By Village Missionary Movement
Thursday, 22-Jan-2026ಧೈನಂದಿನ ಧ್ಯಾನ(Kannada) – 22.01.2026
ನಾವು ಹೇಗಿದ್ದೇವೆ?
"...ಕ್ರಿಸ್ತನ ಮೇಲೆ ನಂಬಿಕೆಯಿಡುವದೂ ಆತನಿಗೋಸ್ಕರ ಬಾಧೆಯನ್ನನುಭವಿಸುವದೂ ನಿಮಗೆ ಅನುಗ್ರಹವಾಗಿ ದೊರೆಯಿತು." - ಫಿಲಿಪ್ಪಿ 1:29
ಚೀನಾದಲ್ಲಿ ಕ್ರೈಸ್ತ ಧರ್ಮವನ್ನು ಕೀಳಾಗಿ ಪರಿಗಣಿಸಲಾಗಿದ್ದ ಸಮಯ ಅದು. ಯೇಸು ಕ್ರಿಸ್ತನನ್ನು ಆರಾಧಿಸುವವರನ್ನು ಓಡಿಸಿ ಕೊಲ್ಲಲ್ಪಟ್ಟರು. ಒಮ್ಮೆ ದೇವರನ್ನು ಆರಾಧಿಸುತ್ತಿದ್ದ ಹತ್ತು ವಿಶ್ವಾಸಿಗಳನ್ನು ಹಿಡಿಯಲಾಯಿತು. ಅವರನ್ನು ಹಿಮಾವೃತ ನದಿಯಲ್ಲಿ ನಿಲ್ಲಿಸಲ್ಪಟ್ಟದ್ದರಿಂದ, ಚಳಿಯಿಂದ ನಡುಗುತ್ತಾ, ಅವರ ಹಲ್ಲುಗಳು ಗಡಗಡ ಎಂದು ಹೊಡೆದುಕೊಳ್ಳುತ್ತಿದ್ದವು. ಸೈನಿಕರು ನದಿಯ ದಡದಲ್ಲಿ ನಿಂತುಕೊಂಡು, "ಬನ್ನಿ, ನಿಮಗೆ ಕಂಬಳಿ ಮತ್ತು ಬೆಚ್ಚಗಿನ ಆಹಾರವನ್ನು ನೀಡುತ್ತೇವೆ, ಕೆಲಸದಲ್ಲೂ ನಿಮಗೆ ಉನ್ನತಿ ದೊರೆಯುತ್ತದೆ" ಎಂದು ಆಸೆ ತೋರಿದರು.
ಅವರು ಚಳಿಯಲ್ಲಿ ಹೆಪ್ಪುಗಟ್ಟಲು ಪ್ರಾರಂಭಿಸಿದರೂ, ಹಾಡುಗಳನ್ನು ಹಾಡುತ್ತಲೇ ಇದ್ದರು. ಒಂದು ಗಂಟೆಯ ನಂತರ, ಚಳಿಯನ್ನು ಸಹಿಸಲಾಗದ ಒಬ್ಬ ವಿಶ್ವಾಸಿ ನದಿಯಿಂದ ಹೊರಬಂದರು. ಅವರನ್ನು ತಕ್ಷಣ ಕಂಬಳಿಯಲ್ಲಿ ಸುತ್ತಿ ಬಿಸಿ ಊಟ ಮಾಡಲು ಕರೆದೊಯ್ಯಲಾಯಿತು. ಉಳಿದ ಒಂಭತ್ತು ವಿಶ್ವಾಸಿಗಳನ್ನು ನೋಡಿದಾಗ ಒಬ್ಬ ಸೈನಿಕನು ಅಳಲು ಪ್ರಾರಂಭಿಸಿದರು. ನಿಮ್ಮ ನಂಬಿಕೆ ಇಷ್ಟು ಪ್ರಬಲವಾಗಿದೆ ಎಂದರೆ, ನಿಮ್ಮ ದೇವರು ನಿಜವಾಗಿಯೂ ಜೀವಂತವಾಗಿದ್ದಾರೆ ಎಂದು ಹೇಳಿದ ಆ ಸೈನಿಕ, "ಇಂದು ನಾನು ಸಹ ಕ್ರೈಸ್ತನಾಗುತ್ತೇನೆ ಮತ್ತು ನಿಮ್ಮೊಂದಿಗೆ ಸಾಯಲು ಬರುತ್ತೇನೆ" ಎಂದು ಹೆಪ್ಪುಗಟ್ಟುತ್ತಿದ್ದ ನದಿಯೊಳಗೆ ನಡೆದುಕೊಂಡು ಬಂದು ಹೊರಗೆ ಹೋದವನ ಸ್ಥಳದಲ್ಲಿ ಬಂದು ನಿಂತರು.
ಇಂದು ನಾವು ಹೇಗಿದ್ದೇವೆ? ಪಾಡುಗಳು ಬಂದರೆ ಸಾಕು ನಾವು ಸೋತುಹೋಗುತ್ತೇವೆ. ಸಮಸ್ಯೆ ಅಂದರೇನೆ ಏನು ಜೀವನವೋ ಅನ್ನುತ್ತಾ ಸೋತು ಹೋಗುತ್ತೇವೆ. ಮಾರ್ಪಡದ ಪಾಡುಗಳನ್ನು ಅನುಭವಿಸಿದಾಗಲೇ ಯೇಸುವಿನೊಂದಿಗೆ ಆಳ್ವಿಕೆ ಮಾಡಲು ಸಾಧ್ಯ.
ನನ್ನ ಪ್ರೀತಿಯ ವಿಶ್ವಾಸಿಗಳೇ! ಸತ್ಯವೇದವು ಹೇಳುತ್ತದೆ ಇಬ್ರಿಯ 11:25, 26 ರಲ್ಲಿ ಮೋಶೆಯು ಸ್ವಲ್ಪಕಾಲ ಪಾಪಭೋಗಗಳನ್ನನುಭವಿಸುವದಕ್ಕಿಂತ ದೇವರ ಜನರೊಂದಿಗೆ ಕಷ್ಟವನ್ನನುಭವಿಸುವದೇ ಒಳ್ಳೇದೆಂದು ತನ್ನನ್ನು ಒಪ್ಪಿಸಿಕೊಟ್ಟರು. ಯಾಕಂದರೆ ಬರುವ ಪ್ರತಿಫಲದ ಮೇಲೆ ಕಣ್ಣಿಟ್ಟಿದ್ದರು. ಈ ಭೂಲೋಕದ ಜೀವನವು ತಾತ್ಕಾಲಿಕ. ನಮಗೆ ಒಂದು ಜೀವನವಿದೆ. ಅದು ದೇವರೊಂದಿಗೆ, ದೇವರ ರಾಜ್ಯದಲ್ಲಿದೆ. ಅದನ್ನು ಪಡೆದುಕೊಳ್ಳಲು "ನಾವು ಕ್ರಿಸ್ತನ ನಿಮಿತ್ತ ಪಾಡುಗಳನ್ನು ಅನುಭವಿಸಲು ಮತ್ತು ಜೀವವನ್ನು ಕೊಡಲು ಸಿದ್ಧರಾಗಿರಬೇಕು." ಕರ್ತನು ನಮ್ಮನ್ನು ಆಶೀರ್ವದಿಸಲಿ!
- Rev.S.A. ಇಮ್ಮಾನುವೇಲ್
ಪ್ರಾರ್ಥನಾ ಅಂಶ:
ಒಡಿಶಾದಲ್ಲಿ ಸ್ಥಳೀಯ ಸೇವಕರು ಎದ್ದೇಳುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482