Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 10.03.2026
Share:

By Village Missionary Movement

Tuesday, 10-Mar-2026

ಧೈನಂದಿನ ಧ್ಯಾನ(Kannada) – 10.03.2026

 

ತಮ್ಮ ಪಾಲು ನೀಡುವ ಸೃಷ್ಟಿಗಳು

 

"...ಆತನ ಅಪ್ಪಣೆಯನ್ನು ನೆರವೇರಿಸುವ ಬಿರುಗಾಳಿ... ಯೆಹೋವನನ್ನು ಕೊಂಡಾಡಲಿ" - ಕೀರ್ತನೆ 148:8 - 13

 

ಸೃಷ್ಟಿಸಲ್ಪಟ್ಟ ಎಲ್ಲಾ ಜೀವಿಗಳು ಆತನ ಮಾತನ್ನು ಪಾಲಿಸುತ್ತವೆ ಮತ್ತು ಆತನಿಗೆ ಪಾಲು ನೀಡುತ್ತವೆ. ಆತನು ಸಮುದ್ರವನ್ನು ಕಂಡು ಶಬ್ದ ತತ್ತರಿಸಬೇಡ ನಿಶ್ಯಬ್ದವಾಗಿರು ಎಂದು ಹೇಳಿದ ತಕ್ಷಣ ಅದು ವಿಧೇಯತೆ ತೋರಿ ಶಾಂತವಾಯಿತು. ಕೆಂಪು ಸಮುದ್ರವು ಆತನಿಗೆ ವಿಧೇಯತೆ ತೋರಿತು, ಇಸ್ರಾಯೇಲ್ಯರಿಗೆ ಮಾರ್ಗವನ್ನು ನೀಡಿತು ಮತ್ತು ಅವರು ಕಾನಾನ್‌ಗೆ ಹೋಗಲು ತನ್ನ ಪಾಲು ನೀಡಿತು. ಹೀಗೆ ಸೃಷ್ಟಿಗಳು ಸೃಷ್ಟಿಗೆ ವಿಧೇಯತೆ ತೋರಿ ಮಾಡಿದ್ದನ್ನು ಸತ್ಯವೇದದ ಎಲ್ಲೆಡೆ ನಾವು ನೋಡಬಹುದು. ಒಬ್ಬ ವ್ಯಕ್ತಿಯ ಜೀವನದಲ್ಲಿ ದೇವರು ಅದ್ಬುತ ಮಾಡಲು ಹವಾಮಾನ ಪರಿಸ್ಥಿತಿಗಳು ವಿಧೇಯತೆ ತೋರಿದ ಒಂದು ಘಟನೆಯನ್ನು ನೋಡೋಣ.

 

ಕ್ಯಾನ್ಸರ್ ಔಷಧದ ಸಂಶೋಧನೆಗಾಗಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ Dr.Mark ಎಂಬವರಿಗೆ ಒಂದು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಯಿತು. ಅವರು ಪ್ರಯಾಣಿಸುತ್ತಿದ್ದ ವಿಮಾನವು ತಾಂತ್ರಿಕ ಸಮಸ್ಯೆಯಿಂದಾಗಿ ನೆಲಕ್ಕೆ ಇಳಿಸಲಾಯಿತು. ಮುಂದಿನ ವಿಮಾನವು 10 ಗಂಟೆಗಳ ನಂತರವೇ ಎಂದಕೂಡಲೇ, ಅವರು ಒಂದು ನಿರ್ದಿಷ್ಟ ಸ್ಥಳಕ್ಕೆ ಹೋಗಲು ಬಾಡಿಗೆ ಕಾರನ್ನು ತೆಗೆದುಕೊಂಡರು. ನಂತರ ಅವರು ಭಾರೀ ಹಿಮಪಾತದಿಂದಾಗಿ ತಪ್ಪು ಮಾರ್ಗಕ್ಕೆ ಬಂದದ್ದನ್ನು ಅರಿತುಕೊಂಡರು. ಸುಸ್ತಾಗಿ, ಅಲ್ಲಿ ಒಂದು ಮನೆಯನ್ನು ನೋಡಿದರು. ಅವರು ಅಲ್ಲಿಗೆ ಹೋಗಿ ಕರೆ ಮಾಡಿ ತನಗೆ ತಿಳಿದವರ ಬಳಿ ಸಹಾಯ ಕೇಳೋಣ ಎಂದು ಬಾಗಿಲು ತಟ್ಟಿದರು. ಅಲ್ಲಿ, ಒಬ್ಬ ಯುವತಿಯು ಅವರನ್ನು ಆಹ್ವಾನಿಸಿದಳು. ನಮ್ಮ ಮನೆಯಲ್ಲಿ ಫೋನ್ ಇಲ್ಲ, ಆದ್ದರಿಂದ ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಂಡು ಹೋಗಿ ಎಂದು ಹೇಳಿ ಚಹಾ ಮತ್ತು ಬಿಸ್ಕತ್ತುಗಳನ್ನು ನೀಡಿದಳು. ಅದು ಅವಳ ಪ್ರಾರ್ಥನೆಯ ಸಮಯವಾಗಿದ್ದದರಿಂದ, ನೀವು ಸಹ ನನ್ನೊಟ್ಟಿಗೆ ಸೇರಿ ಪ್ರಾರ್ಥಿಸಲು ಬರಬಹುದಲ್ಲಾ ಎಂದು ಕೇಳಿದಳು. ಅದಕ್ಕೆ, ಅವರು ನನಗೆ ದೇವರ ಮೇಲೆ ನಂಬಿಕೆ ಇಲ್ಲ. ನನ್ನ ಪರಿಶ್ರಮದ ಮೇಲೆಯೇ ನನ್ನ ನಂಬಿಕೆ ಎಂದು ಹೇಳಿದರು. ನಂತರ ಆಕೆ ಮಗುವಿನ ತೊಟ್ಟಿಲಿನ ಬಳಿ ಮಂಡಿಯೂರಿ ತೀವ್ರವಾಗಿ ಪ್ರಾರ್ಥಿಸುತ್ತಿರುವುದನ್ನು ನೋಡಿದ ಡಾ. ಮಾರ್ಕ್ ರವರಿಗೆ ಒಂದು ವಿಷಯ ಅರ್ಥವಾಯಿತು. ಏನೆಂದರೆ ಇವರಿಗೆ ಯಾವುದೋ ಒಂದು ಅವಶ್ಯಕತೆ ಇದೆ ಎಂಬುದು . ಅವರು ಆಕೆಯ ಬಳಿ ಏನು ಪ್ರಾರ್ಥಿಸುತ್ತಿದ್ದೆ ಎಂದು ಕೇಳಿದರು. ನನ್ನ ಪುಟ್ಟ ಮಗನಿಗೆ ಅಪರೂಪದ ರೀತಿಯ ಕ್ಯಾನ್ಸರ್ ಇದೆ ಮತ್ತು ಡಾ. ಮಾರ್ಕ್ ರವರು ಮಾತ್ರವೇ ಅವನನ್ನು ಗುಣಪಡಿಸಲು ಸಾಧ್ಯ. ಆದರೆ ಅವರ ಬಳಿಗೆ ಹೋಗಲು ನನ್ನ ಬಳಿ ಹಣವಿಲ್ಲ, ದೇವರು ನನ್ನ ಪ್ರಾರ್ಥನೆಯನ್ನು ಕೇಳಿ ಖಂಡಿತವಾಗಿಯೂ ಒಂದು ದಿನ ಮಾರ್ಗವನ್ನು ತೆರೆಯುತ್ತಾರೆ ಎಂದು ನಂಬಿಕೆಯಿಂದ ಇದ್ದೇನೆ ಎಂದು ಹೇಳಿದಳು. ಇದನ್ನು ಕೇಳಿದ ಡಾ. ಮಾರ್ಕ್ ಆಶ್ಚರ್ಯಚಕಿತರಾದರು ಮತ್ತು ಅವರ ಕಣ್ಣುಗಳಲ್ಲಿ ಕಣ್ಣೀರು ಸುರಿಯಿತು. ನಾನು ಪಡೆಯಲಿರುವ ಪ್ರಶಸ್ತಿಗಿಂತ ಈ ಮಗುವಿಗೆ ಚಿಕಿತ್ಸೆ ನೀಡುವುದೇ ನನ್ನ ಒಂದು ಸೌಭಾಗ್ಯವೆಂದು ಪರಿಗಣಿಸುತ್ತೇನೆ ಎಂದು ಹೇಳಿದರು. ತಾಯಿಯ ಪ್ರಾರ್ಥನೆಯನ್ನು ಕೇಳಿ, ದೇವರು ಪ್ರಕೃತಿಗೆ ಆಜ್ಞಾಪಿಸಿದರು, ಪ್ರಯಾಣವನ್ನು ನಿಲ್ಲಿಸಿದರು ಮತ್ತು ಡಾ. ಮಾರ್ಕ್ ಅನ್ನು ಕರೆತಂದರು. ಹೌದು, ನಮ್ಮ ದೇವರು ಇಸ್ರಾಯೇಲ್ಯರ ಒಂದು ದೊಡ್ಡ ಗುಂಪಿಗೆ ಮಾತ್ರವಲ್ಲ, ಒಬ್ಬ ಮನುಷ್ಯನಿಗಾಗಿಯೂ ಪೃಕೃತಿ ವಿಧೇಯತೆ ತೋರುವಂತೆ ಮಾಡುತ್ತಾರೆ. ದೇವರು ಅರಣ್ಯದಲ್ಲಿ ಮಾರ್ಗವನ್ನು ಏರ್ಪಡಿಸಿ ಅಡವಿಯಲ್ಲಿ ನದಿಗಳನ್ನು ಹರಿಸುತ್ತಾರೆ ನಂಬಿರಿ. ಈ ರೀತಿಯಾಗಿ, ಪ್ರತಿಯೊಬ್ಬರ ಜೀವನದಲ್ಲೂ ಅದ್ಭುತಗಳನ್ನು ಮಾಡುತ್ತಾರೆ. ಅದೇ ಸಮಯದಲ್ಲಿ, ಪ್ರಕೃತಿಯು ದೇವರ ವಾಕ್ಯವನ್ನು ಪಾಲಿಸುತ್ತದೆ ಮತ್ತು ದೇವರಿಗೆ ತನ್ನ ಪಾಲನ್ನು ನೀಡುತ್ತದೆ, ಆತನ ವಾಕ್ಯಕ್ಕೆ ವಿಧೇಯರಾಗಿ ದೇವರ ಚಿತ್ತವನ್ನು ಪೂರೈಸುವುದರ ಅಗತ್ಯವನ್ನು ಗ್ರಹಿಸೋಣ. ಆಮೆನ್. 

- Mrs. ಫಾತಿಮಾ ಸೆಲ್ವರಾಜ್

 

ಪ್ರಾರ್ಥನಾ ಅಂಶ:

ಒಡಿಶಾದ ಪಾಥ್ಗರ್ ಗಾಂಡಿಯಲ್ಲಿ ನಿರ್ಮಿಸಲಾಗುತ್ತಿರುವ ಆಲಯದ ನಿರ್ಮಾಣಕ್ಕಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet holiganbet sahabet onwin bets10 bets10 giriş bets10 güncel giriş betcio atlasbet casibom meritking perabet casibom holiganbet galabet casibom padişahbet padişahbet giriş grandpashabet jojobet tambet grandpashabet jojobet nesinecasino betbey betgit grandpashabet betpuan cashwin matbet meritking perabet perabet giriş instagram ban service betsilin betsilin giris pashagaming pashagaming giris gorabet gorabet giris kralbet holiganbet grandpashabet grandpashabet giriş holiganbet giriş çarkbet çarkbet giriş