By Village Missionary Movement
Thursday, 05-Mar-2026ಧೈನಂದಿನ ಧ್ಯಾನ(Kannada) – 05.03.2026
ನನ್ನನ್ನು ಕಳುಹಿಸು
"ಆಗ, ಯಾವನನ್ನು ಕಳುಹಿಸಲಿ, ಯಾವನು ನಮಗೋಸ್ಕರ ಹೋಗುವನು ಎಂಬ ಕರ್ತನ ನುಡಿಯನ್ನು ಕೇಳಿ, ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು ಅಂದೆನು" - ಯೆಶಾಯ 6:8
1890 ರ ದಶಕದ ಉತ್ತರಾರ್ಧದಲ್ಲಿ, ಸ್ವೀಡಿಷ್ ಮಿಷನರಿ ಎರಿಕ್ ಲುಂಡ್ ಸೇವೆಗಾಗಿ ಸ್ಪೇನ್‌ಗೆ ಹೋಗಲು ದೇವರಿಂದ ಕರೆಯಲ್ಪಟ್ಟದ್ದನ್ನು ಗ್ರಹಿಸಿದಾಗ, ಅವರು ತಕ್ಷಣವೇ ವಿಧೇಯರಾದರು. ಅವರು ಅಲ್ಲಿ ಸ್ವಲ್ಪ ಮಟ್ಟಿಗೆ ಮಾತ್ರ ಯಶಸ್ಸನ್ನು ಕಂಡರೂ, ದೇವರ ಕರೆಯಲ್ಲಿ ದೃಢವಾದ ನಂಬಿಕೆಯೊಂದಿಗೆ ತಮ್ಮ ಮಿಷನರಿ ಕೆಲಸವನ್ನು ಮುಂದುವರೆಸಿದರು. ಒಂದು ದಿನ, ಅವರು ಬ್ರೌಲಿಯೊ ಮ್ಯಾನಿಕನ್ ಎಂಬ ಫಿಲಿಪಿನ್ಸ್ ವ್ಯಕ್ತಿಯನ್ನು ಭೇಟಿಯಾದರು ಮತ್ತು ಅವರೊಂದಿಗೆ ಸುವಾರ್ತೆಯನ್ನು ಹಂಚಿಕೊಂಡರು.
ನಂತರ, ಎರಿಕ್ ಲುಂಡ್ ಮತ್ತು ಮ್ಯಾನಿಕನ್ ಫಿಲಿಪಿನ್ಸ್ ಭಾಷೆಯಲ್ಲಿ ಸತ್ಯವೇದವನ್ನು ಭಾಷಾಂತರಿಸಲು ಇಬ್ಬರು ಒಟ್ಟಾಗಿ ಕೆಲಸ ಮಾಡಿದರು. ಸೇವಾ ಕ್ಷೇತ್ರದಲ್ಲಿ ಎರಿಕ್ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಿದರು ಎಂದು ಹೇಳಲಾಗುವುದಿಲ್ಲ, ಆದರೆ ಕರ್ತನ ಆಜ್ಞೆಯನ್ನು ಪಾಲಿಸಿದ ಎರಿಕ್, ಫಿಲಿಪಿನ್ಸ್ ಜನರಿಗೆ ಸತ್ಯವೇದವನ್ನು ಅವರ ಮಾತೃಭಾಷೆಯಲ್ಲಿ ಅನುವಾದಿಸಿದರು ಮತ್ತು ತನ್ನ ಅತ್ಯುತ್ತಮ ಪಾಲನ್ನು ನೀಡಿದರು. "ನಾನು ಹೊಲಸು ತುಟಿಯವನು" ಎಂದು ಹೇಳಿದ ಯೆಶಾಯನು, ಕರ್ತನ ನಿರೀಕ್ಷೆಗಳನ್ನು ತಿಳಿದಿದ್ದರಿಂದ ಸೇವೆಗೆ ತನ್ನನ್ನು ಅರ್ಪಿಸಿಕೊಂಡರು. ನಾವು ಇನ್ನೂ ಯೆಶಾಯನನ್ನು ಪ್ರಮುಖ ಪ್ರವಾದಿಗಳಲ್ಲಿ ಒಬ್ಬರೆಂದು ಕರೆಯುತ್ತೇವೆ.
ಇಂದು ನಾವು ಓದಿದ ಸತ್ಯವೇದದ ಭಾಗದಲ್ಲಿ, "ಯಾವನನ್ನು ಕಳುಹಿಸಲಿ, ಯಾವನು ನಮಗೋಸ್ಕರ ಹೋಗುವನು" ಎಂದು ಅಂಗಲಾಚುತ್ತಿರುವ ನಮ್ಮ ಕರ್ತನ ಶಬ್ದವನ್ನು ನಾವು ಓದುತ್ತೇವೆ. ತನ್ನ ಒಂದು ಪಾಲನ್ನು ನೀಡುವಂತೆ ಪ್ರತಿಯೊಬ್ಬರ ಬಳಿ ನಮ್ಮ ದೇವರು ನಿರೀಕ್ಷಿಸುತ್ತಿದ್ದಾರೆ. ಆದರೆ ಕರ್ತನು ಯಾರನ್ನೂ ತನ್ನ ಕೆಲಸವನ್ನು ಮಾಡಲು ಒತ್ತಾಯಿಸುವುದಿಲ್ಲ. ಆದರೆ ನಾವು ಯೆಶಾಯನಂತೆ "ಇಗೋ ದಾಸನಿದ್ದೇನೆ, ನನ್ನನ್ನು ಕಳುಹಿಸು ಎಂದು ಹೇಳುತ್ತಾ ಆತನಿಗೆ ನಮ್ಮನ್ನು ಅರ್ಪಿಸಿಕೊಂಡಾಗ ದೊಡ್ಡ ಕಾರ್ಯಗಳನ್ನು ಮಾಡುತ್ತಾರೆ.
ನಾನು ಯೇಸುವನ್ನು ಪೂರ್ಣ ಹೃದಯದಿಂದ ಪ್ರೀತಿಸುತ್ತೇನೆ ಅನ್ನುವುದಾದರೆ, ನಾವು ಪೂರ್ಣ ಸಮಯ ಅಥವಾ ಅರೆಕಾಲಿಕ ಸೇವೆ ಮಾಡುವ ಮೂಲಕ ನಮ್ಮ ಪಾಲನ್ನು ನೀಡಬಹುದು. ಅಥವಾ ನಾವು ನಮ್ಮಿಂದ ಸಾಧ್ಯವಾದಷ್ಟು ಕಾಣಿಕೆಗಳನ್ನು ನೀಡಿ ಸೇವೆಗಳನ್ನು ಬೆಂಬಲಿಸಬಹುದು ಮತ್ತು ಸಹಕರಿಸಬಹುದು. ಕರ್ತನು ನಿಮ್ಮನ್ನು ಮುನ್ನಡೆಸಲಿ.
- P. ಜಾಕೋಬ್ ಶಂಕರ್
ಪ್ರಾರ್ಥನಾ ಅಂಶ:
ದೆಬೋರಾಳ್ ಗಳಿಲ್ಲದ ತಾಲ್ಲೂಕಿನಲ್ಲಿ ದೆಬೋರಾಳ್ ಗಳು ಎದ್ದೇಳುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482