Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 19.02.2026
Share:

By Village Missionary Movement

Thursday, 19-Feb-2026

ಧೈನಂದಿನ ಧ್ಯಾನ(Kannada) – 19.02.2026

 

ಅತಿ ದೊಡ್ಡ ಪಾಪ ಯಾವುದು?

 

“ನಮ್ಮಲ್ಲಿ ಪಾಪವಿಲ್ಲವೆಂದು ನಾವು ಹೇಳಿದರೆ ನಮ್ಮನ್ನು ನಾವೇ ಮೋಸಪಡಿಸಿಕೊಳ್ಳುತ್ತೇವೆ, ಮತ್ತು ಸತ್ಯವೆಂಬದು ನಮ್ಮಲ್ಲಿಲ್ಲ." - 1 ಯೋಹಾನ 1:8

 

ಇಬ್ಬರು ಪುರುಷರು ಒಂದು ಬೋಧಕರ ಬಳಿಗೆ ಬಂದರು. ಒಬ್ಬ ದುಃಖದಿಂದ ನಾನೊಂದು ದೊಡ್ಡ ಪಾಪ ಮಾಡಿಬಿಟ್ಟೆ, ನಾನು ಮಾಡಿದ ಪಾಪಕ್ಕೆ ಕ್ಷಮಾಪಣೆ ಉಂಟಾ? ಎಂದನು. ಇನ್ನೊಬ್ಬನೋ, ನಾನು ಇವನಷ್ಟೇನೂ ದೊಡ್ಡ ಪಾಪ ಮಾಡಿಲ್ಲ. ನಾನು ಅನೇಕ ಸಣ್ಣ ಸುಳ್ಳುಗಳು ಮತ್ತು ವಂಚನೆಗಳನ್ನು ಮಾಡಿದ್ದೇನೆ. ಇವೆಲ್ಲವೂ ಶಿಕ್ಷೆ ಕೊಡವಷ್ಟು ಮಟ್ಟಿಗೆ ದೊಡ್ಡ ಪಾಪಗಳಾ ಏನು? ಎಂದನು. ಬೋಧಕರು ನಕ್ಕರು. ಮೊದಲನೆಯವನಿಗೆ, ಹೋಗಿ ದೊಡ್ಡ ಬಂಡೆಯನ್ನು ಹೊತ್ತುಕೊಂಡು ಬಾ ಎಂದರು. ಎರಡನೇ ವ್ಯಕ್ತಿಗೆ, ಹೋಗಿ ಚೀಲದ ತುಂಬ ಸಣ್ಣ ಕಲ್ಲುಗಳನ್ನು ಆಯ್ದುಕೊಂಡು ಬಾ ಎಂದರು. ಇಬ್ಬರೂ ಹಾಗೆಯೇ ಮಾಡಿದರು. ಈಗ ಬೋಧಕರು ಹೇಳಿದರು, “ಸರಿ, ನೀವಿಬ್ಬರೂ, ನೀವು ತಂದದ್ದನ್ನು ಯಾವ ಸ್ಥಳದಿಂದ ತೆಗೆದುಕೊಂಡು ಬಂದಿರೋ ಪುನಃ ಅಲ್ಲೇ ಹಾಕಿಬಿಟ್ಟು ಬನ್ನಿ” ಎಂದರು. 

 

ಮೊದಲನೆಯ ವ್ಯಕ್ತಿ ಬಂಡೆಯನ್ನು ತೆಗೆದುಕೊಂಡು ಹೋಗಿ ಅದನ್ನು ತೆಗೆದುಕೊಡು ಬಂದ ಸ್ಥಳದಲ್ಲಿಯೇ ಹಾಕಿಬಿಟ್ಟು ಬಂದನು. ಎರಡನೆಯ ವ್ಯಕ್ತಿ ಹಿಂಜರಿದನು, ನಾನು ಇಷ್ಟೊಂದು ಕಲ್ಲುಗಳನ್ನು ಅವು ಇದ್ದ ಸ್ಥಳದಲ್ಲಿಯೇ ಹೇಗೆ ಹಾಕಲು ಸಾಧ್ಯ?" ಎಂದು ಕೇಳಿದನು. ಬೋಧಕರು ಹೇಳಿದರು, ಅದು ಅಸಾಧ್ಯ ಅಲ್ವಾ, ಅವನು ದೊಡ್ಡ ತಪ್ಪು ಮಾಡಿದ್ದರೂ, ಅಳುತ್ತಾ ಕ್ಷಮೆ ಕೇಳಿ ರಕ್ಷಿಸಲ್ಪಟ್ಟನು. ಆದರೆ ಸಾವಿರ ಸಣ್ಣ ತಪ್ಪುಗಳನ್ನು ಮಾಡಿದ ನಿನಗೆ ಅವು ಪಾಪಗಳೆಂದೂ ಅರಿವಿಲ್ಲ. ನಿನ್ನಿಂದ ಯಾರೆಲ್ಲಾ ಬಾಧಿಸಲ್ಪಟ್ಟರು ಎಂಬುದು ಕೂಡ ನಿನಗೆ ನೆನಪಿರುವುದಿಲ್ಲ. ಅವನಿಗೆ ರಕ್ಷಣೆ ಸುಲಭ. ನಿನಗೆ ರಕ್ಷಣೆ ತುಂಬಾ ಕಷ್ಟ ಎಂದು ಹೇಳಿದರು.

 

ಸತ್ಯವೇದದಲ್ಲಿ, ಸಂಸೋನನು ಹುಟ್ಟುವ ಮೊದಲೇ ದೇವರಿಂದ ಮುಂಸೂಚಿಸಿಸಲ್ಪಟ್ಟವನು, ಭಯಂಕರ ಪರಾಕ್ರಮಶಾಲಿ. 300 ನರಿಗಳನ್ನು ಹಿಡಿದು, ಅವುಗಳ ಬಾಲಗಳನ್ನು ಎರಡಾಗಿ ಕಟ್ಟಿ, ಬೆಂಕಿಯ ಸರಪಣಿಯನ್ನು ಮಾಡಿ ತನ್ನ ಶತ್ರುಗಳ ಬೆಳೆಗಳನ್ನು ನಾಶಮಾಡಿದವನು. ಅವನು ಸಿಂಹದ ಬಾಯಿಯನ್ನು ಎರಡು ಭಾಗಗಳಾಗಿ ಸೀಳಿ, ಒಂದು ದವಡೆಯಿಂದ 1,000 ಜನರನ್ನು ಕೊಂದವನು. ಅವನು ಪವಿತ್ರಾತ್ಮನ ಅಭಿಷೇಕದಿಂದ ತುಂಬಿದ್ದನು. ತಾನು ಯಾರೆಂದು ಮರೆತು, ದೇವರ ಮಾತುಗಳನ್ನು ತಿರಸ್ಕರಿಸುತ್ತಾ, ಪಾಪಕ್ಕೆ ಬಿದ್ದಾಗಲೆಲ್ಲಾ ಅವನು ತನ್ನ ಸ್ವಂತ ಶಕ್ತಿಯನ್ನು ನಂಬಿದನು. ಅಂದು ವಿಪರ್ಯಾಸ! ದೇವರು ತನ್ನನ್ನು ತೊರೆದಿದ್ದಾರೆಂದು ಕೂಡ ಅರಿಯದೇ, ಎಂದಿನಂತೆ ತನಗೆ ಶಕ್ತಿ ಇದೆ ಎಂದು ಭಾವಿಸಿ ಎದ್ದನು. ಅಂತಿಮ ಫಲಿತಾಂಶ ಏನೆಂದು ನಿಮಗೆ ಗೊತ್ತಾ?ಶತ್ರುಗಳು ಅವನ ಕಣ್ಣುಗಳನ್ನು ಕಿತ್ತುಹಾಕಿ ಗೇಲಿ ಮಾಡಿ ನಕ್ಕರು. ಭಯಂಕರ ಪರಾಕ್ರಮಶಾಲಿ ದಯನೀಯವಾಗಿ ಸತ್ತು ಹೋದನು. 

 

ನನಗೆ ಪ್ರಿಯವಾದವರೇ, ನಾನು ಒಂದೂ ದೊಡ್ಡ ಪಾಪ ಮಾಡೋದಿಲ್ಲ. ಸಣ್ಣ ಸಣ್ಣ ತಪ್ಪುಗಳನ್ನು ಮಾಡುವುದು ಪಾಪವಲ್ಲ ಎಂದು ನೀವು ನಿಮ್ಮನ್ನು ಸಮಾಧಾನಪಡಿಸಿಕೊಂಡರೂ, ಸಣ್ಣ ನಿರ್ಲಕ್ಷ್ಯವೂ ಪಾಪಕ್ಕೆ ಕಾರಣವಾಗಬಹುದು. ಪಾಪದ ಸಂಬಳ ಮರಣ ಎಂದು ತಿಳಿದುಕೊಂಡು, ಪಾಪವನ್ನು ಬದಿಗಿಟ್ಟು ಯೇಸುವಿನ ಕಡೆಗೆ ನಮ್ಮ ಓಟವನ್ನು ನಡೆಸೋಣ. ನಿಮ್ಮ ಕಣ್ಣುಗಳು ಕ್ರಿಸ್ತನ ಮೇಲೆ ನೆಲೆಗೊಂಡಿರಲಿ. ನಿತ್ಯ ನ್ಯಾಯಾಧೀಶರಾದ ಯೇಸು ಬರುತ್ತಿದ್ದಾರೆ ಸಂಧಿಸಲು ನೀನು ಸಿದ್ಧವಾ?

- R. ಮಂಜುಳಾ

 

ಪ್ರಾರ್ಥನಾ ಅಂಶ:

Child care child ಯೋಜನೆಯಲ್ಲಿ ಸೇರಿರುವವರನ್ನು ದೇವರು ಆಶೀರ್ವದಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet perabet perabet giriş padişahbet padişahbet giriş meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş jojobet jojobet jojobet jojobet jojobet holiganbet holiganbet holiganbet grandpashabet grandpashabet