By Village Missionary Movement
Monday, 13-Apr-2026ಧೈನಂದಿನ ಧ್ಯಾನ(Kannada) – 13.04.2026
ಎಲ್ಲವನ್ನೂ ಮಾಡುತ್ತಾರೆ
“ಯೆಹೋವನು ನನ್ನ ಕಾರ್ಯವನ್ನು ಸಿದ್ಧಿಗೆ ತರುವನು..." - ಕೀರ್ತನೆ 138:8
ಮಾಜಿ ರಾಷ್ಟ್ರಪತಿ ಡಾ. ಎ.ಬಿ.ಜೆ. ಅಬ್ದುಲ್ ಕಲಾಂ ರವರ ಕೆಳಗೆ ಕೆಲಸ ಮಾಡುತ್ತಿದ್ದ ವಿಜ್ಞಾನಿಯೊಬ್ಬರು ಒಮ್ಮೆ ಅವರ ಬಳಿ ಅಂದು ಸಂಜೆ 5.30 ಕ್ಕೆ ಕಚೇರಿಯಿಂದ ಹೊರಡಲು ಅನುಮತಿ ಕೇಳಿದರು. ಆಗ ಅಬ್ದುಲ್ ಕಲಾಂ ರವರು ಯಾಕೆ ಹೋಗುತ್ತಿದ್ದೀರ ಎಂಬ ಕಾರಣವನ್ನು ಕೇಳಿದರು. ವಿಜ್ಞಾನಿ ತಕ್ಷಣ ನನ್ನ ಮಕ್ಕಳನ್ನು ಇಂದು ಪ್ರದರ್ಶನಕ್ಕೆ ಎಕ್ಸಿಬಿಷನ್ ಗೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದೇನೆ ಅದಕ್ಕಾಗಿಯೇ ಎಂದರು. ಕಲಾಂ ರವರು ಸಹ ಅವರಿಗೆ ಅನುಮತಿ ನೀಡಿದರು. ವಿಜ್ಞಾನಿ ಕೂಡ ತಮ್ಮ ಕೆಲಸವನ್ನು ಮಾಡಲು ಪ್ರಾರಂಭಿಸಿದರು. ಕೆಲಸದ ಗಡಿಬಿಡಿಯಲ್ಲಿ, ಅವರು ಸಂಜೆ 5.30 ರ ಬಗ್ಗೆ ಮತ್ತು ತಮ್ಮ ಮಕ್ಕಳಿಗೆ ನೀಡಿದ್ದ ಭರವಸೆಯ ಬಗ್ಗೆ ಮರೆತರು. ಅವರು ತಮ್ಮ ಕೆಲಸವನ್ನು ಮುಗಿಸಿ ಗಡಿಯಾರವನ್ನು ನೋಡಿದಾಗ, ರಾತ್ರಿ 8.30 ಆಗಿತ್ತು. ಅವರು ತಮ್ಮ ಮಕ್ಕಳಿಗೆ ಏನು ಹೇಳಬೇಕೆಂದು ಯೋಚಿಸುತ್ತಾ ಮನೆಗೆ ಹೋದರು. ಮನೆಯಲ್ಲಿ ಮಕ್ಕಳಿರಲಿಲ್ಲ. ಅವರು ತಮ್ಮ ಪತ್ನಿಯನ್ನು ಕೇಳಿದಾಗ, ಅಬ್ದುಲ್ ಕಲಾಂ ರವರು ಬಂದು ಮಕ್ಕಳನ್ನು ಪ್ರದರ್ಶನಕ್ಕೆ ಕರೆದೊಯ್ದಿದ್ದಾರೆ ಎಂದು ಹೇಳಿದರು. ವಿಜ್ಞಾನಿ ತಮ್ಮ ಕೆಲಸದಲ್ಲಿ ನಿರತರಾಗಿದ್ದರಿಂದ, ಅವರ ಮೇಲಧಿಕಾರಿ ಅಬ್ದುಲ್ ಕಲಾಂ ರವರು ಅವರು ಮಾಡಬೇಕಾದುದನ್ನು ಮಾಡಿದರು.
ಅದೇ ರೀತಿ, ಸತ್ಯವೇದದಲ್ಲಿ, ದಾನಿಯೇಲ್ ಮತ್ತು ಅವರ ಸ್ನೇಹಿತರು, ಕರ್ತನ ಮೇಲಿನ ಉತ್ಸಾಹದಿಂದ, ರಾಜನ ಆಹಾರ ಅಥವಾ ಅವರು ಕುಡಿಯುವ ದ್ರಾಕ್ಷಾರಸದಿಂದ ತಮ್ಮನ್ನು ಅಪವಿತ್ರಗೊಳಿಸಿಕೊಳ್ಳದಿರಲು ನಿರ್ಧರಿಸಿದರು. ಅವರು ಇದರ ಬಗ್ಗೆ ಮುಖ್ಯ ಅಧಿಕಾರಿಗಳೊಂದಿಗೆ ಮಾತನಾಡುವಾಗ, ದೇವರು ಅವರಿಗೆ ಅನುಮತಿ ಪಡೆಯಲು ಕೃಪೆಯನ್ನು ನೀಡುತ್ತಾರೆ. ಹತ್ತು ದಿನಗಳ ನಂತರ, ರಾಜನ ಆಹಾರವನ್ನು ಸೇವಿಸಿದ ಎಲ್ಲಾ ಯುವಕರಿಗಿಂತ ಅವರ ಮುಖಗಳು ಪ್ರಕಾಶಮಾನವಾಗಿ ಮತ್ತು ಅವರ ದೇಹವು ಪುಷ್ಟಿಯಾಗಿರುವುದನ್ನು ಕಾಣಲು ದೇವರು ಅವರಿಗೆ ಕೃಪೆಯನ್ನು ನೀಡಿದರು. ಅವರ ಬುದ್ಧಿವಂತಿಕೆ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಿದರು. ಏಕೆಂದರೆ ಅವರಿಗೆ ಆ ಸ್ಥಳದಲ್ಲಿ ಆ ಸಮಯದಲ್ಲಿ ಅದೇ ಬೇಕಾಗಿತ್ತು. ಅದನ್ನು ದೇವರು ಮಾಡಿದರು. ದಾನಿಯೇಲ್ ಮತ್ತು ಅವರ ಸ್ನೇಹಿತರು ಇದಕ್ಕಾಗಿ ಪ್ರಾರ್ಥಿಸಲಿಲ್ಲ. ಆದರೆ ದೇವರು ಅದನ್ನು 10 ಪಟ್ಟು ಹೆಚ್ಚಿಸಿದರು. ನಮ್ಮ ದೇವರು ತನ್ನ ಶಕ್ತಿ ಮತ್ತು ಪರಾಕ್ರಮಕ್ಕೆ ಅನುಗುಣವಾಗಿ ಕೊಡುತ್ತಾರೆ. ಅವರು ಮನುಷ್ಯರ ಅಳತೆಗೆ ಅನುಗುಣವಾಗಿ ಕೊಡುವುದಿಲ್ಲ.
ಪ್ರಿಯರೇ, ದೇವರ ಶಕ್ತಿ ಮತ್ತು ಸಾಮರ್ಥ್ಯದ ಪ್ರಕಾರ ಸ್ವೀಕರಿಸಲು ಮತ್ತು ನಮಗೆ ಸಾಧ್ಯವಾದಷ್ಟು ಕರ್ತನಿಗೆ ಇಷ್ಟವಾದದ್ದನ್ನು ಮಾಡಲು ಶ್ರಮಿಸೋಣ. ನಾವು ದೇವರಿಗಾಗಿ ಕೆಲಸ ಮಾಡುವಾಗ, ಆತನು ನಮ್ಮ ವಿಷಯಗಳನ್ನು ನೋಡಿಕೊಳ್ಳಲು ಸಾಧ್ಯವಾಗುತ್ತದೆ. "ಹೀಗಿರುವದರಿಂದ, ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು." (ಮತ್ತಾಯ. 6:33).
- Bro.ಸ್ಟಾಲಿನ್ ರಾಜಾ
ಪ್ರಾರ್ಥನಾ ಅಂಶ:
ಎಲ್ಲಾ ತಾಲ್ಲೂಕುಗಳಲ್ಲಿ ಮನೆ ಪ್ರಾರ್ಥನಾ ಗುಂಪುಗಳನ್ನು ಮುನ್ನಡೆಸುವ ಅಕ್ವಿಲಾ ಪ್ರಿಸ್ಕಿಲ್ಲಾ ಗಳು ಎದ್ದೇಳುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482