Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 30.03.2026
Share:

By Village Missionary Movement

Monday, 30-Mar-2026

ಧೈನಂದಿನ ಧ್ಯಾನ(Kannada) – 30.03.2026

 

ದೇವರ ದಾಖಲೆ 

 

"...ಜಕ್ಕೈಯನ ಮಗನಾದ ಬಾರೂಕನು... ಶ್ರದ್ಧೆಯಿಂದ ಮತ್ತೊಂದು ಪಾಲನ್ನು ಭದ್ರ ಪಡಿಸಿದನು." - ನೆಹೆಮಿಯಾ 3:20

 

ನಾನು ಪೂರ್ಣ ಸಮಯದ ಸೇವೆಗೆಂದು ಬಂದಾಗ, ಹಸ್ತಪ್ರತಿ ಸೇವೆ ಮತ್ತು ಮಕ್ಕಳ ಸೇವೆ ಮಾಡುವುದೇ ಸೇವೆ ಎಂದು ಭಾವಿಸಿದೆ. ಆದರೆ ನನಗೆ ಕಚೇರಿ ಕೆಲಸಕ್ಕೆ ಹೋಗುವುದು, ಮಕ್ಕಳನ್ನು ಶಾಲೆಗೆ ಕರೆದೊಯ್ಯುವುದು, ಸೇವಕರನ್ನು ಕರೆದುಕೊಂಡು ಹೋಗುವುದು, ಬರವುದು ಮುಂತಾದ ಕೆಲಸಗಳನ್ನು ನೀಡಲಾಯಿತು. ಅಂದರೆ, 2-ಚಕ್ರ ಮತ್ತು 4-ಚಕ್ರ ವಾಹನಗಳನ್ನು ಓಡಿಸುವುದೇ ನನಗೆ ನೀಡಲಾದ ಕೆಲಸವಾಗಿತ್ತು. ನಾನು ಆರಂಭದಲ್ಲಿ ಇದನ್ನು ಮಾಡಿದಾಗ, ನಾನು ಅರ್ಹನಲ್ಲದ ಕಾರಣ ದೇವರು ನನ್ನನ್ನು ಈ ಕೆಲಸದಲ್ಲಿ ಇರಿಸಿದ್ದಾರೆ ಎಂದು, ನಾನು ನನ್ನನ್ನು ಮತ್ತು ನನ್ನ ಕೆಲಸವನ್ನು ಕಡಿಮೆ ಎಂದು ಭಾವಿಸಿದೆ. ಇದು ಕೂಡ ಸೇವೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ. ಒಮ್ಮೆ, ನಮ್ಮ ಸೇವೆಯ ವ್ಯವಹಾರಗಳನ್ನು ನೋಡಲು ಬಂದ ಸೇವಕರೊಬ್ಬರನ್ನು ಕರೆತರಲು ಹೋಗಿದ್ದೆ. ಅವರು ಒಂದು ದಿನ ಉಳಿದು ಹೊರಟುಹೋದರು. ನಾನು ಅವರನ್ನು ಬಸ್ ನಿಲ್ದಾಣದಲ್ಲಿ ಬಿಡಲು ಹೋದಾಗ, ಅವರು ನನಗೆ, "ತಮ್ಮ, ನೀವು ಮಾಡುತ್ತಿರುವುದೇ ದೊಡ್ಡ ಸೇವೆ. ಸರಿಯಾದ ಸಮಯದಲ್ಲಿ ಕರೆದುಕೊಂಡು ಹೋಗಲು ಬಂದಿರಿ, ಮತ್ತೆ ಬಂದು ಬಿಟ್ಟಿರಿ. ದೇವರು ನಿಮ್ಮನ್ನು ಆಶೀರ್ವದಿಸುತ್ತಾರೆ ಎಂದರು. ಮನೆಗೆ ಹೋದ ನಂತರವೂ, ಅವರು ನನಗೆ ಕರೆಮಾಡಿ ಫೋನ್‌ನಲ್ಲಿ, "ನೀವು ನಿಜವಾಗಿಯೂ ದೇವರು ಬಯಸುವುದನ್ನು ತಾಳ್ಮೆಯಿಂದ ಮಾಡುತ್ತಿದ್ದೀರಿ" ಎಂದು ಹೇಳಿದರು. ಆ ದಿನದಿಂದ, ನಾನು ನನ್ನ ಸೇವೆಯನ್ನು ಪ್ರಾರ್ಥನೆಯೊಂದಿಗೆ ಮಾಡುತ್ತಿದ್ದೇನೆ. ನನ್ನ ವೈಯಕ್ತಿಕ ಜೀವನ ಮತ್ತು ಕುಟುಂಬ ಜೀವನದಲ್ಲಿ ಅದರ ಫಲಿತಾಂಶಗಳನ್ನು ನಾನು ನೋಡುತ್ತಿದ್ದೇನೆ. ನೆಹೆಮಿಯಾ ಗೋಡೆಯನ್ನು ನಿರ್ಮಿಸುತ್ತಿದ್ದಾಗ, ಅಲ್ಲಿರುವ ಅನೇಕ ಜನರು ಅವನೊಂದಿಗೆ ಕೈಜೋಡಿಸಿದರು. ಪ್ರತಿಯೊಬ್ಬರೂ ಪ್ರತಿಯೊಂದು ಭಾಗಕ್ಕೂ ಜವಾಬ್ದಾರಿಯನ್ನು ತೆಗೆದುಕೊಂಡು ಅದನ್ನು ಮಾಡಿದರು. ಗೋಡೆಯು 52 ದಿನಗಳಲ್ಲಿ ಪೂರ್ಣಗೊಂಡಿತು. ಪವಿತ್ರಾತ್ಮನು ಸತ್ಯವೇದದಲ್ಲಿ ಬರೆಯುವಾಗ, ಒಬ್ಬ ವ್ಯಕ್ತಿಯ ಬಗ್ಗೆ ಹೇಳುವಾಗ ಮಾತ್ರ ಹೊಗಳುತ್ತಾ ಗುರುತಿಸುತ್ತಾ ಹೇಳುತ್ತಾರೆ. ಇತರ ಜನರ ಕುರಿತು ಹೇಳುವಾಗ, ಅದನ್ನು ದುರಸ್ತಿ ಮಾಡಿ ನಿರ್ಮಿಸಿದನು ಎಂದೂ, ಒಬ್ಬ ವ್ಯಕ್ತಿಯನ್ನು ಮಾತ್ರ ಅದನ್ನು ಬಹಳ ಎಚ್ಚರಿಕೆಯಿಂದ ದುರಸ್ತಿ ಮಾಡಿ ನಿರ್ಮಿಸಿದನು ಎಂದೂ ಹೇಳಲಾಗಿದೆ. ಗೋಡೆಯನ್ನು ನಿರ್ಮಿಸಲು ಅವರ ಕೊಡುಗೆ ಸಾಮಾನ್ಯವಾಗಿದ್ದರೂ, ಅದನ್ನು ಕರ್ತನಿಗಾಗಿ ಎಂದು, ಹೃದಯದಲ್ಲಿ ಕರ್ತನ ಮೇಲಿನ ಪ್ರೀತಿಯಿಂದಾಗಿ ನೋಡಿ, ನೋಡಿ ಜಾಗರೂಕತೆಯಿಂದ ಮಾಡುತ್ತಾರೆ. ಇದನ್ನು ನೆಹೆಮಿಯಾ, ಎಜ್ರಾ ಅಥವಾ ಅವರ ಸಹೋದ್ಯೋಗಿಗಳು ಗಮನಿಸಲಿಲ್ಲ. ಪವಿತ್ರಾತ್ಮನೇ ಸ್ವತಃ ಬೈಬಲ್‌ನಲ್ಲಿ ಅದನ್ನು ವಿವರಿಸಿದ್ದಾರೆ. ಅವರೇ ಬಾರೂಕನು. ಏಕೆಂದರೆ ನಮ್ಮ ದೇವರು ಬಾಹ್ಯ ವಿಷಯಗಳನ್ನು ನೋಡುವುದಿಲ್ಲ. ಅವರು ಒಳಗಿನ ಹೃದಯವನ್ನು ನೋಡುತ್ತಾರೆ.

 

ಪ್ರಿಯರೇ, ನಿಮಗೂ ಸಹ ಆಲಯದಲ್ಲಿ, ಸೇವೆಯಲ್ಲಿ ಸಣ್ಣ ಪುಟ್ಟ ಜವಾಬ್ದಾರಿಗಳನ್ನು ನೀಡಲಾಗಿದ್ದರೂ, ಅದನ್ನು ಕರ್ತನಿಗಾಗಿ ಸಂತೋಷದಿಂದ ಮಾಡಿ. ಮನುಷ್ಯರಿಂದ ಹೊಗಳಿಕೆ ಅಥವಾ ಉನ್ನತ ಸ್ಥಾನವನ್ನು ನಿರೀಕ್ಷಿಸಬೇಡಿ. ನಿಮ್ಮ ಪೂರ್ಣ ಹೃದಯದಿಂದ ಕರ್ತನಿಗೆಂದು ನಂಬಿಗಸ್ಥಿಕೆಯ ನಿಮ್ಮ ಪಾಲನ್ನು ನೀಡಿರಿ. ನಿಮ್ಮ ನಂಬಿಗಸ್ಥಿಕೆಯ ಹೃದಯವೇ ನಿಮ್ಮ ಪಾಲು. ದೇವರು ಅದನ್ನು ಪರಲೋಕದ ಪುಸ್ತಕದಲ್ಲಿ ಲೆಕ್ಕಹಾಕಿ, ನಿಮ್ಮನ್ನು ಹೊಗಳಿ ಅದಕ್ಕೆ ಪ್ರತಿಫಲ ನೀಡುತ್ತಾರೆ. ಆಮೆನ್.

- M. ಸ್ಟಾಲಿನ್ ರಾಜಾ

 

ಪ್ರಾರ್ಥನಾ ಅಂಶ:

Child care child ಯೋಜನೆಯಲ್ಲಿ ತೊಡಗಿರುವವರು ಜ್ಞಾನದಲ್ಲಿಯೂ ಕರ್ತನನ್ನು ಅರಿತುಕೊಳ್ಳುವ ಅರಿವಿನಲ್ಲೂ ಬೆಳೆಯುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking perabet casibom holiganbet galabet casibom grandpashabet perabet perabet giriş padişahbet padişahbet giriş grandpashabet kalitebet kalitebet giris betsmove betsmove giris gonebet gonebet giris betnano betnano giriş jojobet jojobet betplay jojobet esbet sonbahis tambet grandpashabet betgit mercurecasino matbet