Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 13.01.2026
Share:

By Village Missionary Movement

Tuesday, 13-Jan-2026

ಧೈನಂದಿನ ಧ್ಯಾನ(Kannada) – 13.01.2026

 

ಸದಾಕಾಲವೂ ಪ್ರಕಾಶಿಸುತ್ತಾರೆ

 

"ಬುದ್ಧಿವಂತರಾದವರು... ನಕ್ಷತ್ರಗಳ ಹಾಗೆಯೂ ಎಂದೆಂದಿಗೂ ಪ್ರಕಾಶಿಸು ವರು." - ದಾನಿಯೇಲ್ 12:3

 

ಭಾರತ ತನಗೆ ಸೂಕ್ತ ದೇಶವಲ್ಲ. ಅಮೆರಿಕ ಮತ್ತು ಶ್ರೀಮಂತ ವ್ಯಕ್ತಿಯೊಂದಿಗೆ ಮದುವೆಯೇ ನನ್ನ ಜೀವನವನ್ನು ಉತ್ತಮಗೊಳಿಸುತ್ತದೆ ಎಂಬ ಕಲ್ಪನೆಯೊಂದಿಗೆ ಬದುಕಿದ "ಐಡಾ ಸ್ಕಡರ್" ರವರು, ಒಂದು ದಿನ ಭಾರತದ ಜನರಿಗಾಗಿ ಹೊಸ ನಿರ್ಧಾರವೊಂದನ್ನು ತೆಗೆದುಕೊಂಡರು. ಭಾರತೀಯರಿಗೆ ವೈದ್ಯೆಯಾಗುತ್ತೇನೆ ಎಂಬುದೇ ಆ ನಿರ್ಧಾರ! ಇದರ ಮೂಲಕ, ಅವರ ದಯಾಪರ ಸೇವೆಯನ್ನು ಮೆಚ್ಚಿ, ವೆಲ್ಲೂರಿನ ಜನರು ಪ್ರೀತಿಯಿಂದ ಡಾ. ಐಡಾ ಸ್ಕಡರ್ ಅವರನ್ನು "ಐಡಾ ಅತ್ತೆ" ಎಂದು ಕರೆದರು. 1900 ರಲ್ಲಿ ಐಡಾ ಅವರ ತಂದೆಯ ಮರಣದ ನಂತರ, ಅವರು ವೈದ್ಯಕೀಯ ಕೆಲಸದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡರು. ಶೆಲ್ ಆಸ್ಪತ್ರೆಯನ್ನು ಸ್ಥಾಪಿಸಿ ಉಚಿತ ವೈದ್ಯಕೀಯ ಸೇವೆಗಳನ್ನು ಒದಗಿಸಿದರು. ಅವರು ದಾದಿಯರಿಗಾಗಿ ಮೊದಲ ತರಬೇತಿ ಶಾಲೆಯನ್ನು ಪ್ರಾರಂಭಿಸಿದರು. 1918 ರಲ್ಲಿ, ಅವರು "ಮಹಿಳಾ ವೈದ್ಯಕೀಯ ಕಾಲೇಜನ್ನು" ಪ್ರಾರಂಭಿಸಿದರು. 1945 ರಿಂದ, ಪುರುಷರನ್ನು ಸಹ ವೈದ್ಯಕೀಯ ಕಾಲೇಜಿಗೆ ಸೇರಿಸಲಾಯಿತು. 1952 ರಲ್ಲಿ, ಜಗತ್ತಿನ ಐದು ಅತ್ಯುತ್ತಮ ವೈದ್ಯರಲ್ಲಿ ಡಾ. ಐಡಾ ಸೋಫಿಯಾ ಸ್ಕಡರ್ ಅವರನ್ನು ಒಬ್ಬರಾಗಿ ಆಯ್ಕೆ ಮಾಡಲಾಯಿತು. ತಮಿಳುನಾಡಿನಲ್ಲಿ ಹರಡಿದ್ದ ಕಾಲರಾ, ಕುಷ್ಠರೋಗ ಮತ್ತು ಪ್ಲೇಗ್‌ನಿಂದ ಜನರನ್ನು ಕಾಪಾಡಿದರು. ಕೊನೆಯವರೆಗೂ ಮದುವೆಯಾಗದೆ ಜನರ ಹಿತಕ್ಕಾಗಿ ಸೇವೆ ಸಲ್ಲಿಸಿ, 1960 ನೇ ವರ್ಷದಲ್ಲಿ ತನ್ನ 90 ನೇ ವಯಸ್ಸಿನಲ್ಲಿ ತಮ್ಮ ಜೀವನ ಪ್ರಯಾಣವನ್ನು ಕೊನೆಗೊಳಿಸಿದರು, ಆದರೆ ಅವರ ಖ್ಯಾತಿಯು ಶಾಶ್ವತವಾಗಿ ಹೊಳೆಯುತ್ತಲೇ ಇದೆ.

 

ಮೊದಲ ಶತಮಾನದಲ್ಲಿ ಅಪೊಸ್ತಲರ ಕಾಲದಲ್ಲಿ ಬಾರ್ನಬನು ನಕ್ಷತ್ರವಾಗಿದ್ದರು. ಅಪೊಸ್ತಲರ ಕೃತ್ಯಗಳು 4:34-37 ರವರೆಗಿರುವ ವಚನಗಳಲ್ಲಿ ಅಪೊಸ್ತಲರಿಂದ "ಆದರಣೆಯ ಮಗನು" ಎಂದು ಅರ್ಥಗೊಳ್ಳುವ ಬಾರ್ನಬನೆಂದು ಅಡ್ಡ ಹೆಸರು ಹೊಂದಿದ ಯೋಸೇಫನೆಂಬವನು, ತನಗಿದ್ದ ಭೂಮಿಯನ್ನು ಮಾರಿ ಹಣವನ್ನು ತಂದು ಅಪೊಸ್ತಲರ ಪಾದಗಳ ಬಳಿಯಲ್ಲಿ ಇಟ್ಟನು. ಪೌಲನಾಗಿ ಮಾರ್ಪಟ್ಟ ಸೌಲನು ತಾನು ಶಿಷ್ಯರ ಗುಂಪಿನೊಂದಿಗೆ ಸೇರಲು ಆಸೆಪಟ್ಟರು. ಆದರೆ ಅವರನ್ನು ನಂಬದೆ ಅವರನ್ನು ಸೇರಿಸಿಕೊಳ್ಳಲು ಶಿಷ್ಯರು ಹೆದರಿದಾಗ, ಬಾರ್ನಬನು ಸೇರಿಕೊಂಡು, ಪೌಲನನ್ನು ಅಪೊಸ್ತಲರ ಬಳಿಗೆ ಕರೆತಂದವನು ಬಾರ್ನಬನು. ಪೌಲನೊಂದಿಗೆ ಸೇರಿ ಸೇವೆಸಲ್ಲಿಸಿ, ಅವರನ್ನು ಬೆಳೆಸಿದ ಶಿಕ್ಷಕ ಅವರು. ಬಾರ್ನಬನನ್ನು "ದ್ಯೌಸ್ ದೇವರೆಂತಲೂ" ಪೌಲನನ್ನು "ಹೆರ್ಮೆದೇವರೆಂತಲೂ" ಕರೆಯಲಾಯಿತು. ಅಪೊಸ್ತಲರಾದ ಬಾರ್ನಬ ಮತ್ತು ಪೌಲ ಒಟ್ಟಿಗೆ ಸೇರಿ ಸೇವೆ ಸಲ್ಲಿಸಿದ ದಿನಗಳಲ್ಲಿ, ಮೊದಲ ಸ್ಥಾನ ಬಾರ್ನಬನಿಗೇ ಇತ್ತು. ಪೌಲನು ಮಾರ್ಕನನ್ನು ಬೇಡವೆಂದಾಗ, ಬಾರ್ನಬನು ಮಾರ್ಕನನ್ನು ಪೌಲನಿಗೆ ಸೂಕ್ತ ಸೇವಕನನ್ನಾಗಿ ರೂಪಿಸಿಕೊಟ್ಟರು! ಈ ರೀತಿಯಾಗಿ, ಬಾರ್ನಬ, ಡಾ. ಐಡಾ ಸ್ಕಡರ್ ನಿಂತೆ ಬದುಕಿದವರೂ, ಬುದ್ಧಿವಂತರೂ ನಕ್ಷತ್ರಗಳಂತೆ ಸದಾಕಾಲವೂ ಹೊಳೆಯುತ್ತಾರೆ. ಆಮೆನ್.

- Rev.D. ಸೆಲ್ವರಾಜ್

 

ಪ್ರಾರ್ಥನಾ ಅಂಶ:

ಸೇವಾ ಕ್ಷೇತ್ರಗಳಲ್ಲಿ ಮಿಷನರಿ ಮನೆಗಳ ನಿರ್ಮಾಣಕ್ಕಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al deneme bonusu deneme bonusu veren siteler online casino online casino perabet perabet giriş perabet perabet giriş perabet perabet giriş perabet güncel giriş jojobet jojobet giriş jojobet güncel giriş Holiganbet Holiganbet Giriş Holiganbet Güncel Giriş Superbetin Superbetin Giriş Superbetin Güncel Giriş pashagaming pashagaming giriş pashagaming güncel giriş betcio Betcio Giriş betcio güncel giriş atlasbet atlasbet giriş atlasbet güncel giriş Piabet Piabet Giriş Ngsbahis Ngsbahis Giriş İnterbahis İnterbahis Giriş Klasbahis Klasbahis Giriş Coinbar Coinbar Giriş Limanbet Limanbet Giriş İmajbet İmajbet Giriş Restbet Restbet Giriş Matbet Matbet Giriş Jasminbet Jasminbet Giriş Belugabahis Belugabahis Giriş Online casino nz Best payout online casino nz matbet jojobet jojobet giriş jojobet güncel giriş bahsegel bahsegel bahsegel matbet romabet lunabet