Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 21.06.2021
Share:

By Village Missionary Movement

Monday, 21-Jun-2021

ಧೈನಂದಿನ ಧ್ಯಾನ(Kannada) – 21.06.2021

 

“ಸುವಾರ್ತೆಯನ್ನು ಸಾರಲೇ ಬೇಕೆಂಬ ನಿರ್ಬಂಧ ನನ್ನ ಮೇಲೆ ಇದೆ. ಹೌದು, ನಾನು ಸುವಾರ್ತೆಯನ್ನು ಸಾರದಿದ್ದರೆ ನನಗೆ ಅಯ್ಯೋ!” - 1 ಕೊರಿಂಥದವರಿಗೆ 9:16

 

ಕ್ರೈಸ್ತ ಲೋಕದಲ್ಲಿ ಪರಿಶುದ್ಧ ಗ್ರಂಥದ ನಂತರ ಅಧಿಕವಾಗಿ ಹೆಸರುಗೊಂಡದ್ದು, ಮತ್ತು ಸೇಲ್ ಆಗುತ್ತಿರುವ ಪುಸ್ತಕ ಜಾನ್ ಬನಿಯನ್ ಬರೆದಿರುವ "ಮೋಕ್ಷ ಪ್ರಯಾಣ" ಇವರು ಇದನ್ನು 1675 ನೇ ವರ್ಷದಲ್ಲಿ ಸೆರೆಯಲ್ಲಿರುವಾಗ ಬರೆದರು. ಅವರು ಜೀವಿಸಿದ ದಿನಗಳಲ್ಲಿ ಯೇಸುಕ್ರಿಸ್ತನನ್ನು ಕುರಿತ ಪ್ರಸಂಗವನ್ನು ಮಾಡಬೇಕಾದರೆ ಸರ್ಕಾರದ ಬಳಿ ಅನುಮತಿ ಪಡೆಯಬೇಕು ಎಂಬ ಕಾನೂನು. ಆದರೆ ಜಾನ್ ಬನಿಯನ್ ಕಾನೂನನ್ನು ಕುರಿತು ಚಿಂತೆ ಮಾಡದೆ ಎಲ್ಲಾ ಕಡೆಗಳಲ್ಲಿ ಸುತ್ತುತ್ತಾ ರಕ್ಷಣೆಯನ್ನು ಕುರಿತು ಪ್ರಸಂಗ ಮಾಡಿದರು. ಆದ್ದರಿಂದ ಅವರು ಸೆರೆಗೆ ಹಾಕಲ್ಪಟ್ಟರು. ಇನ್ನುಮೇಲೆ ಪ್ರಸಂಗ ಮಾಡುವುದಿಲ್ಲ ಎಂದು ಹೇಳಿದರೆ ಬಿಡುಗಡೆ ಹೊಂದಬಹುದು ಎಂಬ ಅವಕಾಶವಿದ್ದರೂ ಅದರ ಬಗ್ಗೆ ಅವರು ಚಿಂತೆ ಮಾಡಲಿಲ್ಲ.

 

ಒಂದು ದಿನ ಸೆರೆಮನೆಗೆ ಅವರ ಮಗಳು ಅವರನ್ನು ನೋಡುವುದಕ್ಕಾಗಿ ಬಂದಳು. ಹರಿದಬಟ್ಟೆಯನ್ನು ಹಾಕಿಕೊಂಡು, ತೆಳ್ಳಗಾಗಿದ್ದ ಅವಳ ಶರೀರವನ್ನು ನೋಡಿದ ಕೂಡಲೇ ಅವರ ಕಣ್ಣುಗಳಲ್ಲಿ ನೀರು ತುಂಬಿತು. ಮಗಳು ಪರಿತಾಪದಿಂದ ಅವರ ಮುಖವನ್ನು ನೋಡಿ "ಅಪ್ಪ, ಮನೆಯಲ್ಲಿ ಎಲ್ಲರೂ ಘೋರವಾದ ಬಡತನದಲ್ಲಿ ಬಳಲುತ್ತಿದ್ದೇವೆ. ಅಮ್ಮ ನನ್ನನ್ನು ನಿಮ್ಮ ಬಳಿ ಕಳುಹಿಸಿದರು. ಇನ್ನುಮೇಲೆ ಪ್ರಸಂಗಿಸಬೇಡಿರಿ ಅಪ್ಪ. ಮನೆಗೆ ಬನ್ನಿರಿ" ಎಂದು ಕಣ್ಣೀರಿನಿಂದ ಹೇಳಿದಳು. ಜಾನ್ ಬನಿಯನ್ ನ ಹೃದಯವು ಹೊಡೆಯಲ್ಪಟ್ಟಿತು. ತನ್ನ ಮಗಳನ್ನು ಎದೆಯ ಮೇಲೆ ಅಪ್ಪಿಕೊಂಡು ಅವಳ ಮುಖದಮೇಲೆ ಮುತ್ತಿಟ್ಟರು. "ಪ್ರೀತಿಯ ಮಗಳೇ ದೇವರ ಪ್ರೀತಿಯನ್ನು, ನಶಿಸಿ ಹೋಗುತ್ತಿರುವ ಮಾನವ ಕುಲಕ್ಕೆ ನಾನು ಹೇಗೆ ಹೇಳದೆ ಇರಲಿ. ನೀನು ಹೋಗಿ ಬಾ. ಕರ್ತನು ನಿಮ್ಮನ್ನು ಕಾಪಾಡುತ್ತಾರೆ"ಎಂದು ಹೇಳಿ ಕಳುಹಿಸಿಬಿಟ್ಟರು.

 

ಹೌದು, ಅಪೊಸ್ತಲನಾದ ಪೌಲನ ಹಾಗೆ, ಜಾನ್ ಬನಿಯನ್ ನ ಹಾಗೆ ಸುವಾರ್ತೆಯನ್ನು ಪ್ರಕಟಿಸುವುದು ನನ್ನ ಮೇಲೆ ಹಾಕಲ್ಪಟ್ಟಿರುವ ಕರ್ತವ್ಯ. ಪ್ರಕಟಿಸದೆ ಹೋದರೆ ನನಗೆ ಅಯ್ಯೋ! ಎಂಬ ಗ್ರಹಿಕೆಯು ನಮ್ಮಲ್ಲಿ ಒಬ್ಬೊಬ್ಬರಿಗೂ ಇರಬೇಕು. ಸೇವಕರು ಮಾತ್ರವೇ ಅದನ್ನು ಮಾಡಬೇಕು ಎಂಬುದಲ್ಲ. ಕ್ರಿಸ್ತನನ್ನು ರಕ್ಷಕನಾಗಿ ಅಂಗೀಕರಿಸಿದ ಒಬ್ಬೊಬ್ಬರು ಇನ್ನೊಬ್ಬರಿಗೆ ದೇವರನ್ನು ಪ್ರಕಟಿಸಲೇಬೇಕು. ಸಮಯ ಸಿಕ್ಕಿದರೂ ಸಿಗದೇ ಹೋದರು, ಪರಿಸ್ಥಿತಿಗಳು ಅನುಕೂಲವಾಗಿದ್ದರು ಇಲ್ಲದೆ ಹೋದರು ಪ್ರಕಟಿಸಲೇಬೇಕಾದದ್ದು ನಮ್ಮ ಮೇಲೆ ಹಾಕಲ್ಪಟ್ಟಿರುವ ಕರ್ತವ್ಯವಾಗಿದೆ.

 

ಪ್ರಿಯರೇ! ಯೇಸುಕ್ರಿಸ್ತನ ಬರೋಣಕ್ಕೆ ಗುರುತಾಗಿರುವ ಕಾರ್ಯಗಳು ನಡೆಯುತ್ತಿವೆ ಅದನ್ನು ಕಣ್ಣಾರೆ ನೋಡುತ್ತಿದ್ದೇವೆ. ಅಂತ್ಯವು ಸಮೀಪವಾಗಿದೆ, ಆದರೆ ಇನ್ನು ದೇವರನ್ನು ಅರಿಯದ ಮಕ್ಕಳು ನಮ್ಮ ಸುತ್ತಲೂ ಉಂಟೇ! ಅವರಿಗೆಲ್ಲ ನ್ಯಾಯತೀರ್ಪಿನ ಕುರಿತು, ಪರಲೋಕ, ನರಕವನ್ನು ಕುರಿತು ತಿಳಿಸಬೇಕಾದ ಕರ್ತವ್ಯ ನಮ್ಮದಲ್ಲವೇ? ಇದನ್ನು ಅರಿತವರಾಗಿ ದೇವರ ರಾಜ್ಯಕ್ಕಾಗಿ ಪ್ರಯಾಸ ಪಡೋಣ. ಕಡೆಯ ಶ್ವಾಸವಿರುವವರೆಗೂ ಸುವಾರ್ತೆಯನ್ನು ಪ್ರಕಟಿಸುವ ಆಲೋಚನೆಯೊಂದಿಗೆ ಜೀವಿಸೋಣ.

- Mrs.ಜೆಬಾ ಡೇವಿಡ್ ಗಣೇಸನ್

 

ಪ್ರಾರ್ಥನಾ ಅಂಶ:-

ಗೆತ್ಸೇಮನೆ ಕ್ಯಾಂಪಸ್ ನಲ್ಲಿ ನಡೆಯುತ್ತಿರುವ ಕಟ್ಟಡ ಕಾರ್ಯಗಳಿಗೆ ಬೇಕಾದ ಅವಶ್ಯಕತೆಗಳು ಸಂಧಿಸಲ್ಪಟ್ಟು, ಬೇಗನೆ ಕಟ್ಟಿಮುಗಿಸುವಂತೆ, ದೇವರ ಜ್ಞಾನದೊಂದಿಗೆ ಕಟ್ಟಲ್ಪಡುವಂತೆ ಪ್ರಾರ್ಥಿಸೋಣ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet holiganbet sahabet onwin bets10 bets10 giriş bets10 güncel giriş betcio atlasbet casibom meritking perabet casibom holiganbet galabet casibom padişahbet padişahbet giriş grandpashabet ibizabet tambet grandpashabet jojobet nesinecasino betbey betgit grandpashabet betpuan cashwin matbet meritking perabet perabet giriş instagram ban service betsilin betsilin giris pashagaming pashagaming giris gorabet gorabet giris kralbet holiganbet grandpashabet grandpashabet giriş holiganbet giriş çarkbet çarkbet giriş