By Village Missionary Movement
Saturday, 12-Jun-2021ಧೈನಂದಿನ ಧ್ಯಾನ(Kannada) – 12.06.2021
ಸಾಮಾನ್ಯರೇ ಅಗತ್ಯ
"ದೇವರು ಜ್ಞಾನಿಗಳನ್ನು ನಾಚಿಕೆಪಡಿಸುವದಕ್ಕಾಗಿ ಈ ಲೋಕದ ಬುದ್ಧಿಹೀನರನ್ನು ಆರಿಸಿಕೊಂಡಿದ್ದಾನೆ;...." - 1ಕೊರಿಂಥ 1:27
1850 ಜನವರಿ 6 ನೇ ತಾರೀಕು ಇಂಗ್ಲೆಂಡ್ ಇಬ್ಬನಿ ಬಿರುಗಾಳಿಯಲ್ಲಿ ಸಿಕ್ಕಿಕೊಂಡಿತು. ಈ ಇಬ್ಬನಿ ಬಿರುಗಾಳಿಯಲ್ಲಿ ಸಿಕ್ಕಿಕೊಂಡ ಯುವಕನೊಬ್ಬ ತನ್ನನ್ನು ಕಾಪಾಡಿಕೊಳ್ಳಲು ಹತ್ತಿರದಲ್ಲಿದ್ದ ಆಲಯಕ್ಕೆ ಓಡಿಹೋದನು. ಆಗ ಸಂಜೆಯ ಆರಾಧನೆ ನಡೆಯುತ್ತಿತ್ತು. ಅಲ್ಲಿ ಸೇವಕರು ಇಲ್ಲದಿರುವುದರಿಂದ ಸಭೆಯ ಸದಸ್ಯನಾಗಿದ್ದ ಟೈಲರ್ ಒಬ್ಬರು ಆರಾಧನೆಯನ್ನು ನಡೆಸುತ್ತಿದ್ದರು. ಅವರು ಸಂದೇಶವನ್ನು ಕೊಡಲು ಪ್ರಾರಂಭಿಸಿದರು. ಅವರು ಆ ಸಂದೇಶದಲ್ಲಿ ಮತ್ತೆ ಮತ್ತೆ ಒತ್ತಿ ಹೇಳಿದ ಕಾರ್ಯ, "ನನ್ನನ್ನು ನೋಡಿರಿ, ಆಗ ರಕ್ಷಣೆ ಹೊಂದುತ್ತೀರ" ಎಂಬುದೇ. ಇಬ್ಬನಿ ಬಿರುಗಾಳಿಗೆ ತಪ್ಪಿಸಿಕೊಳ್ಳಲು ಓಡಿಬಂದ ಯುವಕನು ಆ ಸಂದೇಶವನ್ನು ಕೇಳಲು ಇಷ್ಟವಿಲ್ಲದೆ ಬಾಗಿಲಿನ ಹಿಂದೆ ನಿಂತಿದ್ದನು.
ಸಂದೇಶ ಕೊಡುತ್ತಿದ್ದ ಟೈಲರ್ ತಾನಿದ್ದ ಸ್ಥಳದಿಂದಲೇ ಆ ಯುವಕನನ್ನು ನೋಡಿ, "ಯೌವನಸ್ಥನೇ ಯೇಸುವನ್ನು ನೋಡು" ಎಂದು ಹೇಳಿದರು. ಅವರು ವಿದ್ಯಾವಂತರೂ ಅಲ್ಲ, ಸಂದೇಶಕರೂ ಅಲ್ಲ, ಬಹು ಸಾಮಾನ್ಯವಾದ ವ್ಯಕ್ತಿಯೇ. ಆದರೆ ಪರಿಶುದ್ಧ ಆತ್ಮನಿಂದ ತುಂಬಿಸಲ್ಪಟ್ಟು, ಅಸಾಮಾನ್ಯವಾಗಿ ಸಂದೇಶ ಕೊಟ್ಟರು. ಆ ಸಂದೇಶವು ಯುವಕನನ್ನು ಬಹಳವಾಗಿ ಕದಲಿಸಿತು. ಯೇಸುವನ್ನು ನೋಡು ಎಂಬ ಶಬ್ಧ ಅವನ ಹೃದಯದಲ್ಲಿ ಕೇಳಿದ ಕೂಡಲೇ ಮೊದಲು ಯೇಸುವನ್ನು ನೋಡಿದನು. ಪರಿಶುದ್ಧ ಆತ್ಮನಿಂದ ತುಂಬಿಸಲ್ಪಟ್ಟನು. ಆ ಯುವಕನು ಯಾರು ಗೊತ್ತಾ? ಅವರೇ C.H.ಸ್ಪರ್ಜನ್. ಹಿಂದಿನ ಕಾಲದಲ್ಲಿ ಸಂದೇಶ ಕೊಡುವ ಸೇವೆಯಲ್ಲಿ ದೇವರಿಂದ ಬಹು ಬಲವಾಗಿ ಉಪಯೋಗಿಸಲ್ಪಟ್ಟು ಹೆಸರುವಾಸಿಯೊಂದಿಗೆ ಕಾಣಲ್ಪಟ್ಟವರು. ವಿದ್ಯಾರ್ಹತೆ ಇಲ್ಲದ ಒಬ್ಬ ಟೈಲರ್ ಅನ್ನು ದೇವರು ಹೀಗೆ ದೇಶಕ್ಕೆ ಬಹು ದೊಡ್ಡ ಸೇವಕನಾಗಿ ಸ್ಪರ್ಜನ್ ನನ್ನು ಎಬ್ಬಿಸಿದರು. ಅದರಂತೆ ಯೇಸುವೊಂದಿಗೆ ಸೇವೆ ಮಾಡಿದ ಶಿಷ್ಯರಲ್ಲಿ ಅನೇಕರು ವಿದ್ಯಾರ್ಹತೆ ಇಲ್ಲದ ಮೀನುಗಾರರೇ.
ಇದನ್ನು ಓದುತ್ತಿರುವ ಪ್ರಿಯರೇ! ದೇವರು ತನ್ನ ಸೇವೆಯನ್ನು ಮಾಡಲು ಜ್ಞಾನವಂತರು, ಅನುಭವವುಳ್ಳವರನ್ನು ಮಾತ್ರವೇ ಆರಿಸಿಕೊಳ್ಳುವುದಿಲ್ಲ; ಸಾಮಾನ್ಯರನ್ನು ಆರಿಸಿಕೊಳ್ಳುತ್ತಾರೆ. ಹೀಗೆ ಜ್ಞಾನವಿಲ್ಲದ, ಅರ್ಹತೆ ಇಲ್ಲದ, ವಿದ್ಯಾರ್ಹತೆ ಇಲ್ಲದ, ಮತ್ತು ಲೋಕವು ಬುದ್ಧಿಹೀನರೆಂದು ಗುರುತಿಸಿದ ಯೌವನಸ್ಥರನ್ನು, ಮನುಷ್ಯರನ್ನು ದೇವರು ಪ್ರತಿನಿತ್ಯವೂ ಆರಿಸಿಕೊಂಡು ಉಪಯೋಗಿಸುತ್ತಲೇ ಇದ್ದಾರೆ. ಏಕೆಂದರೆ, ಸಾಮಾನ್ಯರಿಂದಲೇ ದೇವರು ಅಸಾಮಾನ್ಯ ಕಾರ್ಯಗಳನ್ನು ಮಾಡಿ ಮುಗಿಸುತ್ತಾರೆ. ದೇವರು ಆರಿಸಿಕೊಳ್ಳುವ ಸಾಮಾನ್ಯ ಜನರು ನೀವು ಕೂಡ ಆಗಿರಬಹುದೇ!
- Mrs. ಶಕ್ತಿ ಶಂಕರ್ ರಾಜ್
ಪ್ರಾರ್ಥನಾ ಅಂಶ:-
ಪ್ರತಿದಿನವೂ ಧ್ಯಾನ ಸಂದೇಶವನ್ನು ಬರೆದು ಕೊಡುತ್ತಿರುವ ದೇವರ ಮಕ್ಕಳನ್ನು ಕರ್ತನು ತಮ್ಮ ಅಭಿಷೇಕದಿಂದ ತುಂಬಿಸಿ ಉಪಯೋಗಿಸುವಂತೆ ಪ್ರಾರ್ಥಿಸೋಣ.
ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.
ತಮಿಳಿಗಾಗಿ +919444011864
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482