Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 01.12.2025
Share:

By Village Missionary Movement

Monday, 01-Dec-2025

ಧೈನಂದಿನ ಧ್ಯಾನ(Kannada) – 01.12.2025

 

ಪ್ರಲಾಪನೆಗಳು

 

"ಯಾವ ಸಂಬಂಧವಾಗಿಯೂ ಚಿಂತೆಮಾಡದೆ ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆ ವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯಪಡಿಸಿರಿ" - ಫಿಲಿಪ್ಪಿ. 4:6

 

ನನ್ನ ತಂದೆ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿದವರು. ಆದ್ದರಿಂದ ಸುಲಭವಾಗಿ ಯಾವುದರ ಬಗ್ಗೆಯೂ ಚಿಂತಿಸುವುದೂ ಇಲ್ಲ ಪ್ರಲಾಪಿಸುವುದೂ ಇಲ್ಲ. ಆದರೆ ಸಾರಾಯಿ ಕುಡಿದುಬಿಟ್ಟು ಬಂದರೆ ಪ್ರಲಾಪಿಸುತ್ತಲೇ ಇರುತ್ತಿದ್ದರು. ಇಂದಿನ ಕ್ರೈಸ್ತರ ಸ್ಥಿತಿಯನ್ನು ನೋಡುವಾಗ ನನಗೆ ಅದೇ ನೆನಪಾಗುತ್ತಿದೆ. ಯೇಸು ಕ್ರಿಸ್ತನು ಸರ್ವಶಕ್ತನೆಂದು ಅವರಿಗೆ ತಿಳಿದಿದ್ದರೂ, ಇನ್ನೂ ಅನೇಕ ವಿಷಯಗಳ ಕುರಿತು ಪ್ರಲಾಪಿಸುತ್ತಲೇ ಇದ್ದಾರೆ.

 

38 ವರ್ಷಗಳಿಂದ ಅಸ್ವಸ್ಥನಾಗಿದ್ದ ಒಬ್ಬ ವ್ಯಕ್ತಿ ಬೆಥೆಸ್ಥಾ ಕೊಳದ ಬಳಿಯ ಮುಖಮಂಟಪದಲ್ಲಿ ಮಲಗಿದ್ದನು. ಏಕೆಂದರೆ ಆ ಕೊಳಕ್ಕೆ ಒಂದು ವಿಶೇಷತೆ ಇದೆ. ಒಬ್ಬ ದೇವದೂತನು ಕೊಳಕ್ಕೆ ಇಳಿದು ಕಲಕುತ್ತಿದ್ದರು. ಆಗ ಮೊದಲು ಇಳಿಯುವವರು ಎಂಥಾ ರೋಗದಲ್ಲಿದ್ದರೂ ಸ್ವಸ್ಥರಾಗುತ್ತಿದ್ದರು. ಆದ್ದರಿಂದ ಆ ಕೊಳದ ಸುತ್ತಲಿರುವ 5 ಮಂಟಪಗಳಲ್ಲಿ, ಕುರುಡರು, ಕುಂಟರು, ಪಾರ್ಶ್ವವಾಯು ರೋಗಿಗಳು ಮತ್ತು ಅನೇಕ ರೋಗಿಗಳು ಮಲಗಿರುತ್ತಿದ್ದರು. ಯೇಸು ಆ 38 ವರ್ಷಗಳಿಂದ ಅಸ್ವಸ್ಥನಾಗಿದ್ದ ವ್ಯಕ್ತಿಯ ಬಳಿಗೆ ಹೋಗಿ ಸ್ವಸ್ಥನಾಗಬೇಕೆಂದು ಬಯಸುತ್ತೀಯಾ ಎಂದು ಕೇಳುತ್ತಾರೆ. ಅವನು ಹೌದು ಎಂದು ಹೇಳುವುದನ್ನು ಬಿಟ್ಟು ಪ್ರಲಾಪಿಸುತ್ತಾನೆ. ಕೊಳವನ್ನು ಕದಲಿಸಿವಾಗ ನನ್ನನ್ನು ಕರೆದುಕೊಂಡು ಹೋಗಲು ಯಾರೂ ಇಲ್ಲ ಎಂದು ಹೇಳುತ್ತಾನೆ. ಅದೇ ರೀತಿ, ಇಂದು ಅನೇಕ ಜನರು ಸಮಸ್ಯೆಗಳು, ಕಾಯಿಲೆಗಳು ಮತ್ತು ಬಲಹೀನತೆಗಳು ಬಂದಕೂಡಲೇ ದೇವರ ಬಳಿ ಪ್ರಲಾಪಿಸುತ್ತಾರೆ. ನಾವು ಚೆನ್ನಾಗಿದ್ದಾಗ, ಆತನು ಸರ್ವಶಕ್ತನು ಮತ್ತು ಅದ್ಭುತಗಳನ್ನು ಮಾಡುವಾತನು ಎಂದು ಮಾತನಾಡುತ್ತೇವೆ. ಆದರೆ ಕಷ್ಟ, ಸಂಕಟ ಬಂದುಬಿಟ್ಟರೆ ಪ್ರಲಾಪಿಸುತ್ತೇವೆ. ಆದರೆ ಬಾರ್ತಿಮಾಯ ಕುರುಡನನ್ನು ನೋಡಿರಿ, ಯೇಸು ಕ್ರಿಸ್ತನು ನಾನು ನಿನಗೆ ಏನು ಮಾಡಬೇಕೆಂದು ಕೋರುತ್ತೀ ಎಂದು ಕೇಳಲು ಆ ಕುರುಡನು ನನಗೆ ಕಣ್ಣು ಬರುವಂತೆ ಮಾಡಬೇಕು, ಗುರುವೇ, ಅಂದನು. ಯೇಸು ಅವನಿಗೆ ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿ ಅದೆ ಎಂದು ಹೇಳಿದನು. ಕೂಡಲೇ ಅವನಿಗೆ ಕಣ್ಣು ಬಂದವು ಅವನು ಆ ದಾರಿಯಲ್ಲಿ ಆತನ ಹಿಂದೆ ಹೋದನು.

 

ಪ್ರಿಯರೇ! ಪಾಡುಗಳೊಂದಿಗೆ, ದುಃಖದೊಂದಿಗೆ, ರೋಗದಿಂದ ಈ ವರ್ಷ ಪೂರ್ತಿಯಾಗಿ ಪ್ರಲಾಪಿಸುತ್ತಾ ಇದ್ದದ್ದು ಸಾಕು. ಪ್ರಲಾಪಿಸುವುದನ್ನು ಬಿಡಿರಿ. ಇಂದು ಯೇಸು ನಿಮ್ಮ ಹತ್ತಿರ ಬಂದು ನಿನಗೆ ಏನು ಬೇಕು ಎಂದು ಕೇಳುತ್ತಿದ್ದಾರೆ. ಅವರ ಬಳಿ ನಿಮ್ಮ ಸಮಸ್ಯೆಗಳು, ಸಂಕಟಗಳು, ಇತರರು ನಿಮ್ಮನ್ನು ಗೇಲಿ ಪರಿಹಾಸ್ಯ ಮಾಡಿದ್ದು ಇದು ಯಾವುದರ ಕುರಿತೂ ಪ್ರಲಾಪಿಸದೆ, ಬಾರ್ತಿಮಾಯನಂತೆ ಒಂದೇ ಮಾತಿನಲ್ಲಿ ನನಗೆ ಈ ಸಮಸ್ಯೆ ನೀಗಬೇಕು ಎಂದು ಹೇಳಿ ಬಿಡುಗಡೆಯನ್ನು ಹೊಂದಿಕೊಳ್ಳಿರಿ. ಬಿಡುಗಡೆ ಕೊಡುವವರು ನಿಮ್ಮ ಹತ್ತಿರದಲ್ಲಿ ಬಂದು ಸ್ವಸ್ಥನಾಗಲು ಬಯಸುತ್ತೀಯಾ? ಎಂದು ಕೇಳುತ್ತಿದ್ದಾರೆ. ಆದ್ದರಿಂದ ಪ್ರಲಾಪಿಸದೆ ನಿಮ್ಮ ಅಗತ್ಯವನ್ನು ಯೇಸುವಿನ ಬಳಿ ಹೇಳಿ ಬಿಡುಗಡೆಯನ್ನು ಹೊಂದಿಕೊಳ್ಳಿರಿ. 

- Bro. ಡೇವಿಡ್ ಗಣೇಶನ್

 

ಪ್ರಾರ್ಥನಾ ಅಂಶ:

ಈ ತಿಂಗಳ ಸೇವೆಗಳಿಗಾಗಿ ಮತ್ತು ಸೇವಕರ ಸುರಕ್ಷತೆಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking perabet casibom holiganbet galabet casibom perabet perabet giriş padişahbet padişahbet giriş grandpashabet kalitebet kalitebet giris betsmove betsmove giris gonebet gonebet giris betnano betnano giriş jojobet jojobet casinomilyon jojobet palacebet sonbahis tambet grandpashabet betgit mercurecasino matbet