Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 29.01.2026
Share:

By Village Missionary Movement

Thursday, 29-Jan-2026

ಧೈನಂದಿನ ಧ್ಯಾನ(Kannada) – 29.01.2026

 

ಪ್ರಾರ್ಥನೆಗೆ ಉತ್ತರ 

 

"...ಆದರೆ ನಾನು ಪ್ರಾರ್ಥನೆಯಲ್ಲಿಯೇ ಇದ್ದೇನೆ." - ಕೀರ್ತನೆ 109:4

 

ನನಗೆ ತಿಳಿದಿರುವ ಒಬ್ಬ ಅಣ್ಣನಿಗೆ ಹೃದಯದಲ್ಲಿ ಸಮಸ್ಯೆ, ಅದರಿಂದಾಗಿ ರಕ್ತ ವಾಂತಿ ಮಾಡುತ್ತಿರುತ್ತಾರೆ. ಆ ಅಣ್ಣನನ್ನು ನಾನು, ಯೇಸಪ್ಪನ ಬಳಿ ಗುಣಪಡಿಸುವಂತೆ ಕೇಳಿ, ಆಗ ಸರಿಹೋಗುತ್ತದೆ ಎಂದು ಹೇಳಿದೆ. ಆ ಅಣ್ಣ ಎಲ್ಲಾ ದೇವರುಗಳು ನನ್ನನ್ನು ಕೈಬಿಟ್ಟವು, ನಿನ್ನ ಯೇಸು ನನಗೆ ಗುಣಪಡಿಸುತ್ತಾರಾ ಎಂದು ಹೇಳಿದರು. ನಾನು ಪ್ರತಿದಿನ ಮಧ್ಯರಾತ್ರಿಯಲ್ಲಿ ಆ ಅಣ್ಣನಿಗಾಗಿ ಪ್ರಾರ್ಥಿಸಲು ಪ್ರಾರಂಭಿಸಿದೆ. ಒಂದು ದಿನ ನಾನು ಅವರನ್ನು ಫೋನ್‌ನಲ್ಲಿ ಸಂಪರ್ಕಿಸಿದಾಗ, ಅವರು ಸ್ವಲ್ಪ ಹತಾಶೆಯಿಂದ ನೀನು ಯಾರೋ ನನಗೆ ಗೊತ್ತಿಲ್ಲ ಎಂದು ಹೇಳಿದರು. ಯೇಸು ನಿಮ್ಮನ್ನು ಗುಣಪಡಿಸುತ್ತಾರೆ ಎಂದು ನಾನು ಅವರಿಗೆ ಮತ್ತೆ ಹೇಳಿದೆ. ಎಲ್ಲರೂ ನನ್ನನ್ನು ಬಿಟ್ಟು ಹೋದರು. ಗುರುವಾರ ನನಗೆ ಆಪರೇಷನ್ ಇದೆ, ಮತ್ತು ವೈದ್ಯರು ಈಗಾಗಲೇ ನನಗೆ ಬದುಕುವುದು ಕಷ್ಟ ಎಂದು ಹೇಳಿದ್ದಾರೆ. ಈ ಆಪರೇಷನ್ ಇಲ್ಲದೆ ನಾನು ಗುಣಮುಖನಾದರೆ, ನಾನು ನಿನ್ನ ಯೇಸುವನ್ನು ಸ್ವೀಕರಿಸುತ್ತೇನೆ ಎಂದು ಹೇಳಿಬಿಟ್ಟರು. ನಾನು ಅವರಿಗಾಗಿ ಮತ್ತೆ ಪ್ರಾರ್ಥಿಸಿದಾಗ, ಆ ಅಣ್ಣ ಸ್ವಸ್ಥವಾದ ಹಾಗೆ ಒಂದು ದರ್ಶನ ದೊರೆಯಿತು. ಮರುದಿನ ನಾನು ಅವರನ್ನು ಫೋನ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದೆ, ಆದರೆ ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಮೂರು ವಾರಗಳ ನಂತರ ಆ ಅಣ್ಣ ನಮ್ಮ ಮನೆಗೆ ಬಂದು ನಮ್ಮ ಬಳಿ, ನನಗೆ ಈಗ ರಕ್ತ ವಾಂತಿ ಆಗುತ್ತಿಲ್ಲ. ಆಪರೇಷನ್ ಇಲ್ಲದೆ ನಾನು ಚೆನ್ನಾಗಿದ್ದೇನೆ, ಮತ್ತು ನಾನು ನಿನ್ನ ಯೇಸಪ್ಪನನ್ನು ಸ್ವೀಕರಿಸಿದ್ದೇನೆ ಎಂದು ಹೇಳಿದರು. ನಾನು ಕಣ್ಣೀರಿನೊಂದಿಗೆ ಯೇಸಪ್ಪನಿಗೆ ಕೃತಜ್ಞತೆ ಸಲ್ಲಿಸಿದೆ.

 

ಸತ್ಯವೇದದಲ್ಲಿಯೂ ಸಹ, ನಾವು ಹನ್ನಳನ್ನು ನೋಡುವಾಗ, ಅವಳು ಪ್ರತಿ ವರ್ಷ ಆಲಯಕ್ಕೆ ಹೋಗಿ ತನ್ನ ಕೊರತೆ ಬದಲಾಗಬೇಕೆಂದು ಪ್ರಾರ್ಥಿಸುತ್ತಾ ಇದ್ದಳು. ಅವಳು ಒಬ್ಬಂಟಿಯಾಗಿ ಆಲಯಕ್ಕೆ ಹೋಗಿ ಮನನೊಂದು ಬಹಳವಾಗಿ ಅಳುತ್ತಾ, “ಸೈನ್ಯಗಳ ಕರ್ತನೇ, ನೀನು ನಿಶ್ಚಯವಾಗಿ ನಿನ್ನ ದಾಸಿಯ ದೀನತೆಯನ್ನು ನೋಡಿ, ನಿನ್ನ ದಾಸಿಯನ್ನು ಮರೆ ಯದೆ, ನನ್ನನ್ನು ನೆನಸಿ, ನಿನ್ನ ದಾಸಿಗೆ ಗಂಡು ಮಗು ವನ್ನು ಕೊಟ್ಟರೆ ಅವನು ಬದುಕುವ ಎಲ್ಲಾ ದಿವಸಗಳಲ್ಲಿ ಅವನನ್ನು ಕರ್ತನಿಗೆ ಒಪ್ಪಿಸಿಕೊಡುವೆನು. ಅವನ ತಲೆಯ ಮೇಲೆ ಕ್ಷೌರ ಕತ್ತಿ ಬೀಳುವದಿಲ್ಲ ಎಂದು ಹರಕೆ ಮಾಡಿ ಪ್ರಾರ್ಥಿಸಿದಳು, ಅವಳ ಕಣ್ಣೀರಿನ ಪ್ರಾರ್ಥನೆಗೆ ಉತ್ತರ ದೊರೆಯಿತು.

 

ಕ್ರಿಸ್ತನಲ್ಲಿ ಪ್ರಿಯರೇ, ಇಂದು ದೇವರು ನಿಮಗೂ ಅವರಿಗೂ ಮಧ್ಯೆ ಒಂದು ಪ್ರತ್ಯೇಕವಾದ ಸಮಯ ಇರಬೇಕೆಂದು ಎದುರುನೋಡುತ್ತಿದ್ದಾರೆ. ನಿಮ್ಮ ಸಮಸ್ಯೆ ಏನೇ ಆಗಿರಲಿ, ಅದನ್ನು ಮನುಷ್ಯರ ಬಳಿ ಹೇಳದೇ, ಆತನ ಬಳಿ ಹೋಗಿ ಹೇಳುವಾಗ, ಅಂದರೆ ಪ್ರಾರ್ಥಿಸುವಾಗ ಅದಕ್ಕೆ ತಕ್ಕ ಉತ್ತರ ಸಿಗುತ್ತದೆ. ಆತನು ನಿಮ್ಮ ಭವಿಷ್ಯಕ್ಕಾಗಿ ಯೋಜನೆಗಳನ್ನು ಬಹಿರಂಗಪಡಿಸುತ್ತಾರೆ. ನೀವು ದೇವರ ಬಳಿ ಮಾತನಾಡಲು ಪ್ರತ್ಯೇಕವಾದ ಪ್ರಾರ್ಥನಾ ಸಮಯ, ಪ್ರಾರ್ಥನಾ ಕೊಠಡಿ ಇದೆಯೇ? ಅದರ ಬಗ್ಗೆ ಯೋಚಿಸಿ! 

S. ಸಿಂಧು

 

ಪ್ರಾರ್ಥನಾ ಅಂಶ:

ಮಾಧ್ಯಮ ಸೇವೆಗಾಗಿ ಅಧ್ಯಯನ ಮಾಡಿದ ಪ್ರತಿಭಾನ್ವಿತ ಯೌವನಸ್ಥರು ಬರುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al deneme bonusu deneme bonusu veren siteler online casino online casino perabet perabet giriş perabet perabet giriş perabet perabet giriş perabet güncel giriş jojobet jojobet giriş jojobet güncel giriş Holiganbet Holiganbet Giriş Holiganbet Güncel Giriş Superbetin Superbetin Giriş Superbetin Güncel Giriş pashagaming pashagaming giriş pashagaming güncel giriş betcio Betcio Giriş betcio güncel giriş atlasbet atlasbet giriş atlasbet güncel giriş Piabet Piabet Giriş Ngsbahis Ngsbahis Giriş İnterbahis İnterbahis Giriş Klasbahis Klasbahis Giriş Coinbar Coinbar Giriş Limanbet Limanbet Giriş İmajbet İmajbet Giriş Restbet Restbet Giriş Matbet Matbet Giriş Jasminbet Jasminbet Giriş Belugabahis Belugabahis Giriş Online casino nz Best payout online casino nz matbet jojobet jojobet giriş jojobet güncel giriş bahsegel bahsegel bahsegel matbet romabet lunabet