Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 28.03.2026
Share:

By Village Missionary Movement

Saturday, 28-Mar-2026

ಧೈನಂದಿನ ಧ್ಯಾನ(Kannada) – 28.03.2026

 

ಸಮಯದ ಕೊಡುಗೆ 

 

“...ಮರಿಯಳು ಆ ಒಳ್ಳೇಭಾಗವನ್ನೇ ಆರಿಸಿ ಕೊಂಡಿದ್ದಾಳೆ. ಅದು ಆಕೆಯಿಂದ ತೆಗೆಯಲ್ಪಡುವದಿಲ್ಲ ಅಂದನು" - ಲೂಕ 10:42

 

ಅಮೆರಿಕದ16 ನೇ ಅಧ್ಯಕ್ಷರಾದ ಅಬ್ರಹಾಂ ಲಿಂಕನ್‌ರ ಬಗ್ಗೆ ಎಲ್ಲರಿಗೂ ಗೊತ್ತಿರುತ್ತದೆ. ಅವರ ಅಧ್ಯಕ್ಷತೆಯಲ್ಲಿ, ಒಂದು ಬೆಳಿಗ್ಗೆ, ಕೆಲವು ಹಿರಿಯ ಸರ್ಕಾರಿ ಅಧಿಕಾರಿಗಳು ಅವರನ್ನು ನೋಡಲು ಈಗಾಗಲೇ ಅಪಾಯಿಂಟ್‌ಮೆಂಟ್ ತೆಗೆದುಕೊಂಡಿದ್ದದರಿಂದ ಅವರ ಬಳಿಗೆ ಹೋದರು. ಅವರು ಅವರ ಕೋಣೆಯ ಹತ್ತಿರ ಬಂದಾಗ, ಅವರು ಯಾರೊಂದಿಗೋ ಮಾತನಾಡುತ್ತಿರುವಂತೆ ಒಂದು ಶಬ್ದ ಕೇಳಿಸಿತು. ಅವರು ಆಶ್ಚರ್ಯಚಕಿತರಾದರು. ನಮಗಿಂತ ಮೊದಲು ಯಾರು ಅಪಾಯಿಂಟ್‌ಮೆಂಟ್ ತೆಗೆದುಕೊಂಡಿದ್ದಾರೆಂದು ನೋಡಲು ಅವರು ಕಾಯುತ್ತಿದ್ದರು. ಅಬ್ರಹಾಂ ಲಿಂಕನ್ ಹೊರಬಂದಾಗ, ಅವರ ಬಳಿ, “ಅಯ್ಯಾ, ನಾವು ಬೆಳಿಗ್ಗೆ ಐದು ಗಂಟೆಗೇ ಬಂದುಬಿಟ್ಟೆವು. ನೀವು ಯಾರೊಂದಿಗೋ ಮಾತನಾಡುತ್ತಿದ್ದಿರಿ” ಎಂದು ಹೇಳಿದರು. ಅದಕ್ಕೆ ಅಬ್ರಹಾಂ ಲಿಂಕನ್, “ಬೇರೆ ಯಾರೂ ಇಲ್ಲ, ನಾನು ದೇವರೊಂದಿಗೆ ಮಾತನಾಡುತ್ತಿದ್ದೆ. ನಾನು ಯಾವುದೇ ವ್ಯಕ್ತಿಯೊಂದಿಗೆ ಮಾತನಾಡುವ ಮೊದಲು ದೇವರೊಂದಿಗೆ ಮಾತನಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದೇನೆ” ಎಂದು ಉತ್ತರಿಸಿದರು. ಅವರೆಲ್ಲರೂ ಆಶ್ಚರ್ಯಚಕಿತರಾದರು. ಹೀಗಾಗಿ, ಅಬ್ರಹಾಂ ಲಿಂಕನ್ ರವರ ಆಳ್ವಿಕೆಯ ರಹಸ್ಯ ಮತ್ತು ಅದರ ಯಶಸ್ಸು ಅವರು ಹೆಚ್ಚಿನ ಜವಾಬ್ದಾರಿಯಲ್ಲಿದ್ದರೂ ದೇವರೊಂದಿಗೆ ವೈಯಕ್ತಿಕವಾಗಿ ಸಮಯ ಕಳೆದದ್ದೇ. ಯೇಸುಕ್ರಿಸ್ತನು ಪ್ರಯಾಣ ಮಾಡುತ್ತಿರುವಾಗ ಒಂದು ಹಳ್ಳಿಯನ್ನು ಪ್ರವೇಶಿಸಿದರು. ಅಲ್ಲಿ ಅವರನ್ನು ಮಾರ್ಥಾ, ಮರಿಯ ಎಂಬ ಸಹೋದರಿಯರು ತಮ್ಮ ಮನೆಗೆ ಸ್ವಾಗತಿಸಿದರು. ಮರಿಯಳು ಯೇಸುವಿನ ಪಾದಗಳ ಬಳಿ ಕುಳಿತು ಅವರ ಮಾತನ್ನು ಕೇಳುತ್ತಿದ್ದಳು. ಆದರೆ ಮಾರ್ಥಾಳು ಬಹಳ ಕೆಲಸಗಳ ಒತ್ತಡದಿಂದ ಬೇಸತ್ತು ಅವರ ಬಳಿಗೆ ಬಂದು, ಕರ್ತನೇ, ನನ್ನ ಸಹೋದರಿ ನನ್ನನ್ನು ಒಬ್ಬಂಟಿಯಾಗಿ ಕೆಲಸ ಮಾಡಲು ಬಿಟ್ಟುಬಂದಿರುವುದರ ಕುರಿತು ನಿಮಗೆ ಚಿಂತೆಯಿಲ್ಲವೇ? ನನಗೆ ಸಹಾಯ ಮಾಡಲು ಅವಳಿಗೆ ಹೇಳು ಎಂದು ಹೇಳಿದಳು. ಆದರೆ ಮರಿಯಳು ಆ ಒಳ್ಳೇಭಾಗವನ್ನೇ ಆರಿಸಿ ಕೊಂಡಿದ್ದಾಳೆ. ಮರಿಯಳು ತನ್ನ ಸಮಯವನ್ನು ಕರ್ತನಿಗೆ ಕೊಟ್ಟಳು ಎಂದು ನಾವು ಓದುತ್ತೇವೆ. 

 

ಇದನ್ನು ಓದುತ್ತಿರುವ ಪ್ರಿಯರೇ, ನಾವು ನಮ್ಮ ಸಮಯವನ್ನು ದೇವರಿಗೆ ನೀಡುತ್ತಿದ್ದೇವಾ? ದೇವರು ನಮಗೆ ಪ್ರತಿದಿನ 24 ಗಂಟೆಗಳ ಕಾಲ ದಯೆಯಿಂದ ನೀಡಿದ್ದಾರೆ. ಆ ಸಮಯದಲ್ಲಿ ನಾವು ದೇವರಿಗೆ ಎಷ್ಟು ಸಮಯವನ್ನು ನೀಡುತ್ತಿದ್ದೇವೆ? ಅನಗತ್ಯ ವಿಷಯಗಳಿಗೆ ನಮ್ಮ ಸಮಯವನ್ನು ವ್ಯರ್ಥ ಮಾಡುವುದನ್ನು ತಪ್ಪಿಸೋಣ. ಇಂದು, ಹೆಚ್ಚಿನ ಜನರ ಸಮಯವನ್ನು ಸೆಲ್ ಫೋನ್‌ಗಳು ಕಸಿದುಕೊಳ್ಳುತ್ತಿವೆ. ಆದರೆ ಅದನ್ನು ಕಂಡುಹಿಡಿದ ವ್ಯಕ್ತಿ , ನಾನು ನನ್ನ ಸಮಯದ ಕೇವಲ 5% ಅನ್ನು ಮಾತ್ರ ನನ್ನ ಸೆಲ್ ಫೋನ್‌ನಲ್ಲಿ ಕಳೆಯುತ್ತೇನೆ ಎಂದು ಹೇಳಿದರು. ನಾವು ನಮ್ಮ ಸಮಯವನ್ನು ಹೇಗೆ ಕಳೆಯುತ್ತೇವೆ ಎಂಬುದರ ಕುರಿತು ಯೋಚಿಸೋಣ. ನಮ್ಮ ಸಮಯವನ್ನು ದೇವರೊಂದಿಗೆ, ದೇವರಿಗಾಗಿ ಮತ್ತು ದೇವರ ರಾಜ್ಯವನ್ನು ನಿರ್ಮಿಸಲು ಉಪಯೋಗಿಸುತ್ತಿದ್ದರೆ, ಅದುವೇ ಅತ್ಯಂತ ದೊಡ್ಡ ಆಶೀರ್ವಾದ. ದೇವರ ಪಾದಗಳ ಬಳಿ ಕಳೆಯುವ ಪ್ರತಿ ನಿಮಿಷವೂ ನಮ್ಮನ್ನು ಬಲಪಡಿಸುತ್ತದೆ ಎಂಬುದರಲ್ಲಿ ಸಂದೇಹವೇ ಇಲ್ಲ. 

- Mrs. ಶಕ್ತಿ ಶಂಕರ್

 

ಪ್ರಾರ್ಥನಾ ಅಂಶ:

Child care child ಯೋಜನೆಯಲ್ಲಿ ಭಾಗಿಯಾಗಿರುವ ಮಕ್ಕಳು ಕುಟುಂಬಕ್ಕೆ ಆಶೀರ್ವಾದವಾಗಿರುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet perabet perabet giriş padişahbet padişahbet giriş meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş jojobet jojobet jojobet jojobet jojobet holiganbet holiganbet grandpashabet betgit radissonbet