Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 14.04.2026
Share:

By Village Missionary Movement

Tuesday, 14-Apr-2026

ಧೈನಂದಿನ ಧ್ಯಾನ(Kannada) – 14.04.2026

 

ಸರಿಯಾದ ಸಮಯ 

 

"ಸಮಯೋಚಿತವಾದ ಮಾತುಗಳು ಬೆಳ್ಳಿಯ ನಕಾಸಿಯಲ್ಲಿ ಖಚಿತವಾದ ಬಂಗಾರದ ಹಣ್ಣುಗಳಿಗೆ ಸಮಾನ." - ಜ್ಞಾನೋಕ್ತಿ 25:11

 

ಒಬ್ಬ ವ್ಯಾಪಾರಿ ವ್ಯಾಪಾರದಲ್ಲಿ ಉಂಟಾದ ನಷ್ಟದಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಯೋಚಿಸುತ್ತಿದ್ದರು. ಅವರು ಖಿನ್ನತೆಗೆ ಒಳಗಾಗಿ ದುಃಖಿತರಾಗಿದ್ದಾರೆ ಎಂದು ನೋಡಿ, ಅವರ ಸ್ನೇಹಿತ ಅವರನ್ನು ಹತ್ತಿರದ ಚರ್ಚ್‌ಗೆ ಕರೆದೊಯ್ದರು. ಆ ಚರ್ಚ್‌ನ ಸೇವಕರು ಅವರಿಗೆ ಸುವಾರ್ತೆ ಹೇಳಿ ಅವರಿಗಾಗಿ ಪ್ರಾರ್ಥಿಸಿದರು. ವ್ಯಾಪಾರಿಯ ಹೃದಯದಲ್ಲಿ ಶಾಂತಿ ಹುಟ್ಟಿತು ಮತ್ತು ಆತ್ಮಹತ್ಯೆಯ ಆಲೋಚನೆ ಬದಲಾಯಿತು.

 

2 ಸಮುವೇಲ 20 ನೇ ಅಧ್ಯಾಯದಲ್ಲಿ, ಯೋವಾಬನು ಶೆಬನನ್ನು ಹಿಂಬಾಲಿಸಿ ಹೋಗುವಾಗ, ಆಬೇಲ್ಬೇತ್ಮಾಕಾ ಊರಿಗೆ ಮುತ್ತಿಗೆಹಾಕಿ ಅದಕ್ಕೆ ಎದುರಾಗಿ ಊರುಗೋಡೆಗೆ ತಗಲುವ ಒಂದು ಮಣ್ಣಿನ ದಿಬ್ಬವನ್ನು ಮಾಡಿ ಗೋಡೆಯನ್ನು ಕೆಡವಿಬಿಡುವದಕ್ಕೆ ಪ್ರಯತ್ನಿಸಿದರು. ಆಗ ಒಬ್ಬ ಬುದ್ಧಿವಂತ ಮಹಿಳೆ, ಒಬ್ಬ ಮನುಷ್ಯನ ಸಲುವಾಗಿ ಇಡೀ ಪಟ್ಟಣವು ನಾಶವಾಗುವುದನ್ನು ಬಯಸದೆ, ಯೋವಾಬನೊಂದಿಗೆ ಮಾತನಾಡಿದಳು, ಪಟ್ಟಣವು ರಕ್ಷಿಸಲ್ಪಟ್ಟಿತು. ಅದೇ ರೀತಿ, ಪಾಪದ ಹಿಡಿತದಲ್ಲಿ, ಸೈತಾನನ ಹಿಡಿತದಲ್ಲಿ ಮತ್ತು ಶಾಪದಲ್ಲಿ ನಾಶವಾಗುತ್ತಿರುವ ಅನೇಕ ಜನರಿದ್ದಾರೆ. ನೀವು ಮತ್ತು ನಾನು ಅವರನ್ನು ವಿನಾಶದಿಂದ ರಕ್ಷಿಸಬಲ್ಲ ಜೀವಂತ ವಾಕ್ಯವನ್ನು ಹೊಂದಿದ್ದೇವೆ. ಸರಿಯಾದ ಸಮಯದಲ್ಲಿ ಅದನ್ನು ಹೇಳಿ ಜನರನ್ನು ವಿನಾಶದಿಂದ ರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ. 'ಚರ್ಚ್‌ಗೆ ಬನ್ನಿ' ಎಂಬ ಒಂದೇ ಮಾತಿನಿಂದ ಒಂದು ಆತ್ಮವು ಆತ್ಮಹತ್ಯೆಯ ಆಲೋಚನೆಯಿಂದ ಮತ್ತು ನರಕದ ಶಿಕ್ಷೆಯಿಂದ ರಕ್ಷಿಸಲ್ಪಟ್ಟಿತು. ಅದೇ ರೀತಿ, ಒಬ್ಬ ಬುದ್ಧಿವಂತ ಮಹಿಳೆಯ ಮಾತಿನಿಂದಾಗಿ, ಇಡೀ ಪಟ್ಟಣವು ರಕ್ಷಿಸಲ್ಪಟ್ಟಿತು. 

 

ನಾವು ನಿತ್ಯ ಜೀವವನ್ನು ಪಡೆದಿರುವಂತೆಯೇ, ನಮ್ಮ ಸುತ್ತಲಿನವರು ಸಹ ನಿತ್ಯ ಜೀವವನ್ನು ಪಡೆಯಲು ಬಯಸಬೇಕು. ನಾವು ಬಯಸುವುದರೊಂದಿಗೆ ಸುಮ್ಮನಾಗದೇ ಪ್ರಯತ್ನಿಸಬೇಕು. ನಮಗೆ ಜೀವವನ್ನು ನೀಡಿದ ದೇವರು ಅವರಿಗೂ ಜೀವವನ್ನು ನೀಡಲು ಸಮರ್ಥರಾಗಿದ್ದಾರೆ. ಆದ್ದರಿಂದ, ನಮ್ಮ ಸುತ್ತಲಿನ ಜನರಿಗೆ ಜೀವವನ್ನು ನೀಡಬಲ್ಲ ದೇವರ ಬಗ್ಗೆ, ದೇವರ ವಾಕ್ಯದ ಬಗ್ಗೆ ಹೇಳೋಣ. 

 

ಸರಿಯಾದ ಸಮಯದಲ್ಲಿ ಸುವಾರ್ತೆಯನ್ನು ಸಾರದಿದ್ದರೆ, ಅನೇಕರನ್ನು ಆತ್ಮವು ಸಾಯುವಂತೆ ಮಾಡಿ ನಿತ್ಯನರಕಕ್ಕೆ ತಳ್ಳಿ ಬಿಡುತ್ತದೆ. ಜೀವದ ರೊಟ್ಟಿಯಾಗಿರುವ ಕ್ರಿಸ್ತನನ್ನು ಮತ್ತು ಕ್ರಿಸ್ತನ ವಾಕ್ಯವನ್ನು ನಾವು ತಿಳಿದಿರುವುದು ತೃಪ್ತಿಹೊಂದುವುದಕ್ಕಲ್ಲ. ಅದನ್ನು ಇತರರಿಗೆ ತಿಳಿಸಿ ಅವರು ಸಹ ನಿತ್ಯ ಜೀವನವನ್ನು ಪಡೆಯುವಂತೆ ಶ್ರಮಿಸುವುದಕ್ಕೆ. ಇಡೀ ಲೋಕದ ಮೌಲ್ಯಕ್ಕಿಂತಲೂ ಒಂದು ಆತ್ಮ ಬಹು ಮೌಲ್ಯಯುತವಾಗಿದೆ ಮತ್ತು ಆ ಒಂದು ಆತ್ಮವು ರಕ್ಷಿಸಲ್ಪಟ್ಟರೆ ಪರಲೋಕವು ಸಂತೋಷಪಡುತ್ತದೆ. ಆದ್ದರಿಂದ ಇಂದು ನಾವು ನಿರ್ಣಾಯಕ ನಿರ್ಧಾರವನ್ನು ತೆಗೆದುಕೊಳ್ಳೋಣ. ನಾವು ಭೇಟಿಯಾಗುವ ಜನರಿಗೆ ಯೇಸುವನ್ನು ತೋರಿಸೋಣ. ನಮ್ಮ ನಿಮಿತ್ತವಾಗಿ ಪರಲೋಕವು ಸಂತೋಷಪಡಲಿ. ಪರಲೋಕವು ಸಂತೋಷಪಟ್ಟರೆ, ಪರಲೋಕದ ಆಶೀರ್ವಾದಗಳು ನಮಗೆ ಬರುತ್ತವೆ. 

- Mrs.ಅನ್ಬು ಜ್ಯೋತಿ ಸ್ಟಾಲಿನ್ 

 

ಪ್ರಾರ್ಥನಾ ಅಂಶ:

ಒಂದೇ ದರ್ಶನವುಳ್ಳ ಸುವಾರ್ತಾಬೋಧಕರು ನಮ್ಮೊಂದಿಗೆ ಸೇರಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al Elexbet matbet giriş matbet instagram unban x unban twitter unban palacebet setrabet