Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 02.02.2026
Share:

By Village Missionary Movement

Monday, 02-Feb-2026

ಧೈನಂದಿನ ಧ್ಯಾನ(Kannada) – 02.02.2026

 

ಸೋಲು ಎಂಬುದಿಲ್ಲ

 

"ಆದರೆ ದೇವರು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ನಮಗೆ ಜಯವನ್ನು ಕೊಟ್ಟಿದ್ದಾನೆ; ಆತನಿಗೆ ಸ್ತೋತ್ರ." - 1 ಕೊರಿಂಥ. 15:57

 

ಇಸ್ರಾಯೇಲ್ ಮತ್ತು ಫಿಲಿಷ್ಟಿಯರಿಗೆ ಯುದ್ಧ. ಇಂದೊಂದು ಹೊಸ ರೀತಿಯ ಯುದ್ಧವಾಗಿತ್ತು. ಫಿಲಿಷ್ಟಿಯರು ಇಸ್ರಾಯೇಲ್ ವಿರುದ್ಧ ದಂಡೆತ್ತಿ ಬಂದರು. ಇಸ್ರಾಯೇಲ್ಯರು ಸಹ ಪಾಳೆಯ ಮಾಡಿಕೊಂಡರು. ಆದರೆ ಯಾವುದೇ ಯುದ್ಧ ನಡೆಯಲಿಲ್ಲ. ಫಿಲಿಷ್ಟಿಯರ ಪಾಳೆಯದಿಂದ ಗೊಲ್ಯಾತನೆಂಬ ಒಬ್ಬ ವೀರನು ಬಂದು, ಒಬ್ಬ ಮನುಷ್ಯನು ನನ್ನೊಂದಿಗೆ ಹೋರಾಡಲು ಬಂದು ಗೆದ್ದರೆ, ಇಸ್ರಾಯೇಲ್ ಗೆದ್ದಹಾಗೆಯೂ, ನಾನು ಗೆದ್ದರೆ, ಫಿಲಿಷ್ಟಿಯರು ಗೆದ್ದಹಾಗೆಯೂ ಎಂದು ಹೇಳಿ ಸವಾಲು ಹಾಕಿ ಇಸ್ರಾಯೇಲ್‌ ಸೈನ್ಯವನ್ನು ನಿಂದಿಸಿದನು. ಇಸ್ರಾಯೇಲ್ ನ ಅರಸನಾದ ಸೌಲ ಮತ್ತು ಎಲ್ಲಾ ಇಸ್ರಾಯೇಲ್ ಸೈನ್ಯವು, ಎಲ್ಲಾ ರೀತಿಯ ತರಬೇತಿಯನ್ನು ಪಡೆದಿದ್ದರೂ, ಗೊಲ್ಯಾತನ ಮಾತುಗಳಿಗೆ ಹೆದರುತ್ತಿದ್ದರು, ತಮ್ಮ ಸೋಲನ್ನು ಒಪ್ಪಿಕೊಂಡರು ಮತ್ತು ಮೌನವಾಗಿದ್ದರು. ಆದರೆ ತನ್ನ ತಂದೆಗೆ ವಿಧೇಯನಾಗಿ ತನ್ನ ಸಹೋದರರನ್ನು ನೋಡಲು ಬಂದಿದ್ದ ದಾವೀದನಿಗೆ ಸೋಲನ್ನು ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ. ಅವನು, ನಾನು ಬಂದದ್ದಕ್ಕೆ ಕಾರಣವಿಲ್ಲವೇ ಎಂದು ಹೇಳಿ, ದೇವರು ತನ್ನನ್ನು ಸಿದ್ಧಪಡಿಸಿದ ಮತ್ತು ನಡೆಸುತ್ತಾ ಬಂದ ಮಾರ್ಗವನ್ನು ವಿವರಿಸುತ್ತಾರೆ. ಅವನು ಜೀವವುಳ್ಳ ದೇವರು ಸೈನ್ಯವನ್ನು ನಿಂದಿಸಿದನಲ್ಲಾ ನನ್ನನ್ನು ಸಿಂಹದ ಬಾಯಿಗೂ ಕರಡಿಯ ಕೈಗೂ ತಪ್ಪಿಸಿದ ಕರ್ತನು ಈ ಫಿಲಿಷ್ಟಿಯನ ಕೈಯಿಂದಲೂ ನನ್ನನ್ನು ತಪ್ಪಿಸುತ್ತಾರೆ ಎಂದು ಹೇಳುತ್ತಾ ಅವರು ಮುಂದೆ ಹೋದರು. ಅವರನ್ನು ಹಿಂದಕ್ಕೆ ಎಳೆಯುತ್ತಿದ್ದ ತನ್ನ ಸಹೋದರನ ಮಾತುಗಳನ್ನು ಮತ್ತು ಗೊಲ್ಯಾತನ ಬಲವನ್ನು ಯಾವುದನ್ನೂ ನೋಡದೇ, ಸೈನ್ಯಗಳ ಕರ್ತನ ಹೆಸರಿನಲ್ಲಿ ಹೋಗಿ ಗೆದ್ದರು. ಹೋರಾಟಗಳು ಮತ್ತು ಸಮಸ್ಯೆಗಳನ್ನು ಎದುರಿಸುವಾಗ ನಾವು ಸೋಲುಗಳನ್ನು ಒಪ್ಪಿಕೊಳ್ಳದೆ ಕ್ರಿಸ್ತನೊಂದಿಗೆ ಸೇರಿ ಸತತವಾಗಿ ಪ್ರಯತ್ನಿಸುವಾಗ ಜಯವನ್ನು ಸ್ವತಂತ್ರಿಸಿಕೊಳ್ಳಬಹುದು. ನಮ್ಮಲ್ಲಿರುವ ಶಕ್ತಿ ಮುಖ್ಯವಲ್ಲ, ಆದರೆ ನಾವು ಯಾರನ್ನು ನಂಬುತ್ತೇವೆ ಎಂಬುದು ಮುಖ್ಯ. 

 

ಪ್ರಿಯರೇ, ನೀವು ಸಹ ಯಾವುದೇ ಪರಿಸ್ಥಿತಿಯಲ್ಲಿ ಸೋಲನ್ನು ಸ್ವೀಕರಿಸದೆ, ಸತತವಾಗಿ ಕ್ರಿಸ್ತನೊಂದಿಗೆ ಸೇರಿ ಪ್ರಯತ್ನಿಸಿರಿ. ನನ್ನಿಂದ ಸಾಧ್ಯವಿಲ್ಲ ಎಂದು ಸೋಲನ್ನು ಒಪ್ಪಿಕೊಳ್ಳುವಾಗ, ಭಯ ಮತ್ತು ನಿರುತ್ಸಾಹವು ಬಂದು ನಾವು ಮುಂದೆ ಸಾಗದಂತೆ ಮಾಡಿ ವಿಜಯವನ್ನು ಸ್ವತಂತ್ರಿಸಿಕೊಳ್ಳದಂತೆ ತಡೆಯುತ್ತದೆ. ಅದಕ್ಕಾಗಿಯೇ ಜ್ಞಾನಿಯಾದ ಸೊಲೊಮೋನನು, "ಇಕ್ಕಟ್ಟಿನ ದಿನದಲ್ಲಿ ನೀನು ಬಳಲಿಹೋದರೆ ನಿನ್ನ ಬಲವೂ ಇಕ್ಕಟ್ಟೇ" (ಜ್ಞಾನೋಕ್ತಿ 24:10) ಎಂದು ಹೇಳುತ್ತಾರೆ. ಒಳ್ಳೆಯ ಹೋರಾಟವನ್ನು ಹೋರಾಡಿ, ಓಟವನ್ನು ಮುಗಿಸಿ, ನಂಬಿಕೆಯನ್ನು ಕಾಪಾಡಿಕೊಂಡ ಪೌಲನು, "ನನ್ನನ್ನು ಬಲಪಡಿಸುವಾತನಲ್ಲಿದ್ದು ಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ" (ಫಿಲಿಪ್ಪಿ 4:13) ಎಂದು ಹೇಳುತ್ತಾರೆ. ನೀವೂ ಸಹ ಸತತವಾಗಿ ಪ್ರಯತ್ನಿಸುತ್ತಲೇ ಇರಿ ಮತ್ತು ವಿಜಯವನ್ನು ಸ್ವತಂತ್ರಿಸಿಕೊಳ್ಳಿರಿ. 

- Bro. ಡೇವಿಡ್ ಗಣೇಶನ್

 

ಪ್ರಾರ್ಥನಾ ಅಂಶ:

ಈ ತಿಂಗಳ ಸೇವೆಗಳಿಗಾಗಿ, ಸೇವಕರೊಂದಿಗೆ ದೇವರ ಹಸ್ತವು ಇರುವಂತೆ ಪ್ರಾರ್ಥಿಸಿರಿ

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet perabet perabet giriş padişahbet padişahbet giriş meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş jojobet jojobet betplay jojobet esbet sonbahis tambet grandpashabet betgit mercurecasino