Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 26.03.2026
Share:

By Village Missionary Movement

Thursday, 26-Mar-2026

ಧೈನಂದಿನ ಧ್ಯಾನ(Kannada) – 26.03.2026

 

The Best

 

"ನಂಬಿಕೆಯಿಂದಲೇ ಹೇಬೆಲನು ಕಾಯಿನನ ಯಜ್ಞಕ್ಕಿಂತ ಶ್ರೇಷ್ಠವಾದ ಯಜ್ಞವನ್ನು ದೇವರಿಗೆ ಸಮರ್ಪಿಸಿದನು..." - ಇಬ್ರಿಯ 11:4 

 

ಒಂದು ರಾತ್ರಿ ನಾನು ದೇವರ ಹೃದಯದ ಬಗ್ಗೆ ಧ್ಯಾನಿಸುತ್ತಿದ್ದೆ. ಮರುದಿನ ಬೆಳಿಗ್ಗೆ ಪ್ರಾರ್ಥನೆಯ ಸಮಯದಲ್ಲಿ, ದೇವರು ನನ್ನ ಹೃದಯದಲ್ಲಿ ಒಂದು ಪ್ರಶ್ನೆಯನ್ನು ಇಟ್ಟರು. ನಿನ್ನ ಹೃದಯ ಹೇಗಿದೆ? ನಿನ್ನ ಹೃದಯವು ಹೇಬೆಲನ ಹೃದಯದಂತಿದೆಯಾ? ಅಥವಾ ಕಾಯಿನನಂತಿದೆಯಾ? ಎಂದರು. ಸತ್ಯವೇದವನ್ನು ತಿರುಗಿಸಿ ಆ ವಾಕ್ಯವನ್ನು ಓದಿದೆ. ಹೇಬೆಲನು ದೇವರನ್ನು ತುಂಬಾ ಗೌರವಿಸಿ ತನ್ನಲ್ಲಿದ್ದ ಅತ್ಯುತ್ತಮವಾದದ್ದನ್ನು ನೀಡುವ ಉದ್ದೇಶದಿಂದ ಕೊಟ್ಟನು. ಕಾಯಿನನಿಗೆ ಆ ಉದ್ದೇಶವಿರಲಿಲ್ಲ. ಅವನು ದೇವರಿಗೆ ಕೊಟ್ಟ ಗೌರವ ಅಷ್ಟೇ. ಕರ್ತನು ಹೇಬೆಲನನ್ನು ಮತ್ತು ಅವನ ಕಾಣಿಕೆಯನ್ನು ಅಂಗೀಕರಿಸಿದರು ಎಂಬುದನ್ನು ಓದಿ ಧ್ಯಾನಿಸಿದೆ. ಆ ದಿನ ದೇವರಿಗೆ ಕೊಡುವಲ್ಲಿ ನನ್ನ ಹೃದಯ ಹೇಗಿತ್ತು ಎಂದು ನಾನು ಯೋಚಿಸಲು ಪ್ರಾರಂಭಿಸಿದೆ.

 

ನಾನು ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದಾಗ, ಒಬ್ಬರು ಪ್ರತಿ ತಿಂಗಳು ಒಂದು ನಿರ್ದಿಷ್ಟವಾದ ಮೊತ್ತವನ್ನು ನೀಡಿ ಅದನ್ನು ಹೊಸ ನೋಟುಗಳಾಗಿ ಬದಲಾಯಿಸಿಕೊಂಡು ಹೋಗುತ್ತಿದ್ದರು. ಏಕೆ ಎಂದು ಕೇಳಿದಾಗ, ಅವರು, "ನನ್ನ ಸಂಬಳದ ಹಣದಲ್ಲಿ ದೇವರಿಗೆ ಕೊಡುವ ಕಾಣಿಕೆಯೆಲ್ಲಾ ಹೊಸ ನೋಟುಗಳಲ್ಲಿರಬೇಕೆಂಬ ಆಸೆ, ಅದಕ್ಕಾಗಿಯೇ" ಎಂದರು. ಹೊಸ ನೋಟು ಕೊಟ್ಟರೆ ಮಾತ್ರ ನಾನು ಅದನ್ನು ಸ್ವೀಕರಿಸುತ್ತೇನೆ ಎಂದು ದೇವರು ಹೇಳಿಲ್ಲ; ಆದರೆ ದೇವರಿಗೆ ನಾನು ಎಲ್ಲದರಲ್ಲೂ ಅತ್ಯುತ್ತಮವಾದದ್ದನ್ನು ನೀಡಬೇಕು ಎಂಬ ಅವರ ಹೃದಯವನ್ನು ನನ್ನಿಂದ ಗ್ರಹಿಸಲು ಸಾಧ್ಯವಾಯಿತು. ನಾನು ಇನ್ನೂ ಕೆಲವರನ್ನು ನೋಡಿದ್ದೇನೆ. ಅವರು ಶನಿವಾರ ಅಂಗಡಿ ಮುಚ್ಚುವ ಸಮಯದಲ್ಲಿ ನನ್ನ ತಂದೆಯ ದಿನಸಿ ಅಂಗಡಿಗೆ ಬಂದು 50 ಅಥವಾ 100 ರೂಪಾಯಿಗಳನ್ನು ನೀಡಿ ಹತ್ತು ರೂಪಾಯಿಗಳಾಗಿ ಬದಲಾಯಿಸುತ್ತಿದ್ದರು. ನಾನು ಏಕೆ ಎಂದು ಕೇಳಿದಾಗ, ಮನೆಯಲ್ಲಿರುವ ಪ್ರತಿಯೊಬ್ಬರಿಗೂ ನಾಳೆ ಆಲಯದಲ್ಲಿ ಕಾಣಿಕೆ ಹಾಕಲು ಕೊಡಬೇಕು ಎಂದು ಹೇಳುತ್ತಿದ್ದರು. ಅವರಲ್ಲಿ ಮನೆಗೆ ಒಬ್ಬರು ವಿದೇಶದಲ್ಲಿ ಕೆಲಸ ಮಾಡುವವರಾಗಿದ್ದರು. ಅವರು 100 ರೂಪಾಯಿಗಳನ್ನು ಕಾಣಿಕೆಯಾಗಿ ನೀಡಬಹುದು. ಆದರೂ ಏನೋ ಕಾಣಿಕೆ ಕೊಡಬೇಕು ಅನ್ನೋ ಉದ್ದೇಶವೇ ಹೊರತು, ದೇವರಿಗೆ ವಿಶೇಷವಾದದ್ದನ್ನು ನೀಡಬೇಕು ಎಂಬ ಆಲೋಚನೆಯಿರಲಿಲ್ಲ. ಕಾಣಿಕೆಗಳನ್ನು ನೀಡುವ ವಿಷಯದಲ್ಲಿ ನಾನು ಇತರರಿಗೆ ನ್ಯಾಯತೀರ್ಪು ಮಾಡುವ ಹೃದಯದಿಂದ ಇದನ್ನು ಹೇಳುತ್ತಿಲ್ಲ. ಕಾಣಿಕೆಯ ಮೌಲ್ಯವನ್ನು ಆಧರಿಸಿ ಯೇಸು ಕ್ರಿಸ್ತನು ಯಾರನ್ನೂ ಖಂಡಿಸಲಿಲ್ಲ. ಒಮ್ಮೆ ಕಾಣಿಕೆ ಪೆಟ್ಟಿಗೆಯಲ್ಲಿ ಎರಡು ನಾಣ್ಯಗಳನ್ನು ಹಾಕಿದ ಬಡ ವಿಧವೆಯನ್ನು ಯೇಸು ಕ್ರಿಸ್ತನು ಹೊಗಳಿದರು. ಆದ್ದರಿಂದ ನಾವು ಹತ್ತನೇ ಒಂದು ಭಾಗ ಅಥವಾ ನೂರು ನೀಡುತ್ತೇವೆಯೇ ಎಂಬುದು ಮುಖ್ಯವಲ್ಲ. ನಾವು ಯಾವ ಮನೋಭಾವದಿಂದ ನೀಡುತ್ತೇವೆ ಎಂಬುದನ್ನು ಅವನು ನೋಡುತ್ತಾರೆ. ಈ ಇಬ್ಬರು ವ್ಯಕ್ತಿಗಳಿಂದ ನಾನು ದೇವರಿಗೆ ಕೊಡುವ ಪಾಠವನ್ನು ಕಲಿತಿದ್ದೇನೆ. 

 

ಇದನ್ನು ಓದುತ್ತಿರುವ ಪ್ರಿಯ ಓದುಗರೇ! ನಮ್ಮ ಪಾಲಾಗಿ ದೇವರಿಗೆ ಆದಾಯದಿಂದ ಕೊಡಬೇಕಾದದ್ದು ಕಡ್ಡಾಯವಾಗಿದೆ. ಅದನ್ನು ನಾವು ಕಾಯಿನನಂತೆ ಏನೋ ಕೊಡಬೇಕಲ್ಲಾ ಎಂದು ಕೊಡುತ್ತೇವಾ? ಅಥವಾ ನಾವು ದೇವರನ್ನು ಗೌರವಿಸಿ ನಮ್ಮಲ್ಲಿರುವ ಶ್ರೇಷ್ಟವಾದದ್ದನ್ನು ಮತ್ತು ಅತ್ಯುತ್ತಮವಾದದ್ದನ್ನು ದೇವರಿಗೆ ನೀಡುತ್ತೇವಾ ಎಂದು ಯೋಚಿಸಿ ನೋಡೋಣ. ನಿಮ್ಮ ಕೊಡುಗೆ ಅತ್ಯುತ್ತಮವಾಗಿದ್ದರೆ, ಆತನು ನಿಮ್ಮನ್ನು The best ಆಗಿ ಹೆಚ್ಚಿಸಿ ಆಶೀರ್ವದಿಸುತ್ತಾರೆ.

- Bro.ಯೇಸುರಾಜ 

 

ಪ್ರಾರ್ಥನಾ ಅಂಶ:

ನಮ್ಮ ಮಕ್ಕಳ ಶಿಬಿರದ ಮೂಲಕ ಮಕ್ಕಳು ಕಲಿತ ವಿಷಯಗಳು ಮತ್ತು ವಚನಗಳು ಅವರೊಳಗೆ ಕ್ರಿಯೆ ಮಾಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking perabet casibom holiganbet galabet casibom perabet perabet giriş padişahbet padişahbet giriş grandpashabet kalitebet kalitebet giris betsmove betsmove giris gonebet gonebet giris betnano betnano giriş jojobet jojobet casinomilyon jojobet palacebet sonbahis tambet grandpashabet betgit mercurecasino matbet