Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 01.04.2026
Share:

By Village Missionary Movement

Wednesday, 01-Apr-2026

ಧೈನಂದಿನ ಧ್ಯಾನ(Kannada) – 01.04.2026

 

ಹತ್ತಿರ ಬಾ

 

"...ಎದ್ದು ತನ್ನ ತಂದೆಯ ಕಡೆಗೆ ಬಂದನು." - ಲೂಕ 15:20

 

ಒಂದು ದಿನ ನಾನು ನನ್ನ ಕೋಣೆಯಲ್ಲಿ ಕುಳಿತು ಬೈಬಲ್ ಓದುತ್ತಿದ್ದೆ. ಆಗ ನನ್ನ ಮಗ ಜೋ ತನ್ನ ಸ್ನೇಹಿತರೊಂದಿಗೆ ನನ್ನ ಕೋಣೆಗೆ ಬಂದನು. ನಾನು, "ಜೋ, ಹೊರಗೆ ಹೋಗಿ ಆಟವಾಡು" ಎಂದು ಹೇಳಿದೆ. ಅವನು ಸ್ವಲ್ಪವೂ ಯೋಚಿಸದೆ, "ಅಪ್ಪಾ, ನಾನು ನಿಮ್ಮ ಮಗ. ನೀವು ಇರುವಲ್ಲಿಯೇ ನಾನು ಇರುತ್ತೇನೆ. ನಾನು ಬೇರೆ ಎಲ್ಲಿಗೆ ಹೋಗಬೇಕು?" ಎಂದು ಹೇಳಿದನು. ಆಗ ನಾನು ಯೋಚಿಸಿದೆ, ನಾವು ನಮ್ಮ ಪರಲೋಕದ ತಂದೆಯೊಂದಿಗೇ ಇದ್ದು, ಅವರು ಇರುವ ಸ್ಥಳದಲ್ಲಿ ಇದ್ದೇವಾ? ಎಂದು. 

 

ಬೈಬಲ್‌ನಲ್ಲಿಯೂ ಸಹ, ಒಬ್ಬ ತಂದೆಗೆ ಇಬ್ಬರು ಗಂಡು ಮಕ್ಕಳಿದ್ದರು. ಅವರಲ್ಲಿ ಕಿರಿಯವನು ತನ್ನ ತಂದೆಯಿಂದ ಪಿತ್ರಾರ್ಜಿತದಲ್ಲಿ ತನ್ನ ಪಾಲನ್ನು ಕೇಳಿ ಪಡೆದು, ಅದನ್ನೆಲ್ಲಾ ದುಂದುವೆಚ್ಚ ಮಾಡಿಬಿಟ್ಟು, ಕೊನೆಗೆ ಹಂದಿಗಳು ತಿನ್ನುವ ಕಾಯಿಗಳೂ ಸಿಗದೆ ಇದ್ದನು. ಪಾಲನ್ನು ಹಂಚಿಕೊಡುವಾಗಲೇ ತಂದೆಗೆ ಗೊತ್ತು ತನ್ನ ಮಗ ಅದನ್ನು ದುರುಪಯೋಗಪಡಿಸಿಕೊಳ್ಳುತ್ತಾನೆ ಎಂದು. ಆದರೂ ಕೊಟ್ಟರು. ನಂತರ ಒಂದು ದಿನಬುದ್ಧಿ ಬಂದು ನನ್ನ ತಂದೆಯ ಬಳಿಯಲ್ಲಿ ಎಷ್ಟೋ ಮಂದಿ ಕೂಲಿಯಾಳುಗಳಿಗೆ ಬೇಕಾದಷ್ಟು ಆಹಾರವದೆ; ನಾನಾದರೋ ನನ್ನ ತಂದೆ ಇಲ್ಲದ ಸ್ಥಳದಲ್ಲಿ ಇರುವುದರಿಂದ ಕೊರತೆಯುಳ್ಳವನಾಗಿದ್ದೇನೆ. ಆದ್ದರಿಂದ ನನ್ನ ತಂದೆಯ ಬಳಿಗೆ ಹೋಗಿ ತನ್ನ ಕೂಲಿಯಾಳುಗಳಲ್ಲಿ ಒಬ್ಬನಾಗಿ ಕೆಲಸ ಮಾಡಿಕೊಳ್ಳೋಣ ಎಂದು ಭಾವಿಸಿ ಹಿಂತಿರುಗಿ ಬರುತ್ತಾನೆ. ತಂದೆಯೋ ತನ್ನ ಮಗ ಹಿಂತಿರುಗಿ ಬರುತ್ತಾನೆ ಎಂದು ಕಾಯುತ್ತಿದ್ದಾರೆ. ಆದ್ದರಿಂದ ಅವರು ತನ್ನ ಮಗ ಬರುವುದನ್ನು ನೋಡಿದಾಗ, ಓಡಿಹೋಗಿ ಅವನನ್ನು ಅಪ್ಪಿಕೊಳ್ಳುತ್ತಾರೆ. ಅವರು ತನ್ನ ಮಗನನ್ನು ಕ್ಷಮಿಸಿ ಸ್ವೀಕರಿಸುತ್ತಾರೆ. ಆ ಕಿರಿಯ ಮಗನಂತೆ, ಪರಲೋಕದ ತಂದೆಯ ಬಳಿಗೆ ಹಿಂತಿರುಗಿರಿ. ನಿಮ್ಮ ಸ್ಥಿತಿ ಏನೇ ಇರಲಿ, ಅವರು ನಿಮ್ಮನ್ನು ಸ್ವೀಕರಿಸುತ್ತಾರೆ ಮತ್ತು ನಿಮ್ಮ ಕೊರತೆಯನ್ನು ಪೂರೈಸುತ್ತಾರೆ.

 

ಪ್ರಿಯರೇ, ಬಹುಶಃ ಇದನ್ನು ಓದುತ್ತಿರುವ ನೀವು ಸಹ ತೊಂದರೆಯಲ್ಲಿ, ದೀನತ್ವದಲ್ಲಿ ಮತ್ತು ಕೊರತೆಯಲ್ಲಿ ಇದ್ದೀರಾ? ನಿಮ್ಮ ಪರಲೋಕದ ತಂದೆ ನಿಮ್ಮೊಂದಿಗಿದ್ದಾರಾ? ಎಂದು ಒಂದು ನಿಮಿಷ ಯೋಚಿಸಿ. ನಿಮಗೆ ಪ್ರಜ್ಞೆ ಬಂದು ತನ್ನ ಬಳಿಗೆ ಬರಲು ಪರಲೋಕದ ತಂದೆ ಕಾತರದಿಂದ ಕಾಯುತ್ತಿದ್ದಾರೆ. ನೀವು ನಿಮ್ಮ ತಪ್ಪನ್ನು ಅರಿತುಕೊಂಡು ಪಶ್ಚಾತ್ತಾಪಪಟ್ಟಾಗ, ಪರಲೋಕದ ತಂದೆ ಕಾತುರದಿಂದ ನಿಮ್ಮನ್ನು ಸ್ವೀಕರಿಸುತ್ತಾರೆ. ಅಷ್ಟೇ ಅಲ್ಲ, ಅವರು ನಿಮ್ಮ ಪಾಪದ ಕೊಳಕು ಬಟ್ಟೆಗಳನ್ನು ತೆಗೆದು, ನಿಮಗೆ ರಕ್ಷಣೆಯ ಹೊಸ ಉಡುಪನ್ನು ನೀಡುತ್ತಾರೆ, ನಿಮಗೆ ಅವರ ಮಗುವಿನಂತೆ ಅಧಿಕಾರದ ಉಂಗುರವನ್ನು ನೀಡುತ್ತಾರೆ ಮತ್ತು ಅವರ ಹಾದಿಯಲ್ಲಿ ಜಾರದೆ ನಡೆಯಲು ನಿಮಗೆ ಪಾದರಕ್ಷೆಗಳನ್ನು ನೀಡುತ್ತಾರೆ. ನೀವು ಕೇಳದೆಯೇ ಅವರು ನಿಮಗೆ ಇವೆಲ್ಲವನ್ನೂ ನೀಡುತ್ತಾರೆ. ನೀವು ಬಂದು "ಅಪ್ಪಾ" ಎಂದು ಹೇಳಿದರೆ ಸಾಕು. ನಿಮ್ಮ ಪರಿಸ್ಥಿತಿ ಏನೇ ಇರಲಿ ಅವರು ನಿಮ್ಮನ್ನು ಸ್ವೀಕರಿಸುತ್ತಾರೆ ಮತ್ತು ಅಪ್ಪಿಕೊಳ್ಳುತ್ತಾರೆ.

- Bro. ಡೇವಿಡ್ ಗಣೇಶನ್ 

 

ಪ್ರಾರ್ಥನಾ ಅಂಶ:

ಈ ತಿಂಗಳ ಸೇವೆಗಳಿಗಾಗಿ ಮತ್ತು ಸೇವಕರ ಪ್ರಯಾಣದ ಸುರಕ್ಷತೆಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet perabet perabet giriş padişahbet padişahbet giriş meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş jojobet jojobet jojobet jojobet jojobet holiganbet holiganbet holiganbet betgit radissonbet