Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 19.06.2021
Share:

By Village Missionary Movement

Saturday, 19-Jun-2021

ಧೈನಂದಿನ ಧ್ಯಾನ(Kannada) – 19.06.2021

 

“ದೇವರು ಈ ಲೋಕದ ಕುಲಹೀನರನ್ನೂ ಅಸಡ್ಡೆಯಾದವರನ್ನೂ ಆರಿಸಿಕೊಂಡದ್ದಲ್ಲದೆ ಗಣ್ಯರನ್ನು ಇಲ್ಲದಂತೆ ಮಾಡುವದಕ್ಕಾಗಿ ಗಣನೆಗೆ ಬಾರದವರನ್ನು ಆರಿಸಿಕೊಂಡಿದ್ದಾನೆ. ಹೀಗಿರಲು ದೇವರ ಮುಂದೆ ಹೊಗಳಿಕೊಳ್ಳುವದಕ್ಕೆ ಯಾರಿಗೂ ಆಸ್ಪದವಿಲ್ಲ” - 1ಕೊರಿಂಥದವರಿಗೆ 1:28

 

ಈ ಲೋಕದಲ್ಲಿ ತಮ್ಮ ಮಕ್ಕಳಿಗೆ ಜೀವನದ ಸಂಗಾತಿಯನ್ನು ಆರಿಸಿಕೊಳ್ಳುವಾಗ ಒಳ್ಳೆಯ ಅರ್ಹತೆ ಉಳ್ಳವರನ್ನು ಆರಿಸಿಕೊಳ್ಳುವದಕ್ಕೆ ಎಲ್ಲರೂ ಆಶಿಸುತ್ತಾರೆ. ಸೇನೆಗೆ ವ್ಯಕ್ತಿಗಳನ್ನು ಆರಿಸಿಕೊಳ್ಳುವಾಗ ಒಳ್ಳೆಯ ಶರೀರ ಬಲ, ಒಳ್ಳೆಯ ಅರ್ಹತೆಯುಳ್ಳವರನ್ನೆ ಸರ್ಕಾರವು ಆರಿಸಿಕೊಳ್ಳುತ್ತದೆ. ಆದರೆ ಕರ್ತನಿಗಾಗಿ ವ್ಯಕ್ತಿಗಳನ್ನು ಆರಿಸಿಕೊಂಡ ವಿಧ ಬಹಳ ವ್ಯತ್ಯಾಸವಾಗಿರುತ್ತದೆ ಎಂಬುದಕ್ಕೆ ಕ್ರಿಸ್ಮಸ್ ಈವನ್ಸ್ ಎಂಬ ದೇವರ ಸೇವಕರು ಬಹಳ ಶ್ರೇಷ್ಠವಾದ ಉದಾಹರಣೆ.

 

ವೇಲ್ಸ್ ದೇಶಕ್ಕೆ ಸೇರಿದ ಇವರು ಬಡತನದಲ್ಲಿ ಹುಟ್ಟಿ ಬೆಳೆದರು. ತಂದೆಯನ್ನು ಕಳೆದುಕೊಂಡು ದುರ್ಮಾರ್ಗನಾದ ಸೋದರಮಾವನಿಂದ ಆರು ವರ್ಷಗಳು ಬೆಳೆಸಲ್ಪಟ್ಟು ಬಹಳ ಉಪದ್ರವಗಳನ್ನು ಎದುರುಗೊಳ್ಳುತ್ತಾ ನಡೆದರು. ಅದರಿಂದ ತನ್ನ ಬಲಗಣ್ಣನ್ನು ಕಳೆದುಕೊಂಡರು. ಆ ಕಣ್ಣು ಇರುವ ಸ್ಥಳದಲ್ಲಿ ಚಿಕ್ಕ ಹಳ್ಳ ಮಾತ್ರವೇ ಇತ್ತು. ಆಕರ್ಷಿಸುವ ಶರೀರದ ರೂಪವಿಲ್ಲದ ವ್ಯಕ್ತಿ. 17ನೇ ವರ್ಷದವರೆಗೂ ಓದಿಕೊಳ್ಳಲಿಲ್ಲ. ಜನರ ದೃಷ್ಟಿಗೆ ಅಲ್ಪನಾಗಿ, ನೀಚವಾಗಿ ಎಣಿಸಲ್ಪಟ್ಟರು. ದೇವರು ಇವರನ್ನು ಆರಿಸಿಕೊಂಡು ತನ್ನ ಸೇವೆಯಲ್ಲಿ ಬಲವಾಗಿ ಉಪಯೋಗಿಸಿಕೊಂಡರು.

 

17ನೇ ವರ್ಷದಲ್ಲಿ ಒಂದು ಸೇವಕರ ಬಳಿ ಕೆಲಸಕ್ಕೆ ಹೋದಾಗ ರಕ್ಷಿಸಲ್ಪಟ್ಟರು. ಬಹಳ ವೇಗವಾಗಿ ಬರೆಯಲು, ಓದಲು ಕಲಿತುಕೊಳ್ಳುವುದಕ್ಕೆ ಕರ್ತನು ದಯೆ ತೋರಿಸಿದರು. ಬಡವರ ಬಳಿ ಕುಟುಂಬ ಕೂಟಗಳು, ಪ್ರಾರ್ಥನೆಗಳು ನಡೆಸುವುದಕ್ಕೆ ಪ್ರಾರಂಭಿಸಿದರು. ಪುಸ್ತಕಗಳಲ್ಲಿರುವ ಸಂದೇಶಗಳನ್ನು ಬಾಯಿಪಾಠವಾಗಿ ಇಟ್ಟುಕೊಂಡು ಸೇವೆಯಲ್ಲಿ ಬಳಸುತ್ತಿದ್ದರು. ಪ್ರಸಂಗ ಮಾಡುವುದು, ಹಾಡುವುದು ಎಂಬ ಪ್ರತಿಭೆಗಳು ರಕ್ತದಲ್ಲಿಯೇ ಬೆರೆತಿರುವ ಹಾಗೆ ವೇಲ್ಸ್ ದೇಶದ ಪ್ರಜೆಗಳಿಗೆ ವರ್ಷಕ್ಕೆ ಒಂದು ಸಾರಿ ಪ್ರಸಂಗಗಳ ಹಬ್ಬ ಒಂದನ್ನು ಆಚರಿಸುತ್ತಿದ್ದರು. ಅದರಲ್ಲಿ ಸುಮಾರು 25 ಸಾವಿರದಷ್ಟು ಜನರು ಭಾಗವಹಿಸುತ್ತಿದ್ದರು. ಇದರಲ್ಲಿ ಈವಾನ್ಸ್ ಗೆ ಪ್ರಸಂಗ ಮಾಡಲು ಕರ್ತನು ಅವಕಾಶ ಕೊಟ್ಟರು. ಆತನ ಮೊದಲ ಪ್ರಸಂಗದಲ್ಲೇ ಕರ್ತನು ಅಗ್ನಿ ಜ್ವಾಲೆಯಾಗಿ ಆತನನ್ನು ಉಪಯೋಗಿಸಿದರು. ಒಂಟಿ ಕಣ್ಣು ಪ್ರಸಂಗಿ ಎಂದು ಕರೆಯಲ್ಪಟ್ಟ ಅವರ ಮಾತೆ ಅಲ್ಲಿಗೆ ಬಂದಿರುವವರೆಲ್ಲರ ಮಾತಾಗಿರುತ್ತಿತ್ತು. ಬಲವಾದ ಉಜ್ಜೀವನವು ಉಂಟಾಯಿತು. ಆತನ ಸಂದೇಶವನ್ನು ಕೇಳುವುದಕ್ಕಾಗಿ ಜನರು ಗುಂಪುಗುಂಪಾಗಿ ಬರಲು ಪ್ರಾರಂಭಿಸಿದರು. ಸತ್ತು ಹೋದ ಹಾಗೆ ಕಾಣಿಸಿದ ಆತ್ಮಗಳು, ಸಭೆಗಳು ಪುನರುಜ್ಜೀವನ ಹೊಂದಿಕೊಂಡವು. ಈವಾನ್ಸ್ ಸಾಧಾರಣವಾಗಿ ಪ್ರಾರ್ಥಿಸುವ ಪ್ರಾರ್ಥನಾ ಯೋಧನು. ಬೈಬಲ್ ಓದುವುದು, ಆತ್ಮಿಕ ಪುಸ್ತಕಗಳನ್ನು ಓದುವುದು ಆತನ ಉಸಿರಾಗಿತ್ತು. ಸುವಾರ್ತೆ ಪ್ರಕಟಿಸುವುದಕ್ಕೆ ಕಠಿಣವಾದ ಸ್ಥಳಗಳನ್ನು ಆರಿಸಿಕೊಳ್ಳುತ್ತಾರೆ. ವಿರೋಧಗಳ ಮಧ್ಯದಲ್ಲಿ ಜನರನ್ನು ರಕ್ಷಿಸುವುದಕ್ಕೆ ದೇವರು ಆತನನ್ನು ಉಪಯೋಗಿಸಿದರು.

 

ಕ್ರಿಸ್ಮಸ್ ಈವಾನ್ಸ್ ಸತ್ತರು ಕೂಡ ಮಾತಾಡುತ್ತಿದ್ದಾರೆ. ನಮ್ಮ ಅರ್ಹತೆಗಳು ದೇವರಿಗೆ ಅವಶ್ಯವಿಲ್ಲ, ನಮ್ಮ ಸಮರ್ಪಣೆ ಆತನಿಗೆ ಮುಖ್ಯ. ಆದ್ದರಿಂದ ಎಂಥಹ ಸಮಸ್ಯೆಗಳು ಎದುರಾದರೂ ನಿರುತ್ಸಾಹ ಪಡದೆ ನಮ್ಮನ್ನು ತನ್ನ ಕೈಗಳಲ್ಲಿಟ್ಟುಕೊಂಡು ಬಳಸಿಕೊಳ್ಳುವುದಕ್ಕೆ ಕರ್ತನ ಕೈಗಳಿಗೆ ಸಂಪೂರ್ಣವಾಗಿ ಸಮರ್ಪಿಸಿಕೊಳ್ಳೋಣ. ದೇವರ ರಾಜ್ಯವು ವಿಸ್ತರಿಸುವುದಕ್ಕೆ ದೇವರು ನಿಮ್ಮನ್ನು ಬಳಸಿಕೊಳ್ಳುತ್ತಾರೆ.

- ಶ್ರೀಮತಿ. ಗೀತಾ ರಿಚರ್ಡ್.

 

ಪ್ರಾರ್ಥನಾ ಅಂಶ:-

ಪ್ರತಿ ಜಿಲ್ಲೆಗಳಲ್ಲಿಯೂ, ಯೌವನಸ್ಥರ ಕೂಟಗಳು ನಡೆಸಲ್ಪಡಲು ದೇವರು ಕೃಪೆ ತೋರಿಸುವಂತೆ ಪ್ರಾರ್ಥಿಸೋಣ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking perabet casibom holiganbet galabet casibom perabet perabet giriş padişahbet padişahbet giriş grandpashabet kalitebet kalitebet giris betsmove betsmove giris gonebet gonebet giris betnano betnano giriş jojobet jojobet betplay jojobet esbet sonbahis tambet grandpashabet betgit mercurecasino matbet