By Village Missionary Movement
Wednesday, 11-Feb-2026ಧೈನಂದಿನ ಧ್ಯಾನ(Kannada) – 11.02.2026
ಯೇಸುವಿಗಾಗಿ ಬದುಕೋಣ
“ತನ್ನ ಪ್ರಾಣವನ್ನು ಉಳಿಸಿಕೊಳ್ಳಬೇಕೆಂದಿರುವವನು ಅದನ್ನು ಕಳಕೊಳ್ಳುವನು; ಆದರೆ ನನ್ನ ನಿವಿುತ್ತವಾಗಿ ತನ್ನ ಪ್ರಾಣವನ್ನು ಕಳಕೊಂಡವನು ಅದನ್ನು ಉಳಿಸಿಕೊಳ್ಳುವನು." - ಲೂಕ 9:24
ಒಮ್ಮೆ, ಉಗ್ರಗಾಮಿಗಳ ಗುಂಪೊಂದು ಕೆಲವು ಕ್ರೈಸ್ತರನ್ನು ಬಂಧಿಸಿ, ನೀವು ಕ್ರಿಸ್ತನನ್ನು ನಿರಾಕರಿಸಿದರೆ ನಿಮ್ಮನ್ನು ಜೀವಂತವಾಗಿ ಬಿಡುತ್ತೇವೆ. ಇಲ್ಲದಿದ್ದರೆ ನಿಮ್ಮನ್ನು ಕೊಂದುಬಿಡುತ್ತೇವೆ ಎಂದು ಬೆದರಿಸಿದರು. ಅವರೆಲ್ಲರೂ ಕ್ರಿಸ್ತನಿಗಾಗಿ ತಮ್ಮ ಪ್ರಾಣವನ್ನು ನೀಡಲು ಸಿದ್ಧರಾಗಿದ್ದರು. ಉಗ್ರಗಾಮಿಗಳಲ್ಲಿ ಒಬ್ಬನು ಮೊದಲನೆಯವನನ್ನು ನೋಡಿ, ನೀನು ಯೇಸುವನ್ನು ನಿರಾಕರಿಸಿದರೆ, ನಾನು ಈಗಲೇ ನಿನ್ನನ್ನು ಬಿಡಿಸುತ್ತೇನೆ ಎಂದು ಹೇಳಿದನು. ಅದಕ್ಕೆ ಅವರು, ಯೇಸು ಕ್ರಿಸ್ತನು ನಿನ್ನನ್ನೂ ನನ್ನನ್ನೂ ಪ್ರೀತಿಸುತ್ತಿದ್ದಾರೆ ಎಂದು ಉತ್ತರಿಸಿದರು. ತಕ್ಷಣ, ಅವನು ತನ್ನ ಕೈಯಲ್ಲಿದ್ದ ಚಾಕುವಿನಿಂದ ಅವರನ್ನು ಕೊಂದನು. ಈ ರೀತಿಯಾಗಿ, ಅವರ ಪ್ರತಿಯೊಬ್ಬರ ತಲೆಯನ್ನು ಕತ್ತರಿಸಲಾಯಿತು.
ನಿಂತಿರುವ ಕೊನೆಯ ವ್ಯಕ್ತಿಯು ತನ್ನ ಮನಸ್ಸಿನಲ್ಲಿ ಭಯ ಮತ್ತು ಆತಂಕದಿಂದ, ಕರ್ತನನ್ನು ನಿರಾಕರಿಸಿಬಿಡೋಣವಾ ಎಂಬ ಭಾವನೆಯಿಂದ ನಿಂತಿದ್ದರು. ಆ ಸಮಯದಲ್ಲಿ, ಉಗ್ರಗಾಮಿ ಗುಂಪಿನ ನಾಯಕ ಒಂದು ವಿಷಯವನ್ನು ಗಮನಿಸುತ್ತಿದ್ದನು. ಕ್ರಿಸ್ತನಿಗಾಗಿ ಸಾಯುವವರು ಯಾವುದೇ ಸಾವಿನ ಭಯವಿಲ್ಲದೆ ತಮ್ಮನ್ನು ತಾವು ಒಪ್ಪಿಸಿಕೊಡುತ್ತಿದ್ದಾರೆ. ಅವರ ಕುತ್ತಿಗೆಯನ್ನು ಕತ್ತರಿಸುವ ಕ್ಷಣದಲ್ಲಿ, ಅವರ ತಲೆಯ ಮೇಲೆ ಒಂದು ಕಿರೀಟವು ಬರುತ್ತಿರುವುದನ್ನು ಗಮನಿಸಿದನು. ಇದೇನಿದು ಎಂದು ಯೋಚಿಸುತ್ತಿರುವಾಗ, ಸಾವಿಗೆ ಹೆದರುತ್ತಿದ್ದ ಆ ಕ್ರೈಸ್ತನಿಗೆ ಕಿರೀಟವು ಏರುತ್ತಾ ಇಳಿಯುತ್ತಾ ಇತ್ತು. ಅದನ್ನು ನೋಡಿದ ನಾಯಕನಿಗೆ ತುಂಬಾ ಆಶ್ಚರ್ಯವಾಯಿತು! ಅದು ಪರಲೋಕದಿಂದ ಇಳಿದು ಬಂದ ಜೀವ ಕಿರೀಟ ಎಂಬ ಸತ್ಯ ಅವನಿಗೆ ಅರ್ಥವಾಗಿಬಿಟ್ಟಿತು. ಕ್ರಿಸ್ತನೇ ನಿಜವಾದ ದೇವರು ಮತ್ತು ಕ್ರಿಸ್ತನಿಗಾಗಿ ಸಾಯುವುದು ಶ್ರೇಷ್ಠತೆ ಎಂದು ಅವನಿಗೆ ಅರ್ಥವಾಯಿತು. ಅವನು ತಕ್ಷಣ ಅವರ ಬಳಿ ನಾನು ಆ ಯೇಸುವನ್ನು ನನ್ನ ಸ್ವಂತ ರಕ್ಷಕನಾಗಿ ಅಂಗೀಕರಿಸುತ್ತೇನೆ. ನನ್ನನ್ನು ಕೊಲ್ಲಿರಿ ಎಂದು ತನ್ನನ್ನು ಒಪ್ಪಿಸಿಕೊಟ್ಟರು. ಅವರ ಮೇಲೆ ಆ ಕಿರೀಟವನ್ನು ಇಡಲಾಯಿತು, ನಿತ್ಯಜೀವವನ್ನು ಪಡೆದುಕೊಂಡರು. ಅದೇ ಸಮಯದಲ್ಲಿ, ತನ್ನ ಜೀವವನ್ನು ಉಳಿಸಲು ಬಯಸಿದ ಆ ಕ್ರೈಸ್ತನನ್ನೂ ಅವರು ಕೊಂದರು. ಆದರೆ ಅವನು ಇಷ್ಟವಿಲ್ಲದೆ, ಕ್ರಿಸ್ತನ ಮೇಲೆ ಪ್ರೀತಿಯಿಲ್ಲದೆ ಬಲವಂತವಾಗಿ ತನ್ನ ಜೀವವನ್ನು ಕಳೆದುಕೊಂಡನು, ಪರಲೋಕ ರಾಜ್ಯವನ್ನೂ ಕಳೆದುಕೊಂಡನು.
ಹೌದು, ಪ್ರಿಯ ಸಹೋದರ ಸಹೋದರಿಯರೇ, ಬದುಕುವುದು ಒಂದೇ ಬಾರಿ ಅದನ್ನು ಯೇಸುವಿಗಾಗಿ ಬದುಕೋಣ, ಅದುವೇ ನಿಜವಾದ ಜೀವನ. ಕೊನೆಯವರೆಗೂ ಸಹಿಸಿಕೊಳ್ಳುವವನು ಮಾತ್ರವೇ ರಕ್ಷಿಸಲ್ಪಡುವನು. "ಒಬ್ಬ ಮನುಷ್ಯನು ಲೋಕವನ್ನೆಲ್ಲಾ ಸಂಪಾದಿಸಿಕೊಂಡರೂ ಪ್ರಾಣನಷ್ಟಪಟ್ಟರೆ ಅವನಿಗೆ ಪ್ರಯೋಜನವೇನು? (ಮಾರ್ಕ 8:36). ಆದ್ದರಿಂದ, ಈ ವ್ಯರ್ಥ ಲೋಕದಲ್ಲಿ ವ್ಯರ್ಥ ಪ್ರೀತಿ ಮತ್ತು ಲೌಕಿಕ ಕ್ಷುಲ್ಲಕತೆಗಳಿಗಾಗಿ ನಮ್ಮ ಸಮಯವನ್ನು ವ್ಯರ್ಥ ಮಾಡದೇ, ಅದನ್ನು ಯೇಸುವಿಗಾಗಿ ಕಳೆಯೋಣ. ಯೇಸುವಿಗಾಗಿ ಏನು ಬೇಕಾದರೂ ಕಳೆದುಕೊಳ್ಳಬಹುದು, ಆದರೆ ಯಾವುದಕ್ಕಾಗಿಯೂ ಯೇಸುವನ್ನು ಎಂದಿಗೂ ಕಳೆದುಕೊಳ್ಳಬೇಡ ಮಗನೇ! ಮಗಳೇ! ಆಮೆನ್.
- H. ಪ್ರೇಮಲತಾ
ಪ್ರಾರ್ಥನಾ ಅಂಶ:
ನಮ್ಮ ಕ್ಯಾಂಪಸ್‌ನಲ್ಲಿ ಮಿಷನ್ ಶಾಲೆಯನ್ನು ನಿರ್ಮಿಸಲು ಸರ್ಕಾರದ ಅನುಮತಿ ಸಿಗಲು ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482