Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 06.01.2026
Share:

By Village Missionary Movement

Tuesday, 06-Jan-2026

ಧೈನಂದಿನ ಧ್ಯಾನ(Kannada) – 06.01.2026

 

ನನ್ನಲ್ಲಿ ನೆಲೆಗೊಂಡಿರಿ 

 

“...ನೀವು ನನ್ನಲ್ಲಿ ನೆಲೆಗೊಂಡಿರದಿದ್ದರೆ ಫಲಕೊಡಲಾರಿರಿ" - ಯೋಹಾನ 15:4

 

ಒಮ್ಮೆ, ನನ್ನ ಮನೆಯ ಹತ್ತಿರದಲ್ಲಿರುವ ತೋಟದಲ್ಲಿ ದ್ರಾಕ್ಷಿ ಗಿಡ ಒಂದು ಬೆಳೆದಿತ್ತು. ಆ ತೋಟದ ಯಜಮಾನನು ಅದರ ಸುತ್ತಲೂ ಚಪ್ಪರ ಹಾಕಿ ಬೆಳೆಸುತ್ತಿದ್ದರು. ಕಳೆಗಳನ್ನು ಕಿತ್ತುಹಾಕಿ, ಗೊಬ್ಬರ ಹಾಕಿ, ನೀರು ಹಾಕಿ ಅದನ್ನು ಬೆಳೆಯುವಂತೆ ಮಾಡಿದನು. ಹಲವು ದಿನಗಳ ನಂತರ, ಅದರಲ್ಲಿ ಹೂವರಳಿ, ಕಾಯಿ ಬಿಟ್ಟು ಫಲಕೊಟ್ಟಿತು. ಒಂದೇ ಗಿಡದಲ್ಲಿ ಗೊಂಚಲು ಗೊಂಚಲು ಹಣ್ಣುಗಳು ಸಿಕ್ಕವು. ಅದನ್ನು ನೋಡುವಾಗಲೇ, ನನಗೆ ಈ ವಚನಗಳು ನೆನಪಿಗೆ ಬಂದವು. ಕೊಂಬೆಯು ಬಳ್ಳಿಯಲ್ಲಿ ನೆಲೆಗೊಂಡಿರದಿದ್ದರೆ ಹೇಗೆ ತನ್ನಷ್ಟಕ್ಕೆ ತಾನೇ ಫಲಕೊಡಲಾರದೋ ಹಾಗೆಯೇ ನೀವು ನನ್ನಲ್ಲಿ ನೆಲೆಗೊಂಡಿರದಿದ್ದರೆ ಫಲಕೊಡಲಾರಿರಿ ಎಂದು ಸತ್ಯವೇದವು ಹೇಳುತ್ತಿದೆ. ಹೌದು, ದ್ರಾಕ್ಷಿ ಗಿಡವನ್ನು ಫಲಕೊಡಬೇಕು ಎಂಬುದಕ್ಕಾಗಿ ನಾವು ಇಟ್ಟುಕೊಂಡಿದ್ದೇವೆ. ಅದೇ ರೀತಿ ದೇವರು ನಮ್ಮಲ್ಲಿ ಪ್ರತಿಯೊಬ್ಬರ ಮೇಲೂ ಒಂದು ಯೋಜನೆಯನ್ನು ಇಟ್ಟಿದ್ದಾರೆ. ಅದಕ್ಕೆ ಅನುಗುಣವಾದ ಫಲಕೊಡಲು ಬಯಸಿದರೆ, ನಾವು ಆತನಲ್ಲಿ ನೆಲೆಗೊಂಡಿರಬೇಕು. ನಾವು ಆತನಲ್ಲಿ ನೆಲೆಗೊಂಡಿರದಿದ್ದರೆ, ನಾವು ಏನನ್ನೂ ಮಾಡಲು ಸಾಧ್ಯವಿಲ್ಲ. ಪ್ರತಿದಿನವೂ ನಾವು ನಡೆಯಬೇಕಾದ ವಿಷಯಗಳನ್ನು ಸತ್ಯವೇದದ ಮೂಲಕ ತಿಳಿದುಕೊಂಡು ಅದರಲ್ಲಿ ನೆಲೆಗೊಂಡಿರುವುದೇ ಕರ್ತನಲ್ಲಿ ನೆಲೆಗೊಳ್ಳುವುದಾಗಿದೆ. ನಾವು ಕರ್ತನಲ್ಲಿಯೂ ಮತ್ತು ಆತನ ವಾಕ್ಯಗಳು ನಮ್ಮ ಜೀವನದಲ್ಲೂ ನೆಲೆಗೊಂಡಿರಬೇಕು. ನಾವು ಆತನ ಮಾತುಗಳಿಗೆ ವಿಧೇಯರಾಗಿ ಅದನ್ನು ಕೈಕೊಂಡು ಜೀವಿಸುವಾಗ ಹೆಚ್ಚಿನ ಫಲಗಳನ್ನು ಕೊಡಲು ಸಾಧ್ಯ. ಏಕೆಂದರೆ ಆತನ ವಾಕ್ಯವು ನಮ್ಮನ್ನು ಶುದ್ಧೀಕರಿಸುತ್ತದೆ. ಅದು ದೇವರಿಗೆ ಇಷ್ಟವಾಗದ ವಿಷಯಗಳನ್ನು ಎತ್ತಿ ತೋರಿಸುತ್ತದೆ, ಅವುಗಳನ್ನು ಬಿಡಲು ನಮಗೆ ಮಾರ್ಗದರ್ಶನ ನೀಡುತ್ತದೆ ಮತ್ತು ಆತನ ಹೃದಯದ ಇಚ್ಛೆಯ ಪ್ರಕಾರ ವರ್ತಿಸಲು ನಮಗೆ ಮಾರ್ಗದರ್ಶನ ನೀಡುತ್ತದೆ. ನಮ್ಮ ಕೈಯಲ್ಲಿರುವ ಸತ್ಯವೇದವೇ ಆತನ ಮಾತು. ನಾವು ದೇವರನ್ನು ಪ್ರೀತಿಸಿ ಆತನ ಸತ್ಯವೇದವನ್ನು ಓದುವಾಗ, ಖಂಡಿತವಾಗಿಯೂ ಆಶೀರ್ವಾದಗಳು ನಮಗೆ ಬರುತ್ತವೆ. ಕರ್ತನ ಸತ್ಯವೇದವು ನಮ್ಮ ಜೀವನವಾಗಿ ಬದಲಾಗಬೇಕು. 

 

ಪ್ರಿಯರೇ, ಕೆಲವೊಮ್ಮೆ ಸತ್ಯವೇದದ ಮಾತುಗಳು ನಮ್ಮನ್ನು ನಮ್ಮ ಸ್ವಾರ್ಥವನ್ನು ಮುರಿಯುವಂತದ್ದಾಗಿದೆ. ನಮ್ಮನ್ನು ಖಂಡಿಸುತ್ತದೆ, ಎಚ್ಚರಿಸುತ್ತದೆ ಮತ್ತು ನಮ್ಮನ್ನು ಶುದ್ಧೀಕರಿಸುತ್ತದೆ. ಶುದ್ಧೀಕರಣವು ಆತನು ನಮ್ಮ ಹತ್ತಿರದಲ್ಲಿದ್ದಾನೆ ಎಂಬುದಕ್ಕೆ ಸಾಕ್ಷಿಯಾಗಿದೆ. ಆದರೆ ಇದೆಲ್ಲವೂ ನಾವು ಫಲ ನೀಡಬೇಕು ಎಂಬುದಕ್ಕಾಗಿಯೇ. ಈ ವರ್ಷದಲ್ಲಿ ದೇವರಿಗೂ ನಮ್ಮ ಕುಟುಂಬಕ್ಕೂ ಸ್ನೇಹಿತರಿಗೂ ಉಪಯುಕ್ತ ಫಲವನ್ನು ನೀಡಲು ಆತನ ವಾಕ್ಯದಲ್ಲಿ ನೆಲೆಗೊಳ್ಳೋಣ. ಕರ್ತನು ನಮ್ಮನ್ನು ಆಶೀರ್ವದಿಸಲಿ, ಆಮೆನ್.

- Mrs. ಲೈಟ್ಟಿ

 

ಪ್ರಾರ್ಥನಾ ಅಂಶ:

ಮಿಷನ್ ಆಕ್ಷನ್ ಸೆಂಟರ್ ಎಲ್ಲಾ ತಾಲೂಕುಗಳಲ್ಲಿ ಕಾರ್ಯನಿರ್ವಹಿಸಲು ಸ್ಥಳ ಸಿಗುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet matbet giriş holiganbet holiganbet güncel holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet grandpashabet holiganbet grandpashabet grandpashabet grandpashabet perabet perabet giriş padişahbet padişahbet giriş grandpashabet grandpashabet grandpashabet casinolevant grandpashabet meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş