Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 18.04.2026
Share:

By Village Missionary Movement

Saturday, 18-Apr-2026

ಧೈನಂದಿನ ಧ್ಯಾನ(Kannada) – 18.04.2026

 

ಗುರುತಿಸಲ್ಪಡದವರ ಪಟ್ಟಿ

 

"ಪೇತ್ರ ಯೋಹಾನರು ಧೈರ್ಯದಿಂದ ಮಾತಾಡುವದನ್ನು ಆ ಸಭಿಕರು ನೋಡಿ ಅವರು ಶಾಸ್ತ್ರಾಭ್ಯಾಸ ಮಾಡದ ಸಾಧಾರಣರೆಂದು ತಿಳಿದು ಆಶ್ಚರ್ಯಪಟ್ಟರು” - ಅಪೊಸ್ತಲ 4:13

 

ಆರ್ವಿಲ್ ರೈಟ್ ಮತ್ತು ವಿಲ್ಬರ್ ರೈಟ್ ಎಂಬ ಇಬ್ಬರು ಸಹೋದರರು ಬೈಸಿಕಲ್ ಮೆಕ್ಯಾನಿಕ್‌ಗಳಾಗಿದ್ದರು. ಇಬ್ಬರೂ ಕಾಲೇಜಿಗೆ ಹೋದವರಲ್ಲ. ಆದರೆ ಅವರಿಗೆ ಹಾರಬೇಕೆಂಬ ಮಹತ್ವಾಕಾಂಕ್ಷೆ ಮತ್ತು ಧೈರ್ಯವಿತ್ತು. ಡಿಸೆಂಬರ್ 17, 1903 ರಂದು, ಅವರು "wright flyer" ಎಂಬ ಹಾರುವ ಯಂತ್ರವನ್ನು ಕಂಡುಹಿಡಿದು ನಾಲ್ಕು ಬಾರಿ ಬದಲಾಯಿಸಿ ಬದಲಾಯಿಸಿ ಹಾರಿಸಿದರು. ಅದರ ಅತಿ ಉದ್ದದ ಹಾರಾಟದ ಸಮಯ ಒಂದು ನಿಮಿಷವೇ! ರೈಟ್ ಸಹೋದರರ ಸುತ್ತಲಿನ ಜನರು ಅವರ ಸಾಧನೆಯನ್ನು ಮೆಚ್ಚಲಿಲ್ಲ. ಅವರ ಊರಿನ ಪತ್ರಿಕೆ ಅದನ್ನು ನಂಬಲಿಲ್ಲ. ಅದು ನಿಜವಾಗಿದ್ದರೂ, ಅವರ ಹಾರಾಟವು ಸ್ವಲ್ಪ ದೂರ ಮಾತ್ರ ಇರಬಹುದೆಂದು ಹೇಳಿತು. ಅವರು ಹಲವು ಬಾರಿ ಹಾರಾಟ ನಡೆಸಿ ಅಂತಹ ಸಾಧನೆಯನ್ನು ಸಾಧಿಸಿದ ನಂತರವೇ ಅವರನ್ನು ಗುರುತಿಸಲಾಯಿತು. ಅಲ್ಲಿಯವರೆಗೆ, ಅವರನ್ನು ಗುರುತಿಸಲಾಗಿರಲಿಲ್ಲ. ಹೌದು, ಅವರೇ ವಿಮಾನವನ್ನು ಕಂಡುಹಿಡಿದ ರೈಟ್ ಸಹೋದರರು. ಅವರ ಆವಿಷ್ಕಾರವನ್ನು ವಿಮಾನ ಪ್ರಯಾಣದ ಆರಂಭವೆಂದು ಪರಿಗಣಿಸಲಾಗಿದೆ.

 

ಸತ್ಯವೇದದಲ್ಲಿ, ಪೇತ್ರ ಮತ್ತು ಯೋಹಾನರಿಗೆ ಬೋಧಿಸುವ ಹಕ್ಕು ಇರಲಿಲ್ಲ. ಧಾರ್ಮಿಕ ಮುಖಂಡರು ಅವರಿಗೆ ಬೋಧಿಸಲು ಅಧಿಕಾರ ನೀಡಲಿಲ್ಲ. ಅವರಿಬ್ಬರೂ ಬೈಬಲ್ ಕಾಲೇಜಿಗೆ ಹೋಗಲಿಲ್ಲ. ಅವರು ಮೀನುಗಾರರಾಗಿದ್ದರು. ಆದರೆ ಅವರು ಪವಿತ್ರಾತ್ಮದಿಂದ ತುಂಬಿದ್ದರು ಮತ್ತು ಧೈರ್ಯದಿಂದ ಸುವಾರ್ತೆಯನ್ನು ಸಾರಿದರು. ದೇವರನ್ನು ಹೊರತುಪಡಿಸಿ ಬೇರೆ ಯಾರಲ್ಲಿಯೂ ರಕ್ಷಣೆಯಿಲ್ಲ ಎಂದು ಅವರು ಧೈರ್ಯದಿಂದ ಸಾರಿದರು; ಏಕೆಂದರೆ ನಾವು ರಕ್ಷಣೆ ಹೊಂದಬೇಕಾದರೆ ಆಕಾಶದ ಕೆಳಗೆ ಮನುಷ್ಯರಲ್ಲಿ ಬೇರೆ ಯಾವ ಹೆಸರು ನೀಡಲ್ಪಟ್ಟಿಲ್ಲ. ಧಾರ್ಮಿಕ ಮುಖಂಡರು ಪೇತ್ರ ಮತ್ತು ಯೋಹಾನರಿಗೆ ಯೇಸುವಿನ ಬಗ್ಗೆ ಇತರರಿಗೆ ಹೇಳುವುದನ್ನು ನಿಲ್ಲಿಸುವಂತೆ ಆದೇಶಿಸಿದರು. ಆದರೆ ಅವರು, ನಾವು ನೋಡಿ ಕೇಳಿದ್ದನ್ನು ಮಾತನಾಡದೇ ಇರಬಾರದೇ ಎಂದರು. ಅವರ ಉಪದೇಶವನ್ನು ಪರಲೋಕವು ಅಂಗೀಕರಿಸಿತು.

 

ಪ್ರಿಯರೇ! ನೀವು ಸಹ ಅಂಗೀಕರಿಸಲ್ಪಟ್ಟವರ ಪಟ್ಟಿಯಲ್ಲಿ ಇಲ್ಲದಿರಬಹುದು. ಸಮಾಜವು ನಿಮ್ಮನ್ನು ಸ್ವೀಕರಿಸದಿರಬಹುದು. ಆದರೆ ಪವಿತ್ರಾತ್ಮವು ನಿಮ್ಮ ಮೇಲೆ ಬಂದಾಗ, ನೀವು ಫಲ ನೀಡಲು ಮತ್ತು ಯೇಸು ಕ್ರಿಸ್ತನ ಬಗ್ಗೆ ಇಡೀ ಜಗತ್ತಿಗೆ ಹೇಳಲು ಸಾಧ್ಯವಾಗುತ್ತದೆ. ಪೇತ್ರ ಮತ್ತು ಯೋಹಾನರಂತೆ ಅಂಗೀಕರಿಸಲ್ಪಡದವರ ಪಟ್ಟಿಯಲ್ಲಿದ್ದರೂ ಸಹ, ನೀವು ದೇವರಿಗಾಗಿ ಕೆಲಸ ಮಾಡಬಹುದು. ದೇವರು ನಿಮ್ಮನ್ನು ಅಂಗೀಕರಿಸುವುದರೊಂದಿಗೆ ನಿಮ್ಮ ಮೂಲಕ ತನ್ನ ರಾಜ್ಯವನ್ನು ಕಟ್ಟುತ್ತಾರೆ. ಆದ್ದರಿಂದ ನಿರುತ್ಸಾಹಗೊಳ್ಳಬೇಡಿ. ದೇವರ ಅಂಗೀಕಾರವೇ ಶ್ರೇಷ್ಠ ಎಂದು ನಾವು ಅರಿತುಕೊಳ್ಳೋಣ. ಹಲ್ಲೆಲೂಯಾ!

- A. ಬ್ಯೂಲ

 

ಪ್ರಾರ್ಥನಾ ಅಂಶ:

ವಿಬಿಎಸ್ ಪುಸ್ತಕದ ಮುದ್ರಣದ ಅಗತ್ಯತೆಗಳು ಪೂರೈಸಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking perabet casibom holiganbet galabet casibom grandpashabet perabet perabet giriş padişahbet padişahbet giriş grandpashabet kalitebet kalitebet giris betsmove betsmove giris gonebet gonebet giris betnano betnano giriş jojobet jojobet betplay jojobet esbet sonbahis tambet grandpashabet betgit mercurecasino matbet