Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 27.04.2026
Share:

By Village Missionary Movement

Monday, 27-Apr-2026

ಧೈನಂದಿನ ಧ್ಯಾನ(Kannada) – 27.04.2026

 

ಕ್ರಿಯೆಗೆ ತಕ್ಕ ಪ್ರತಿಫಲ

 

"..ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ..." - ಮತ್ತಾಯ 7:12

 

ಕಟ್ಟಡಗಳ ನಿರ್ಮಾಣ ಕೆಲಸದಲ್ಲಿ ನಿರತರಾಗಿದ್ದ ಒಂದು ಇಂಜಿನಿಯರ್‌ ಬಳಿ ಕೆಲಸ ಮಾಡುತ್ತಿದ್ದ ಒಬ್ಬ ಮೇಸ್ತ್ರಿ ಅವರ ಬಳಿಗೆ ಬಂದು, ಅಯ್ಯಾ, ನಾನು ಹಲವು ವರ್ಷಗಳಿಂದ ನಿಮ್ಮ ಬಳಿ ಕೆಲಸ ಮಾಡಿದ್ದೇನೆ. ಈಗ, ವೃದ್ಧಾಪ್ಯದ ಕಾರಣ, ನಾನು ನಿವೃತ್ತಿ ಹೊಂದಲು ಬಯಸುತ್ತೇನೆ. ಆದ್ದರಿಂದ ನನ್ನನ್ನು ನನ್ನ ಕೆಲಸದಿಂದ ಬಿಡುಗಡೆ ಮಾಡುವಂತೆ ಕೇಳಿಕೊಳ್ಳುತ್ತೇನೆ ಎಂದರು. ತಕ್ಷಣ ಆ ಇಂಜಿನಿಯರ್ ಇವರನ್ನು ನೋಡಿ ಅಯ್ಯಾ, ಇನ್ನು ಒಂದೇ ಒಂದು ಮನೆಯನ್ನು ನಿರ್ಮಿಸಿ ನಂತರ ನೀವು ನಿವೃತ್ತರಾಗಬಹುದು ಎಂದು ಹೇಳಿದರು. ಮೇಸ್ತ್ರಿ ಕೂಡ ಒಪ್ಪಿಕೊಂಡು ಆ ಮನೆಯ ನಿರ್ಮಾಣದಲ್ಲಿ ತಾವೇ ಮುಖ್ಯತ್ವ ವಹಿಸಿ ಕಟ್ಟಿ ಮುಗಿಸಿದರು. ನಂತರ ಅವರ ಇಂಜಿನಿಯರ್, "ಅಯ್ಯಾ, ನೀವು ಅನೇಕ ವರ್ಷಗಳಿಂದ ನನಗೆ ನಿಷ್ಠೆಯಿಂದ ಕೆಲಸ ಮಾಡಿದ್ದೀರಿ. ಆದ್ದರಿಂದ ನಾನು ಈ ಮನೆಯನ್ನು ನಿಮಗೆ ಉಡುಗೊರೆಯಾಗಿ ನೀಡುತ್ತಿದ್ದೇನೆ" ಎಂದು ಹೇಳಿದರು. ಆ ಸಮಯದಲ್ಲಿ, ಮೇಸ್ತ್ರಿ ಆಘಾತಕ್ಕೊಳಗಾದರು. ಅಯ್ಯೋ, ನನಗೆ ಇದು ಮೊದಲೇ ತಿಳಿದಿದ್ದರೆ, ನಾನು ಈ ಮನೆಯನ್ನು ಉತ್ತಮವಾಗಿ, ಉತ್ತಮ ಗುಣಮಟ್ಟದ ವಸ್ತುಗಳೊಂದಿಗೆ ಮತ್ತು ಸುಂದರವಾಗಿ ನಿರ್ಮಿಸುತ್ತಿದ್ದೆನಲ್ಲಾ ಎಂದು ಮನಸ್ಸಿನಲ್ಲಿ ಅಂದುಕೊಂಡು ಬೇಸರಗೊಂಡರು.

 

ನಾವು ಮಾಡುವ ಯಾವುದೇ ಕೆಲಸವಾಗಿದ್ದರೂ ದೇವರಿಂದ ಪ್ರತಿಫಲ ಉಂಟಾಗುತ್ತದೆ ಎಂಬ ಉದ್ದೇಶದಿಂದ ನಾವು ಎಲ್ಲವನ್ನೂ ಮಾಡಬೇಕು. ನಮ್ಮ ಕೆಲಸಕ್ಕೆ ಪ್ರತಿಫಲವು ದೇವರಿಂದ ಬರುತ್ತದೆ. ಅದು ಎಂತಹ ದೊಡ್ಡ ಆಶೀರ್ವಾದ! ಬೈಬಲ್‌ನಲ್ಲಿಯೂ ಸಹ, ಯೊಪ್ಪ ಪಟ್ಟಣದಲ್ಲಿ ದೊರ್ಕಳೆಂಬ ಒಬ್ಬ ಶಿಷ್ಯೆ ಇದ್ದಳು. ಅವಳು ವಿಧವೆಯರಿಗೆ ಮತ್ತು ಅಗತ್ಯವುಳ್ಳವರಿಗೆ ಮೇಲಂಗಿಗಳು ಮತ್ತು ಬಟ್ಟೆಗಳನ್ನು ಹೊಲಿದುಕೊಟ್ಟರು. ಮತ್ತು ಅನೇಕ ಸತ್ಕಾರ್ಯಗಳನ್ನು ಸಹ ಮಾಡುತ್ತಾ ಬಂದರು. ಆದ್ದರಿಂದ, ಸತ್ಯವೇದದಲ್ಲಿ ಅವರ ಬಗ್ಗೆ ಬರೆಯುವಾಗ ಪವಿತ್ರಾತ್ಮನು, ಅವಳು ಸತ್ಕಾರ್ಯಗಳನ್ನು ಮತ್ತು ದಾನಧರ್ಮಗಳನ್ನು ಹೇರಳವಾಗಿ ಮಾಡುತ್ತಾ ಬಂದಳು ಎಂದು ಹೇಳುತ್ತಾರೆ. ದೊರ್ಕಳು ಅನಾರೋಗ್ಯಕ್ಕೆ ಒಳಗಾಗಿ ಸತ್ತು ಹೋದಾಗ, ಅವರು ದೊರ್ಕಳಿಗೆ ಸ್ನಾನ ಮಾಡಿಸಿ ಮೇಲಿನ ಕೋಣೆಯಲ್ಲಿ ಮಲಗಿಸಿ, ತಡಮಾಡದೆ ಪೇತ್ರನನ್ನು ಕರೆತರಲು ಕಳುಹಿಸಿದರು. ಪೇತ್ರನು ಬಂದು ಪ್ರಾರ್ಥಿಸಿದರೆ, ದೊರ್ಕಳು ಜೀವಂತವಾಗಿ ಎದ್ದೇಳುತ್ತಾಳೆ ಎಂದು ಅವರು ಭಾವಿಸಿದರು. ಅದೇ ರೀತಿಯಲ್ಲಿ, ಪೇತ್ರನು ಬಂದು ಮೊಣಕಾಲೂರಿ ಪ್ರಾರ್ಥಿಸುತ್ತಾ, "ತಬಿತಾ, ಎದ್ದೇಳು" ಎಂದು ಹೇಳಿದರು. ದೊರ್ಕಳು ಜೀವಂತವಾಗಿ ಎದ್ದಳು. ಕ್ರಿಯೆಗೆ ತಕ್ಕ ಪ್ರತಿಫಲವು ದೊರೆಯಿತು.

 

ನಾವು ಸಹ, ದೊರ್ಕಳಂತೆ, ನಮ್ಮಿಂದ ಸಾಧ್ಯವಾದಷ್ಟು ಇತರರಿಗೆ ಒಳ್ಳೆಯ ಕಾರ್ಯಗಳನ್ನು ಮಾಡೋಣ. ಯಾಕಂದರೆ ದೇವರು ಪ್ರತಿಯೊಬ್ಬರಿಗೂ ಅವನವನ ಕ್ರಿಯೆಗೆ ತಕ್ಕ ಪ್ರತಿಫಲವನ್ನು ನೀಡುತ್ತಾರೆ. ಸೋತುಹೋಗದೆ ಸತ್ಕಾರ್ಯಗಳನ್ನು ಮಾಡಿ, ಮಹಿಮೆಯನ್ನು, ಗೌರವವನ್ನು ಮತ್ತು ಅಮರತ್ವವನ್ನು ಬಯಸುವವರಿಗೆ ನಿತ್ಯಜೀವವನ್ನು ಕೊಡುತ್ತಾರೆ. ಹೌದು, ನಮಗೆ ಕೊಡಲ್ಪಟ್ಟಿರುವವುಗಳಲ್ಲಿ ನಂಬಿಗಸ್ತರಾಗಿರೋಣ. ಸೋತುಹೋಗದೇ ಸತ್ಕಾರ್ಯಗಳನ್ನು ಮಾಡಿ ಕರ್ತನಿಂದ ಆಶೀರ್ವಾದಗಳನ್ನು ಪಡೆಯೋಣ. 

- Mrs. ಎಡಿತ್ ಕ್ರಿಸ್ಟೋಫರ್ 

 

ಪ್ರಾರ್ಥನಾ ಅಂಶ:

ಬೈಬಲ್ ಅಮ್ಮಂದಿರು ಭೇಟಿಯಾಗುವ ಮಹಿಳೆಯರು ಕರ್ತನನ್ನು ಅರಿತುಕೊಳ್ಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet holiganbet sahabet onwin bets10 bets10 giriş bets10 güncel giriş betcio atlasbet casibom meritking perabet casibom holiganbet galabet casibom padişahbet padişahbet giriş grandpashabet ibizabet tambet grandpashabet jojobet nesinecasino betbey betgit grandpashabet betpuan cashwin matbet meritking perabet perabet giriş instagram ban service betsilin betsilin giris pashagaming pashagaming giris gorabet gorabet giris kralbet holiganbet grandpashabet grandpashabet giriş holiganbet giriş çarkbet çarkbet giriş