Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 13.03.2026
Share:

By Village Missionary Movement

Friday, 13-Mar-2026

ಧೈನಂದಿನ ಧ್ಯಾನ(Kannada) – 13.03.2026

 

ದೇವರ ಕೆಲಸದಲ್ಲಿ ಪಾಲುಗಾರಿಕೆ

 

"...ಯಾರಾರನ್ನು ಹೃದಯವು ಪ್ರೇರಿಸಿತೋ... ಅವರೆಲ್ಲರೂ... ಯೆಹೋವನಿಗೆ ಕಾಣಿಕೆಗಳನ್ನು ತಂದರು" - ವಿಮೋಚನ. 35:21

 

ಕರ್ತನ ಯೋಜನೆಯು ಭೂಮಿಯ ಮೇಲೆ ನೆರವೇರಬೇಕಾದರೆ, ನಮ್ಮಲ್ಲಿ ಪ್ರತಿಯೊಬ್ಬರ ಪಾಲನ್ನು ನಿರೀಕ್ಷಿಸಲಾಗುತ್ತಿದೆ. ಉದಾಹರಣೆಗೆ, ಮೋಶೆಯು ಗುಡಾರದ ನಿರ್ಮಾಣಕ್ಕಾಗಿ ಒಂದು ಮಾದರಿ ಯೋಜನೆಯನ್ನು ತೋರಿಸಿ, ಜನರ ಸಹಕಾರವನ್ನು ಕೇಳಿದರು. ಜನರು ಸಹ ಮನಃಪೂರ್ವಕವಾಗಿ ಕೊಟ್ಟರು. ಮೋಶೆಯು ಗುಡಾರವನ್ನು ನಿರ್ಮಿಸಲು ಯಾವ ಯಾವ ವಸ್ತುಗಳನ್ನು ಉಪಯೋಗಿಸಬೇಕು ಎಂಬುದನ್ನೂ, ಆ ಕೆಲಸಗಳನ್ನು ಮಾಡಲು ಮತ್ತು ಅವರನ್ನು ನೋಡಿಕೊಳ್ಳಲು ವಿಚಿತ್ರ ಕೆತ್ತನೆ ಕೆಲಸವನ್ನು ಮಾಡುವುದರಲ್ಲಿ ನುರಿತವರಾದ ಬೆಚಲೇಲ ಮತ್ತು ಒಹೊಲೀಯಾಬನನ್ನು ಆರಿಸಿಕೊಳ್ಳುತ್ತಾರೆ. ಮೋಶೆ ಜನರ ಬಳಿ ಕರ್ತನ ಇಷ್ಟವನ್ನು ವಿವರಿಸಿದ ಕೂಡಲೇ ಜನರು ಆತ್ಮದಲ್ಲಿ ಪ್ರೋತ್ಸಾಹಿಸಲ್ಪಟ್ಟರು.

 

ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಚಿನ್ನದ ಆಭರಣಗಳು, ನೀಲಿ ಧೂಮ ರಕ್ತವರ್ಣಗಳ ದಾರ, ವಿವಿಧ ರೀತಿಯ ಚರ್ಮ, ಬೆಳ್ಳಿ, ಕಂಚು ಮತ್ತು ಜಾಲೀಮರವನ್ನು ನೀಡಿದರು. ವಸ್ತುಗಳನ್ನು ನೀಡಲು ಶಕ್ತರಲ್ಲದವರು ನಿರ್ಮಾಣ ಕಾರ್ಯಕ್ಕೆ ಸಹಾಯ ಮಾಡಿ ತಮ್ಮ ಕೌಶಲ್ಯ ಮತ್ತು ಪ್ರತಿಭೆಯನ್ನು ಬಳಸಿದರು. ಅವರು ಉತ್ಸಾಹದಿಂದ ನೀಡಿದರು, ನಾಯಕನಾದ ಮೋಶೆಗಾಗಿ ಅಲ್ಲ, ದೇವರಿಗಾಗಿ. ಮೋಶೆ ಹೀಗೆ ಹೇಳಿದಾಗ, ಅವರು ತಕ್ಷಣವೇ, ಉತ್ಸಾಹದಿಂದ ಮತ್ತು ಸ್ವಇಚ್ಛೆಯಿಂದ ಕಾಣಿಕೆಗಳನ್ನು ಕೊಟ್ಟರು. ಜನರು ಪ್ರತಿದಿನ ಬೆಳಿಗ್ಗೆ ತಮ್ಮ ಮನಃಪೂರ್ವಕವಾದ ಕಾಣಿಕೆಗಳನ್ನು ತಂದು ಒಟ್ಟುಗೂಡಿಸಿದರು. ಆಗ ಕೆಲಸ ಮಾಡುತ್ತಿದ್ದ ಜ್ಞಾನಿಗಳು ಬಂದು ಮೋಶೆಗೆ, “ಕರ್ತನು ನಮಗೆ ಆಜ್ಞಾಪಿಸಿದ ಕೆಲಸಕ್ಕೆ ಜನರು ಸಾಕಷ್ಟು ಹೆಚ್ಚು ತರುತ್ತಿದ್ದಾರೆ” ಎಂದು ಹೇಳಿದರು. ಪುರುಷರು ಮತ್ತು ಮಹಿಳೆಯರು ಇಬ್ಬರೂ ಉತ್ಸಾಹದಿಂದ ಮತ್ತು ಸ್ವಇಚ್ಛೆಯಿಂದ ಕೊಟ್ಟರು. ಆರಂಭ ಕಾಲದಲ್ಲಿ ಸಾಕು ಇನ್ನು ಮುಂದೆ ಕಾಣಿಕೆಗಳು ಬರುವುದು ಬೇಡ ಎಂದು ತಡೆದು ನಿಲ್ಲಿಸುವ ಮಟ್ಟಿಗೆ ಅವರ ಪಾಲು ಇತ್ತು.

 

ನನಗೆ ಪ್ರಿಯವಾದವರೇ, ದೇವರು ತನ್ನ ಚಿತ್ತ ಮತ್ತು ಯೋಜನೆ ಭೂಮಿಯ ಮೇಲೆ ನೆರವೇರಲು ದೂತರುಗಳ ಪಾಲನ್ನು ನಿರೀಕ್ಷಿಸಿರಲಿಲ್ಲ. ಆದರೆ ನಮ್ಮಲ್ಲಿ ಪ್ರತಿಯೊಬ್ಬರೂ ದೇವರು ನಮಗೆ ಉದಾರವಾಗಿ ನೀಡಿರುವ ಎಲ್ಲದರಲ್ಲೂ ಇಷ್ಟವಿಲ್ಲದೆ ಅಲ್ಲ, ಸಂತೋಷದಿಂದ ಧಾರಾಳವಾಗಿ ಕೊಡಬೇಕೆಂದು ಬಯಸುತ್ತಿದ್ದಾರೆ. ಕಡ್ಡಾಯವಾಗಿ ಕೊಡು ಎಂದು ಕತ್ತುಹಿಡಿಯುವವರಲ್ಲ, ಸ್ವ ಇಚ್ಛೆಯನ್ನು ನಮಗೆ ನೀಡಿದ್ದಾರೆ. ಆತನಿಂದ ಲೆಕ್ಕವಿಲ್ಲದಷ್ಟು ಪಡೆದುಕೊಂಡಿರುವ ನಾವು ಆತನಿಗೆ ಕೊಡಲು ಲೆಕ್ಕ ನೋಡುವುದಲ್ಲ ಇಸ್ರಾಯೇಲ್ ಜನರಂತೆ, ನಮ್ಮ ಪಾಲನ್ನು ಉತ್ಸಾಹದಿಂದ ನೀಡಿ ದೇವರ ಯೋಜನೆಯನ್ನು ನೆರವೇರಿಸಲು ನಮ್ಮನ್ನು ಅರ್ಪಿಸಿಕೊಳ್ಳೋಣ.

- Mrs.ಸರೋಜಾ ಮೋಹನ್ ದಾಸ್ 

 

ಪ್ರಾರ್ಥನಾ ಅಂಶ:

ನಮ್ಮ ಸೇವಕರು ಭೇಟಿ ನೀಡುವ ಹಳ್ಳಿಗಳು ಕ್ರಿಸ್ತನ ಪ್ರೀತಿಯಲ್ಲಿ ಬರಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet holiganbet sahabet onwin bets10 bets10 giriş bets10 güncel giriş betcio atlasbet casibom meritking perabet casibom holiganbet galabet casibom padişahbet padişahbet giriş grandpashabet ibizabet tambet grandpashabet jojobet nesinecasino betbey betgit grandpashabet betpuan cashwin matbet meritking perabet perabet giriş instagram ban service betsilin betsilin giris pashagaming pashagaming giris gorabet gorabet giris kralbet holiganbet grandpashabet grandpashabet giriş holiganbet giriş çarkbet çarkbet giriş