By Village Missionary Movement
Wednesday, 08-Apr-2026ಧೈನಂದಿನ ಧ್ಯಾನ(Kannada) – 08.04.2026
ಧರ್ಮಶಾಸ್ತ್ರ
"ಯೆಹೋವನ ಧರ್ಮಶಾಸ್ತ್ರವು ಲೋಪವಿಲ್ಲದ್ದು; ಅದು ಪ್ರಾಣವನ್ನು ಉಜ್ಜೀವಿಸಮಾಡುವಂಥದ್ದು;..." - ಕೀರ್ತನೆ 19:7
ರಾಜನ್ ಮತ್ತು ಕುಮಾರ್ ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದರು. ಅವರು ಮರ ಕತ್ತರಿಸಿ ಮಾರಾಟ ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದರು. ಒಂದು ದಿನ, ಇಬ್ಬರೂ ಸೌದೆ ಕಡಿಯಲು ಕಾಡಿಗೆ ಹೋದರು. ಸಂಜೆ, ರಾಜನ್ ಬಹಳಷ್ಟು ಸೌದೆಗಳನ್ನು ಕಡಿದು ತಂದದ್ದನ್ನು ಗಮನಿಸಿದ ಕುಮಾರ್, ನಿಮ್ಮಿಂದ ಮಾತ್ರ ಇಷ್ಟು ಸೌದೆಯನ್ನು ಕಡಿಯಲು ಹೇಗೆ ಸಾಧ್ಯವಾಯಿತು?ಎಂದು ಕೇಳಿದರು. ಅದಕ್ಕೆ ರಾಜನ್ ನಾನು ಸ್ವಲ್ಪ ಸಮಯ ಸೌದೆ ಕಡಿದುಬಿಟ್ಟು, ಸ್ವಲ್ಪ ಸಮಯ ವಿಶ್ರಾಂತಿ ಪಡೆಯುತ್ತೇನೆ. ನಂತರ ಮತ್ತೆ ಮರ ಕಡಿಯುತ್ತೇನೆ ಎಂದು ಹೇಳಿದರು. ಮರುದಿನ, ರಾಜನ್ ಹೇಳಿದಂತೆ ಕುಮಾರ್ ಕೂಡ ಮಧ್ಯೆ ಮಧ್ಯೆ ವಿಶ್ರಾಂತಿ ಪಡೆದು ನಂತರ ಸೌದೆ ಕಡಿದರು. ಆದರೆ ಆ ದಿನ, ಅವರು ಇನ್ನೂ ಕಡಿಮೆ ಮರ ಕಡಿಯಲು ಸಾಧ್ಯವಾಯಿತು. ಮರುದಿನ, ರಾಜನ್ ಏನಾದರೂ ಮಾಡುತ್ತಿದ್ದಾರೆಂದು ನೋಡೋಣ ಎಂದು ಹಿಂದಿನಿಂದ ಮರೆಯಾಗಿದ್ದು ನೋಡುತ್ತಿದ್ದರು. ರಾಜನ್ ವಿಶ್ರಾಂತಿ ಪಡೆಯುತ್ತಿರುವಾಗ, ಮರ ಕಡಿಯಲು ಬಳಸುವ ಉಪಕರಣವನ್ನು ಹರಿತಗೊಳಿಸಿದ್ದನ್ನು ಕುಮಾರ್ ನೋಡಿದರು. ರಾಜನ್ ನಿಂದ ಹೇಗೆ ಇಷ್ಟು ಸೌದೆ ಕಡಿಯಲು ಸಾಧ್ಯವಾಯಿತು ಎಂದು ಆಗ ಮಾತ್ರವೇ ಅವರಿಗೆ ಅರ್ಥವಾಯಿತು.
ಇಂದಿನ ನಮ್ಮ ಆಧ್ಯಾತ್ಮಿಕ ಜೀವನವೂ ಸಹ ಹರಿತವಾಗಿಲ್ಲದೇ ಮಂದಗತಿಯಲ್ಲಿದೆಯೇ? ನಮ್ಮನ್ನು ಹರಿತಗೊಳಿಸುವ ಮತ್ತು ಸರಿಪಡಿಸುವ ಅತ್ಯುತ್ತಮ ಆಯುಧವೆಂದರೆ ಸತ್ಯವೇದ ಧ್ಯಾನ ಮತ್ತು ಪ್ರಾರ್ಥನೆ. ಕೀರ್ತನೆ 19:7,8 ರಲ್ಲಿ, ಯೆಹೋವನ ಧರ್ಮಶಾಸ್ತ್ರವು ಲೋಪವಿಲ್ಲದ್ದು; ಅದು ಪ್ರಾಣವನ್ನು ಉಜ್ಜೀವಿಸಮಾಡುವಂಥದ್ದು. ಯೆಹೋವನ ಕಟ್ಟಳೆ ನಂಬಿಕೆಗೆ ಯೋಗ್ಯವಾದದ್ದು; ಬುದ್ಧಿಹೀನರಿಗೆ ವಿವೇಕಪ್ರದವಾಗಿದೆ. ಯೆಹೋವನ ನಿಯಮಗಳು ನೀತಿಯುಳ್ಳವುಗಳಾಗಿವೆ; ಮನಸ್ಸನ್ನು ಹರ್ಷಪಡಿಸುತ್ತವೆ. ಎಂದು ಸತ್ಯವೇದದ ಮಹತ್ವದ ಬಗ್ಗೆ ಕೀರ್ತನೆಗಾರನಾದ ದಾವೀದನು ಬರೆದಿಟ್ಟಿದ್ದಾರೆ. ಸತ್ಯವೇದವನ್ನು ಸರಿಯಾಗಿ ಓದಲು ಮತ್ತು ಪ್ರತಿದಿನ ಪ್ರಾರ್ಥಿಸಲು ನಾವು ಸಿದ್ಧರಾಗೋಣ. ಮಿಷನರಿ ಸಿ..ಟಿ ಸ್ಟಡ್ ಆಫ್ರಿಕನ್ ಕಾಡಿನಲ್ಲಿ ಸೇವೆ ಸಲ್ಲಿಸಿದಾಗ ಅವರಿಗೆ 82 ವರ್ಷ ವಯಸ್ಸಾಗಿತ್ತು. ವಿದ್ಯುತ್ ಇಲ್ಲದ ಪರಿಸ್ಥಿತಿಯಲ್ಲಿ, ಅವರು ಸೀಮೆಎಣ್ಣೆ ದೀಪದ ಬೆಳಕಿನಲ್ಲಿ ಬೈಬಲ್ ಓದುತ್ತಿದ್ದರಂತೆ. ಹಾಗಾದರೆ ಇಂದು ವಿದ್ಯುತ್, ಮಕ್ಕಳ ಬೈಬಲ್, ಸ್ಟಡಿ ಬೈಬಲ್ ಹೀಗೆ ಹಲವು ಸತ್ಯವೇದಗಳಿವೆ. ನಾವು ಪ್ರತಿದಿನ ಬಳಸುವ ಮೊಬೈಲ್ ಫೋನ್‌ನಲ್ಲಿ ಬೈಬಲ್ ಅನ್ನು ಸುಲಭವಾಗಿ ಓದಬಹುದಲ್ಲಾ! ಇಂತಹ ಸತ್ಯವೇದವನ್ನು ದಿನನಿತ್ಯವೂ ಪರಿಶೋಧಿಸಿ ನೋಡಿದ್ದರಿಂದ ಥೆಸಲೋನಿಕದವರಿಗಿಂತ ಬೆರೋಯ ಪಟ್ಟಣದವರು ಸದ್ಗುಣವುಳ್ಳವರಾಗಿದ್ದರು ಎಂದು ಅಪೊಸ್ತಲ. 17:11 ರಲ್ಲಿ ಓದುತ್ತೇವೆ.
ಇದನ್ನು ಓದುತ್ತಿರುವ ಪ್ರಿಯರೇ, ಈ ವರ್ಷದ ಆರಂಭದಲ್ಲಿ ನೀವು ಅನೇಕ ನಿರ್ಣಯಗಳನ್ನು ಮಾಡಿರಬಹುದು. ಅವುಗಳಲ್ಲಿ ಯಾವುದನ್ನು ನಾವು ಅನುಸರಿಸುತ್ತಿದ್ದೇವೆಂದು ನಮಗೆ ಗೊತ್ತಿಲ್ಲ. ಆದರೆ ಸತ್ಯವೇದವನ್ನು ವ್ಯವಸ್ಥಿತವಾಗಿ ಓದುವ ಮತ್ತು ಪ್ರಾರ್ಥಿಸುವ ಸಂಕಲ್ಪವು ನಮ್ಮ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರಲಿ. ಸತ್ಯವೇದವು ನಮ್ಮ ಮನೆಯ ಕಪಾಟಿನಲ್ಲಿ ಅಲಂಕಾರಿಕ ವಸ್ತುವಾಗಿ ಮಾತ್ರವಿರದೆ, ನಮ್ಮ ಹೃದಯಗಳು ಮತ್ತು ಆತ್ಮಗಳು ಉತ್ತಮ ವಾಸನೆಯನ್ನು ನೀಡುವ ಪರಿಮಳಯುಕ್ತ ತೈಲವಾಗಿ ಮಾರ್ಪಡಲಿ. ಆಮೆನ್.
- Mrs. ಪುಷ್ಪಾ ಸೈಮನ್
ಪ್ರಾರ್ಥನಾ ಅಂಶ:
ಪ್ರತಿ ತಾಲೂಕಿನಲ್ಲಿ ಮಿಷನ್ ಆಕ್ಷನ್ ಸೆಂಟರ್‌ಗಳನ್ನು ಸ್ಥಾಪಿಸಲು ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482