By Village Missionary Movement
Thursday, 23-Apr-2026ಧೈನಂದಿನ ಧ್ಯಾನ(Kannada) – 23.04.2026
ಎದ್ದು ಕಟ್ಟೋಣ ಬನ್ನಿರಿ
"...ಬಹು ಆನಂದದಿಂದ ತುಂಬಿದವರಾಗಿ ಅತ್ಯಂತ ಔದಾರ್ಯವುಳ್ಳವರಾದರು." - 2 ಕೊರಿಂಥ. 8 : 2
ಆಲಯ ನಿರ್ಮಾಣ ಕಾರ್ಯಕ್ಕೆ ನಾವು ಹೇಗೆ ಸಹಾಯ ಮಾಡಬಹುದು? ಎಂದು ಹೂವು ಮಾರುವ ಮೇರಿಯಮ್ಮ ಯೋಚಿಸಿದರು. ನಾವು ಹೆಚ್ಚಿನ ಹೂವುಗಳನ್ನು ಕಟ್ಟಿ ,ಅವುಗಳನ್ನು ಮಾರಾಟ ಮಾಡಿ ಅದರಿಂದ ಸಿಗುವ ಲಾಭವನ್ನು ಆಲಯಕ್ಕೆ ಕೊಡೋಣ ಎಂದು ನಿರ್ಧರಿಸಿದರು. ಆ ದಿನವೇ ಅವರು ಕೆಲಸ ಮಾಡಲು ಪ್ರಾರಂಭಿಸಿದರು. ಅವರು ಹೆಚ್ಚಿನ ಸಮಯವನ್ನು ಮೀಸಲಿಟ್ಟರು, ಹೆಚ್ಚಿನ ಹೂವುಗಳನ್ನು ಕಟ್ಟಿ, ಅವುಗಳನ್ನು ಮಾರಾಟ ಮಾಡಿ ಸುಮಾರು 6 ತಿಂಗಳಲ್ಲಿ, ಅವರು ರೂ. 25,000 ಸಂಗ್ರಹಿಸಿದರು. ಅವರು ಆಲಯಕ್ಕೆ ಹೋಗಿ ಅದನ್ನು ಬೋಧಕರಿಗೆ ಕೊಟ್ಟರು. ಆ ತಾಯಿಯ ಭಕ್ತಿ ಮತ್ತು ಉತ್ಸಾಹವನ್ನು ನೋಡಿ ಸಭೆಯವರು ಮತ್ತು ಬೋಧಕರು ಆಶ್ಚರ್ಯಚಕಿತರಾಗಿ ದೇವರನ್ನು ಮಹಿಮೆಪಡಿಸಿದರು. ಇದೊಂದು ನಿಜವಾದ ಕಥೆ.
ಆ ತಾಯಿಯ ಕ್ರಿಯೆಯು 2 ಕೊರಿಂಥ. 8 : 3 ಅನ್ನು ನೆನಪಿಸುತ್ತದೆ. ಅದರಲ್ಲಿ,ಮಕೆದೋನ್ಯದ ಸಭೆಯವರು ಶಕ್ತ್ಯಾನುಸಾರವಾಗಿ ಮಾತ್ರ ಕೊಡಲಿಲ್ಲ; ಹೌದು, ಶಕ್ತಿಯನ್ನು ವಿಾರಿ ತಮ್ಮಷ್ಟಕ್ಕೆ ತಾವೇ ಕೊಟ್ಟರು. ಮತ್ತು 2 ಕೊರಿಂಥ 9:6,7 ರ ವಚನಗಳಲ್ಲಿ, "ಸ್ವಲ್ಪವಾಗಿ ಬಿತ್ತುವವನು (ಪೈರನ್ನು) ಸ್ವಲ್ಪವಾಗಿ ಕೊಯ್ಯುವನು; ಹೆಚ್ಚಾಗಿ ಬಿತ್ತುವವನು ಹೆಚ್ಚಾಗಿಯೇ ಕೊಯ್ಯುವನು. ಪ್ರತಿಯೊಬ್ಬನು ತನ್ನ ಹೃದಯದಲ್ಲಿ ನಿರ್ಣಯಿಸಿ ಕೊಂಡ ಪ್ರಕಾರ ಕೊಡಲಿ; ದುಃಖದಿಂದಾಗಲಿ ಬಲಾತ್ಕಾರದಿಂದಾಗಲಿ ಯಾರೂ ಕೊಡಬಾರದು; ಯಾಕಂದರೆ ಸಂತೋಷವಾಗಿ ಕೊಡುವವನನ್ನು ದೇವರು ಪ್ರೀತಿ ಮಾಡುತ್ತಾನೆ" ಎಂದು ಅಪೊಸ್ತಲನಾದ ಪೌಲನು ಸಾಕ್ಷಿ ಹೇಳುತ್ತಾರೆ.
ಇಂದು ನಾವು ಏನು ಮಾಡಲಿದ್ದೇವೆ? ಸುವಾರ್ತೆಯನ್ನು ಸಾರುವ ಕೆಲಸಕ್ಕೆ ಅಗತ್ಯವಿರುವ ಪಟ್ಟಿಯ ಕುರಿತ ಭಾರವು ನಮ್ಮನ್ನು ಮುಂದಕ್ಕೆ ನೂಕುತ್ತಾ ಪ್ರೇರೇಪಿಸುತ್ತಿದೆಯಾ? ಮೇರಿಯಮ್ಮಳಂತೆ, ಕರ್ತನಿಗಾಗಿ ಮತ್ತು ಆತನ ಆಲಯದ ಕೆಲಸಕ್ಕಾಗಿ ಏನಾದರೂ ಮಾಡಬೇಕೆಂಬ ಬಯಕೆ ನಮಗಿರಬೇಕು. ಆತನ ನಾಮವು ಮಹಿಮೆ ಹೊಂದಲು, ಘೋಷಿಸಲ್ಪಡಲು ಮತ್ತು ಪರಲೋಕ ರಾಜ್ಯವು ಕಟ್ಟಲ್ಪಡಲು ನನ್ನ ಪಾಲು ಏನು? ಎಂಬ ಆಲೋಚನೆ ನಮ್ಮ ಬಳಿ ಕಾಣಲ್ಪಡುತ್ತಿದೆಯೇ? ಆತನು ನಮಗೆ ದಯೆಯಿಂದ ಕೊಟ್ಟಿರುವ ಜೀವನದಲ್ಲಿ, ಒಂದು ಆತ್ಮವನ್ನೂ ರಕ್ಷಣೆಯಲ್ಲಿ ನಡೆಸದೆ, ಬರಿಗೈಯಲ್ಲಿ ಆತನನ್ನು ನೋಡಬಹುದಾ ಎಂಬ ಆತ್ಮ ಭಾರವು ನಮ್ಮ ಬಳಿ ಕಾಣಲ್ಪಡಬೇಕು. ನಮ್ಮ ಕರ್ತವ್ಯವನ್ನು ಅರಿತುಕೊಂಡವರಾಗಿ ಕ್ರಿಯೆ ಮಾಡೋಣ, ಉದಾರವಾಗಿ ಕೊಡೋಣ.
ತಮ್ಮ ಜೀವನವನ್ನು ಮುಡಿಪಾಗಿಟ್ಟು ಸೇವೆ ಮಾಡುತ್ತಿರುವ ಮಿಷನರಿಗಳ ಯೋಜನೆಗಳು ಯಶಸ್ಸು ಕಾಣುವಂತೆ ಮತ್ತು ಸುವಾರ್ತೆಯನ್ನು ಸಾರುವ ಕೆಲಸವು ಅಡೆತಡೆಯಿಲ್ಲದೆ ಮುಂದುವರಿಯುವಂತೆ, ನಿಮ್ಮ ಪ್ರಾರ್ಥನೆಗಳು ಬಹಳ ಬಹಳ ಅವಶ್ಯಕ. ನಿಮ್ಮ ಪ್ರತಿಭೆ ಮತ್ತು ಸಂಪತ್ತು ಏನೇ ಇರಲಿ, ಅವುಗಳನ್ನು ಆತನ ಸೇವೆಗೆ ಅರ್ಪಿಸಿರಿ. ಇದು ತುರ್ತು! ಅವಶ್ಯಕ! ಸಮಯ ಮೀರುತ್ತಿದೆ.
- Mrs. ಎಮೀಮಾ ಸೌಂದರ ರಾಜನ್
ಪ್ರಾರ್ಥನಾ ಅಂಶ:
ಬೈಬಲ್‌ಗಳಿಲ್ಲದವರಿಗೆ ನೀಡಲು ಬೈಬಲ್ ಅಗತ್ಯಗಳು ಪೂರೈಸಲ್ಪಡುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482