By Village Missionary Movement
Friday, 27-Mar-2026ಧೈನಂದಿನ ಧ್ಯಾನ(Kannada) – 27.03.2026
ಸಮರ್ಪಣೆಯ ಆಶೀರ್ವಾದ.
“ಮೇಲಿರುವಂಥವುಗಳ ಮೇಲೆ ಮನಸ್ಸಿಡಿರಿ, ಭೂಸಂಬಂಧವಾದವುಗಳ ಮೇಲೆ ಇಡಬೇಡಿರಿ" - ಕೊಲೊಸ್ಸೆ 3:2
Rev. Wesley Duewel ಎಂಬವರು ಈ ರೀತಿಯಾಗಿ ಹೇಳುತ್ತಾರೆ: ನಿನ್ನ ಜೀವನ ಚರಿತ್ರೆ ಪ್ರತಿದಿನ ಪರಲೋಕದಲ್ಲಿ ದಾಖಲಾಗುತ್ತಲೇ ಇದೆ. ನಿನ್ನ ಪ್ರಾರ್ಥನೆಗಳು, ಪ್ರಯತ್ನಗಳು, ಉದ್ದೇಶಗಳು, ಕಾಳಜಿಗಳು ಮತ್ತು ಚಿಂತೆಗಳು ಎಲ್ಲವನ್ನು ದಾಖಲಿಸಲು ದೇವರು ಜಾಗರೂಕರಾಗಿದ್ದಾರೆ. ಕರ್ತನು ನಿನ್ನ ಕ್ರಿಯೆಗಳಿಗಾಗಿ ನಿತ್ಯ ನಿತ್ಯವಾಗಿ ಫಲನೀಡಲು ಯೋಜನೆ ಹಾಕಿರುವುದರಿಂದ ನಿನ್ನ ಜೀವನ ಚರಿತ್ರೆ ಅಷ್ಟೊಂದು ಮುಖ್ಯತ್ವವನ್ನು ಹೊಂದಿದೆ. ದೇವರು ತುಂಬಾ ಕಟ್ಟುನಿಟ್ಟಾಗಿರುತ್ತಾರೆ, ಪ್ರತಿಫಲಗಳು ನಿಮ್ಮ ಜೀವನದ ದೈನಂದಿನ ಘಟನೆಗಳನ್ನು ಆಧರಿಸಿರುತ್ತವೆ. ದೇವರ ರಾಜ್ಯಕ್ಕಾಗಿ ನೀನು ಏನು ಮಾಡಿದ್ದೀಯ? ಇತರರಿಗೆ ಪ್ರಯೋಜನವಾಗುವಂತೆ ನಿನಗಿರುವವುಗಳನ್ನು ಕರ್ತನಿಗಾಗಿ ಹೇಗೆ ಉಪಯೋಗಿಸುತ್ತಿದ್ದೀಯ? ಎಂದು ಕೇಳುತ್ತಾರೆ.
ಪ್ರಿಯರೇ! ಈ ಪರಿಸ್ಥಿತಿಯಲ್ಲಿ, ದೇವರು ನಮಗೆ ನೀಡಿರುವ ಎಷ್ಟು ಆಶೀರ್ವಾದಗಳನ್ನು ನಾವು ದೇವರಿಗಾಗಿ ಮೀಸಲಿಡುತ್ತೇವೆ? ದೇವರು ನಮಗೆ ನೀಡಿರುವ ಪ್ರತಿಭೆ ಮತ್ತು ಸಂಪತ್ತನ್ನು ಯೋಜಿತ ರೀತಿಯಲ್ಲಿ ಬಳಸುವುದರಿಂದ ಮಾತ್ರ ನಾವು ನಮ್ಮ ಸಮಯವನ್ನು ಸದುಪಯೋಗಪಡಿಸಿಕೊಳ್ಳುತ್ತೇವೆ. ಸಂತೋಷಕ್ಕೆ ಸೈತಾನನು ಕೊಟ್ಟಿರುವ ಮತ್ತೊಂದು ಹೆಸರು ಮನರಂಜನೆ ಎಂದು ರಾವೆನ್‌ಶಿಲ್ ಎಂಬ ಭಕ್ತನು ಹೇಳುತ್ತಾರೆ. ಆದ್ದರಿಂದ, ದೇವರಿಗೆ ಪ್ರಯೋಜನವಿಲ್ಲದ ಮನರಂಜಕರಾಗಿದ್ದು ಸಂತೋಷವನ್ನು ಹುಡುಕಬಾರದು. ದೇವರು ಕೊಟ್ಟಿರುವ ಜ್ಞಾನ ಎಂಬ ಪ್ರತಿಭೆಯನ್ನು ಸೊಲೊಮೋನನು ಜ್ಞಾನೋಕ್ತಿಗಳು, ಪ್ರಸಂಗಿ ಮತ್ತು ಪರಮಗೀತೆಯಲ್ಲಿ ಉಪಯೋಗಿಸಿದರು. ದೊರ್ಕಳು ಬಡ ವಿಧವೆಯರಿಗಾಗಿ ತನ್ನ ಹೊಲಿಗೆ ಕೌಶಲ್ಯವನ್ನು ಬಳಸಿದಳು. ದೇವರು ಮನುಷ್ಯರಿಗೆ ನೀಡುವ ಪ್ರತಿಭೆಗಳಲ್ಲಿ ಅತ್ಯುತ್ತಮವಾದ ಮತ್ತು ಶ್ರೇಷ್ಠವಾದ ಪ್ರತಿಭೆ ಪ್ರಾರ್ಥನೆ ಎಂದು ಭಕ್ತನಾದ ಅಲೆಕ್ಸಾಂಡರ್ ವೈಟ್ ಹೇಳುತ್ತಾರೆ.
ನಿನ್ನ ಆದಾಯದಿಂದಲೂ ಬೆಳೆಯ ಪ್ರಥಮಫಲದಿಂದಲೂ ಯೆಹೋವನನ್ನು ಸನ್ಮಾನಿಸು ಎಂದು ಜ್ಞಾನೋಕ್ತಿ 3:9 ರಲ್ಲಿ ಹೇಳುತ್ತದೆ, ಅರಸನಾದ ದಾವೀದನು ಚಿನ್ನ ಮತ್ತು ಬೆಳ್ಳಿಯಿಂದಲೂ ಸ್ತ್ರೀಯರು ತಮ್ಮ ಆಸ್ತಿಯಿಂದಲೂ ಕರ್ತನನ್ನು ಸನ್ಮಾನಿಸಿದರು. ಲೂದ್ಯಳು ತನ್ನ ಮನೆಯನ್ನು ಆರಾಧನೆ ಮತ್ತು ಪ್ರಾರ್ಥನೆಯ ಸ್ಥಳವಾಗಿ ಸೇವೆ ಸಲ್ಲಿಸಲು ಕೊಟ್ಟಳು. ನಾವು ನಮ್ಮ ಸಂಪತ್ತು, ಮನೆಗಳು, ಎರಡು ಚಕ್ರ ಮತ್ತು ನಾಲ್ಕು ಚಕ್ರಗಳ ವಾಹನಗಳನ್ನು ಕರ್ತನ ಕೆಲಸಕ್ಕಾಗಿ ಬಳಸಬಹುದು. ನಮ್ಮ ಸಂಪತ್ತಾಗಿರುವ ಮಕ್ಕಳನ್ನು ಸಹ ಕರ್ತನಿಗೆ ಉಪಯುಕ್ತವಾಗಿಸಬಹುದು. ಎಲ್ಲವು ನಿಮಗೇ ಸ್ವಂತ ಎಂದು ಅದ್ಭುತ ಕರ್ತನ ಕೈಗಳಿಗೆ ಅರ್ಪಿಸೋಣ! ಆಶೀರ್ವಾದ ಹೊಂದೋಣ!
- Mrs. ಗೀತಾ ರಿಚರ್ಡ್
ಪ್ರಾರ್ಥನಾ ಅಂಶ:
ನಮ್ಮ ಮಕ್ಕಳ ಶಿಬಿರದಲ್ಲಿ ಭಾಗವಹಿಸಿದ ಅನೇಕ ಮಕ್ಕಳು ಮಿಷನರಿಗಳಾಗಿ ಎದ್ದೇಳುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482