್ಲಿ ದೇವರು ಅವರ ಕಾರ್ಯಗಳನ್ನು ಅಭಿವೃದ್ಧಿಗೆ ತಂದರು (2 ಪೂರ್ವಕಾಲವೃತ್ತಾಂತ 26:5) ಎಂದು ಓದುತ್ತೇವೆ. ಅವರು ಬಲಗೊಂಡಾಗ, ತನಗೆ ಕೇಡು ಉಂಟಾಗುವಷ್ಟು ಮಟ್ಟಿಗೆ ಅವರ ಹೃದಯವು ಹೆಮ್ಮೆಪಟ್ಟು, ತನ್ನ ದೇವರಾದ ಕರ್ತನಿಗೆ ವಿರುದ್ಧವಾಗಿ ಅಪರಾಧ ಮಾಡಿ... ಧೂಪ ಹಾಕಲು ಕರ್ತನ ಆಲಯದೊಳಗೆ ಪ್ರವೇಶಿಸಿದರು. ಅದರಿಂದಾಗಿ ಸಿಕ್ಕ ದಂಡನೆ, ಜೀವನಪರ್ಯಂತ ಒಬ್ಬಂಟಿಯಾಗಿ ಕುಷ್ಠರೋಗಿಯಾಗಿ ವಾಸಿಸಿದರು. ಕರ್ತನ ಆಲಯದಿಂದ ಹೊರಹಾಕಲ್ಪಟ್ಟರು.

 

ಮೂರನೆಯದಾಗಿ, ನೆಬೂಕದ್ನೆಚ್ಚರನು, ಬಹಳ ಶಕ್ತಿಶಾಲಿಯಾಗಿದ್ದರು ಮತ್ತು ಸಾಕಷ್ಟು ವಿಜಯಗಳನ್ನು ಕಂಡರು. ಒಂದು ದಿನ, ಅರಮನೆಯ ಮೇಲೆ ತಿರುಗಾಡುತ್ತಿರುವಾಗ, "ನನ್ನ ಮಹಿಮೆಯು ಪ್ರಸಿದ್ಧಿಗೆ ಬರುವಂತೆ ನನ್ನ ಸಾಮರ್ಥ್ಯ ಬಲದಿಂದ... ನಾನು ಕಟ್ಟಿಸಿಕೊಂಡಿರುವ ಮಹಾ ಪಟ್ಟಣವಾದ ಬಾಬೆಲ್" ಎಂದು ಕೊಚ್ಚಿಕೊಂಡಾಗ, ಅದೇ ಕ್ಷಣದಲ್ಲಿ ಕರ್ತನ ಕೋಪವು ಅವರ ಮೇಲೆ ಬಂತು. ಅವನು ಮನುಷ್ಯರೊಳಗಿಂದ ತಳ್ಳಲ್ಪಟ್ಟು ದನಗಳಂತೆ ಹುಲ್ಲು ಮೇಯುತ್ತಾ ಆಕಾಶದ ಇಬ್ಬನಿಯಿಂದ ನೆನೆಯುತ್ತಾ ಇದ್ದನು ಅವನ ಕೂದಲು ಹದ್ದುಗಳ ಗರಿಯಂತೆಯೂ ಅವನ ಉಗುರು ಹಕ್ಕಿಗಳ ಉಗುರಿನ ಹಾಗೂ ಬೆಳೆದವು. (ದಾನಿಯೇಲ 4:33). ತನ್ನ ಮಹಿಮೆಯನ್ನೆಲ್ಲಾ ಕಳೆದುಕೊಂಡರು.

 

ಪ್ರಿಯರೇ, ನಾವು ನಿಲ್ಲುವುದು ನಿರ್ಮೂಲವಾಗದೆ ಇರುವುದು ಆತನ ಕೃಪೆಯೇ ಎಂಬುದನ್ನು ಅರಿತವರಾಗಿ, "ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ, ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುತ್ತಾನೆ" (ಯಾಕೋಬ 4:6). "ಯೆಹೋವನು ವಂಚನೆಯ ತುಟಿಗಳನ್ನು ಬಡಾಯಿ ನಾಲಿಗೆಯನ್ನು ಕಡಿದು ಬಿಡಲಿ (ಕೀರ್ತನೆ 12:3) ಎಂಬ ವಚನಗಳನ್ನು ಹೃದಯಲ್ಲಿಟ್ಟುಕೊಂಡು, ನಮ್ರತೆಯಿಂದ ನಡೆದುಕೊಳ್ಳೋಣ. ದೇವರ ಆಶೀರ್ವಾದವನ್ನು ಪಡೆದುಕೊಳ್ಳೋಣ. 

- Sis. ಪುಷ್ಪಮ್

 

ಪ್ರಾರ್ಥನಾ ಅಂಶ:

50,000 ಹಳ್ಳಿಗಳಲ್ಲಿ ಸುವಾರ್ತೆ ಸಾರುವ ಯೋಜನೆಯಲ್ಲಿ ನಮ್ಮೊಂದಿಗೆ ಸೇರಿ ಕೆಲಸ ಮಾಡುವ ಸ್ವಯಂಸೇವಕರು ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet perabet perabet giriş padişahbet padişahbet giriş meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş jojobet jojobet betplay jojobet esbet sonbahis tambet grandpashabet betgit mercurecasino